ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Sankranti 2023 Wishes in Kannada : ಮಕರ ಸಂಕ್ರಾಂತಿ ಶುಭ ಕೋರಲು ಇಲ್ಲಿವೆ ಸಂದೇಶಗಳು

|
Google Oneindia Kannada News

ಈ ಬಾರಿ ಮಕರ ಸಂಕ್ರಾಂತಿಯನ್ನು ಜನವರಿ 15ರಂದು ಆಚರಿಸಲಾಗುತ್ತಿದೆ. ಹಿಂದೂಗಳ ಹಬ್ಬವನ್ನು ಚಂದ್ರನನ್ನು ಆಧರಿಸಿದ ಪಂಚಾಂಗದ ಮೂಲಕ ಲೆಕ್ಕ ಹಾಕಲಾಗುತ್ತದೆ. ಆದರೆ ಮಕರ ಸಂಕ್ರಾಂತಿಯನ್ನು ಸೂರ್ಯನನ್ನು ಆಧರಿಸಿದ ಪಂಚಾಂಗದ ಲೆಕ್ಕಾಚಾರದ ಮೂಲಕ ನಿರ್ಧರಿಸಲಾಗುತ್ತದೆ.

ಸಂಕ್ರಾಂತಿ ಎಂದರೆ ಸೌರಮಾನದ ಪರ್ವ, ಮಕರ ಮಾಸದ ಆರಂಭದ ದಿನದಂದೇ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಮಣದಿಂದ ಋತುವಿನಲ್ಲಿ ಬದಲಾವಣೆ ಆಗುತ್ತದೆ. ಶರತ್ಕಾಲ ಕಳೆದು ವಸಂತ ಕಾಲದ ಆಗಮನವಾಗುತ್ತದೆ, ಇದರಿಂದಾಗಿ ದಿನಗಳು ಹೆಚ್ಚಾಗಿ, ರಾತ್ರಿಯ ಅವಧಿ ಕಡಿಮೆಯಾಗುತ್ತದೆ.

ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ರಾಶಿಯಾಗಿ ಹಾಕಿ ಅದಕ್ಕೆ ಪೂಜೆ ಮಾಡುತ್ತಾರೆ. ಈ ಕಾರಣಕ್ಕಾಗಿ ಈ ಸಂಕ್ರಾಂತಿ ಹಬ್ಬವನ್ನು ಸುಗ್ಗಿಯ ಹಬ್ಬ ಎನ್ನುತ್ತಾರೆ. ಸಂಕ್ರಾಂತಿಯ ಹಬ್ಬದ ದಿನ ಎಳ್ಳು ದಾನ ಮಾಡಬೇಕು ಎಂಬ ನಿಯಮವಿದೆ. ಎಳ್ಳು ಶನಿ ಗ್ರಹದ ಪ್ರತಿನಿಧಿ ಹಾಗೂ ಆತನ ಧಾನ್ಯವಾಗಿದೆ.

Happy Makar Sankranti 2022: Wishes, quotes, greetings, images, WhatsApp and Facebook status in Kannada

(ಶನಿಗ್ರಹ ಎಂದೊಡನೆ ಎಲ್ಲರಿಗೂ ಏನೋ ಒಂದು ರೀತಿ ಭಯ) ಎಳ್ಳನ್ನು ನಾವು ದಾನ ಮಾಡಲು ಹೋದಾಗ ಸಾಮಾನ್ಯವಾಗಿ ಅದನ್ನು ತೆಗೆದುಕೊಳ್ಳಲು ಇಷ್ಟ ಪಡುವುದಿಲ್ಲ. ಕಾರಣ ಅವರ ಪಾಪ ನಾವು ತೆಗೆದುಕೊಂಡ ಹಾಗೆ ಎಂದು ಹಾಗೂ ದೋಷ ಉಂಟಾಗುವುದು ಎಂದು ನಂಬಲಾಗಿದೆ. ಆದ್ದರಿಂದ ಈ ಕಾರಣದಿಂದ ಎಳ್ಳಿನ ಜತೆಯಲ್ಲಿ ಬೆಲ್ಲ, ಕಡಲೆಬೀಜ, ಕೊಬ್ಬರಿಯನ್ನು ಮಿಶ್ರಣ ಮಾಡಿ ದಾನ ಮಾಡುವ ಪದ್ಧತಿ ಪ್ರಾರಂಭವಾಯಿತು.

