ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Summer Health Tips: ಬೇಸಿಗೆಯಲ್ಲಿ ಆರೋಗ್ಯವರ್ಧಕ ಪಾನೀಯ ಸೇವಿಸಿ

|
Google Oneindia Kannada News

ಬೇಸಿಗೆ ರಣ ಬಿಸಿಲು ಸುಡುತ್ತಿದೆ, ದಾಹ ಹೆಚ್ಚುತ್ತಿದೆ, ದೇಹ ಬಳಲುತ್ತಿದೆ. ಹೀಗಾಗಿ ಕೆಲಸ ಮಾಡುವುದಿರಲಿ ನಾಲ್ಕು ಹೆಜ್ಜೆ ಹಾಕುವುದೇ ಕಷ್ಟವಾಗುತ್ತಿದೆ. ಜತೆಗೆ ಬಾಯಾರಿಕೆ ತಣಿಸಲು ಏನಾದರೂ ತಂಪು ಪಾನೀಯ ಕುಡಿಯಬೇಕೆನಿಸುತ್ತದೆ. ಹಾಗೆಂದು ತಂಪು ಪಾನೀಯ ಸೇವಿಸುವ ಮುನ್ನ ಅವು ನಮ್ಮ ಆರೋಗ್ಯಕ್ಕೆ ಒಳಿತಾ ಎಂಬುದು ನಮ್ಮ ಗಮನದಲ್ಲಿರಬೇಕು.

ಬೇಸಿಗೆಯಲ್ಲಿ ಬಾಯಾರಿಕೆ ಸಾಮಾನ್ಯವಾಗಿರುವುದರಿಂದ ನಾವೇ ಕೆಲವೊಂದು ಮುಂಜಾಗ್ರತೆ ಮತ್ತು ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಪಾನೀಯಗಳು ದಣಿದ ಸಂದರ್ಭದಲ್ಲಿ ನಮ್ಮ ಬಾಯಿಗೆ ರುಚಿಯಾಗಿ, ದೇಹಕ್ಕೆ ಒಂದಿಷ್ಟು ತಂಪನ್ನು ನೀಡಿದರೂ ಆರೋಗ್ಯ ಕಾಪಾಡಲಾರವು. ಹೀಗಾಗಿ ಬೇಸಿಗೆಯಲ್ಲಿ ಆರೋಗ್ಯವನ್ನು ಕಾಪಾಡುವ ಪಾನೀಯಗಳಿಗೆ ಆದ್ಯತೆ ನೀಡುವುದು ಬಲು ಮುಖ್ಯವಾಗಿದೆ.

ಬೇಸಿಗೆಯಲ್ಲಿ ಸೌತೆಕಾಯಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ!ಬೇಸಿಗೆಯಲ್ಲಿ ಸೌತೆಕಾಯಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ!

ಬೇಸಿಗೆಯಲ್ಲಿ ಬಾಯಾರಿಕೆ ತೀರುವುದಿಲ್ಲ
ನೆತ್ತಿ ಸುಡುವ ಬಿಸಿಲಿಗೆ ಎಷ್ಟು ನೀರನ್ನು ಕುಡಿದರೂ ತೃಪ್ತಿಯಾಗುವುದಿಲ್ಲ. ಬಾಯಾರಿಕೆ ತೀರುವುದೇ ಇಲ್ಲ. ಇದಕ್ಕೆ ಕಾರಣ ನೀರು ಬೆವರಿನ ರೂಪದಲ್ಲಿ ದೇಹದಿಂದ ಹರಿದು ಹೋಗುತ್ತಿರುತ್ತದೆ. ಆದ್ದರಿಂದ ಬೇಸಿಗೆ ದಿನಗಳಲ್ಲಿ ನಮ್ಮ ದೇಹದಲ್ಲಿ ನೀರಿನಾಂಶ ಹೆಚ್ಚಿನ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಇದನ್ನು ತಡೆಯಲು ಹಣ್ಣಿನ ರಸವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಅಗತ್ಯವಾಗಿದೆ.

