ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Exit Poll Results News18-Ipsos: ಹರಿಯಾಣದಲ್ಲಿ ಮತ್ತೆ ಅರಳಲಿದೆ ಕಮಲ

|
Google Oneindia Kannada News

ನವದೆಹಲಿ, ಅಕ್ಟೋಬರ್ 21: ಸೋಮವಾರ ನಡೆದ ಹರಿಯಾಣ ವಿಧಾನಭೆಯ ಚುನಾವಣೆಯ ಮತದಾನೋತ್ತರ ಸಮೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಪ್ರಮುಖ ಖಾಸಗಿ ಸುದ್ದಿವಾಹಿನಿ ನ್ಯೂಸ್ 18 ಇಪ್ಸೋಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆಸಿದ ಸಮೀಕ್ಷೆಯು ರಾಜ್ಯದಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಗದ್ದುಗೆ ಏರಲಿದೆ ಎಂದು ತಿಳಿಸಿದೆ.

Live Update: ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೋತ್ತರ ಸಮೀಕ್ಷೆLive Update: ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೋತ್ತರ ಸಮೀಕ್ಷೆ

90 ಕ್ಷೇತ್ರಗಳ ವಿಧಾನಸಭೆಯಲ್ಲಿ ಬಿಜೆಪಿ ಮುಕ್ಕಾಲು ಭಾಗಕ್ಕಿಂತಲೂ ಅಧಿಕ ಸೀಟುಗಳನ್ನು ಪಡೆದು ಭರ್ಜರಿ ಬಹುಮತದೊಂದಿಗೆ ಪುನಃ ಅಧಿಕಾರ ಸ್ಥಾಪಿಸಲಿದೆ. ನೆರೆಯ ಪಂಜಾಬ್‌ನಲ್ಲಿ ಕಾಂಗ್ರೆಸ್ ಕ್ಷೇತ್ರವಿದ್ದರೂ, ಅದರ ಪ್ರಭಾವ ಹರಿಯಾಣದ ಮೇಲೆ ಆಗುವುದಿಲ್ಲ. ಕಳೆದ 2014ರ ಚುನಾವಣೆಯಲ್ಲಿ ಬಿಜೆಪಿ ಸರಳ ಬಹುಮತ ಪಡೆದುಕೊಂಡಿತ್ತು. ಆದರೆ, ಈ ಬಾರಿ ಅದನ್ನು ಮೀರಿ ಸಾಧನೆ ಮಾಡಲಿದೆ ಎಂದು ಸಮೀಕ್ಷೆ ಹೇಳಿದೆ.

 Haryana Election 2019 Exit Poll Results News18 Ipsos

ಸಮೀಕ್ಷೆಯ ಪ್ರಕಾರ ಹರಿಯಾಣದಲ್ಲಿನ 90 ಕ್ಷೇತ್ರಗಳಲ್ಲಿ ಬಿಜೆಪಿ ಬರೋಬ್ಬರಿ 75 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ಉಳಿಯುವ ಕೇವಲ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಸಿಗುವುದು 10 ಕ್ಷೇತ್ರಗಳು ಮಾತ್ರ. ಇನ್ನು ಉಳಿಯುವ ಐದು ಕ್ಷೇತ್ರಗಳು ಇತರೆ ಪಕ್ಷಗಳ ಪಾಲಾಗಲಿವೆ ಎಂದು ವಿವರಿಸಿದೆ.

2014ರ ಚುನಾವಣೆಯಲ್ಲಿ ಬಿಜೆಪಿ 47 ಕ್ಷೇತ್ರಗಳಲ್ಲಿ ಗೆದ್ದಿತ್ತು. ರಾಷ್ಟ್ರೀಯ ಲೋಕದಳ 19 ಕಡೆಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್ 15 ಹಾಗೂ 10 ಕ್ಷೇತ್ರಗಳಲ್ಲಿ ಉಳಿದ ಪಕ್ಷಗಳು ಜಯಗಳಿಸಿದ್ದವು.

English summary
Haryana assembly elections 2019 Exit Polls of News18-Ipsos:
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X