• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರೋಲಿ ಬಾಬಾ ಆಶ್ರಮಕ್ಕೆ ಗೌಡ್ರ ಭೇಟಿ: ಅಂದು ತಿವಾರಿಗಾಗಿ ಇಂದು ಡಿಕೆಶಿಗಾಗಿ

|
   ಡಿಕೆಶಿ ಬಿಡುಗಡೆಗಾಗಿ ದೊಡ್ಡ ಗೌಡರು ಮಾಡಿದ್ದೇನು ಗೊತ್ತಾ..? | Oneindia Kannada

   ಮನಿಲಾಂಡ್ರಿಂಗ್ ಪ್ರಕರಣದಲ್ಲಿ ಸಿಲುಕಿ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಡಿ.ಕೆ.ಶಿವಕುಮಾರ್ ಅವರಿಗೆ ಮತ್ತೊಮ್ಮೆ ಜಾಮೀನು ಸಿಕ್ಕಿಲ್ಲ, ತಿಹಾರ್ ಜೈಲು ಪಾಲಾಗಿದ್ದಾರೆ. ಆದರೆ ಈ ಬಾರಿ ಡಿಕೆ ಶಿವಕುಮಾರ್ ಅವರಿಗೆ ಮೈಲಾರ ಲಿಂಗ, ಅಜ್ಜಯ್ಯನ ಕೃಪೆ, ಕಬ್ಬಾಳಮ್ಮ ಅಲ್ಲದೆ ನೀಮ್ ಕರೋಲಿ ಬಾಬಾ ಕೃಪೆ ಲಭಿಸಲಿದ್ದು ಜಾಮೀನು ಸಿಗಲಿದೆ ಎಂಬ ಬಲವಾದ ನಂಬಿಕೆ ಅವರ ಬೆಂಬಲಿಗರಲ್ಲಿತ್ತು.

   ಬೆಂಬಲಿಗರಲ್ಲದೆ, ದೇಶದ ಹಿರಿಯ ರಾಜಕಾರಣಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಲ್ಲೂ ಇದೇ ನಂಬಿಕೆಯಿತ್ತು. ಅಂದು ಎನ್ ಡಿ ತಿವಾರಿಗಾಗಿ ಬಾಬಾ ಆಶ್ರಮಕ್ಕೆ ತೆರಳಿದ್ದ ದೇವೇಗೌಡರು ಇಂದು ಡಿಕೆ ಶಿವಕುಮಾರ್ ಗಾಗಿ ಮತ್ತೆ ಆಶ್ರಮಕ್ಕೆ ಭೇಟಿ ನೀಡಿ ಬಂದಿದ್ದಾರೆ.

   ಡಿಕೆಶಿ ನಂಬಿರುವ ನೀಮ್ ಕರೋಲಿ ಬಾಬಾ, ಫೇಸ್ಬುಕ್ ಸ್ಥಾಪಕನಿಗೂ ಸ್ಫೂರ್ತಿ

   ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿರುವ ಎಚ್. ಡಿ. ದೇವೇಗೌಡರ ನಿವಾಸಕ್ಕೆ ಸಂಸದ ಡಿ. ಕೆ. ಸುರೇಶ್ ಭೇಟಿ ನೀಡಿದ್ದರು. ಮಾಜಿ ಸಚಿವ ಎಚ್. ಡಿ. ರೇವಣ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನ್ಯಾಯಾಂಗ ಬಂಧನದಲ್ಲಿರುವ ಡಿ. ಕೆ. ಶಿವಕುಮಾರ್ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದರು.

   ದೇವೇಗೌಡ್ರ ಪೂಜೆ ಫಲಿಸಲಿಲ್ಲ, ಡಿಕೆಶಿಗೆ ಜಾಮೀನು ಸಿಗಲಿಲ್ಲ!

