ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನ್ನಲ್ಲದ ತಪ್ಪಿಗೆ ಕೈತಪ್ಪಿದ ಪೈಲಟ್ ಹುದ್ದೆ: ಫುಡ್ ಡೆಲಿವರಿ ಬಾಯ್ ಕಥೆ ಕೇಳಿ

|
Google Oneindia Kannada News

ತಿರುವನಂತಪುರಂ ಜು. 4: ಕನಸು ಕಾಣುವುದು ಮನಷ್ಯನ ಸಹಜ ಗುಣ. ಆದರೆ ಆ ಕನಸು ತನ್ನದಲ್ಲದ ತಪ್ಪಿಗೆ ಕೈ ತಪ್ಪಿ ಹೋಗುತ್ತೆ ಅಂದರೆ ಅದಕ್ಕಿಂತ ದೊಡ್ಡ ಶಿಕ್ಷೆ ಮತ್ತೊಂದಿಲ್ಲ. ಇಂಥಹದೊಂದು ಘಟನೆ ಕೇಳುಗರ ಮನ ಕರಗಿಸಿದೆ. 23 ವರ್ಷದ ವ್ಯಕ್ತಿ ಆಡಮ್ ಹ್ಯಾರಿ ಯಾವಾಗಲೂ ಪೈಲಟ್ ಆಗಬೇಕೆಂದು ಕನಸು ಕಂಡಿದ್ದರು. ಆದರೆ ಹಾರ್ಮೋನ್ ಥೆರಪಿ ಪಡೆಯುತ್ತಿರುವುದರಿಂದ ಅವರು ಪೈಲಟ್ ಆಗಲು ಅನರ್ಹನಾಗಿದ್ದಾರೆ ಎಂದು ಡಿಜಿಸಿಎ ಆತನ ಆಸೆಗೆ ತಣ್ಣೀರೆರೆಚಿದೆ.

ಹ್ಯಾರಿ ಅವರು 2020 ರಲ್ಲಿ ತಿರುವನಂತಪುರಂನಲ್ಲಿರುವ ರಾಜೀವ್ ಗಾಂಧಿ ಅಕಾಡೆಮಿ ಫಾರ್ ಏವಿಯೇಷನ್ ​​ಟೆಕ್ನಾಲಜಿಗೆ ದಾಖಲಾಗಿದ್ದರು. ಆದರೆ, ವಿದ್ಯಾರ್ಥಿ ಪರವಾನಗಿಗಾಗಿ ವೈದ್ಯಕೀಯ ಕ್ಲಿಯರೆನ್ಸ್ ಪಡೆಯಲು ಬಂದಾಗ ಅವರು ಮಂಗಳಮುಖಿ ಎಂದು ತಿಳಿದುಬಂದಿದೆ.

ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(ಡಿಜಿಸಿಎ) ವೈದ್ಯಕೀಯ ಪರೀಕ್ಷೆಯ ನಂತರ ಅವರು ತೃತೀಯ ಲಿಂಗ ಎಂದು ತಿಳಿದು ಬಂದಿದೆ. ಇದರಿಂದಾಗಿ ಅವರ ಪೈಲೆಟ್ ಆಗುವ ಕನಸ್ಸು ನನಸಾಗದೆ. ವೈದ್ಯಕೀಯ ಪರೀಕ್ಷೆ ಅವರನ್ನು ತಾತ್ಕಾಲಿಕ ಅನರ್ಹ ಎಂದು ವರದಿ ನೀಡಿದೆ. ಹ್ಯಾರಿ ಹುಟ್ಟಿನಿಂದಲೇ ಹೆಣ್ಣಾಗಿದ್ದರು. ಅವರು ಪುರುಷನಾಗಿ ಗುರುತಿಸಿಕೊಳ್ಳುವಷ್ಟು ಬೆಳೆದರು. ಅವರು ಲೈಂಗಿಕ ಹಾರ್ಮೋನ್ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

Hear the story of a food delivery boy who lost his job as a pilot through no fault of his own