Health Tips: Drink A Hygienic Drink in The Summer Days

ಬಾಯಾರಿಕೆಯಾಯಿತು ಎಂದಾಕ್ಷಣ ನಾವು ಏನಾದರೊಂದು ತಂಪು ಪಾನೀಯ ಸೇವಿಸಿ ತಣ್ಣಗಾಗುತ್ತೇವೆ. ಆದರೆ ಅದರಿಂದ ದೇಹಕ್ಕೆ ಒಳಿತಾಗುತ್ತದೆಯಾ? ಆರೋಗ್ಯಕಾರಿಯಾ? ಎಂಬುದನ್ನೆಲ್ಲ ಗಮನಿಸುವುದು ಅಗತ್ಯ. ಕಲ್ಲಂಗಡಿ, ಕರ್ಬೂಜ, ಸೊಗದೆಬೇರು, ಜೀರಿಗೆ, ನಿಂಬೆ, ಮೂಸಂಬಿ, ಪುನರ್ಪುಳಿ ಹೀಗೆ ವಿವಿಧ ಹಣ್ಣಿನ ರಸದಿಂದ ಮಾಡಲಾದ ಪಾನೀಯಗಳನ್ನೇ ಸೇವಿಸಬೇಕು. ಇದು ಬಿಟ್ಟು ದಾಹವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಕೃತಕ ಪಾನೀಯಗಳ ಸೇವನೆಗೆ ಆದ್ಯತೆ ನೀಡಿದರೆ ಅದರಿಂದ ಯಾವುದೇ ಪ್ರಯೋಜನವಾಗಲಾರದು.

Health Tips: ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದೇ ಸವಾಲು!Health Tips: ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದೇ ಸವಾಲು!

ಕಲ್ಲಂಗಡಿ ರಸ ಸೇವಿಸಿ ಆರೋಗ್ಯ ಕಾಪಾಡಿ
ಬೇಸಿಗೆಯಲ್ಲಿ ಬಾಯಾರಿಕೆಯನ್ನು ಅಡಗಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ನೈಸರ್ಗಿಕ ಪಾನೀಯ ಎಳನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಉತ್ತಮ. ಕಲ್ಲಂಗಡಿಯ ರಸವನ್ನು ಸೇವಿಸುವುದರಿಂದಲೂ ಉತ್ತಮ ಪ್ರಯೋಜನವನ್ನು ಕಾಣಬಹುದು. ಈ ಹಣ್ಣಿನಲ್ಲಿ ಪೊಟ್ಯಾಷಿಯಂ, ಸೋಡಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ, ಸೋಡಿಯಂ ಹೇರಳವಾಗಿ ಇರುವುದರಿಂದ ಆರೋಗ್ಯವನ್ನು ಕಾಪಾಡುತ್ತದೆ. ಬಿಸಿಲಲ್ಲಿ ಓಡಾಡಿ ಬಂದವರು ನಿಂಬೆ ರಸವನ್ನು ಸೇವಿಸಿದರೆ ವಿಟಮಿನ್ 'ಸಿ' ಅಂಶ ಇರುವುದರಿಂದ ಡಿಹೈಡ್ರೇಷನ್ ಸಮಸ್ಯೆ ಉಂಟಾಗುವುದಿಲ್ಲ.

Health Tips: Drink A Hygienic Drink in The Summer Days

ಇನ್ನು ಬೇಸಿಗೆ ದಿನದಲ್ಲಿ ನಮ್ಮೆಲ್ಲರಿಗೂ ಆರೋಗ್ಯದ ದೃಷ್ಟಿಯಿಂದ ಹಿತವಾಗುವ ನೈಸರ್ಗಿಕ ಪಾನೀಯ ಎಳನೀರಾಗಿದ್ದು, ಎಲ್ಲ ಸಂದರ್ಭಗಳಲ್ಲಿಯೂ ನಮ್ಮ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೇಸಿಗೆ ದಿನದಲ್ಲಿ ದೇಹದ ಉಷ್ಣಾಂಶವನ್ನು ತಂಪುಗೊಳಿಸುವಲ್ಲಿ ಎಳನೀರಿನ ಪಾತ್ರ ಬಹಳಷ್ಟಿದೆ. ಇದು ಕೇವಲ ಬಾಯಾರಿಕೆಯನ್ನು ಮಾತ್ರ ನೀಗಿಸದೆ, ಆರೋಗ್ಯದ ದೃಷ್ಟಿಯಿಂದಲೂ ಅತಿ ಉತ್ತಮ ಎಂದು ವೈಜ್ಞಾನಿಕವಾಗಿಯೂ ತಿಳಿದು ಬಂದಿದೆ.