ಅಲ್ಲದೆ ಆ ಬೆಳೆಗಳು ಆಗ ತಾನೆ ಬೆಳೆದು ಮಾರುಕಟ್ಟೆಗೆ ಬಂದಿರುತ್ತದೆ. ಅವುಗಳನ್ನು ಪೂಜೆ ಮಾಡಿ ದಾನ ಧರ್ಮ ಮಾಡಿದರೆ ಇನ್ನು ಫಲ ಹೆಚ್ಚು ಬರುವುದು ಎಂಬ ನಂಬಿಕೆಯೂ ಇದೆ.

ಸಂಕ್ರಾಂತಿ ಹಬ್ಬದಂದು ಬಂಧು-ಬಾಂಧವರಿಗೆ, ಸ್ನೇಹಿತರು, ಆಪ್ತರಿಗೆ ಶುಭಾಶಯ ಕೋರಲು ಇಲ್ಲಿದೆ ಶುಭ ಸಂದೇಶಗಳು.

ಸಂಕ್ರಾಂತಿ ಹಬ್ಬದ ಸಂದೇಶಗಳು:

* ಆಕಾಶದಲ್ಲಿ ಹಾರುವ ಸುಂದರ ಗಾಳಿಪಟಗಳಂತೆ ನಿಮ್ಮ ಬದುಕು ಕೂಡಾ ಯಶಸ್ಸು ಮತ್ತು ಸಂತೋಷದಿಂದ ಕೂಡಿರಲಿ. ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು
*ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ. ಕಳೆದ ವರ್ಷದ ಎಲ್ಲಾ ಕಹಿಗಳನ್ನು ಮರೆತು ಸಿಹಿಯಾದ ಮಾತುಗಳ ಮೂಲಕ ಬಾಂಧವ್ಯವನ್ನು ವೃದ್ಧಿಸೋಣ.

* ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ. ನೆಮ್ಮದಿಯ ಬಾಳು ನಿಮ್ಮದಾಗಲಿ.

*ಬೆಳಗುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸಂತೋಷ, ಸಮೃದ್ಧಿ, ಸುಖ-ಶಾಂತಿಯನ್ನು ಕರುಣಿಸಲಿ. ಉದಯರವಿಯ ಬೆಳಕಿನ ಚಿಲುಮೆಯಂತೆ ನಿಮ್ಮ ಬಾಳು ಸಮೃದ್ಧಿಸಲಿ.

* ಸಂಕ್ರಾಂತಿಯ ಬೆಂಕಿಯ ಕಿಡಿ ನಿಮ್ಮ ಬದುಕಿನ ಎಲ್ಲಾ ಕಹಿ ಘಟನೆಗಳನ್ನು ಸುಟ್ಟು, ನಿಮ್ಮ ಬಾಳಿನಲ್ಲಿ ಸಂತೋಷ ಮತ್ತು ಸುಖವನ್ನು ನೀಡಲಿ.

