ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದ ಸಂದರ್ಭ ಭಾರತದ ಈ ನಗರ ಹೆಚ್ಚು ವಾಸಯೋಗ್ಯ

|
Google Oneindia Kannada News

ನವದೆಹಲಿ, ಜೂ. 17: ಕೊರೊನಾ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಹಲವಾರು ಜನರು ನಾವು ಯಾವ ನಗರದಲ್ಲಿ ವಾಸಿಸುವುದು ಸೂಕ್ತ ಎಂದು ಕೊಳ್ಳುತ್ತಿರಬಹುದು. ಈ ಹಿಂದೆ ಗ್ರಾಮೀಣ ಪ್ರದೇಶ ಹೆಚ್ಚು ಸುರಕ್ಷಿತ ಎಂದು ಹೇಳಲಾಗುತ್ತಿದ್ದರೂ ಈಗ ಕೊರೊನಾ ತನ್ನ ಕಬಂಧ ಬಾಹುವನ್ನು ಗ್ರಾಮೀಣ ಪ್ರದೇಶಕ್ಕೂ ಚಾಚಿದೆ. ಹೀಗಿರುವಾಗ ಈ ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಯಾವ ನಗರಗಳ ವಾಸಯೋಗ್ಯ ಎಂಬುವುದು ಈಗ ಪ್ರಶ್ನೆಯಾಗಿದೆ.

ಈ ಕೊರೊನಾ ಎಲ್ಲಾ ಪ್ರದೇಶಗಳಲ್ಲೂ ಇರುವಾಗ ವಾಸಿಸಲು ಯಾವ ಪ್ರದೇಶ ಯೋಗ್ಯ ಎಂದು ನಿರ್ಣಯಿಸುವುದು ಕೊಂಚ ಕಷ್ಟವೇ ಸರಿ. ಹಲವಾರು ಮಂದಿ ಕೊರೊನಾ ಪ್ರಕರಣಗಳು ಇಲ್ಲದ ಪ್ರದೇಶದಲ್ಲಿ ವಾಸಿಸುವುದೇ ಸೂಕ್ತ ಅಂದುಕೊಂಡಿದ್ದಾರೆ. ಆದರೆ ಇಲ್ಲೊಂದು ವರದಿಯು ಯಾವ ನಗರ ವಾಸಯೋಗ್ಯ ಎಂದು ಮಾಹಿತಿ ನೀಡುತ್ತದೆ.

ವಿಶ್ವದಲ್ಲಿ ವಾಸಯೋಗ್ಯವಾದ 10 ನಗರಗಳು ಯಾವುದು?- ಇಲ್ಲಿದೆ ಸಮೀಕ್ಷೆ ವರದಿವಿಶ್ವದಲ್ಲಿ ವಾಸಯೋಗ್ಯವಾದ 10 ನಗರಗಳು ಯಾವುದು?- ಇಲ್ಲಿದೆ ಸಮೀಕ್ಷೆ ವರದಿ

ಸ್ಕ್ವೇರ್ ಯಾರ್ಡ್‌ಗಳ ಸೂಕ್ತತೆ ಸೂಚ್ಯಂಕ: ಕೋವಿಡ್‌ ದೃಷ್ಟಿಕೋನ (Suitability Index: The COVID Perspective) ಎಂಬ ತಲೆಬರಹದ ವರದಿಯ ಪ್ರಕಾರ ಈ ಕೊರೊನಾ ಸಂದರ್ಭದಲ್ಲಿ ಗುರುಗ್ರಾಮವು ವಾಸಿಸಲು ಅತ್ಯಂತ ಸೂಕ್ತವಾದ ನಗರವಾಗಿದೆ.

