• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಮಾನ ಪತನದಲ್ಲಿ ಮೃತಪಟ್ಟ ಸಮೀರ್ ಸಹೋದರನ ಮನಮಿಡಿಯುವ ಕವನ

By ಅನಿಲ್ ಆಚಾರ್
|

ಆ ಹೆಣ್ಣುಮಗಳ ಹೆಸರು ಗರಿಮಾ ಅಬ್ರಾಲ್. ಈಚೆಗೆ ಬೆಂಗಳೂರಿನಲ್ಲಿ ಮಿರಾಜ್ 2000 ವಿಮಾನ ಪತನ ಆದಾಗ ಇಬ್ಬರು ಮೃತಪಟ್ಟರು. ಸ್ವಾಡ್ರನ್ ಲೀಡರ್ ಸಮೀರ್ ಅಬ್ರಾಲ್ ಹಾಗೂ ಸಹ ಪೈಲಟ್-ಸ್ಕ್ವಾಡ್ರನ್ ಲೀಡರ್ ಸಿದ್ಧಾರ್ಥ ನೇಗಿ. ಅದರಲ್ಲಿ ಸಮೀರ್ ಅವರ ಪತ್ನಿಯೇ ಈ ಗರಿಮಾ.

ಬಾಳ ಸಂಗಾತಿಯನ್ನು ಕಳೆದುಕೊಂಡು ದುಃಖದಲ್ಲಿರುವ ಗರಿಮಾ ತಮ್ಮ ನೋವನ್ನು ಇನ್ ಸ್ಟಾ ಗ್ರಾಮ್ ಮೂಲಕ ವ್ಯಕ್ತಪಡಿಸಿದ್ದಾರೆ. ಅದಕ್ಕೂ ಮುಂಚೆ ಒಂದು ಮಾತು. ಈ ದುರದೃಷ್ಟ ಮಿರಾಜ್ 2000 ವಿಮಾನವನ್ನು ಪರೀಕ್ಷಾರ್ಥವಾಗಿ ಹಾರಿಸಲಾಗುತ್ತಿತ್ತು. ಇದು ಬಳಸಲು ಯೋಗ್ಯ ಎಂದು ಒಪ್ಪಿಗೆ ಸೂಚಿಸುವ ಮುನ್ನ ನಡೆಸುತ್ತಿದ್ದ ಹಾರಾಟದ ಸಮಯದಲ್ಲೇ ವಿಮಾನ ಪತನವಾಯಿತು. ಇಬ್ಬರು ಬಲಿಯಾದರು.

ಬೆಂಗಳೂರಿನ ಎಚ್‌ಎಎಲ್‌ ಬಳಿ ಮಿರಾಜ್ ಯುದ್ಧ ವಿಮಾನ ಪತನ, ಪೈಲಟ್ ಸಾವು

ಇಬ್ಬರೂ ಹುತಾತ್ಮ ಪೈಲಟ್ ಗಳ ಮನೆಗಳಿಗೆ ರಕ್ಷಣಾ ಸಚಿವೆ ನಿರ್ವಲಾ ಸೀತಾರಾಮನ್ ಭೇಟಿ ನೀಡಿ, ಸಾಂತ್ವನ ಹೇಳಿದ್ದಾರೆ. ಆದರೆ ಆ ಕುಟುಂಬಗಳು ಮನೆಯ ದೀಪಗಳನ್ನೇ ಕಳೆದುಕೊಂಡು ದುಃಖದಲ್ಲಿವೆ. ಇತ್ತ ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಈ ಘಟನೆ ಬಗ್ಗೆ ಸೂಕ್ತ ಹಾಗೂ ಪಾರದರ್ಶಕ ತನಿಖೆ ಆಗಬೇಕು ಎಂದು ಮನವಿ ಮಾಡಿದ್ದಾರೆ.

ಮತ್ತೆ ಸಿದ್ಧಾರ್ಥ್ ಅವರ ದುಃಖತಪ್ತ ಸಹೋದರ ಸುಶಾಂತ್ ಅಬ್ರೋಲ್ ಅವರು ತಮ್ಮ ಹುತಾತ್ಮ ಸಹೋದರನ ಬಗ್ಗೆ ಮನಮಿಡಿಯುವಂಥ ಕವನವನ್ನು ರಚಿಸಿದ್ದಾರೆ. ಇದನ್ನು ಅವರು ಸಹೋದರನ ಮೃತದೇಹದ ಪಕ್ಕ ಕುಳಿತೇ ಬರೆದಿದ್ದಾರೆ. ಅವರು ಬರೆದುಕೊಂಡಿರುವುದರ ಭಾವಾನುವಾದ ಇಲ್ಲಿದೆ. ಇದೇ ಕವನವನ್ನು ಸಿದ್ಧಾರ್ಥ ಅವರ ಪತ್ನಿ ಕೂಡ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಆಗಸದಿಂದ ನೆಲಕ್ಕೆ ಅವರು ಅಪ್ಪಳಿಸಿದರು

ಎಲ್ಲ ಮುರಿದ ಮೂಳೆಯ ಜತೆಗೆ; ಆದರೆ ಬ್ಲಾಕ್ ಬಾಕ್ಸ್ ಸಿಕ್ಕಿತು.