* ''ನೇಸರನು ತನ್ನ ಪಥವನ್ನು ಬದಲಿಸುತ್ತಿರಲು, ಮಾಗಿಯ ಚಳಿ ಮಾಯವಾಗುತ್ತಿರಲು, ತನು ಮನದಲ್ಲಿ ಹೊಸ ಚೈತನ್ಯ ಮೂಡುತಿದೆ, ಹೊಸ ಬೆಳೆ ಹೊಸ ಕ್ರಾಂತಿ ಜಗದಲಿ ಹರಡುತಿದೆ.'' ಸಂಕ್ರಾಂತಿ ಶುಭಾಶಯ

* ಈ ಸಂಕ್ರಾಂತಿ ಹಬ್ಬದಂದು ನಿಮ್ಮ ಆಸೆಗಳೆಲ್ಲ ಉಕ್ಕಿ ಹರಿಯಲಿ'' ಸಂಕ್ರಾಂತಿ ಶುಭಾಶಯ

*ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ. ನಿಮಗೂ ನಿಮ್ಮ ಕುಟುಂಬದವರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
* ನಾನು ನಿಮ್ಮಿಂದ ದೂರ ಇರಬಹುದು. ಆದರೆ, ನನ್ನ ಪ್ರೀತಿಯ ಶುಭ ಹಾರೈಕೆ ಸದಾ ನಿಮ್ಮೊಂದಿಗಿರುತ್ತದೆ. ನನ್ನೆಲ್ಲಾ ಪ್ರೀತಿಪಾತ್ರರಿಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

* ನಿಮ್ಮ ಬದುಕಿನ ಎಲ್ಲಾ ಇಷ್ಟಾರ್ಥಗಳು ಕೈಗೂಡಲಿ, ನಿಮ್ಮ ಯಶಸ್ಸಿನ ಹಾದಿಗೆ ಇದ್ದ ಅಡೆತಡೆಗಳು ನಿವಾರಣೆಯಾಗಲಿ. ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು
* ಮಕರ ಸಂಕ್ರಾಂತಿಯಂದು ಸೂರ್ಯ ಭರವಸೆಯೊಂದಿಗೆ ಮೇಲೇರುತ್ತಾನೆ... ಗಾಳಿಪಟಗಳು ಹುರುಪಿನಿಂದ ಆಗಸದಲ್ಲಿ ಹಾರುತ್ತವೆ... ಬೆಳೆಗಳು ಕೊಯ್ಲಿಗೆ ಸಿದ್ಧವಾಗಿವೆ. ಎಲ್ಲವೂ ಭರವಸೆ, ಸಂತೋಷ ಮತ್ತು ಸಮೃದ್ಧಿಯ ಪ್ರತೀಕ. ಎಲ್ಲರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯ

* ಇದು ವರ್ಷದ ಮೊದಲ ಹಬ್ಬವನ್ನು ಆನಂದಿಸುವ ಸಮಯ. ನಿಮಗೆಲ್ಲರಿಗೂ ಸಮೃದ್ಧ ಮತ್ತು ಸಂತೋಷಕರ ಮಕರ ಸಂಕ್ರಾಂತಿಯ ಶುಭಾಶಯಗಳು

* ತಮಗೆ ಮತ್ತು ತಮ್ಮ ಕುಟುಂಬಕ್ಕೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು

* ಈ ಮಕರ ಸಂಕ್ರಾಂತಿ ನಿಮ್ಮ ಬದುಕಿನಲ್ಲಿ ಸುಖ, ಶಾಂತಿ, ಉತ್ತಮ ಆರೋಗ್ಯ, ಸಂತೋಷವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ. ತಮಗೂ ತಮ್ಮ ಕುಟುಂಬಕ್ಕೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

* ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಸೂರ್ಯ ದೇವನು ತನ್ನ ಅತ್ಯುತ್ತಮ ಆಶೀರ್ವಾದದ ಪ್ರಭೆಯನ್ನು ನಿಮ್ಮ ಮೇಲೆ ಚೆಲ್ಲಲಿ ಎಂಬ ಹಾರೈಕೆ ನನ್ನದು. ತಮಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

* ಮಕರ ಸಂಕ್ರಾಂತಿಯಂದು ಹಾರಿಸುವ ಗಾಳಿಪಟದಂತೆ ನೀವು ಕೂಡಾ ಯಶಸ್ಸು, ಖುಷಿಯೊಂದಿಗೆ ಬದುಕಿನಲ್ಲಿ ಉನ್ನತಮಟ್ಟಕ್ಕೇರಿ. ನಿಮಗೂ ನಿಮ್ಮ ಕುಟುಂಬಕ್ಕೂ ನಾನು ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದೇನೆ.

