ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರಗ್ಸ್‌ ಕೇಸ್ : ನಟಿಯರಿಗೆ ಹೇರ್‌ ಫೊಲಿಕ್‌ ಟೆಸ್ಟ್‌ – ಏನಿದು ಟೆಸ್ಟ್‌? ನಿಖರ ಹೇಗೆ? ಹೇಗೆ ಮಾಡ್ತಾರೆ?

|
Google Oneindia Kannada News

ಬೆಂಗಳೂರು, ಸಪ್ಟೆಂಬರ್.10: ಸ್ಯಾಂಡಲ್ ವುಡ್, ಬಾಲಿವುಡ್ ನಲ್ಲೂ ಮಾದಕ ವಸ್ತು ಸೇವನೆ ಸುದ್ದಿಯೇ ಸದ್ದು ಮಾಡುತ್ತಿದೆ. ಡ್ರಗ್ಸ್ ಸೇವನೆ ಮತ್ತು ಹಂಚಿಕೆಯಲ್ಲಿ ನಟ-ನಟಿಯರ ಪಾತ್ರವಿರುವ ಬಗ್ಗೆ ಶಂಕೆ ಹೆಚ್ಚಾಗುತ್ತಿರುವ ಹಿನ್ನೆಲೆ ವಿಚಾರಣೆ ತೀವ್ರಗೊಳಿಸಲಾಗುತ್ತಿದೆ.

ಕರ್ನಾಟಕದಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಮತ್ತು ಸಂಜನಾ ಗಲ್ರಾನಿರನ್ನು ಬಂಧಿಸಲಾಗಿದೆ. ಇಬ್ಬರು ನಟಿಯರು ಡ್ರಗ್ಸ್ ಸೇವನೆ ಮಾಡಿದ್ದಾರೆಯೋ ಇಲ್ಲವೋ ಎನ್ನುವುದರ ಬಗ್ಗೆ ವೈದ್ಯಕೀಯ ಸಾಕ್ಷ್ಯ ಸಂಗ್ರಹಿಸಬೇಕಿದೆ. ಈ ಹಿನ್ನೆಲೆ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಇಬ್ಬರು ನಟಿಯರಿಗೆ ಫೋಲಿಕಲ್ ಪರೀಕ್ಷೆಗೆ ಒಳಪಡಿಸಲಾಯಿತು ಎಂದು ಮೂಲಗಳಿಂದ ತಿಳಿದು ಬಂದಿದೆ.

ಡ್ರಗ್ಸ್‌ ಪ್ರಕರಣ; ಆರೋಪಿಗಳಿಗೆ ರಕ್ತ ಪರೀಕ್ಷೆಗೆ ಒಪ್ಪಿಗೆ ಡ್ರಗ್ಸ್‌ ಪ್ರಕರಣ; ಆರೋಪಿಗಳಿಗೆ ರಕ್ತ ಪರೀಕ್ಷೆಗೆ ಒಪ್ಪಿಗೆ

ಡ್ರಗ್ಸ್ ಸೇವನೆ ಬಗ್ಗೆ ತಿಳಿದುಕೊಳ್ಳುವುದಕ್ಕೆ ಹೇರ್ ಫೋಲಿಕಲ್ ತಪಾಸಣೆ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಹೇರ್ ಫೋಲಿಕಲ್ ತಪಾಸಣೆ ಎಂದರೇನು, ಹೇರ್ ಫೋಲಿಕಲ್ ತಪಾಸಣೆ ನಡೆಸುವುದರ ಹಿಂದಿನ ಉದ್ದೇಶವೇನು, ಹೇರ್ ಫೋಲಿಕಲ್ ತಪಾಸಣೆ ನಡೆಸುವ ಪರಿ ಹೇಗಿರುತ್ತದೆ. ಹೇರ್ ಫೋಲಿಕಲ್ ತಪಾಸಣೆ ಮಹತ್ವವೇನು ಎನ್ನುವುದರ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ನೋಡಿ.

ಹೇರ್ ಫೋಲಿಕಲ್ ತಪಾಸಣೆ ಏಕೆ?

ಹೇರ್ ಫೋಲಿಕಲ್ ತಪಾಸಣೆ ಏಕೆ?

