ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Happy Birthday HD Deve Gowda - ಅಪ್ಪ ಅಷ್ಟೇ ಅಲ್ಲ, ನನ್ನ ಗುರು, ದೈವ: ಎಚ್‌ಡಿಡಿ ಜನ್ಮದಿನಕ್ಕೆ ಮಗನ ನಮನ

|
Google Oneindia Kannada News

ಬೆಂಗಳೂರು, ಮೇ 18: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ 90ನೇ ಜನ್ಮದಿನ ಇಂದು. ಈ ಸಂದರ್ಭದಲ್ಲಿ ಅವರ ಪುತ್ರ, ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಭಾವೋದ್ವೇಗದ ನುಡಿಗಳೊಂದಿಗೆ ಟ್ವೀಟ್ ಮಾಡಿದ್ದಾರೆ. ಎಚ್ ಡಿ ದೇವೇಗೌಡರು ತಮಗೆ ತಂದೆ ಮಾತ್ರವಲ್ಲ, ಗುರು, ದೈವ, ಶಕ್ತಿಯೂ ಆಗಿದ್ದಾರೆಂದು ಎಚ್‌ಡಿಕೆ ತಮ್ಮ ಸರಣಿ ಟ್ವೀಟ್‌ಗಳಲ್ಲಿ ಬಣ್ಣಿಸಿದ್ದಾರೆ.

"ಅಲ್ಪಕಾಲವಷ್ಟೇ ಅಧಿಕಾರದಲ್ಲಿದ್ದರೂ ಕರ್ನಾಟಕ ಮತ್ತು ಭಾರತಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದವರು ಇವರು. ಕಾಯಾ ವಾಚಾ ಮನಸಾ ಜನರ ಉದ್ಧಾರಕ್ಕಾಗಿ ಶ್ರಮಿಸಿದ ಅವರು ಭಾರತದ ರಾಜಕೀಯ ಕರ್ಮಯೋಗಿ. ತೊಂಬತ್ತರ ಹರೆಯದಲ್ಲೂ ಜನರಪರ ಹೋರಾಟ ನಡೆಸುತ್ತಿರುವ ಕರ್ಮಯೋಗಿ" ಎಂದು ಮಾಜಿ ಸಿಎಮ್ ಕುಮಾರಸ್ವಾಮಿ ತಮ್ಮ ತಂದೆಯನ್ನು ಕೊಂಡಾಡಿದ್ದಾರೆ.

"ಸದಾ ನನ್ನ ಕೈಹಿಡಿದು ಮುನ್ನಡೆಸಿದ ಅವರು ನನ್ನ ಪಾಲಿಗೆ ತಂದೆಯಷ್ಟೇ ಅಲ್ಲ; ಗುರು, ದೈವ, ಶಕ್ತಿಯೂ ಹೌದು. ನನಗಷ್ಟೇ ಅಲ್ಲ, ಈ ನಾಡಿಗೆ, ದೇಶಕ್ಕೆ ಇನ್ನಷ್ಟು ದೀರ್ಘಕಾಲ ಅವರ ಸೇವೆ- ಮಾರ್ದರ್ಶನ ಅಗತ್ಯ ಇದೆ. ಆ ಭಗವಂತ ಅವರಿಗೆ ಉತ್ತಮ ಆಯುರಾರೋಗ್ಯ ಕರುಣಿಸಲಿ" ಎಂದು ಕುಮಾರಸ್ವಾಮಿ ಈ ಸಂದರ್ಭದಲ್ಲಿ ಪ್ರಾರ್ಥಿಸಿದ್ದಾರೆ.