   ಉತ್ತರಾಖಂಡ್ ನೈನಿತಾಲ್ ನಿಂದ ಕೇವಲ 17 ಕಿ.ಮೀ ದೂರದಲ್ಲಿ ಅಲ್ಮೋರಾ ಮಾರ್ಗದಲ್ಲಿರುವ ಕೈಂಚಿ ಧಾಮದ ನೀಮ್ ಕರೋಲಿ ಬಾಬಾ ಆಶ್ರಮಕ್ಕೆ ಇತ್ತೀಚೆಗೆ ಡಿಕೆ ಶಿವಕುಮಾರ್ ಬೆಂಬಲಿಗರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು.

   ನೀಮ್ ಕರೋಲಿ ಬಾಬಾ ಫೋಟೋ ಡಿಕೆಶಿ ಜೇಬಲ್ಲಿದೆ

   ನೀಮ್ ಕರೋಲಿ ಬಾಬಾ ಫೋಟೋ ಡಿಕೆಶಿ ಜೇಬಲ್ಲಿದೆ

   ದೇವತೆಗಳ ನಾಡು ಎಂದು ಕರೆಸಿಕೊಳ್ಳುವ, ಸಾಧು ಸಂತರ ಬೀಡು, ಹಿಮಾಲಯ ತಪ್ಪಲಿನ ರಾಜ್ಯ ಉತ್ತರಾಖಂಡದ ನೈನಿತಾಲ್ ನಿಂದ ಕೇವಲ 17 ಕಿ.ಮೀ ದೂರದಲ್ಲಿ ಅಲ್ಮೋರಾ ಮಾರ್ಗದಲ್ಲಿರುವ ಕೈಂಚಿ ಧಾಮದ ಬಗ್ಗೆ ರಾಜಕಾರಣಿಗಳಿಗೆ ಮತ್ತೆ ನಂಬಿಕೆ ಭಯ ಭಕ್ತಿ ಹುಟ್ಟುಕೊಂಡಿದೆ. ಈ ಕೈಂಚಿ ಧಾಮದ ಆಶ್ರಮವಾಸಿಯಾಗಿದ್ದ ನೀಮ್ ಕರೋಲಿ ಬಾಬಾ, ಅಲ್ಲಿನ ಆಂಜನೇಯ ಸ್ವಾಮಿ ದೇವರ ಫೋಟೋವನ್ನು ಕರ್ನಾಟಕದ ಮಾಜಿ ಸಚಿವ ಡಿಕೆ ಶಿವಕುಮಾರ್ ಈಗಲೂ ಇಟ್ಟುಕೊಂಡಿದ್ದಾರೆ. ಪರಮ ಗುರುವಿನ ಕೃಪೆ ಸಿಗುವ ಭರವಸೆ ಕನಕಪುರದ ರಾಜಕಾರಣಿಗೆ ಇನ್ನೂ ಇದೆ.

   ಆಶ್ರಮ ಭೇಟಿಯನ್ನು ದೇವೇಗೌಡರು ಬಹಿರಂಗ ಪಡಿಸಿರಲಿಲ್ಲ

   ಆಶ್ರಮ ಭೇಟಿಯನ್ನು ದೇವೇಗೌಡರು ಬಹಿರಂಗ ಪಡಿಸಿರಲಿಲ್ಲ

   "ಡಿಕೆಶಿ ಅವರನ್ನು ಭೇಟಿಯಾಗುವ ಉದ್ದೇಶದಿಂದಲೇ ನಾನು ದೆಹಲಿಗೆ ತೆರಳಿದ್ದೆ. ಆದರೆ ಎರಡು ದಿನ ಮೊದಲೇ ಅನುಮತಿ ಪಡೆಯಬೇಕು ಎಂದು ಜೈಲಿನ ಅಧಿಕಾರಿಗಳು ಹೇಳಿದರು. ಆದ್ದರಿಂದ ಅವರ ಭೇಟಿ ಸಾಧ್ಯವಾಗಲಿಲ್ಲ" ಎಂದು ದೇವೇಗೌಡ್ರು ಹೇಳಿದ್ದರು. ಇದಲ್ಲದೆ, ಡಿಕೆಶಿ ಬಿಡುಗಡೆಗಾಗಿ ವಿಶೇಷ ಪೂಜೆ ಸಲ್ಲಿಸಿರುವುದಾಗಿ ಹೇಳಿದ್ದರು. ಆದರೆ, ಯಾವ ದೇಗುಲ, ಆಶ್ರಮ ಎಂಬುದನ್ನು ಬಹಿರಂಗಪಡಿಸಿರಲಿಲ್ಲ. ಒನ್ಇಂಡಿಯಾ ಪ್ರತಿನಿಧಿಗೆ ಸಿಕ್ಕ ಮಾಹಿತಿಯಂತೆ ದೇವೇಗೌಡರು ನೈನಿತಾಲ್ ಗೆ ಭೇಟಿ ನೀಡಿ ಬಂದಿದ್ದಾರೆ. ಭೇಟಿ ವಿಷಯವನ್ನು ಗೌಪ್ಯವಾಗಿ ಇಡುವಂತೆ ಸೂಚಿಸಿದ್ದರು ಎಂದು ತಿಳಿದು ಬಂದಿದೆ.