* ಹೊಸ ಆರಂಭದ ಈ ಶುಭ ದಿನದಂದು ಸೂರ್ಯ ದೇವರು ನಿಮ್ಮ ಜೀವನದಲ್ಲಿ ಯಶಸ್ಸಿನ ಬಾಗಿಲನ್ನು ತೆರೆಯಲಿ ಎಂದು ನಾನು ತುಂಬು ಹೃದಯದಿಂದ ಹಾರೈಸುತ್ತೇನೆ. ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿ ಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಹೆಸರು. ಸೌರಮಾನದ ಪ್ರಕಾರ ಸೂರ್ಯನು ಮೇಷಾದಿ ಹನ್ನೆರಡು ರಾಶಿಗಳನ್ನು ಪ್ರವೇಶಿಸುವಾಗಲೂ ಸಂಕ್ರಾಂತಿ ಬರುತ್ತದೆ. ಆದರೆ ಅವುಗಳಲ್ಲಿ ಕರ್ಕಾಟಕ ಸಂಕ್ರಾಂತಿ ಹಾಗೂ ಮಕರ ಸಂಕ್ರಾಂತಿಗಳು ದಕ್ಷಿಣಾಯನ ಮತ್ತು ಉತ್ತರಾಯಣಗಳ ಪ್ರಾರಂಭದ ದಿನಗಳಾದ್ದರಿಂದ ವಿಶೇಷ ಮಹತ್ವವುಳ್ಳವುಗಳಾಗಿವೆ.

ಸಂಕ್ರಾಂತಿ ಸೂರ್ಯಾರಾಧನೆಯ ಹಬ್ಬವಾಗಿದೆ. ಸೂರ್ಯ ಆತ್ಮಾ ಜಗತಃ ತಸ್ಥುಷಶ್ಚ, ಅಂದರೆ ಸೂರ್ಯದೇವ ವಿಶ್ವದ ಆತ್ಮ; ಜಗತ್ತಿನ ಕಣ್ಣು; ಎಂದರ್ಥ. ಮಳೆ ಬೀಳಲು, ಬೆಳೆ-ಬೆಳೆಯಲು, ಸೂರ್ಯನೇ ಕಾರಣ.ಆದ್ದರಿಂದ ಈ ಹಬ್ಬವನ್ನು ರೈತರು ಹೆಚ್ಚಾಗಿ ಆಚರಿಸುತ್ತಾರೆ.

"ಸಂಕ್ರಾತಿ" ಎಂಬ ಪದ "ಸತ್ ಬದಲಾವಣೆ" ಯ ಸೂಚಕವಾಗಿದೆ. ಈ ಸಮಯದಲ್ಲಿ ಸೂರ್ಯನು ಸಹ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸ್ಥಿತ್ಯಂತರಗೊಂಡು ತನ್ನ ಪಥವನ್ನೇ ಬದಲಾಯಿಸುತ್ತಾನೆ. ಇದರಿಂದಾಗಿ ಪ್ರಕೃತಿಯಲ್ಲಿ ಹಸಿರು ಆವರಿಸಿ ಸಮೃದ್ಧಿ ಪಸರಿಸುತ್ತದೆ. ಈ ಹಿನ್ನೆಲೆಯಲ್ಲಿ ಈ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ ಎಲ್ಲವೂ ಕ್ಷಣಿಕ ಎಂಬುದೇ ಸತ್ಯ. ಅದ್ದರಿಂದ ಮನುಷ್ಯರಾದ ನಾವುಗಳು ಅಪ್ರೀತಿ, ಅಸಹಿಷ್ಣತೆ, ಅಸಹಕಾರ, ಅಸಹನೆ, ಅಹಂಕಾರ, ಅಜ್ಞಾನ ಹಾಗೂ ಅಂಧಕಾರಗಳನ್ನು ತೊರೆದು ಬದುಕಿರುವಷ್ಟು ದಿನಗಳಲ್ಲಿ ಎಲ್ಲರೊಂದಿಗೆ ಬೆರೆತು ಒಂದಾಗಿ ನಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳೋಣ ಎಂಬುದೆ ನಮ್ಮ ಆಶಯ ವಾಗಿದೆ.