ಪ್ಯಾರಾಶೂಟ್ ಬಿಡಿಸಿದ ಅವರ ರೀತಿ ಸರಿಯಿತ್ತು ಆದರೆ ಅದಕ್ಕೆ ಬೆಂಕಿ ಹೊತ್ತಿಕೊಂಡಿತು

ಕುಟುಂಬ ಹಾಗೂ ಅವರು ಪಟ್ಟಿದ್ದ ಆಸೆಗಳೆಲ್ಲ ಛಿದ್ರವಾಗಿದೆ

ಹಿಂದೆಂದೂ ಅವರು ಅಷ್ಟು ಭಾರವಾದ ಉಸಿರಾಡಿಲ್ಲ, ಅದೇ ಕೊನೆಯ ಸಾರಿಗೆ ಎಂಬಂತೆ

ಅತ್ತ ಅಧಿಕಾರಿಶಾಹಿಗಳು ಭ್ರಷ್ಟತನದ ಬೆಣ್ಣೆ ಹಾಗೂ ವೈನ್ ಸುಖಿಸಿದರು

ನಮ್ಮ ಯೋಧರಿಗೆ ಯುದ್ಧ ಮಾಡಲು ಚಾಲ್ತಿಯಲ್ಲಿ ಇಲ್ಲದ ಯಂತ್ರಗಳು

ಅಷ್ಟಾದರೂ ತಮ್ಮ ಎಲ್ಲ ಶಕ್ತಿ ಮತ್ತು ಪರಾಕ್ರಮ ಮೀರಿ ನೀಡಿದರು

ಆಗಸದಿಂದ ನೆಲಕ್ಕೆ ಅಪ್ಪಳಿಸುತ್ತಿದ್ದಂತೆ

ಮತ್ತೊಮ್ಮೆ ಹುತಾತ್ಮನನ್ನು ಕೊಲ್ಲಲಾಯಿತು

ಕ್ಷಮೆಯೂ ಇರಲ್ಲ ಮತ್ತು ಧನ್ಯವಾದವೂ ಹೇಳದ ಕೆಲಸ ಪರೀಕ್ಷಾರ್ಥ ಪೈಲಟ್ ನದು

ಬೇರೆಯವರಿಗೆ ಬೆಳಕು ತೋರಿಸುವ ಸಲುವಾಗಿ ತಾವು ಅಪಾಯ ಎದುರಿಸಬೇಕು

ನನ್ನ ಸಹೋದರನ ಬಗ್ಗೆ ಹೆಮ್ಮೆಯಿದೆ

ಹೋರಾಟ ಎಂದೂ ಜಾರಿಯಲ್ಲಿರುತ್ತದೆ!

ಜೈ ಹಿಂದ್

ಇನ್ನು ಸಮೀರ್ ಅಬ್ರಾಲ್ ರ ಮತ್ತೊಬ್ಬ ಸೋದರ ಸುಶಾಂತ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ:

ನಾವು ಕಳೆದುಕೊಂಡ ಮತಗಳ ಬಗ್ಗೆ ಮಾತ್ರ ಯೋಚಿಸುವುದಲ್ಲ, ಆದರೆ ಈ ಭ್ರಷ್ಟ ವ್ಯವಸ್ಥೆಯ ನಿರ್ಲಕ್ಷ್ಯದಿಂದ ಕಳೆದುಕೊಂಡ ಪೈಲಟ್ ಗಳ ಬಗ್ಗೆಯೂ ಕಾಳಜಿ ತೋರಿಸುವ ತುರ್ತು ಸಮಯವಿದು!!

ಎಚ್‌ಎಎಲ್ ಬಳಿ ವಿಮಾನ ಪತನ : ಸುಪ್ರೀಂಗೆ ಪಿಐಎಲ್

ನನ್ನ ಸೋದರ (ಸ್ಕ್ವಾಡ್ರನ್ ಲೀಡರ್ ಸಮೀರ್ ಅಬ್ರಾಲ್) ಹಾಗೂ ಅವನ ಕೋ ಪೈಲಟ್ (ಸ್ಕ್ವಾಡ್ರನ್ ಲೀಡರ್ ಸಿದ್ಧಾರ್ಥ್ ನೇಗಿ) ತ್ಯಾಗವನ್ನು ಹುಸಿಯಾಗಲು ಬಿಡದಂತಿರುವ ನಿಮ್ಮ ಬೆಂಬಲ ಬೇಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Garima Abrol, wife of Sameer, pilot, who recently died in Mirage 2000 crash in Bengaluru. Sameer's brother Sushant has written heart touching poem about his brother in Instagram. Garima also has shared this poem on Facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more