ದಣಿವರಿಯದ ಕರ್ಮಯೋಗಿ ಹೆಚ್‌ಡಿಡಿ:
1933 ಮೇ 18ರಂದು ಅಂದಿನ ಮೈಸೂರು ಸಂಸ್ಥಾನಕ್ಕೆ ಸೇರಿದ ಮತ್ತು ಈಗಿನ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನಲ್ಲಿರುವ ಹರದನಹಳ್ಳಿಯಲ್ಲಿ ಜನಸಿದವರು ಹೆಚ್ ಡಿ ದೇವೇಗೌಡ. ಮಾಮೂಲಿಯ ರೈತಾಪಿ ವರ್ಗದ ಕುಟುಂಬದ ದೇವೇಗೌಡರು ಪ್ರಧಾನಮಂತ್ರಿ ಸ್ಥಾನಕ್ಕೆ ಏರಿದ ಘಟನೆ ರೋಚಕ.

HDK Wishes Father HD Deve Gowda On His Birthday

ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿ ಗುತ್ತಿಗೆ ಕೆಲಸ ಮಾಡುತ್ತಿದ್ದ ದೇವೇಗೌಡರು 1953ರಲ್ಲಿ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯಕ್ಕೆ ಅಡಿ ಇಟ್ಟರು. 1962ರಲ್ಲಿ ಕಾಂಗ್ರೆಸ್ ಬಿಟ್ಟು ಪಕ್ಷೇತರರಾಗಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ಶಾಸಕರಾದರು. ಅಲ್ಲಿಂದ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಇದೇ ಕ್ಷೇತ್ರದಲ್ಲಿ ಸತತ ಆರು ಅವಧಿ ಅವರು ಗೆದ್ದರು.

ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆ: ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ?ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆ: ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ?

ಜನತಾ ಪಕ್ಷದ ರಾಜ್ಯ ಘಟಕಕ್ಕೆ ಅವರು ಎರಡು ಬಾರಿ ಅಧ್ಯಕ್ಷರಾದರು. 1983ರ ರಾಮಕೃಷ್ಣ ಹೆಗಡೆ ನೇತೃತ್ವದ ಸರಕಾರದಲ್ಲಿ ಅವರು ಸಚಿವರಾಗಿ ಕೆಲಸ ಮಾಡಿದರು. ಜನತಾ ಪಕ್ಷ ವಿಭಜನೆಯಾಗಿ ಜನತಾ ದಳವಾದಾಗ ದೇವೇಗೌಡರು ಸುಬ್ರಮಣಿಯನ್ ಸ್ವಾಮಿ ನೇತೃತ್ವದ ಜನತಾ ಪಕ್ಷ ಸೇರಿದರು. ನಂತರ ಮತ್ತೆ ಜನತಾ ದಳಕ್ಕೆ ವಾಪಸ್ಸಾದರು. 1994ರಲ್ಲಿ ಕರ್ನಾಟಕದ 14ನೇ ಮುಖ್ಯಮಂತ್ರಿಯಾದರು.

HDK Wishes Father HD Deve Gowda On His Birthday

ನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಅವರು ದೇಶದ ಪ್ರಧಾನಿಯಾಗಿಯೂ ಆಯ್ಕೆಯಾದರು. 1996 ಜೂನ್ 1ರಿಂದ 1997 ಏಪ್ರಿಲ್ 21ರವರೆಗೆ ಅವರು ಪಿಎಂ ಆಗಿ ದಕ್ಷ ಆಡಳಿತ ನೀಡಿದರು. ಅದಾದ ಬಳಿಕ ಅವರು ಅಧಿಕಾರದಿಂದ ದೂರವಾದರೂ ಸಕ್ರಿಯ ರಾಜಕಾರಣದಿಂದ ಹಿಂದಕ್ಕೆ ಸರಿಯಲಿಲ್ಲ. ಈಗಲೂ ಅವರು ಯಾವುದಾದರೂ ಹೋರಾಟಕ್ಕೆ ರಸ್ತೆ ಇಳಿಯಲು ಸೈ ಎನ್ನುವಷ್ಟು ಹುಮ್ಮಸ್ಸಿನಲ್ಲಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Former Prime Minister HD Deve Gowda's 90th birthday today May 18th. His Son and former CM HD Kumaraswamy has wished him in his series of tweets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X