ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಪುಸ್ತಕ ಕೊಳ್ಳಲೊಂದು ಹೊಸ ತಾಣ – ಹರಿವು ಬುಕ್ಸ್

|
Google Oneindia Kannada News

ಕರ್ನಾಟಕವಷ್ಟೇ ಅಲ್ಲ ಭಾರತದ ಮೂಲೆ ಮೂಲೆಯಲ್ಲಿರುವ ಓದುಗರಿಗೆ ಪುಸ್ತಕಗಳನ್ನು ಸುಲಭವಾಗಿ ತಲುಪಿಸಬೇಕು, ಹಾಗೆಯೇ ಪುಸ್ತಕ ಪ್ರಕಾಶನದ ಮೂಲಕ, ಕನ್ನಡದ ಮೇರು ಬರಹಗಾರರ ಪುಸ್ತಕಗಳನ್ನು ಪ್ರಕಟಿಸಬೇಕು ಎಂಬ ಗುರಿಯೊಂದಿಗೆ ಹುಟ್ಟಿಕೊಂಡಿರುವುದೇ ಹರಿವು ಬುಕ್ಸ್! ಈಗಾಗಲೇ ಡಬ್ಬಿಂಗ್ ಹಾಗೂ ಅನುವಾದದ ಕ್ಷೇತ್ರದಲ್ಲಿ ತನ್ನದೆ ಆದ ಛಾಪನ್ನು ಮೂಡಿಸಿರುವ ಹರಿವು ಕ್ರಿಯೇಷನ್ಸ್ ಪ್ರೈವೇಟ್, ಲಿಮಿಟೆಡ್‌ನ ಭಾಗವಾಗಿ ಹರಿವು ಬುಕ್ಸ್ ಕಳೆದ ಡಿಸೆಂಬರ್ 5 ರಿಂದ ತನ್ನ ಕೆಲಸ ಆರಂಭಿಸಿದೆ.

ಬೆಂಗಳೂರಿನ ಬಸವನಗುಡಿಯ ಡಿ.ವಿ.ಜಿ. ರಸ್ತೆಯ ಒಂದು ತುದಿಗೆ ಹೆಸರುವಾಸಿಯಾದ ವಿದ್ಯಾರ್ಥಿ ಭವನ ಸಿಕ್ಕರೆ ಅದೇ ರಸ್ತೆಯ ಇನ್ನೊಂದು ತುದಿಗೆ ಹರಿವು ಬುಕ್ಸ್ ಸಿಗುವುದು! ಅಂದರೆ ಡಿ.ವಿ.ಜಿ ರಸ್ತೆ ನಾಗಸಂದ್ರ ರಸ್ತೆಯಲ್ಲಿರುವ ಹರಿವು ಬುಕ್ಸ್‌ ಮಳಿಗೆಗೆ ನೀವು ಭೇಟಿ ನೀಡಿದರೆ, ಕಣ್ಣೆದುರಿಗೆ ಕಾಣುವುದು ಸುಸಜ್ಜಿತವಾದ ಸ್ಥಳಾವಕಾಶದಲ್ಲಿ, ನಿಗದಿತ ಕಪಾಟಿನಲ್ಲಿ ಜೋಡಿಸಿಟ್ಟ ಹೊತ್ತಿಗೆಗಳ ಸಾಲು.

ಪೂರ್ಣಚಂದ್ರ ತೇಜಸ್ವಿಯ ಕರ್ವಾಲೋ ಇ ಬುಕ್ ಲೋಕಾರ್ಪಣೆಪೂರ್ಣಚಂದ್ರ ತೇಜಸ್ವಿಯ ಕರ್ವಾಲೋ ಇ ಬುಕ್ ಲೋಕಾರ್ಪಣೆ