ಸಂಕ್ರಾಂತಿಯ ಮಹತ್ವ:

ಮಕರವೆಂದರೆ ಹತ್ತನೇ ರಾಶೀ ಚಕ್ರ, ಮಕರ ಸಂಕ್ರಾಂತಿ ಎಂದರೆ ಬದಲಾವಣೆ. ಸೂರ್ಯನು ಮಕರ ರಾಶಿಗೆ ಪ್ರವೇಶವಾಗುವ ದಿನವನ್ನು ಸಂಕ್ರಾಂತಿ ಹಬ್ಬವಾಗಿ ಆಚರಿಸುತ್ತಾರೆ. ಜ್ಯೋತಿಷ್ಯದ ಪ್ರಕಾರ ಮಕರ ರಾಶಿಯನ್ನು ಆಳುವವನು ಶನೀಶ್ವರ. ಇವನು ಸೂರ್ಯಪುತ್ರ. ಈ ದಿನದಂದು ಸೂರ್ಯನು ತನ್ನ ಮಗನ ಆಡಳಿತಕ್ಕೊಳಪಟ್ಟ ಮನೆಯನ್ನು ಪ್ರವೇಶಿಸುತ್ತಾನೆ ಎಂದು ಹೇಳಲಾಗುತ್ತದೆ.

ಒಂದು ರೀತಿಯಲ್ಲಿ ಸ್ವತಃ ತಂದೆ ಮಗನಾದ ಸೂರ್ಯ ಶನೀಶ್ವರರು ಇಬ್ಬರೂ ವಿರುದ್ಧವಾದವರು. ಆದರೆ ಈ ಸಂಕ್ರಾಂತಿಯ ಸಂದರ್ಭದಲ್ಲಿ ತನ್ನ ಮಗನಾದ ಶನಿಯ ಬಳಿ ಸೂರ್ಯನು ಹೋಗುವುದರಿಂದಾಗಿ ಈ ಸಂದರ್ಭವು ಮನುಷ್ಯರಿಗೆ ದ್ವೇಷ ಹಾಗೂ ಜಗಳವನ್ನು ಬಿಟ್ಟು ಒಂದಾಗಿ ಎನ್ನುವ ಸಂದೇಶವನ್ನು ನೀಡುತ್ತದೆ.

