ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಧಗಿ ಸೋಲು: ಕುಮಾರಸ್ವಾಮಿಯ ಆ ಮಾತಿನಲ್ಲಿ ನೋವಿತ್ತು, ಆಕ್ರೋಶವಿತ್ತು

|
Google Oneindia Kannada News

ಬೆಂಗಳೂರು, ನ 8: ಹಾನಗಲ್ ಕ್ಷೇತ್ರದ ಸೋಲನ್ನು ಜೆಡಿಎಸ್ ನಿರೀಕ್ಷಿಸಿತ್ತು, ಸಿಂಧಗಿಯಲ್ಲಿ ಗೆಲುವಿನ ಸನಿಹಕ್ಕೆ ಬರಬಹುದು ಎನ್ನುವುದು ದಳಪತಿಗಳ ಲೆಕ್ಕಾಚಾರವಾಗಿತ್ತು. ಅದಕ್ಕಾಗಿ, ಜೆಡಿಎಸ್ ನಾಯಕರು ಪಟ್ಟ ಪರಿಶ್ರಮವೂ ಅಷ್ಟಿಷ್ಟಲ್ಲ. ಆದರೆ, ಎರಡೂ ಕ್ಷೇತ್ರದಲ್ಲಿ ಕನಿಷ್ಠ ಠೇವಣಿ ಉಳಿಸಿಕೊಳ್ಳುವಲ್ಲಿ ಜೆಡಿಎಸ್ ವಿಫಲವಾಯಿತು.

ದೇವನಹಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸೋಲಿನ ವಿವರಣೆಯನ್ನು ಸಭೆಯ ಮುಂದೆ ನೋವಿನಿಂದ ಇಟ್ಟರು. ಹೇಗೆ ಜೆಡಿಎಸ್ ಪಕ್ಷಕ್ಕೆ ಸೋಲಾಯಿತು ಎನ್ನುವುದರ ವಿವರಣೆಯನ್ನು ನೀಡಿದರು.

ನವೆಂಬರ್ 8ರಿಂದ ರಾಜ್ಯದ ಜನತೆಗೆ ಹೊಸ ಪತ್ರಿಕೆ ಲೋಕಾರ್ಪಣೆನವೆಂಬರ್ 8ರಿಂದ ರಾಜ್ಯದ ಜನತೆಗೆ ಹೊಸ ಪತ್ರಿಕೆ ಲೋಕಾರ್ಪಣೆ

ಕಳೆದ ಬಾರಿಯ ಅಂದರೆ 2018ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಂ.ಸಿ.ಮನಗೋಳಿ, ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಗೆಲುವು ಸಾಧಿಸಿದ್ದರು. ಆದರೆ, ಈ ಉಪ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಜಯಶೀಲರಾಗಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿದ್ದ ನಾಜಿಯಾ ಅಂಗಡಿ ಠೇವಣಿಯನ್ನು ಕಳೆದುಕೊಂಡಿದ್ದರು.

 ಕೇದಾರನಾಥ ದೇವಾಲಯದ ಜೀರ್ಣೋದ್ದಾರ: ಪ್ರಧಾನಿಗೆ ದೇವೇಗೌಡರ ಶಹಬ್ಬಾಸ್ ಗಿರಿ ಕೇದಾರನಾಥ ದೇವಾಲಯದ ಜೀರ್ಣೋದ್ದಾರ: ಪ್ರಧಾನಿಗೆ ದೇವೇಗೌಡರ ಶಹಬ್ಬಾಸ್ ಗಿರಿ

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಕ್ಷೇತ್ರದಲ್ಲೇ ಬೀಡುಬಿಟ್ಟು ಪ್ರಚಾರ ನಡೆಸಿದ್ದರು. ಎಚ್‌ಡಿಕೆ ಕೂಡಾ ಸತತವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಇದ್ಯಾವುದೂ ವರ್ಕೌಟ್ ಆಗದೇ ಇದ್ದದ್ದು ಗೌಡ್ರು ಮತ್ತು ಕುಮಾರಸ್ವಾಮಿ ಪಾಲಿಗೆ ಚಿಂತೆಯ ವಿಷಯವಾಗಿದೆ. ಎಚ್‌ಡಿಕೆಯವರು ದೇವನಹಳ್ಳಿ ಸಭೆಯಲ್ಲಿ ಹೇಳಿದ್ದೇನು?