ಓದುಗರ ಅಭಿರುಚಿಗೆ ಅನುಗುಣವಾಗಿ, ಆಸಕ್ತಿ ಇರುವ ವಿಷಯದ ಪುಸ್ತಕಗಳನ್ನು ಇಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಕಾದಂಬರಿ, ಕಥೆ, ಇತಿಹಾಸ, ನಾಡು-ನುಡಿ, ವಿಜ್ಞಾನ ಹಾಗೂ ತಂತ್ರಜ್ಞಾನ, ಮಕ್ಕಳ ಪುಸ್ತಕಗಳು, ಆರೋಗ್ಯ, ಜೀವನಶೈಲಿ, ಅಡುಗೆ, ಪುರಾಣ, ಆಧ್ಯಾತ್ಮ, ನಾಟಕಗಳು, ಜೊತೆಗೆ ಕಲಿಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷಾಗೆ ಬೇಕಾದ ಹಲವಾರು ಬಗೆಯ ಪುಸ್ತಕಗಳು ಇಲ್ಲಿ ದೊರೆಯುತ್ತಿವೆ.

ಒಂದೇ ಸೂರಿನಡಿಯಲ್ಲಿ ನೂರಾರು ಬಗೆಯ ಸಾವಿರಾರು ಪುಸ್ತಕಗಳು ಸಿಗಬೇಕೆನ್ನುವುದು ಹರಿವು ಬುಕ್ಸ್‌ನ ಉದ್ದೇಶ, ಅದರಂತೆಯೇ ತಮಗೆ ಬೇಕಾದ ಪುಸ್ತಕಗಳನ್ನು ಹುಡುಕಿ ಹೊರಟ ಪುಸ್ತಕ ಪ್ರಿಯರಿಗೆ ಇಲ್ಲಿ ಖಂಡಿತಾ ನಿರಾಸೆಯಾಗುವುದಿಲ್ಲ!

 ಬೆರಳ ತುದಿಯಲ್ಲಿ ಬುಕ್ ಆರ್ಡರ್ ಮಾಡಿ

ಬೆರಳ ತುದಿಯಲ್ಲಿ ಬುಕ್ ಆರ್ಡರ್ ಮಾಡಿ

ನೀವು ಭಾರತದ ಯಾವ ಊರಿನಲ್ಲಿ ಇದ್ದರೂ ಸರಿ harivubooks.com ವೆಬ್‌ತಾಣಕ್ಕೆ ಭೇಟಿಕೊಟ್ಟರೆ ನೆಚ್ಚಿನ ಪುಸ್ತಕಗಳ ಸಾಲು ನಿಮ್ಮ ಕಣ್ಣೆದುರು ತೆರೆದುಕೊಳ್ಳುವುದು. ಬೇಕಾದ ಪುಸ್ತಕವನ್ನು ಆಯ್ದು ನಿಮ್ಮ ವಿಳಾಸ, ಫೋನ್‌ ನಂಬರ್ ಕೊಟ್ಟು ಆರ್ಡರ್ ಮಾಡಿದರೆ ಕೆಲವೇ ದಿನಗಳಲ್ಲಿ, ಚೆಂದದ ಪೊಟ್ಟಣದಲ್ಲಿ ನೀವು ಆರ್ಡರ್ ಮಾಡಿದ ಪುಸ್ತಕ ನಿಮ್ಮ ಮನೆಬಾಗಿಲಿಗೆ ಬರುವುದು.

ಹೊಸತನದಿಂದ ಕೂಡಿರುವ harivubooks.com ವೆಬ್ ತಾಣದಲ್ಲಿ ಸಾವಿರಾರು ಪುಸ್ತಕಗಳಿವೆ, ಓದುಗರ ಆಸಕ್ತಿಗೆ ತಕ್ಕಂತೆ ಅಲ್ಲಿ ಕಾದಂಬರಿ, ಐತಿಹಾಸಿಕ ಕಾದಂಬರಿ, ಥ್ರಿಲ್ಲರ್‌ ಪುಸ್ತಕಗಳು ಹೀಗ ಹಲವಾರು ಕವಲುಗಳು ಕಾಣ ಸಿಗುತ್ತವೆ. ಬೇಕಾದ ಪುಸ್ತಕದ ಹೆಸರನ್ನು ಬರೆದು ಹುಡುಕುವುದು ತುಂಬಾ ಸುಲಭ. ಒಟ್ಟಿನಲ್ಲಿ ಆನ್‌ಲೈನ್ ಮೂಲಕ ಪುಸ್ತಕ ಕೊಳ್ಳುವವರು ಒಮ್ಮೆ ಈ ವೆಬ್‌ಸೈಟಿಗೆ ಭೇಟಿಕೊಟ್ಟು ನೋಡಬಹುದು. ಆಗಾಗ ಸಿಗುವ ಕೊಡುಗೆಗಳು ನಿಮ್ಮ ಖರೀದಿಗೆ ನೆರವಾಗಬಹುದು.