ನೂರು ರೋಗಗಳಿಗೆ ಒಂದೇ ಔಷಧಿ
ಎಳನೀರು ನೂರು ರೋಗಗಳಿಗೆ ಒಂದೇ ಔಷಧಿ ಎಂಬುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಎಳನೀರಿನಲ್ಲಿ ಅಧಿಕ ವಿಟಮಿನ್ ಹಾಗೂ ಖನಿಜವನ್ನು ಒಳಗೊಂಡಿದೆ. ಇದರ ಸೇವನೆಯಿಂದ ದೇಹಕ್ಕೆ ಆರೋಗ್ಯ ನೀಡುವುದಲ್ಲದೇ, ಫಿಟ್ನೆಸ್‌ಗೂ ಇದು ಉಪಯೋಗಕರವಾಗಿದೆ. ವಿಟಮಿನ್, ಪೊಟ್ಯಾಶಿಯಂ, ಫೈಬರ್, ಕ್ಯಾಲ್ಸಿಯಂ, ಮೆಗ್ನೀಶಿಯಂ ಮತ್ತು ಖನಿಜ ಗುಣವನ್ನು ಹೊಂದಿದೆ.

ಕೊಬ್ಬು ಹಾಗೂ ಕೊಲೆಸ್ಟ್ರಾಲ್ ಅಂಶವಿಲ್ಲ, ಹಾಗಾಗಿ ಬೊಜ್ಜು ಕರಗಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಎಳನೀರು ಸೇವಿಸುವುದರಿಂದ ಬಾಯಾರಿಕೆ ತಣಿಸುವುದಲ್ಲದೆ, ದೇಹವನ್ನು ಲವಲವಿಕೆಯಿಂದಲೂ ಇಡಲಿದೆ. ಜತೆಗೆ ಮುಖದ ತ್ವಚೆಯನ್ನು ಕಾಪಾಡುತ್ತದೆ.

Health Tips: Drink A Hygienic Drink in The Summer Days

ಶಕ್ತಿ ನೀಡುವ ಗುಣ ಹೊಂದಿರುವ ಎಳನೀರನ್ನು ವ್ಯಾಯಾಮದ ನಂತರ ಸೇವನೆ ಮಾಡುವುದರಿಂದ ದೇಹಕ್ಕೆ ಹಲವು ರೀತಿಯ ಉಪಯೋಗವಾಗಲಿದೆ. ಎಲ್ಲ ರೀತಿಯಿಂದಲೂ ಅತಿ ಹೆಚ್ಚು ವಿಟಮಿನ್ ಹೊಂದಿರುವ ಎಳನೀರು ಸೇವನೆ ದೇಹಕ್ಕೆ ಆರೋಗ್ಯಕರ ಎಂಬುದರಲ್ಲಿ ಎರಡು ಮಾತಿಲ್ಲ.

ಒಟ್ಟಾರೆಯಾಗಿ ಬೇಸಿಗೆಯ ದಿನಗಳಲ್ಲಿ ದಾಹ ತಣಿಸಲಿಕ್ಕೋಸ್ಕರ ಯಾವುದೋ ಒಂದು ಪಾನೀಯ ಸೇವಿಸಿ ಸುಮ್ಮನಾಗುವ ಬದಲು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಆರೋಗ್ಯಕ್ಕೆ ಹೊಂದುವ ಹಣ್ಣಿನಿಂದ ತಯಾರಿಸಿದ ಪಾನೀಯ ಸೇವಿಸುವುದನ್ನು ರೂಢಿಸಿಕೊಳ್ಳಬೇಕು.

English summary
Summer Health Tips: In the summer it is important to priorities health-sustaining beverages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X