• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲ್‌ಪಿಜಿ ಸಿಲಿಂಡರ್ 'ಸಬ್ಸಿಡಿ' ಮಂಗಮಾಯ! ಇಲ್ಲಿದೆ ಸರಕಾರದ ಉತ್ತರ

|
Google Oneindia Kannada News

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ತೈಲಬೆಲೆ ಏರಿಕೆ ವಿರುದ್ದ ಹಾದಿಬೀದಿ ಹೋರಾಟಕ್ಕೆ ಇಳಿದಿದ್ದ ಕಮಲದ ಪಡೆಗಳು, ಈಗ, ಶತಕ ದಾಟಿರುವ ಪೆಟ್ರೋಲ್/ಡೀಸೆಲ್ ಬೆಲೆಯ ಬಗ್ಗೆ ಏನೇನೋ ಸ್ಪಷ್ಟೀಕರಣ ನೀಡುತ್ತಿದ್ದಾರೆ. ಬೆಲೆ ಏರಿಕೆ ಹೀಗೇ ಮುಂದುವರಿದರೆ, ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ಒಂದರ ದರ ಸಾವಿರ ದಾಟಲಿದೆ.

ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಹದಿನೈದು ರೂಪಾಯಿ ಹೆಚ್ಚಳವಾಗಿದೆ, ಬೆಂಗಳೂರಿನಲ್ಲಿ ಈಗಿನ ದರ 903 ರೂಪಾಯಿ. ಇದರಿಂದಾಗಿ, ಸಬ್ಸಿಡಿ ರಹಿತ ಮತ್ತು ಸಬ್ಸಿಡಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಕಳೆದ ಒಂದೂವರೆ ವರ್ಷದಲ್ಲಿ ಸಿಲಿಂಡರ್ ಬೆಲೆ ಬಹುತೇಕ ದುಪ್ಪಟ್ಟು ಹೆಚ್ಚಾಗಿದೆ.

ಒಂದೇ ವರ್ಷದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 165 ರೂ. ಏರಿಕೆಒಂದೇ ವರ್ಷದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 165 ರೂ. ಏರಿಕೆ

ಇದೆಲ್ಲಾ ಒಂದು ಕಡೆಯಾದರೆ, ಸಬ್ಸಿಡಿ ಹಣ ಗ್ರಾಹಕರ ಖಾತೆಗೆ ಬೀಳುವುದೂ ಸ್ಥಗಿತಗೊಂಡಿದೆ. ಕೊರೊನಾ ಮೊದಲನೇ ಅಲೆಯ ಸಮಯದಲ್ಲಿ ಅಂದರೆ, ಕಳೆದ ವರ್ಷದ ಮಾರ್ಚ್/ಏಪ್ರಿಲ್ ತಿಂಗಳವರೆಗೂ ಸಬ್ಸಿಡಿ ಹಣ ಅಕೌಂಟಿಗೆ ಬೀಳುತ್ತಿತ್ತು.

ಹಾಗಾದರೆ, ಸಬ್ಸಿಡಿ ಕೊಡುವುದನ್ನು ಮೋದಿ ಸರಕಾರ ನಿಲ್ಲಿಸಿದೆಯಾ ಎನ್ನುವ ಪ್ರಶ್ನೆಗೆ ಕೇಂದ್ರ ಸರಕಾರದಿಂದ ಯಾವುದೇ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ಆದರೆ, ಗ್ರಾಹಕರೊಬ್ಬರ ಟ್ವೀಟ್ ಒಂದಕ್ಕೆ ಪೆಟ್ರೋಲಿಯಂ ಇಲಾಖೆ ಉತ್ತರವನ್ನು ನೀಡಿದೆ. ಈ ಉತ್ತರವೂ ಸಾಮಾನ್ಯರಿಗೆ ಅರ್ಥವಾಗದೇ, ಗೊಂದಲದಿಂದ ಕೂಡಿದೆ.

ಗ್ರಾಹಕರೆ ಗಮನಿಸಿ: ಸೆಪ್ಟೆಂಬರ್ 1 ರಿಂದ ಆಗುವ ಪ್ರಮುಖ ಬದಲಾವಣೆಗಳಿವು ಗ್ರಾಹಕರೆ ಗಮನಿಸಿ: ಸೆಪ್ಟೆಂಬರ್ 1 ರಿಂದ ಆಗುವ ಪ್ರಮುಖ ಬದಲಾವಣೆಗಳಿವು

 ಎಲ್‌ಪಿಜಿಯ ಮೇಲಿನ ಸಬ್ಸಿಡಿಯನ್ನು ಮೋದಿ ಸರ್ಕಾರ ರದ್ದುಗೊಳಿಸಿದೆಯೇ?