 ಮನುಜ ಬೆಳೆದಂತೆಲ್ಲ ಅವನ ಅರಿವು ಬೆಳೆಯಬೇಕು

ಮನುಜ ಬೆಳೆದಂತೆಲ್ಲ ಅವನ ಅರಿವು ಬೆಳೆಯಬೇಕು

ಮನುಜ ಬೆಳೆದಂತೆಲ್ಲ ಅವನ ಅರಿವು ಬೆಳೆಯಬೇಕು-ಬಲಿಯಬೇಕು. ಅರಿವಿನ ಆಳಕ್ಕೆ ಇಳಿದು, ಗೆಲುವಿನ ಏತ್ತರಕ್ಕೆ ಏರುವ ದಾರಿಯಲ್ಲಿ ಪುಸ್ತಕಗಳ ಪಾತ್ರ ಬಹಳ ಹಿರಿದು. ಹಿರಿಯ ಜೀವಗಳಿಂದ ಹಿಡಿದು, ಕಿರಿಯ ಕಿನ್ನರರವರೆಗೂ, ಎಲ್ಲರಿಗೂ ಸಲ್ಲುವಂತಹ, ನಿರೀಕ್ಷೆಗೆ ನಿಲುಕುವಂತಹ, ಮನಸ್ಸು ಮೆಲುಕು ಹಾಕುವಂತಹ, ಅವರರವರೇ ಆಯ್ಕೆ ಮಾಡಿಕೊಳ್ಳಬಹುದಾದಷ್ಟು ಸಮೃದ್ಧ ಪುಸ್ತಕ ರಾಶಿ ಒಂದು ಕಡೆ ಸಿಗುವಂತಿದೆ.

ಅಂತರಂಗವನ್ನು ಸ್ಫುಟವಾಗಿಸುವ ಪುಸ್ತಕಗಳ ಭಂಡಾರ ಹರಿವು ಪುಸ್ತಕ ಮಳಿಗೆಯಲ್ಲಿ ನಿಮಗೆ ಕಾಣಸಿಗುತ್ತವೆ. ಬಲ್ಲವರಿಂದ ಕೆಲವನ್ನು ಕಲಿತರೆ, ಇನ್ನಷ್ಟನ್ನು ಪುಸ್ತಕಗಳನ್ನು ಓದುತ್ತಾ ನಮ್ಮ ಅಂತಃಕರಣವನ್ನು ಜ್ಞಾನ-ವಿಜ್ಞಾನದ ಸಾಣೆಕಲ್ಲಿಗೆ ಒರೆಹಚ್ಚಿ ಕಲಿತು ತೀಕ್ಷ್ಣವಾಗಿಸಿಕೊಳ್ಳಬೇಕು. ಲೇಖಕರ ಮೋಡಿಗೆ, ಅವನ ಪಾತ್ರ ಪೋಷಣೆಯ ಗಾಢತೆಗೆ, ಕೆಲವೊಮ್ಮೆ ಅಮೋಘ ಎನ್ನಿಸುವ ಕಥಾಹಂದರಕ್ಕೆ ಮೋಡಿಗೊಳಗಾಗದ ಓದುಗರೇ ಇಲ್ಲ ಎನ್ನಬಹುದು. ಶಿಲೆಗೆ ತಣಿ ಎರೆದಂತೆ, ಕಲೆಗೆ ಮಂತ್ರಮುಗ್ಧವಾದಂತೆ, ಪುಸ್ತಕ ಪ್ರೀತಿಗೆ ನಾವೆಲ್ಲ ನೀರೆರೆದು ಅಕ್ಷರ ಕ್ರಾಂತಿಗೆ ನಮ್ಮದೇ ಕೊಡುಗೆ ನೀಡದೇ ಹೋದರೆ ಹೇಗೆ?

