• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಣರಾಜ್ಯೋತ್ಸವ ಟ್ಯಾಬ್ಲೋ: ಕರ್ನಾಟಕದ ಇಳಕಲ್ ಸೀರೆ, ಗುಳೇದಗುಡ್ಡದ ಖಣ ಆಯ್ಕೆ

|
Google Oneindia Kannada News

ಬಾಗಲಕೋಟೆ, ಜನವರಿ 19: ಇಳಕಲ್ ಸೀರೆ ಉಟ್ಕೊಂಡು, ಮೊಳಕಾಲ್ಗಂಟ ಎತ್ಕೊಂಡು ಏರಿ ಮೇಲೆ ಏರಿ‌ಬಂದಳು ನಾರಿ.. ಇದು ಹೆಣ್ಣಿನ ಸೌಂದರ್ಯ ಮತ್ತು ಇಳಕಲ್​ ಸೀರೆಯ ಚಂದವನ್ನು ವರ್ಣಿಸುವ ಹಾಡಾಗಿದೆ.

ನಾರಿಯರಿಗೆ ಇಳಕಲ್ ಸೀರೆ ಎಂದರೆ ಅದೇನೋ ಪ್ರೀತಿ, ವ್ಯಾಮೋಹ. ಹಲವಾರು ವರ್ಷಗಳಿಂದ ಈ ಸೀರೆಗೆ ಬೇಡಿಕೆಯಿದ್ದು, ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದ ವಿವಿಧ ಭಾಗಗಳಲ್ಲಿ ಸಹ ಜನ ಇಳಕಲ್ ಸೀರೆಯನ್ನು ಮಹಿಳೆಯರು ಇಷ್ಟಪಡುತ್ತಾರೆ. ವಿದೇಶದಲ್ಲೂ ಸಹ ಇದಕ್ಕೆ ಬೇಡಿಕೆ ಇದೆ.

ಗಣರಾಜ್ಯೋತ್ಸವ ಸ್ತಬ್ಧ ಚಿತ್ರದಲ್ಲಿ ಮಂಗಳೂರಿನ ಕಮಲಾದೇವಿ; ಪರಿಚಯಗಣರಾಜ್ಯೋತ್ಸವ ಸ್ತಬ್ಧ ಚಿತ್ರದಲ್ಲಿ ಮಂಗಳೂರಿನ ಕಮಲಾದೇವಿ; ಪರಿಚಯ

ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಇಳಕಲ್ ಸೀರೆಯಂತೆಯೇ, ಗುಳೇದಗುಡ್ಡ ಖಣ ಅಥವಾ ಕುಪ್ಪಸ ಸಹ ಹೆಚ್ಚು ಪ್ರಸಿದ್ಧಿ ಪಡೆದಿದೆ. ಇದೀಗ ಈ ಜೋಡಿಯ ಗೌರವ ಹೆಚ್ಚಾಗಿದ್ದು, ಇಳಕಲ್ ಸೀರೆ ಹಾಗೂ ಗುಳೇದಗುಡ್ಡ ಖಣ ಈ ಬಾರಿಯ ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಬಾಗಲಕೋಟೆ ಜಿಲ್ಲೆಯ ಇಳಕಲ್ ಸೀರೆ ಹಾಗೂ ಗುಳೇದಗುಡ್ಡ ಖಣ ಎರಡು ಆಯ್ಕೆಯಾಗಿದ್ದು, ಸ್ತಬ್ಧಚಿತ್ರಗಳ ವಸ್ತು ಪ್ರದರ್ಶನದಲ್ಲಿ ಮಿಂಚಲಿವೆ.

ಇದು ಕರ್ನಾಟಕಕ್ಕೆ ಮತ್ತು ಬಾಗಲಕೋಟೆ ಜಿಲ್ಲೆಯ ನೇಕಾರರಲ್ಲಿ ಸಂಭ್ರಮ ಮನೆಮಾಡಿದ್ದು, ""ನಾವು ಹೆಣೆಯುವ ಇಳಕಲ್ ಸೀರೆ, ಗುಳೇದಗುಡ್ಡ ಖಣ ಗಣರಾಜ್ಯೋತ್ಸವ ದಿನ ಸ್ತಬ್ದ ಚಿತ್ರ ಪ್ರದರ್ಶನದಲ್ಲಿ ಸ್ಥಾನ ಪಡೆದುಕೊಳ್ಳುತ್ತಿರುವ ಸುದ್ದಿ ಕೇಳಿ ಬಹಳ ಸಂತೋಷವಾಗಿದೆ,'' ಎಂದಿದ್ದಾರೆ.