ಎಲ್‌ಪಿಜಿಯ ಮೇಲಿನ ಸಬ್ಸಿಡಿಯನ್ನು ಮೋದಿ ಸರ್ಕಾರ ರದ್ದುಗೊಳಿಸಿದೆಯೇ?

ಸಿ.ಎಲ್. ಶರ್ಮಾ ಎನ್ನುವವರು ಹಿಂದಿಯಲ್ಲಿ MoPNG e-Seva ಅಕೌಂಟ್ ಅನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. "ಎಲ್‌ಪಿಜಿಯ ಮೇಲಿನ ಸಬ್ಸಿಡಿಯನ್ನು ಮೋದಿ ಸರ್ಕಾರ ರದ್ದುಗೊಳಿಸಿದೆಯೇ ಎಂದು ನಾವು ಮತ್ತೊಮ್ಮೆ ತಿಳಿಯಲು ಬಯಸುತ್ತೇವೆ. ಯಾಕೆಂದರೆ ಕಳೆದ 18 ತಿಂಗಳಲ್ಲಿ ನಮ್ಮ ಬ್ಯಾಂಕ್ ಅಕೌಂಟಿಗೆ ಒಂದು ಪೈಸೆ ಕೂಡಾ ಸಬ್ಸಿಡಿ ಬಂದಿಲ್ಲ, ಆದರೆ ಗ್ಯಾಸ್ ಏಜೆನ್ಸಿ ಸಬ್ಸಿಡಿ ಸಿಲಿಂಡರ್ ಎಂದು ವೋಚರ್ ನಲ್ಲಿ ಬರೆಯುತ್ತಿದೆ" ಎಂದು ಟ್ವೀಟ್ ಮಾಡಿದ್ದರು.

 ಗೃಹಬಳಕೆ ಅನಿಲ ಸಿಲಿಂಡರ್ ದರ ಮಾರುಕಟ್ಟೆಯಿಂದ ಮಾರುಕಟ್ಟೆಗೆ ಬದಲಾಗುತ್ತದೆ

ಗೃಹಬಳಕೆ ಅನಿಲ ಸಿಲಿಂಡರ್ ದರ ಮಾರುಕಟ್ಟೆಯಿಂದ ಮಾರುಕಟ್ಟೆಗೆ ಬದಲಾಗುತ್ತದೆ

ಇದಕ್ಕೆ ಪೆಟ್ರೋಲಿಯಂ ಇಲಾಖೆ ನೀಡಿದ ಉತ್ತರ ಹೀಗಿದೆ, "ಪ್ರಿಯ ಗ್ರಾಹಕರೇ, ಸಬ್ಸಿಡಿ ನೀಡುವುದನ್ನು ಈಗಿನವರೆಗೂ ನಿಲ್ಲಿಸಲಾಗಿಲ್ಲ. ಆದರೆ, ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ದರ ಮಾರುಕಟ್ಟೆಯಿಂದ ಮಾರುಕಟ್ಟೆಗೆ ಬದಲಾಗುತ್ತದೆ. ಡಿಬಿಟಿಎಲ್ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸಫರ್ ಫಾರ್ ಎಲ್‌ಪಿಜಿ ಕನ್ಸೂಮರ್) 2014ರ ಸ್ಕೀಂ ಪ್ರಕಾರ, 'ಸಬ್ಸಿಡಿ ಸಿಲಿಂಡರ್' ಮತ್ತು 'ಸಬ್ಸಿಡಿ ರಹಿತ ಸಿಲಿಂಡರಿನ ನಾಲ್ಕನೇ ಒಂದು ಭಾಗವನ್ನು ವಿವಿಧ ಮಾರುಕಟ್ಟೆಗೆ ಅನ್ವಯವಾಗುವಂತೆ ಸಬ್ಸಿಡಿ ನೀಡಲಾಗುತ್ತಿದೆ" ಎಂದು ಇಲಾಖೆ ಟ್ವೀಟ್ ಮೂಲಕ ಸ್ಪಷ್ಟನೆಯನ್ನು ನೀಡಿದೆ.