ಯಾವುದೇ ಹಳೆಯ ಕಹಿ ನೆನಪು ಹಾಗೂ ಅಸಮಾಧಾನವನ್ನು ಬಿಟ್ಟು ಜಗತ್ತಿನ ಸೌಂದರ್ಯವನ್ನು ಆಸ್ವಾದಿಸುವ ಹಾಗೂ ಪ್ರೀತಿಸುವ ಅವಕಾಶವನ್ನು ಈ ಸಂಕ್ರಾಂತಿಯು ಹೊತ್ತು ತರುತ್ತದೆ.
ಹಾಗಾಗಿ ಸೂರ್ಯನ ಶಕ್ತಿ ಹಾಗೂ ಹೃದಯ ವೈಶಾಲ್ಯತೆಯನ್ನು ಸ್ಮರಿಸಿ, ಅನಗತ್ಯವಾದ ವಿವಾದಗಳನ್ನು ಬದಿಗಿಟ್ಟು ಅರ್ಥಪೂರ್ಣ ಸಂಬಂಧಗಳನ್ನು ಮುಂದುವರಿಸಿಕೊಂಡು ಹೊಗುವುದು ಒಳ್ಳೆಯದು.ವೈಜ್ಞಾನಿಕ ರೀತಿಯಲ್ಲಿ ನೋಡಿದಾಗ ಸಂಕ್ರಾಂತಿಯ ಸಮಯದಲ್ಲಿ ಚಳಿ ಹೆಚ್ಚು ಇರುತ್ತದೆ. ಎಳ್ಳು ಸೇವನೆಯಿಂದ ದೇಹದ ಉಷ್ಣತೆ ಹೆಚ್ಚು ಆಗುತ್ತದೆ ಹಾಗೂ ಚರ್ಮದ ಕಾಂತಿಯೂ ಹೆಚ್ಚುತ್ತದೆ. ಈ ಹಬ್ಬವು ಅತ್ಯಂತ ಪ್ರಾಚೀನ ಕಾಲದಿಂದಲೂ ಆಚರಣೆಗೆ ಬಂದಿದೆ.

ಶಿವ ಮತ್ತು ಪಾರ್ವತಿಯರು ಲೋಕ ಸಂಚಾರ ಪ್ರಾರಂಭಿಸುತ್ತಾರಂತೆ. ಈ ಸಂಕ್ರಮಣದ ಕಾಲದ ಗೋಧೂಳಿ ಲಗ್ನಕ್ಕಿಂತ ಹೆಚ್ಚು ಸಮಯ ಈ ಭೂಲೋಕದಲ್ಲಿರುತ್ತಾರೆ ಎಂದು ಪುರಾಣದಲ್ಲಿ ಇದೆ. ಈ ಪುಣ್ಯ ದಿನದಲ್ಲಿ ಹಲವಾರು ದೇವತೆಗಳಿಗೆ ಶಾಪ ವಿಮೋಚನೆ ಉಂಟಾಗಿದೆ.

ಉದಾಹರಣೆಗೆ ಇಂದ್ರ ಮತ್ತು ಚಿತ್ರಸೇನ. ಪ್ರತಿ ವರ್ಷ ಸಂಕ್ರಾಂತಿಯ ಹಬ್ಬದ ದಿನ ಸಂಜೆ ಶಬರಿ ಮಲೆಯಲ್ಲಿ ಅಯ್ಯಪ್ಪ ಸ್ವಾಮಿಯು ಜ್ಯೋತಿ ರೂಪದಲ್ಲಿ ದರ್ಶನ ನೀಡುತ್ತಾನೆ ಎಂಬ ನಂಬಿಕೆ ಇದೆ. ಗ್ರಾಮೀಣ ಪ್ರದೇಶದಲ್ಲಿ ರೈತರು ಆ ದಿನ ಎತ್ತುಗಳಿಗೆ ಪೂಜೆ ಸಲ್ಲಿಸಿ ಕಿಚ್ಚು ಹಾಯಿಸುತ್ತಾರೆ.

ಒಂದು ವರ್ಷದಲ್ಲಿ (ಸಂವತ್ಸರ) 12 ಮಾಸಗಳು ಅವುಗಳನ್ನು ಎರಡು ಭಾಗ ಮಾಡಿರುವರು. *ಉತ್ತರಾಯಣ ಹಾಗೂ ದಕ್ಷಿಣಾಯನ. ಸೂರ್ಯ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ. ಸೂರ್ಯ ಗ್ರಹವು ಒಂದು ರಾಶಿಯಲ್ಲಿ ಒಂದು ತಿಂಗಳ ಕಾಲ ಇರುತ್ತಾನೆ. ಸೂರ್ಯ, ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ.

English summary
As per the solar cycle, Makar Sankranti is an annual Hindu festival that is observed. It represents the day of the sun’s transit into the zodiac sign Makara (Capricorn), which indicates the end of the winter solstice and the beginning of longer days, celebrated on January 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X