ನೇಕಾರರಲ್ಲಿ ಸಂತಸ
ನಮ್ಮ ಪೂರ್ವಜರ ಕಾಲದಿಂದಲೂ ಇಳಕಲ್ ಸೀರೆ, ಗುಳೇದಗುಡ್ಡ ಖಣ ನೇಯುತ್ತಾ ಬಂದಿದ್ದೀವಿ. ಇಳಕಲ್ ಸೀರೆ ಗುಳೇದಗುಡ್ಡ ಖಣ ಇಂದಿಗೂ ತಮ್ಮ ಬೇಡಿಕೆ ಉಳಿಸಿಕೊಂಡಿವೆ. ಇವು ನಮ್ಮ ಸಂಪ್ರದಾಯದ ಪ್ರತೀಕ ಎಂದು ನೇಕಾರರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಗಣರಾಜ್ಯೋತ್ಸವ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಸೀರೆ ಮತ್ತು ಖಣವನ್ನು ಆಯ್ಕೆ ಮಾಡಿದ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.

ಈ ಮೊದಲು ಕರ್ನಾಟಕ, ಮಹಾರಾಷ್ಟ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್, ಮಧ್ಯ ಪ್ರದೇಶ ರಾಜ್ಯಗಳು ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ನಡೆಯುವ ಮದುವೆ ಸೇರಿದಂತೆ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗುಳೇದಗುಡ್ಡ ಖಣ ಮತ್ತು ಇಳಕಲ್ ಸೀರೆಗಳೇ ಮುಖ್ಯ ಪಾತ್ರವಹಿಸುತ್ತಿದ್ದವು, ಆದರೆ ಆಧುನಿಕ ಜೀವನಮಟ್ಟದ ಫ್ಯಾಷನ್ ಯುಗದಲ್ಲಿ ತೆರೆಗೆ ಸರಿದಿವೆ.

ಆದರೆ ಕಳೆದ ವರ್ಷ ಗುಳೇದಗುಡ್ಡ ಖಣಕ್ಕೆ ಹೊಸ ಟಚ್ ನೀಡಿ ಮಾರಾಟ ಮಾಡಲಾಗಿತ್ತು. ದೀಪಾವಳಿ ಹಬ್ಬದ ಅಂಗವಾಗಿ ಖಣದಿಂದ ತಯಾರಿಸಿದ ಬಟ್ಟೆಯಿಂದ ಆಕಾಶ ಬುಟ್ಟಿ, ಮಾಸ್ಕ್​, ಚೂಡಿದಾರ್​ ಸೇರಿದಂತೆ ವಿವಿಧ ಬಗೆಯ ವಿನ್ಯಾಸ ಮಾಡಿದ್ದು ಗಮನ ಸೆಳೆದಿತ್ತು. ಗುಳೇದಗುಡ್ಡ ಖಣಕ್ಕೆ ಐತಿಹಾಸಿಕ ಹಿನ್ನೆಲೆ ಹಾಗೂ ತನ್ನದೇ ಆದ ಛಾಪು ಇದೆ. ಇಳಕಲ್​ ಸೀರೆಗೆ ಗುಳೇದಗುಡ್ಡ ಖಣ ಖ್ಯಾತಿ ಪಡೆದುಕೊಂಡಿದೆ.

Bagalkote: Guledgudd khana, Ilkal Saree Part of Karnatakas Tableau at Republic Day Parade 2022