 ಸಬ್ಸಿಡಿ ಹಣವನ್ನು ಗ್ರಾಹಕರ ಖಾತೆಗೆ ವರ್ಗಾಯಿಸಲಾಗುತ್ತಿದೆ

ಸಬ್ಸಿಡಿ ಹಣವನ್ನು ಗ್ರಾಹಕರ ಖಾತೆಗೆ ವರ್ಗಾಯಿಸಲಾಗುತ್ತಿದೆ

ಇನ್ನೊಂದು ಟ್ವೀಟ್ ನಲ್ಲಿ ಇಲಾಖೆ, "ಮಾರುಕಟ್ಟೆಯ ಸಬ್ಸಿಡಿಯ ಮೊತ್ತವನ್ನು 'ಸಬ್ಸಿಡಿ ಸಿಲಿಂಡರ್ ಬೆಲೆ' ಮತ್ತು 'ಸಬ್ಸಿಡಿ ರಹಿತ ಸಿಲಿಂಡರ್ ನ ಮಾರುಕಟ್ಟೆ ನಿರ್ಧಾರಿತ ಬೆಲೆ' ನಡುವಿನ ವ್ಯತ್ಯಾಸದಿಂದ ನಿರ್ಧರಿಸಲಾಗುತ್ತದೆ. ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯು ಸಬ್ಸಿಡಿ ಸಹಿತ ಸಿಲಿಂಡರ್ ಗಿಂತ ಹೆಚ್ಚಿದ್ದರೆ, ಮತ್ತು ವರ್ಷಕ್ಕೆ ಹನ್ನೆರಡು ಸಿಲಿಂಡರ್ ಸೀಲಿಂಗ್ ಗಿಂತ ಕಮ್ಮಿಯಿದ್ದ ಪಕ್ಷದಲ್ಲಿ ಸಬ್ಸಿಡಿ ಹಣವನ್ನು ಗ್ರಾಹಕರ ಖಾತೆಗೆ ವರ್ಗಾಯಿಸಲಾಗುತ್ತಿದೆ"ಎಂದು ಪೆಟ್ರೋಲಿಯಂ ಇಲಾಖೆ ಹೇಳಿದೆ.

 ಎಲ್‌ಪಿಜಿ ಸಿಲಿಂಡರ್ ಸಬ್ಸಿಡಿ ಮಂಗಮಾಯ! ಇಲ್ಲಿದೆ ಸರಕಾರದ ಉತ್ತರ

ಎಲ್‌ಪಿಜಿ ಸಿಲಿಂಡರ್ ಸಬ್ಸಿಡಿ ಮಂಗಮಾಯ! ಇಲ್ಲಿದೆ ಸರಕಾರದ ಉತ್ತರ

"ಈ ನಿಯಮದಿಂದಾಗಿ ಸಬ್ಸಿಡಿ ಹಣ ಹೆಚ್ಚಿನ ಗ್ರಾಹಕರ ಅಕೌಂಟಿಗೆ ಜಮೆಯಾಗುತ್ತಿಲ್ಲ"ಎಂದು ಇಲಾಖೆ ಸ್ಪಷ್ಟ ಪಡಿಸಿದೆ. ಈ ಬಗ್ಗೆ ಗ್ರಾಹಕರು ಆನ್ಲೈನ್ ಮೂಲಕ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಉದಾಹರಣೆಗೆ ಇಂಡೇನ್ ಬಳಕೆದಾರರು, indianoil.in ವೆಬ್ಸೈಟಿಗೆ ಹೋಗಿ, ಅಲ್ಲಿ ಎಲ್‌ಪಿಜಿ ಫೋಟೋವನ್ನು ಕ್ಲಿಕ್ ಮಾಡಿದರೆ, ದೂರು ಪೆಟ್ಟಿಗೆ (complaint box) ತೆರೆದುಕೊಳ್ಳುತ್ತದೆ. ಅದರಲ್ಲಿ 'ಸಬ್ಸಿಡಿ ಸ್ಟೇಟಸ್' ಎಂದು ಬರೆದು ಮುಂದಕ್ಕೆ ಹೋದರೆ, Subsidy Related (PAHAL) ಆಯ್ಕೆ ಸಿಗುತ್ತದೆ. ಅದನ್ನು ಕ್ಲಿಕ್ ಮಾಡಿ, 'Subsidy Not Received' ಎಂದು ಬರೆದು, ಮುಂದಕ್ಕೆ ಹೋದರೆ, ಗ್ರಾಹಕರ ನೊಂದಾಯಿತ ಮೊಬೈಲ್ ಸಂಖ್ಯೆಯನ್ನು ಕೇಳುತ್ತದೆ. ಇದನ್ನು ನಮೂದಿಸಿ, ಕ್ಲಿಕ್ ಮಾಡಿದರೆ, ಸಬ್ಸಿಡಿ ಕುರಿತಾದದ ಮಾಹಿತಿಯು ಲಭ್ಯವಾಗಲಿದೆ.

English summary
Has Modi govt stopped LPG subsidy? Here is What Ministry of Petroleum and Natural Gas replied to twitter use post. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X