ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂದು ಕೈಬೀಸಿ ಹೋಗಿದ್ದೇ ಕೊನೆ, ಮತ್ತೆಂದೂ ಮಗ ಮನೆಗೆ ಬರಲಾರ..!

|
Google Oneindia Kannada News

ಶ್ರೀನಗರ, ಫೆಬ್ರವರಿ 15: "ಆದಷ್ಟು ಬೇಗ ವಾಪಸ್ ಬಂದುಬಿಡುತ್ತೇನೆ... ಎನ್ನುತ್ತ ಮಗ ಕೈಬೀಸಿ ಹೋಗುತ್ತಿದ್ದ ಚಿತ್ರ ಇನ್ನೂ ಕಣ್ಮುಂದಿದೆ. ಇಂದಲ್ಲವೆಂದರೆ, ನಾಳೆ ಬಂದಾನು ಎಂದು ಸಮಾಧಾನ ಪಟ್ಟುಕೊಳ್ಳುವುದಾದರೂ ಹೇಗೆ? ಅಂದು ಕೈಬೀಸುತ್ತ ನಕ್ಕಿದ್ದೇ ಮಗನ ಕೊನೆಯ ನೋಟ ಎಂದು ನಮಗ್ಯಾರಿಗೆ ಗೊತ್ತಿತ್ತು? ಅಂದು ಮನೆಯಿಂದ ಹೋದ ಮಗ, ಇಂದು ಬಂದಿದ್ದಾನೆ.... ತ್ರಿವರ್ಣ ಧ್ವಜದಲ್ಲಿ ಸುತ್ತಿದ ದೇಹವಾಗಿ, ಹೇಡಿ ಉಗ್ರರ ಹಿಂಸೆಗೆ ಎದೆಯೊಡ್ಡಿ ಹುತಾತ್ಮನಾಗಿ!"

ಪುಲ್ವಾಮಾದಲ್ಲಿ ನಡೆದ ಭೀಕರ ಉಗ್ರದಾಳಿಯಲ್ಲಿ ಮಡಿದ ಸೈನಿಕರ ಕುಟುಂಬಸ್ಥರ ಕಣ್ಣುಗಳಲ್ಲಿ ಅನಾಮತ್ತಾಗಿ ಸುರಿವ ಕಣ್ಣೀರು ಹೇಳುವ ಕತೆ ಒಂದೇ, ಎರಡೆ? ಅಲ್ಲಿ ಮಗನನ್ನು ಕಳೆದುಕೊಂಡ ಅಪ್ಪನಿದ್ದಾನೆ, ಅಮ್ಮನಿದ್ದಾಳೆ, ಪತಿಯನ್ನು ಕಳೆದುಕೊಂಡ ಮಡದಿಯಿದ್ದಾಳೆ, ಅಣ್ಣನ್ನು ಕಳೆದುಕೊಂಡ ತಂಗಿಯಿದ್ದಾಳೆ, ತಮ್ಮನನ್ನು ಕಳೆದುಕೊಡ ಅಕ್ಕ ಇದ್ದಾಳೆ, ಅಪ್ಪನನ್ನು ಕಳೆದುಕೊಂಡ ಮಕ್ಕಳಿದ್ದಾರೆ... ನಾಲ್ಕೈದು ಸೆಕೆಂಡ್ ಗಳಲ್ಲಿ ಹೊತ್ತಿ ಉರಿದ ಆ ಬಸ್ಸು ಅದೆಷ್ಟು ಜೀವಗಳ ಭವಿಷ್ಯದ ಕನಸನ್ನೇ ಕಮರುವಂತೆ ಮಾಡಿದೆ!

ಹುತಾತ್ಮನಾದಾಗ ನನ್ನ ಹೀರೋ ಎನ್ನಿರಿ ಎಂದಿದ್ದ ಮಂಡ್ಯದ ವೀರಯೋಧ ಗುರುಹುತಾತ್ಮನಾದಾಗ ನನ್ನ ಹೀರೋ ಎನ್ನಿರಿ ಎಂದಿದ್ದ ಮಂಡ್ಯದ ವೀರಯೋಧ ಗುರು

ದ್ವೇಷ, ಮತಾಂಧತೆ, ಅಮಾನವೀಯತೆಯ ದ್ಯೋತಕ ಎಂಬಂತೆ ನಡೆದ ಈ ಘಟನೆಯಲ್ಲಿ ಉಗ್ರ ಸತ್ತಿದ್ದಾನೆ... ಆದರೆ ನೂರಾರು ಜೀವಗಳಿಗೆ, ಅದೆಷ್ಟೋ ಕುಟುಂಬಗಳಿಗೆ ಆತ ನೀಡಿದ ಪೆಟ್ಟು ಅರಿಗಿಸಿಕೊಳ್ಳುವುದಕ್ಕೆ ಹೇಗೆ ಸಾಧ್ಯ? ಎಲ್ಲಕ್ಕಿಂತ ಹೆಚ್ಚಾಗಿ ದೇಶದ ಭದ್ರತೆಗೆ, ಅಸ್ಮಿತೆಗೆ ಬಿದ್ದ ಏಟು ಅದು!