ಗುರುಗ್ರಾಮ ವಾಸಿಸಲು ಅತ್ಯಂತ ಸೂಕ್ತವಾದ ನಗರ: ಕಾರಣವೇನು

ಗುರುಗ್ರಾಮ ವಾಸಿಸಲು ಅತ್ಯಂತ ಸೂಕ್ತವಾದ ನಗರ: ಕಾರಣವೇನು

ಜನಸಂಖ್ಯಾ ಸಾಂದ್ರತೆ, ತೆರೆದ ಪ್ರದೇಶ ಮತ್ತು ಆಸ್ಪತ್ರೆಯ ಮೂಲಸೌಕರ್ಯಗಳಂತಹ ವಿವಿಧ ಅಂಶಗಳಲ್ಲಿ ಪರಿಗಣಿಸಿದಾಗ ಗುರುಗ್ರಾಮ ವಾಸಯೋಗ್ಯ ನಗರವಾಗಿದೆ. ಕೊರೊನಾವೈರಸ್ ಪ್ರಕರಣಗಳಲ್ಲಿ ಜನರು ತತ್ತರಿಸುತ್ತಿರುವ ಸಮಯದಲ್ಲಿ ಜನರು ಎಲ್ಲಿ ವಾಸಿಸಲು ಬಯಸುತ್ತಾನೆ ಎಂಬುದನ್ನು ನಿರ್ಧರಿಸಲು ಕೆಲಸದ ಸ್ಥಳದ ದೂರ ಅಥವಾ ಕೈಗೆಟುಕುವ ದರಕ್ಕಿಂತ ಈ ಮೂಲಸೌಕರ್ಯಗಳು ಅತೀ ಮುಖ್ಯ ಎಂದು ವರದಿ ಉಲ್ಲೇಖಿಸಿದೆ. ಅಷ್ಟಕ್ಕೂ ಈ ವರದಿಯ ಪ್ರಕಾರ ಕೊರೊನಾ ಪ್ರಕರಣಗಳ ವಿಚಾರದಲ್ಲಿ ಮುಂಬೈ ಮತ್ತು ಬೆಂಗಳೂರಿಗೆ ಹೋಲಿಸಿದರೆ ಗುರುಗ್ರಾಮವು ಬದುಕಲು ಅತ್ಯಂತ ಸೂಕ್ತವಾದ ನಗರವಾಗಿದೆ. ಆದಾಗ್ಯೂ, ಮುಂಬೈನ ಪಶ್ಚಿಮ ಮತ್ತು ಮಧ್ಯಭಾಗದ ಕೆಲವು ನಗರಗಳು ಹಾಗೂ ಬೆಂಗಳೂರಿನ ಮಹಾದೇವಪುರ ವಲಯವನ್ನು ಹೆಚ್ಚು ಸೂಕ್ತವೆಂದು ಗುರುತಿಸಲಾಗಿದೆ.

ವರದಿಯಲ್ಲಿ ಬೇರೆ ಏನಿದೆ?

ವರದಿಯಲ್ಲಿ ಬೇರೆ ಏನಿದೆ?

ಕೋವಿಡ್ -19 ಸಾಂಕ್ರಾಮಿಕವು ವೈದ್ಯಕೀಯ ಮೂಲಸೌಕರ್ಯದಲ್ಲಿನ ನ್ಯೂನತೆಗಳನ್ನು ಹಿಂದೆಂದಿಗಿಂತ ಅಧಿಕವಾಗಿ, ಸ್ಪಷ್ಟವಾಗಿ ಬಹಿರಂಗಪಡಿಸಿದೆ ಎಂದು ವರದಿ ತಿಳಿಸಿದೆ. ಮುಂಬೈ ಮತ್ತು ಬೆಂಗಳೂರು ಎರಡೂ ನಗರಗಳು ವೈದ್ಯಕೀಯ ಮೂಲಸೌಕರ್ಯದ ವಿಚಾರದಲ್ಲಿ ಕಳಪೆ ಸ್ಥಾನದಲ್ಲಿದೆ. ಈ ನಗರಗಳಲ್ಲಿ ಪ್ರತಿ 10,000 ಜನರಿಗೆ ಕ್ರಮವಾಗಿ ಕೇವಲ 1.3 ಮತ್ತು 0.30 ಕೋವಿಡ್ ಆಸ್ಪತ್ರೆಗಳು ಲಭ್ಯವಿದೆ. ಆದರೆ ಗುರುಗ್ರಾಮದಲ್ಲಿ 10,000 ಜನರಿಗೆ 2.5 ಆಸ್ಪತ್ರೆಗಳು ಲಭ್ಯವಿದೆ. ಜನಸಂಖ್ಯಾ ಸಾಂದ್ರತೆ, ತೆರೆದ ಪ್ರದೇಶದ ಅನುಪಾತ ಮತ್ತು ಆಸ್ಪತ್ರೆಗಳ ಸಂಖ್ಯೆಯ ಆಧಾರದಲ್ಲಿ ಈ ನಗರವು ವಾಸಯೋಗ್ಯ ಎಂದು ವರದಿ ಹೇಳಿದೆ. ಇದಲ್ಲದೆ, ವರದಿಯ ಪ್ರಕಾರ, ಗುರುಗ್ರಾಮದ ಪ್ರಕಾರ ಗುರುಗ್ರಾಮ ಪೂರ್ವ ವಲಯದ ಪ್ರದೇಶಗಳಾದ 52-56, 58, 40-44, 30, 24-27 ಕ್ಷೇತ್ರಗಳು ಸೂಚ್ಯಂಕದ ಪ್ರಕಾರ ವಾಸಿಸಲು ಹೆಚ್ಚು ಸೂಕ್ತವೆಂದು ಕಂಡುಬಂದಿದೆ.