ಟ್ರಾನ್ಸ್ ವ್ಯಕ್ತಿಗಳಿಗೆ ಜೀವಿತಾವಧಿಯ ವೈದ್ಯಕೀಯ ಬೆಂಬಲದ ಅಗತ್ಯವಿದೆ. ಆದರೆ ಡಿಸಿಜಿಎ ಅವರು ಔಷಧಿ ತೆಗೆದುಕೊಳ್ಳುವವರೆಗೂ ಅವರು ಕ್ಲಿಯರೆನ್ಸ್ ಪಡೆಯುವುದಿಲ್ಲ ಎಂದು ಹೇಳಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ. ಪೈಲೆಟ್ ಕೆಲಸ ಕೈತಪ್ಪಿದ್ದರಿಂದ ಝೊಮಾಟೊ ಜೊತೆಗೆ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಜೀವನೋಪಾಯಕ್ಕಾಗಿ ಅವರು ಈ ಆಯ್ಕೆಯನ್ನು ಮಾಡುವುದು ಅನಿವಾರ್ಯವಾಗಿದೆ. ಈ ಬಗ್ಗೆ ಹ್ಯಾರಿ ಬೇಸರ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಹ್ಯಾರಿ ಅವರು ಚಿಕಿತ್ಸೆಯಲ್ಲಿ ಇರುವವರೆಗೂ ತನಗೆ ಕ್ಲಿಯರೆನ್ಸ್ ನೀಡಲು ನಿರಾಕರಿಸಿದ DGCA ಯ ವಿರುದ್ಧ ಬಾಂಬೆ ಹೈಕೋರ್ಟ್‌ಗೆ ಹೋಗಲು ಯೋಜಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪೈಲಟ್‌ಗೆ ಬೆಂಬಲದ ಮಹಾಪೂರವೇ ಹರಿದುಬರುತ್ತಿದೆ. ಅವರು ಎಲ್ಲಾ ವಿಷಯದಲ್ಲಿ ಪೈಲಟ್ ಆಗಲು ಅರ್ಹವಾಗಿದ್ದೇನೆ. ಆದರೆ DGCA ಯ ಅರ್ಹತಾ ಮಾನದಂಡಗಳನ್ನು "ಟ್ರಾನ್ಸ್‌ಫೋಬಿಕ್ ಮತ್ತು ಅವೈಜ್ಞಾನಿಕ" ಎಂದು ವಿವರಿಸಿದೆ.

"ಇದು ನಾಚಿಕೆಗೇಡಿನ ಸಂಗತಿ" ಎಂದು Instagram ಬಳಕೆದಾರರು ಹ್ಯಾರಿ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. "DGCA ಅವಕಾಶ ನೀಡಬಹುದಿತ್ತು ಮತ್ತು ಭಾರತದಲ್ಲಿ ಮೊದಲ ಟ್ರಾನ್ಸ್ ಮ್ಯಾನ್ ಪೈಲಟ್ ಆಗಿ ಇತಿಹಾಸವನ್ನು ರಚಿಸಬಹುದಿತ್ತು. ಬದಲಿಗೆ ಅವರನ್ನು ಅವಮಾನಿಸಿದ್ದಾರೆ. ಕೀಳಾಗಿ ನೋಡಿದ್ದಾರೆ. ಅವರಿಗೆ ನ್ಯಾಯ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. "ಇದು ತುಂಬಾ ದುರದೃಷ್ಟಕರ! ನಿಮಗೆ ನಮ್ಮ ಬೆಂಬಲವನ್ನು ಕಳುಹಿಸುತ್ತಿದ್ದೇವೆ! ನೀವು ಇದರಿಂದ ಖಂಡಿತವಾಗಿಯೂ ಸಮಸ್ಯೆಯಿಂದ ಹೊರಬರುತ್ತೀರಿ" ಎಂದು ಇನ್ನೊಬ್ಬರು ಬರೆದಿದ್ದಾರೆ.

English summary
This is the story of Adam Harry who dreams of becoming a pilot and becomes a food delivery boy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X