ಸಾಮಾನ್ಯವಾಗಿ ಕ್ರೀಡಾಪಡುಗಳು ತಮ್ಮ ಶಕ್ತಿ ವೃದ್ಧಿಸಿಕೊಳ್ಳುವ ಉದ್ದೇಶದಿಂದ ಸ್ಟಿರಾಯ್ಡ್ ಸೇರಿದಂತೆ ಇತ್ಯಾದಿ ಡ್ರಗ್ಸ್ ಗಳನ್ನು ಸೇವಿಸುತ್ತಾರೆ. ಕ್ರೀಡಾಕೂಟ ಆರಂಭಕ್ಕೂ ಮೊದಲು ಮತ್ತು ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ ನಂತರದಲ್ಲಿ ಅದನ್ನು ಪತ್ತೆ ಮಾಡುವುದಕ್ಕೆ ಡೋಪಿಂಗ್ ಟೆಸ್ಟ್ ನಡೆಸಲಾಗುತ್ತದೆ. ಅದೇ ರೀತಿ ಎಂಡಿಎಂಎ(ಮೀಥೈಲ್ ಎನೆಡಿಯಾಕ್ಸಿ ಮೆಥಾಂಫೆಟಮೈನ್ ನನ್ನು ಎಕ್ ‍ಸಸ್ಟಿ) ಮಾತ್ರೆಗಳು, ಎಲ್‍ಎಸ್‌ಡಿ (ಲೈಸರ್ಜಿಕ್ ಆಸಿಡ್‌ ಡೈಥೈಲಾಮೈಡ್), ಆಂಫೆಟಮೈನ್, ಗಾಂಜಾ, ಕೊಕೇನ್ ಸೇವಿಸಿದ್ದರೆ ಅದನ್ನು ಪತ್ತೆ ಹಚ್ಚಲು ಹೇರ್‌ ಫೋಲಿಕಲ್ ಪರೀಕ್ಷೆ ನಡೆಸಲಾಗುತ್ತದೆ.

ಹೇರ್ ಫೋಲಿಕಲ್ ಪರೀಕ್ಷೆಯ ವಿಶೇಷವೇನು?

ಹೇರ್ ಫೋಲಿಕಲ್ ಪರೀಕ್ಷೆಯ ವಿಶೇಷವೇನು?

ಕ್ರೀಡಾಕೂಟಗಳ ಸಮಯದಲ್ಲಿ ಕ್ರೀಡಾಪಟುಗಳ ಮೂತ್ರವನ್ನು ಪರೀಕ್ಷಿಸಲಾಗುತ್ತದೆ. ಇದರಿಂದ ಮೂರು ದಿನಗಳ ಹಿಂದೆ ಡ್ರಗ್ಸ್ ಸೇವಿಸಿದ್ದರೂ ಅದರ ಬಗ್ಗೆ ತಿಳಿಯುತ್ತದೆ. ಆದರೆ ಹೇರ್ ಫೋಲಿಕಲ್ ತಪಾಸಣೆ ನಡೆಸಿದರೆ ಕಳೆದ 90 ದಿನಗಳಲ್ಲಿ ಯಾವಾಗ ಡ್ರಗ್ಸ್ ಸೇವಿಸಿದ್ದರೂ ಪರೀಕ್ಷೆಯಲ್ಲಿ ಗೊತ್ತಾಗುತ್ತದೆ. ಏಕೆಂದರೆ ಡ್ರಗ್ಸ್ ಸೇವಿಸಿದ ವ್ಯಕ್ತಿಯ ರಕ್ತದಲ್ಲಿ ಬೆರೆತು ಹೋಗಿರುತ್ತದೆ. ಹೀಗಾಗಿ ಡ್ರಗ್ಸ್ ನಲ್ಲಿರುವ ರಾಸಾಯನಿಕವು ರಕ್ತದ ಮೂಲಕ ಕೂದಲ ಕೋಶಕ್ಕೆ ಹೋಗುತ್ತದೆ. ಈ ಮೂಲಕ ಕೂದಲು ಬೆಳೆದಂತೆ ಅದರಲ್ಲೂ ಡ್ರಗ್ಸ್ ರಾಸಾಯನಿಕ ಸೇರಿಕೊಂಡಿರುತ್ತದೆ. ವೈದ್ಯಕೀಯ ಅಧ್ಯಯನಗಳ ಪ್ರಕಾರ ಡ್ರಗ್ಸ್ ಸೇವಿಸಿದ ದಿನದಿಂದ ಗರಿಷ್ಟ 90 ದಿನಗಳ ಕಾಲ ಈ ರಾಸಾಯನಿಕ ಕೂದಲ ಕೋಶದಲ್ಲಿ ಇರುತ್ತದೆ.