 ಬಹುವಿಷಯಗಳಿಗೆ ಸಂಬಂಧಪಟ್ಟ ಪುಸ್ತಕಗಳು

ಬಹುವಿಷಯಗಳಿಗೆ ಸಂಬಂಧಪಟ್ಟ ಪುಸ್ತಕಗಳು

ಬೆಳೆವ ಪೈರು ಮೊಳಕೆಯಲ್ಲಿ ಎನ್ನುವಂತೆ, ಹಿರಿಯರನ್ನು ನೋಡಿಯೇ ಕಿರಿಯರು ಯಾವುದೇ ಅಭ್ಯಾಸ-ಹವ್ಯಾಸಗಳನ್ನು ರೂಢಿ ಮಾಡಿಕೊಳ್ಳುವುದು. ಇದು ಕಾಲಾನುಕ್ರಮವಾಗಿ ನಡೆದುಕೊಂಡು ಬಂದಿರುವಂತಹುದು. ಮಕ್ಕಳಿಗೆ ಸರಳವಾಗಿ ಅರ್ಥವಾಗುವ, ಬುದ್ಧಿವಂತ ಪ್ರಶ್ನೆಗಳನ್ನು ಕೇಳುವ ಹಾಗೆ ಮಾಡುವ ಒಳ್ಳೊಳ್ಳೆ ಅಪರೂಪದ ಕನ್ನಡ ನೆಲದ ಕಥೆಗಳು, ನೀತಿ ಕತೆಗಳು, ತೆನಾಲಿ ರಾಮ, ಈಸೋಪನ, ಪಂಚತಂತ್ರ ಕತೆಗಳು, ಅಕ್ಬರ್‌-ಬೀರ್‌ಬಲ್‌ ಕಥಾನಕಗಳು, ಇಂಗ್ಲೀಶ್‌ನಿಂದ ಕನ್ನಡಕ್ಕೆ ಅನುವಾದಗೊಂಡು ಬಹುವಿಷಯಗಳಿಗೆ ಸಂಬಂಧಪಟ್ಟ ಪುಸ್ತಕಗಳು ಹರಿವು ಬುಕ್ಸ್‌ನಲ್ಲಿ ದೊರೆಯುತ್ತವೆ. ಮಕ್ಕಳಿಗೆ ರತ್ನನ ಕಸ್ತೂರಿಯ ಸರಿಗಮವನ್ನು, ಕವಿಶಿಷ್ಯರ ಹಾಡುಗಳನ್ನು ಕಲಿಸದೇ ಹೋದರೆ ಕನ್ನಡದ ತನ್ನತನದ ಪರಿಚಯವಾಗಿಸುವುದಾದರೂ ಹೇಗೆ ಹೇಳಿ?

ಹದಿಹರೆಯದ ಆವೇಗ, ಆಸೆ, ನಂಬಿಕೆ, ಬೇಡಿಕೆ, ಸ್ಥಿತಿ-ಸ್ಥಿತ್ಯಂತರಗಳ ಲಯದ ಪರಿಚಯ ಮಾಡಿಸುವ ಅದೆಷ್ಟೋ ಕೇಳಿದ-ಕೇಳದ ಪುಸ್ತಕ ರಾಶಿ ಹರಿವು ಬುಕ್ಸ್‌ ಪುಸ್ತಕ ಸಂಗ್ರಹದಲ್ಲಿವೆ. ಎಲ್ಲಾ ತಲೆಮಾರುಗಳ ಅಕ್ಷರಪ್ರೀತಿಗೆ ಪೋಷಣೆಯಾಗಿ, ಎಲ್ಲಾ ಕಾಲಮಾನದ ಜ್ಞಾನ ಭಂಡಾರದ ದೊಡ್ಡ ಗೂಡಾಗಿ ಹರಿವು ಬುಕ್ಸ್‌ ರೂಪತಾಳಿದೆ. ಕತ್ತಲಿನ ದಾರಿಯಲ್ಲಿ ದೀಪವ ಕಂಡ ಕಾಳಿದಾಸನಿಂದ ಹಿಡಿದು, ಈಗಿನ ಹೊಸ ಲೇಖಕರು ಹರಕೆ ಮಾಡಿಕೊಂಡಿರುವ ಅಸಂಖ್ಯ ಹೊತ್ತಿಗೆಗಳ ಗೂಡಾಗಿದೆ ಹರಿವು ಬುಕ್ಸ್‌.