 ಬಿಡದಿಯ ತೋಟದಲ್ಲಿ ನಾನು ರೈತನಾಗಿ ಬದುಕುತ್ತಿದ್ದೇನೆ

ಬಿಡದಿಯ ತೋಟದಲ್ಲಿ ನಾನು ರೈತನಾಗಿ ಬದುಕುತ್ತಿದ್ದೇನೆ

"ಎರಡು ಬಾರಿ ನನಗೆ ಹೃದಯದ ಸರ್ಜರಿ ನಡೆದಿದೆ, ಬಿಡದಿಯ ತೋಟದಲ್ಲಿ ನಾನು ಸದ್ಯ ವಾಸವಾಗಿದ್ದೇನೆ. ಆ ಆಸ್ತಿಯನ್ನು ನಾನು ಅಧಿಕಾರದಲ್ಲಿದ್ದಾಗ ಸಂಪಾದನೆ ಮಾಡಿದ್ದಲ್ಲ. 1973ರಲ್ಲಿ ಸಿನಿಮಾ ಹಂಚಿಕೆದಾರನಾಗಿದ್ದಾಗ ಖರೀದಿ ಮಾಡಿದ್ದದ್ದು. ಈಗ ಅಲ್ಲಿ ರೈತನಾಗಿ ಬದುಕುತ್ತಿದ್ದೇನೆ, ಅಲ್ಲೂ ದಿನಕ್ಕೆ ಕನಿಷ್ಠ ಇಲ್ಲಾಂದರೂ ಐನೂರು ಜನ ನನ್ನನ್ನು ಭೇಟಿ ಮಾಡಲು ಬರುತ್ತಾರೆ. ಅವರ ಕಷ್ಟವನ್ನು ಕೇಳಿ, ಸಾಧ್ಯವಾದಷ್ಟು ಪರಿಹಾರವನ್ನು ಮಾಡುತ್ತೇನೆ"ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

 ಜೆಡಿಎಸ್ ಪಕ್ಷ ಸ್ವಾರ್ಥಕ್ಕಾಗಿ ಇರುವ ಪಕ್ಷವಲ್ಲ, ಕೊಡುಗೆಯನ್ನು ರಾಜ್ಯಕ್ಕೆ ಕೊಟ್ಟಿದ್ದೇವೆ

ಜೆಡಿಎಸ್ ಪಕ್ಷ ಸ್ವಾರ್ಥಕ್ಕಾಗಿ ಇರುವ ಪಕ್ಷವಲ್ಲ, ಕೊಡುಗೆಯನ್ನು ರಾಜ್ಯಕ್ಕೆ ಕೊಟ್ಟಿದ್ದೇವೆ

"ನಿಮಗೆಲ್ಲಾ ನಾನು ಹೇಳಲು ಬಯಸುವುದು ಇಷ್ಟೇ, ಜೆಡಿಎಸ್ ಪಕ್ಷ ಸ್ವಾರ್ಥಕ್ಕಾಗಿ ಇರುವ ಪಕ್ಷವಲ್ಲ. ಈ ಪಕ್ಷದ ಮೂಲಕ ಹಲವಾರು ಕೊಡುಗೆಯನ್ನು ರಾಜ್ಯಕ್ಕೆ ಕೊಟ್ಟಿದ್ದೇವೆ, ಆದರೆ ನಮಗೆ ಪ್ರಚಾರ ಸಿಗುವುದಿಲ್ಲ. ದಯವಿಟ್ಟು ನೀವೇ ನಮ್ಮನ್ನು ಬೆಳೆಸಿ, ಉಳಿಸಿಕೊಳ್ಳಬೇಕು. ಸಿಂಧಗಿ ಕ್ಷೇತ್ರಕ್ಕೆ ದೇವೇಗೌಡ್ರು ಕೊಟ್ಟ ಕೊಡುಗೆ, ಉತ್ತರ ಕರ್ನಾಟಕದ ನೀರಾವರಿ ಯೋಜನೆಗೆ ಗೌಡ್ರು ಹದಿನೈದು ಸಾವಿರ ಕೋಟಿ ರೂಪಾಯಿ ಕೊಟ್ಟರು" ಎಂದು ಕುಮಾರಸ್ವಾಮಿ ಈ ಸಂದರ್ಭದಲ್ಲಿ ಹೇಳಿದರು.