100-120 ತಲೆಕೂದಲು ಬಳಸಿಕೊಂಡು ಫೋಲಿಕಲ್ ಟೆಸ್ಟ್

100-120 ತಲೆಕೂದಲು ಬಳಸಿಕೊಂಡು ಫೋಲಿಕಲ್ ಟೆಸ್ಟ್

ಡ್ರಗ್ಸ್ ಸೇವನೆ ಬಗ್ಗೆ ಪರೀಕ್ಷೆ ನಡೆಸಲು ಫೋಲಿಕಲ್ ತಪಾಸಣೆಯನ್ನು ಆಸ್ಪತ್ರೆ ಮತ್ತು ಪ್ರಯೋಗಾಲಯಗಳಲ್ಲಿ ನಡೆಸಲಾಗುತ್ತದೆ. ಈ ವೇಳೆಯಲ್ಲಿ ವೈದ್ಯರು ವ್ಯಕ್ತಿಯ ತಲೆಯ ವಿವಿಧ ಭಾಗಗಳಿಂದ 100 ರಿಂದ 120ರಷ್ಟು ಕೂದಲುಗಳನ್ನು ಕತ್ತರಿಸಿ ತೆಗೆದುಕೊಳ್ಳುತ್ತಾರೆ. ತಲೆಕೂದಲು ಇಲ್ಲದಿದ್ದಲ್ಲಿ ದೇಹದ ಮೇಲೆ ಬೆಳೆದ ಕೂದಲನ್ನು ಹೇರ್ ಫೋಲಿಕಲ್ ಟೆಸ್ಟ್ ಗೆ ಬಳಸಿಕೊಳ್ಳಲಾಗುತ್ತದೆ.

Recommended Video

ನಮ್ ಹಣೆಬರಹ ಯಾವಾಗ್ಲೂ ಇಷ್ಟೇ ಬಿಡಿ.? | Oneindia Kannada
ಹೇರ್ ಫೋಲಿಕಲ್ ತಪಾಸಣೆ ನಡೆಸುವುದು ಹೇಗೆ?

ಹೇರ್ ಫೋಲಿಕಲ್ ತಪಾಸಣೆ ನಡೆಸುವುದು ಹೇಗೆ?

ಕೊರೊನಾವೈರಸ್ ಸೋಂಕು ಪರೀಕ್ಷೆಯ ಮಾದರಿಯಲ್ಲೇ ಹೇರ್ ಫೋಲಿಕಲ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಎರಡು ರೀತಿಯಲ್ಲಿ ಪರೀಕ್ಷೆ ನಡೆಸಲಾಗುತ್ತಿದ್ದು, ಕೂದಲು ತೆಗೆದ ವ್ಯಕ್ತಿಯು ಡ್ರಗ್ಸ್ ಸೇವಿಸದಿದ್ದಲ್ಲಿ 24 ಗಂಟೆಗಳಲ್ಲೇ ನೆಗೆಟಿವ್ ವರದಿ ಬರುತ್ತದೆ. ಇದಕ್ಕಾಗಿ ELISA ಪರೀಕ್ಷೆ ನಡೆಸಲಾಗುತ್ತದೆ. ಒಂದು ವೇಳೆ ಪರೀಕ್ಷೆಗೊಳಗಾದ ವ್ಯಕ್ತಿಯು ಡ್ರಗ್ಸ್ ಸೇವಿಸಿರುವುದು ಖಾತ್ರಿಯಾದಲ್ಲಿ 72 ಗಂಟೆಗಳಲ್ಲೇ ಪಾಸಿಟಿವ್ ವರದಿ ಬರುತ್ತದೆ. ಇಂಥ ಸಂದರ್ಭದಲ್ಲಿ ಜಿಸಿ/ಎಂಎಸ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಇಬ್ಬರು ವ್ಯಕ್ತಿಗಳ ಕೂದಲು ಮಿಶ್ರಣವಾಗಿದ್ದಲ್ಲಿ ನಿಖರ ಫಲಿತಾಂಶ ಬರುವುದಿಲ್ಲ. ಹೀಗಿರುವಾಗ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

English summary
Hair Follicle Drug Test For Actor Sanjjana And Ragini: What Is This How It Works, What To Expect, And Accuracy Here Get More Information.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X