ನಾವೂ ಹುತಾತ್ಮರಿಗೆ ಶ್ರದ್ಧಾಂಜಲಿ ಕೋರಬಹುದು, ಮರುಗಬಹುದು, ಕೊರಗಬಹುದು, ನಾಲ್ಕಾರು ದಿನದಲ್ಲಿ ಮತ್ತದೇ ಬದುಕಿನ ಏಕತಾನತೆಯಲ್ಲಿ ಎಲ್ಲವನ್ನೂ ಮರೆಯಬಹದು. ಆದರೆ ಅವರಿಗೆ ಹಾಗಲ್ಲ... ಅದು ಆತ್ಮಸ್ಥೈರ್ಯಕ್ಕೆ ಬಿದ್ದ ಕೊಡಲಿ ಏಟು. ಏಕೆಂದರೆ ಮನೆಯ ಎಲ್ಲಾ ಜವಾಬ್ದಾರಿಯ ಹೊಣೆ ಹೊತ್ತ, ಸಂಸಾರದ ಬಂಡಿಯ ನೊಗ ಹೊತ್ತ ಮಗ ಮತ್ತೆಂದೂ ಮರಳಿ ಮನೆಗೆ ಬರಲಾರ...!

ನನ್ನ ಇನ್ನೊಬ್ಬ ಮಗನನ್ನೂ ಸೇನೆಗೆ ಕಳಿಸುತ್ತೇನೆ...

ಬಿಹಾರದ ಭಗಲ್ಪುರದ ರಥನ್ ಠಾಕೂರ್ ಎಂಬ ಯೋಧ ಗುರುವಾರದ ಘಟನೆಯಲ್ಲಿ ಹುತಾತ್ಮರಾದರು. ಉಕ್ಕಿಬರುವ ಕಣ್ಣೀರಿನ ನಡುವೆಯೂ ಅವರ ತಂದೆ ಆಡಿದ ಮಾತು ದೇಶಭಕ್ತಿಯ ಕಿಚ್ಚನ್ನು ದುಪ್ಪಟ್ಟಾಗಿಸುತ್ತಿತ್ತು. "ನನ್ನ ಮಗ ದೇಶಕ್ಕಾಗಿ ಪ್ರಾಣ ತೆತ್ತಿದ್ದಾನೆ. ಈ ತಾಯಿಯ ಸೇವೆ ಮಾಡಿದ್ದಾನೆ. ನನ್ನ ಮತ್ತೊಬ್ಬ ಮಗನನ್ನೂ ನಾನು ಸೇನೆಗೆ ಕಳಿಸುತ್ತೇನೆ. ಆತ ಬದುಕೂ ತಾಯಿ ಸೇವೆಗೆ ಮುಡಿಪಾಗಲಿ. ಆದರೆ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು" ಎನ್ನುತ್ತಿದ್ದ ಅವರ ಕಣ್ಣಿಲ್ಲಿ ಪ್ರತೀಕಾರದ, ದೇಶಭಕ್ತಿಯ, ವಿಷಾದದ ಎಲ್ಲ ಭಾವವೂ ಎದ್ದು ಕಾಣುತ್ತಿತ್ತು.

Array

ಮಗ ಮತ್ತೆಂದೂ ವಾಪಸ್ ಬರಲಾರ...

ಉತ್ತರ ಪ್ರದೇಶದ ಮಹಾರಾಜಗಂಜ್ ನ ಪಂಕಜ್ ಪ್ರಿಪಾಠಿ ಎಂಬುವವರು ಗುರುವಾರ ನಡೆದ ಭಯೋತ್ಪಾದಕ ಕ್ಋತ್ಯದಲ್ಲಿ ಹುತಾತ್ಮರಾದರು. ಈ ಘಟನೆಯ ನಂತರ ದಿಗ್ಭ್ರಾಂತರಾದ ಅವರ ಕುಟುಂಬಸ್ಥರ ಚಿತ್ರ ಕರುಳು ಕಿವುಚುವಂತಿತ್ತು. ಸಿಆರ್ ಪಿಎಫ್ ಯೋಧರಿದ್ದ ಬಸ್ ಮೇಲೆ ಜೈಷ್ ಇ ಮೊಹಮ್ಮದ್ ಸಂಘಟನೆಯ ಉಗ್ರ ಆತ್ಮಾಹುತಿ ಕಾರ್ ಬಾಂಬ್ ನಡೆಸಿದ ಪರಿಣಾಮ ೪೪ ಉಗ್ರರು ಹುತಾತ್ಮರಾದರು.