   ನೈನಿತಾಲ್ ಗೆ ಎರಡನೇ ಬಾರಿಗೆ ಎಚ್ ಡಿ ದೇವೇಗೌಡರ ಭೇಟಿ

   ನೈನಿತಾಲ್ ಗೆ ಎರಡನೇ ಬಾರಿಗೆ ಎಚ್ ಡಿ ದೇವೇಗೌಡರ ಭೇಟಿ

   1996ರಲ್ಲಿ ಪ್ರಧಾನಿಯಾಗಿದ್ದಾಗ ಎಚ್ ಡಿ ದೇವೇಗೌಡ ಅವರು ಕಾಂಗ್ರೆಸ್ ಮುಖಂಡ ಎನ್ ಡಿ ತಿವಾರಿ ಪರ ಪ್ರಚಾರಕ್ಕಾಗಿ ನೈನಿತಾಲ್ ಗೆ ಭೇಟಿ ನೀಡಿದ್ದರು. 11ನೇ ಲೋಕಸಭೆಗೆ ತಿವಾರಿ ಆಯ್ಕೆಯಾಗಿದರು. ಉತ್ತರಾಖಂಡ್ ಜಿಲ್ಲೆಯ ಕೋಸಿ ನದಿತಟದಲ್ಲಿರುವ ಕೈಂಚಿ ಧಾಮದ ನೀಮ್ ಕರೋಲಿ ಬಾಬಾ ಅವರ ಆಶ್ರಮಕ್ಕೆ ಭೇಟಿ ನೀಡಿ ಪ್ರಾರ್ಥಿಸಿದ್ದರು. ಇತ್ತೀಚೆಗೆ ಡಿಕೆ ಶಿವಕುಮಾರ್ ಅವರ ಬಿಡುಗಡೆ ಹಾಗೂ ಏಳಿಗೆಗಾಗಿ ಕೂಡಾ ಎಚ್ ಡಿ ದೇವೇಗೌಡರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಬಾಬಾ ಬಗ್ಗೆ ನನಗೆ ಅಪಾರ ಗೌರವ ಭಕ್ತಿ ಇದೆ ಎಂದು ದೇವೇಗೌಡರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

   ಡಿಕೆಶಿ ವಿರುದ್ಧ ಯಾವ ಕೇಸ್, ಏನು ಆರೋಪ

   ಡಿಕೆಶಿ ವಿರುದ್ಧ ಯಾವ ಕೇಸ್, ಏನು ಆರೋಪ

   ಮನಿಲಾಂಡ್ರಿಂಗ್ ಕಾಯ್ದೆ PMLA ಉಲ್ಲಂಘನೆ, ಹಣದ ಮೂಲದ ಬಗ್ಗೆ ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಐಟಿ ಕಾಯ್ದೆ ಉಲ್ಲಂಘನೆ ಸೆಕ್ಷನ್ 277, 276 ಸಿ(1), 278, 193, 199, ಹಾಗೂ 120 (ಬಿ), ಲೇವಾದೇವಿ ನಿಯಂತ್ರಣ ಕಾಯ್ದೆ ಉಲ್ಲಂಘನೆ ಸೆಕ್ಷನ್ 120 ಬಿ ಅಡಿಯಲ್ಲಿ ಇಸಿಐಆರ್ ದಾಖಲೆ.