 ನಿಮಗೆ ಬೇಕಾದ ಪುಸ್ತಕವನ್ನು ಕ್ಷಣಮಾತ್ರದಲ್ಲಿ ಲಭ್ಯ

ನಿಮಗೆ ಬೇಕಾದ ಪುಸ್ತಕವನ್ನು ಕ್ಷಣಮಾತ್ರದಲ್ಲಿ ಲಭ್ಯ

ಆಫ್‌ಲೈನ್‌ನಲ್ಲೇ ಆಗಲಿ, ಆನ್‌ಲೈನ್‌ನಲ್ಲೇ ಆಗಲಿ ನಿಮಗೆ ಬೇಕಾದ ಪುಸ್ತಕವನ್ನು ಕ್ಷಣಮಾತ್ರದಲ್ಲಿ ಕೊಳ್ಳಲು, ಓದಿನ ಜೇನಿನಂತಹ ಸವಿಯನ್ನು ಯಾವುದೇ ಅಡಚಣೆ ಇಲ್ಲದೆ ಸವಿಯಲು, ಕೊಡುಗೆಗಳನ್ನು ನಿಮ್ಮದಾಗಿಸಲು, ಅರಿವನ್ನು ಸಮೃದ್ಧವಾಗಿಸಲು ಹರಿವು ಬುಕ್ಸ್‌ಗೆ ಎಷ್ಟು ಬಾರಿ ಬೇಕಾದರೂ ಭೇಟಿ ನೀಡಿ ಪುಸ್ತಕಗಳನ್ನು ಕೊಂಡುಕೊಳ್ಳಿ.

ಮುಂದಿನ ಹೆಜ್ಜೆ - ಪ್ರಕಾಶನ: ಈಗಾಗಲೇ ಇರುವ ಪುಸ್ತಕದ ಭಂಡಾರವನ್ನು ಹಿಗ್ಗಿಸುವುದು ಒಂದು ಗುರಿಯಾದರೆ, ನಾಡಿನ ಹಿರಿಯ ಹಾಗೂ ಕಿರಿಯ ಬರಹಗಾರ ಪುಸ್ತಕಗಳನ್ನು ಪ್ರಕಟಿಸುವುದು ಹರಿವು ಬುಕ್ಸ್‌ನ ಮತ್ತೊಂದು ದೊಡ್ಡ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ವಿಷಯವಿರುವ, ಜನಮೆಚ್ಚುವಂತಹ ಪುಸ್ತಕಗಳು ಪ್ರಕಟವಾಗಲಿವೆ, ಅದಕ್ಕೆ ಬೇಕಾದ ತಯಾರಿಗಳು ಈಗಾಗಲೇ ಆಗುತ್ತಿವೆ ಎಂದು ಹರಿವು ಬುಕ್ಸ್ ನಡೆಸುತ್ತಿರುವ ರತೀಶ ರತ್ನಾಕರ ಒನ್ಇಂಡಿಯಾಕ್ಕೆ ತಿಳಿಸಿದರು.

Recommended Video

ಹಿಜಾಬ್ ವಿವಾದದ ಬಗ್ಗೆ ಇಂದು ಹೈಕೋರ್ಟ್ ಹೇಳಿದ್ದೇನು? | Oneindia Kannada

English summary
Harivu Books: Shop for best selling novels, fiction, competitive exam books and spiritual books. Famous author's best selling books, personality development and kids books in Kannada. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X