ಅವರು ನನಗೆ ಬೇಕಮ್ಮಾ, ಯೋಧನ ಮಡದಿಯ ಹೃದಯ ಹಿಂಡುವ ಆಕ್ರಂದನಅವರು ನನಗೆ ಬೇಕಮ್ಮಾ, ಯೋಧನ ಮಡದಿಯ ಹೃದಯ ಹಿಂಡುವ ಆಕ್ರಂದನ

ಈ ತಂದೆಯ ಕಣ್ಣೀರೊರೆಸುವವರ್ಯಾರು?

ಪಂಜಾಬಿನ ಮನೀಂದರ್ ಸಿಂಗ್ ಎಂಬುವವರೂ ನಿನ್ನೆಯ ಘಟನೆಯಲ್ಲಿ ಪ್ರಾಣ ತೆತ್ತರು. ಅವರ ಕುಟುಂಬಸ್ಥರು, ಅನಾರೋಗ್ಯಪೀಡಿತ ತಂದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಈ ತಂದೆಯ ಕಣ್ಣೀರೊರೆಸುವವರ್ಯಾರು?

Array

ನಮಗಿನ್ನಾರು ದಿಕ್ಕು?

ಉತ್ತರ ಪ್ರದೇಶದ ವಾರಣಾಸಿಯ ರಮೇಶ್ ಯಾದವ್ ಎಂಬುವವರು ಗುರುವಾರದ ಘಟನೆಯಲ್ಲಿ ಹುತಾತ್ಮರಾದರು. ನಮಗೆ ಇನ್ನ್ಯಾರು ದಿಕ್ಕು ಎಂದು ಅವರ ಅಗಲಿಕೆಗೆ ಇಡೀ ಕುಟುಂಬ, ಇಡೀ ಗ್ರಾಮವೂ ಕಂಬನಿ ಮಿಡಿಯಿತು.

ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರ ಹೆಸರುಗಳುಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರ ಹೆಸರುಗಳು

ದೇಶಪ್ರೇಮಕ್ಕೆ ಮತಭೇದವಿಲ್ಲ!

ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ನಾಶೀರ್ ಅಹ್ಮದ್ ಎಂಬ ಯೋಧರೂ ನಿನ್ನೆಯ ಘಟನೆಯಲ್ಲಿ ಹುತಾತ್ಮರಾದರು. ಅವರ ಅಗಲಿಕೆಯಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

Array

ನಮ್ಮ ನೋವು ಉಗ್ರರ ಹೃದಯ ಕರಗಿಸದೇ?

ಪಂಜಾಬಿನ ಮೊಗಾ ಎಂಬಲ್ಲಿಯ ಜೈಮಾಲ್ ಸಿಂಗ್ ಎಂಬುವವರು ಗುರುವಾರದ ಘಟನೆಯಲ್ಲಿ ಪ್ರಾಣ ಕಳೆದುಕೊಂಡರು. ನಮ್ಮ ನೋವು ಉಗ್ರರ ಹೃದಯ ಕರಗಿಸದೇ? ಎನ್ನುವಂತೆ ಅವರ ಕುಟುಂಬಸ್ಥರು ರೊದಿಸುತ್ತಿದ್ದ ದೃಶ್ಯ ಹೃದಯವಿದ್ರಾವಕವಾಗಿತ್ತು.

ಪುಲ್ವಾಮದ ಉಗ್ರರ ದಾಳಿ : ಮಂಡ್ಯದ ಸಿಆರ್‌ಪಿಎಫ್ ಜವಾನ ಹುತಾತ್ಮಪುಲ್ವಾಮದ ಉಗ್ರರ ದಾಳಿ : ಮಂಡ್ಯದ ಸಿಆರ್‌ಪಿಎಫ್ ಜವಾನ ಹುತಾತ್ಮ

English summary
Heartbreaking pictures of members of the family who lost their dear ones in Pulwama terror attack breaking the internet. Here is their story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X