   ದೆಹಲಿಯ ಸಫ್ಜರ್ ದಂಗ್ ಎನ್ಕ್ಲೇವ್ ಅಪಾರ್ಟ್ಮೆಂಟ್ ನ 4 ಫ್ಲಾಟ್ ಗಳ ಉಸ್ತುವಾರಿಯನ್ನು ಶರ್ಮಾ ಟ್ರಾವೆಲ್ಸ್ ನ ಸುಶೀಲ್ ಕುಮಾರ್ ಶರ್ಮಾ ನೋಡಿಕೊಳ್ಳುತ್ತಿದ್ದಾರೆ. ಡಿಕೆಶಿ ಆಪ್ತ ರಾಜೇಂದ್ರ ಮನೆಯಲ್ಲಿ ದಾಳಿ ವೇಳೆ ಸಿಕ್ಕ ಡೈರಿಯಲ್ಲಿ ಹೈಕಮಾಂಡ್ ಗೆ ಹಣ ರವಾನೆಯಾಗಿರುವ ಆರೋಪ ಇದೆ. ಜೊತೆಗೆ ಹನುಮಂತಯ್ಯ, ಸಚಿನ್ ನಾರಾಯಣ್, ಆಂಜನೇಯುಲು ಎಂಬುವರು ನೀಡಿದ ಹೇಳಿಕೆಯೇ ಇಂದು ಡಿಕೆಶಿ ಬಂಧನಕ್ಕೆ ಕಾರಣವಾಗಿದೆ.

   ಸೆಲೆಬ್ರಿಟಿಗಳ ದೈವ ನೀಮ್ ಕರೋಲಿ ಬಾಬಾ

   ಸೆಲೆಬ್ರಿಟಿಗಳ ದೈವ ನೀಮ್ ಕರೋಲಿ ಬಾಬಾ

   Be here Now ಕೃತಿ ರಚಿಸಿದ ರಾಮ್ ದಾಸ್ ಕೂಡಾ ನೀಮ್ ಕರೋಲಿ ಬಾಬಾ ಅವರ ಭಕ್ತರು, ಶಿಷ್ಯರೆಂದು ಗುರುತಿಸಿಕೊಂಡಿದ್ದಾರೆ. ಸಂಗೀತಗಾರರಾದ ಜೈ ಉತ್ತಾಲ್, ಕೃಷ್ಣದಾಸ್, ಟ್ರೆವರ್ ಹಾಲ್, ಮಾನವತವಾದಿಗಳಾದ ಲ್ಯಾರಿ ಬ್ರಿಲಿಯಂಟ್, ದಾದಾ ಮುಖರ್ಜಿ, ಸಾಹಿತಿ ವೈ ರಾಸರ್, ಜಾನ್ ಬುಷ್, ಡೇನಿಯಲ್ ಗೋಲೆಮನ್. 1974ರಲ್ಲಿ ಇಲ್ಲಿಗೆ ಬಂದಿದ್ದ ಸ್ಟೀವ್ ಜಾಬ್ಸ್, ಜೂಲಿಯಾ ರಾಬರ್ಟ್ಸ್, ಮಾರ್ಕ್ ಝಕರ್ ಬರ್ಗ್.. ಡಾ. ಆರ್ ಕೆ ಕರೋಲಿ ಹೀಗೆ ಪಟ್ಟಿ ಬೆಳೆಯುತ್ತದೆ. ಈಗ ಡಿಕೆ ಶಿವಕುಮಾರ್ ಕೂಡಾ ಈ ಪಟ್ಟಿಗೆ ಸೇರಿದ್ದಾರೆ.

   English summary
   Former Prime minister HD Deve Gowda visited the Kainchi Dham and paid obeisance to Neem Karoli Baba. Later, while addressing the media persons, he said that he had deep faith in the seer and had hence come on a personal visit to pay obeisance at Kainchi Dham.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X