ಗುರುಗ್ರಾಮದಲ್ಲಿ ಕಟ್ಟಡ ಕುಸಿತ: ಏಳು ಜನರ ದುರ್ಮರಣಗುರುಗ್ರಾಮದಲ್ಲಿ ಕಟ್ಟಡ ಕುಸಿತ: ಏಳು ಜನರ ದುರ್ಮರಣ

ವಿಶ್ಲೇಷಣೆ

ವಿಶ್ಲೇಷಣೆ

ಈ ವಲಯದಲ್ಲಿ ಕೋವಿಡ್ -19 ಪ್ರಕರಣಗಳ ಸಾಂದ್ರತೆಯು ಉತ್ತರಕ್ಕೆ ಹೋಲಿಸಿದರೆ ಎರಡನೇ ಸ್ಥಾನದಲ್ಲಿದ್ದರೂ, ಪ್ರತಿ 10,000 ಜನರಿಗೆ ಗರಿಷ್ಠ ಸಂಖ್ಯೆಯ ಆಸ್ಪತ್ರೆಗಳು ಇದೆ. ಶೇ. 40 ಕ್ಕಿಂತ ಹೆಚ್ಚು ತೆರೆದ ಪ್ರದೇಶಗಳಿವೆ. ಕಡಿಮೆ ಜನಸಂಖ್ಯಾ ಸಾಂದ್ರತೆಯು ಇದೆ. ಕೋವಿಡ್ -19 ದೃಷ್ಟಿಕೋನದಿಂದ ನೋಡಿದಾಗ ಈ ಎಲ್ಲಾ ಅಂಶಗಳ ಆಧಾರದಲ್ಲಿ ಈ ನಗರವು ವಾಸಯೋಗ್ಯವಾಗಿದೆ ಎಂದು ಸೂಚ್ಯಂಕ ಹೇಳಿದೆ. ವಿಶ್ಲೇಷಣೆಯ ಪ್ರಕಾರ, ಬೆಂಗಳೂರಿನಲ್ಲಿ ಮಹಾದೇವಪುರ ಅತ್ಯಂತ ಸೂಕ್ತವಾದ ವಲಯವಾಗಿದೆ. ಇಲ್ಲಿನ ಬೆಲ್ಲಂದೂರು, ದೇವಸಂದ್ರ ಮತ್ತು ಮರಾಠಹಳ್ಳಿ ವಾಸಯೋಗ್ಯವಾಗಿದೆ.

ಗುರುಗ್ರಾಮದ ಕೋವಿಡ್‌ ಪ್ರಕರಣ, ಕೊರೊನಾ ಲಸಿಕೆ ಪ್ರಮಾಣ

ಗುರುಗ್ರಾಮದ ಕೋವಿಡ್‌ ಪ್ರಕರಣ, ಕೊರೊನಾ ಲಸಿಕೆ ಪ್ರಮಾಣ

ಗುರುಗ್ರಾಮದ ಹೆಲ್ತ್‌ ಬುಲೆಟಿನ್‌ ಪ್ರಕಾರ ಈವರೆಗೆ ಜಿಲ್ಲೆಯಲ್ಲಿ ಒಟ್ಟು 1588026 ಜನರ ಕೊರೊನಾ ಪರೀಕ್ಷೆ ನಡೆಸಲಾಗಿದ್ದು ಈ ಪೈಕಿ 1403666 ನೆಗೆಟಿವ್‌ ಆಗಿದೆ, 180537 ಪಾಸಿಟಿವ್‌ ಆಗಿದೆ, ಇನ್ನೂ 1820 ವರದಿ ಬರಬೇಕಾಗಿದೆ. ಈವರೆಗೂ ಸೋಂಕಿನಿಂದ 179347 ಮಂದಿ ಗುಣಮುಖರಾಗಿದ್ದು, 876 ಸೋಂಕಿತರು ಕೊರೊನಾಗೆ ಬಲಿಯಾಗಿದ್ದಾರೆ. ಪ್ರಸ್ತುತ 314 ಕೊರೊನಾ ಪ್ರಕರಣಗಳು ಸಕ್ರಿಯವಾಗಿದೆ.

ಇನ್ನು ಲಸಿಕೆ 2011 ಜನಗಣತಿ ಆಧಾರದಲ್ಲಿ ಗುರುಗ್ರಾಮದಲ್ಲಿ ಒಟ್ಟು 17,40,740 ಮಂದಿ ವಾಸಿಸುತ್ತಿದ್ದು, ಈ ಪೈಕಿ ಜೂನ್ 16 ರವರೆಗೆ ಶೇಕಡ 51.7 ರಷ್ಟು ಮಂದಿ ಕೊರೊನಾ ಲಸಿಕೆ ಪಡೆದಿದ್ದಾರೆ. ಈವರೆಗೆ ಒಟ್ಟು 895062 ಮಂದಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Gurugram is the most suitable city to live in during COVID-19 considering factors such as population density, open area ratio and hospital infrastructure, according to a report by Square Yards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X