 ದೇವೇಗೌಡ್ರು ಮಾಡಿದ ಕೆಲಸವನ್ನು ಸಿಂಧಗಿಯ ಜನ ನೆನೆಸಿಕೂಳ್ಳಲಿಲ್ಲ

ದೇವೇಗೌಡ್ರು ಮಾಡಿದ ಕೆಲಸವನ್ನು ಸಿಂಧಗಿಯ ಜನ ನೆನೆಸಿಕೂಳ್ಳಲಿಲ್ಲ

"ದೇವೇಗೌಡ್ರು ಮಾಡಿದ ಕೆಲಸವನ್ನು ಸಿಂಧಗಿಯ ಜನ ನೆನೆಸಿಕೂಳ್ಳದೇ ಇರುವುದು ನನಗೆ ವೈಯಕ್ತಿಕವಾಗಿ ಬಹಳ ನೋವು ತಂದಿದೆ, ಎಲ್ಲಾ ಜಾತಿಜಾತಿ. ಈ ಜಾತಿ ವ್ಯವಸ್ಥೆಯಿಂದಾಗಿ ಅವರ ಬದುಕು ಎಲ್ಲಿಗೆ ಹೋಗುತ್ತಿದೆ ಎನ್ನುವುದರ ಬಗ್ಗೆ ಅವರಿಗೆ ಯೋಚನೆಯಿಲ್ಲ. ಕಳೆದ ಚುನಾವಣೆಯಲ್ಲಿ ನಾವು ಗೆದ್ದಿದ್ದೆವು. ಕೃಷ್ಣಾ ನದಿಯ ಮೂರು ಟಿಎಂಸಿ ನೀರನ್ನು ಗೌಡ್ರು ಪ್ರಧಾನಿಯಾಗಿದ್ದ ಹಂಚಿಕೆ ಮಾಡಲಾಗಿತ್ತು. ಆದರೆ, ಇದ್ಯಾವುದನ್ನೂ ಅಲ್ಲಿನ ಜನತೆ ಸ್ಮರಿಸಿಕೊಳ್ಳಲಿಲ್ಲ"ಎಂದು ಎಚ್.ಡಿ.ಕುಮಾರಸ್ವಾಮಿ ನೋವು ತೋಡಿಕೊಂಡರು.

Recommended Video

ಆಡಮ್ ಝಂಪಾ ತಮ್ಮ ಹ್ಯಾಟ್ರಿಕ್ ತಪ್ಪಿಸಿದ್ದಕ್ಕೆ ಕಾಲೆಳದದ್ದು ಹೀಗೆ | Oneindia Kannada
 ದೇವನಹಳ್ಳಿ ಜೆಡಿಎಸ್ ಕಚೇರಿ ಉದ್ಘಾಟನೆಗೆ ಆಗಮಿಸಿದ ಕುಮಾರಸ್ವಾಮಿ

ದೇವನಹಳ್ಳಿ ಜೆಡಿಎಸ್ ಕಚೇರಿ ಉದ್ಘಾಟನೆಗೆ ಆಗಮಿಸಿದ ಕುಮಾರಸ್ವಾಮಿ

ದೇವನಹಳ್ಳಿ ಜೆಡಿಎಸ್ ಕಚೇರಿ ಉದ್ಘಾಟನೆ ಮತ್ತು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ವಿಕಾಸ ಭವನದ ಕಟ್ಟಡದ ಉದ್ಘಾಟನೆ ಮಾಡಲು ಕುಮಾರಸ್ವಾಮಿ ಆಗಮಿಸಿದ್ದರು. ಅಭಿಮಾನಿಗಳು ಮತ್ತು ಕಾರ್ಯಕರ್ತರು ಕ್ರೇನಿನ ಮೂಲಕ ಭಾರೀ ಸೇಬಿನ ಹಾರವನ್ನು ಕುಮಾರಸ್ವಾಮಿಯವರಿಗೆ ಹಾಕಿ, ಜೈಕಾರ ಕೂಗಿದರು. ಜೆಡಿಎಸ್‌ ಜನತಾ ಪರ್ವ 1.Oದ 2ನೇ ಹಂತದ ಸಂಘಟನಾ ಕಾರ್ಯಗಾರ, ಜನತಾ ಸಂಗಮ, ನ.8ರಿಂದ ನ.15ರವರೆಗೆ ಪಕ್ಷದ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ನಡೆಯಲಿದೆ. ಇದೇ ವೇಳೆ ಪಕ್ಷದ ಮಾಸಿಕ ʼಜನತಾ ಪತ್ರಿಕೆʼ ಕೂಡಾ ಲೋಕಾರ್ಪಣೆ ಆಗಲಿದೆ.

English summary
Sindagi By Election Results 2021: HD Kumaraswamy Explains the Reasons Behind JDS Party defeat in Sindagi By Election. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X