ನೇಕಾರರಿಗೆ ನೆರವು ಬೇಕಾಗಿದೆ
ಈಗಿನ ಆಧುನಿಕ ಯುಗದಲ್ಲಿ ಜನರು ಆನ್​ಲೈನ್​ನಲ್ಲಿ ಬಟ್ಟೆಗಳನ್ನು ಖರೀದಿಸುವುದರಿಂದ, ಇಳಕಲ್ ಸೀರೆ ಮತ್ತು ಗುಳೇದಗುಡ್ಡ ಖಣವನ್ನು ಸಹ ಆನ್ಲೈನ್​ ಮೂಲಕ ಮಾರಾಟ ಮಾಡಲು ಆರಂಭಿಸಲಾಗಿತ್ತು. ಕೊರೊನಾ ಕಾರಣದಿಂದ ಎಲ್ಲಾ ವ್ಯಾಪಾರಗಳು ನಷ್ಟ ಅನುಭವಿಸಿದಂತೆ, ಈ ಸೀರೆ ವ್ಯಾಪಾರದ ಮೇಲೆ ಸಹ ಪರಿಣಾಮ ಬೀರಿದ್ದು, ನೇಕಾರರು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಇತ್ತೀಚೆಗೆ ಆನ್‌ಲೈನ್‌ನಲ್ಲೂ ಮಾರಾಟ
ಸದ್ಯ ಗಣರಾಜ್ಯೋತ್ಸವದ ದಿನ 16 ಕರಕುಶಲ ವಸ್ತುಗಳ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಇಳಕಲ್ ಸೀರೆ ಗುಳೇದಗುಡ್ಡ ಖಣ ಸ್ಥಾನ ಪಡೆದಿದ್ದು, ಎಲ್ಲ ನೇಕಾರರಿಗೆ ಅಷ್ಟೇ ಅಲ್ಲದೆ ಬಾಗಲಕೋಟೆ ಜಿಲ್ಲೆಯ ಜನತೆಗೆ ಖುಷಿ ಜೊತೆಗೆ ಹೆಮ್ಮೆ ಮೂಡಿಸಿದೆ. ಇತ್ತೀಚೆಗೆ ಈ ಎರಡು ವಸ್ತುಗಳು ಆನ್‌ಲೈನ್ ಶಾಪಿಂಗ್‌ಗೂ ಎಂಟ್ರಿ ಕೊಟ್ಟಿವೆ.

ಇಳಕಲ್ ಸೀರೆ, ಗುಳೇದಗುಡ್ಡ ಖಣ ಎರಡನ್ನೂ ಆನ್‌ಲೈನ್‌ನಲ್ಲಿ ಮಾರಾಟ ಖರೀದಿ ನಡೆಯುತ್ತಿದೆ‌. ಇನ್ನು ಎರಡು ವರ್ಷದಿಂದ ಎಲ್ಲ ವ್ಯಾಪಾರ ವಹಿವಾಟಿನ ಮೇಲೆ ದುಷ್ಪರಿಣಾಮ ಬೀರಿದಂತೆ ಕೋವಿಡ್ ನೇಕಾರರ ಮೇಲೂ ಪರಿಣಾಮ ಬೀರಿದ್ದು, ಎರಡು ವರ್ಷ ನಷ್ಟ ಅನುಭವಿಸಿದ್ದಾರೆ. ಸರಿಯಾದ ಕಚ್ಚಾವಸ್ತು ಸಿಗದೆ, ಬಟ್ಟೆ ನೇಯಲು ಆಗದೆ, ಮಾರಾಟವಿಲ್ಲದೆ ಕಂಗಾಲಾಗಿದ್ದಾರೆ. ಈ ವೇಳೆ ಗುಳೇದಗುಡ್ಡ ಖಣದ ಬಟ್ಟೆಯಿಂದ ಮಾಸ್ಕ್ ಮಾಡಿ ನೇಕಾರರು ಮಾರಾಟ ಮಾಡಿದ್ದರು.

ಶತಮಾನಗಳಿಂದ ತನ್ನದೇ ಬೇಡಿಕೆ, ಗೌರವ ಕಾಪಾಡಿಕೊಂಡು ಬಂದ ಇಳಕಲ್ ಸೀರೆ, ಗುಳೇದಗುಡ್ಡ ಖಣಕ್ಕೆ ಗಣರಾಜ್ಯೋತ್ಸವ ಗೌರವದಿಂದ ಈಗ ಮತ್ತೊಂದು ಕಿರೀಟ ಸಿಕ್ಕಂತಾಗಿದೆ. ಇಳಕಲ್ ಸೀರೆ, ಗುಳೇದಗುಡ್ಡ ಖಣ ಇನ್ನೂ ಹೆಚ್ಚು ಪ್ರಸಿದ್ಧಿ ಪಡೆಯಲಿ, ಹೆಚ್ಚು ಹೆಚ್ಚು ವ್ಯಾಪಾರದಿಂದ ನೇಕಾರರ ಬದುಕಿಗೆ ದಾರಿದೀಪವಾಗಲಿ.

ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಟ್ಯಾಬ್ಲೋ ವಿಶೇಷತೆ ಏನು?
ಗಣರಾಜ್ಯೋತ್ಸವ ದಿನದಂದು ನವದೆಹಲಿಯ ರಾಜ್‌ಪಥ್‌ನಲ್ಲಿ ನಡೆಯುವ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ "ಸಾಂಪ್ರದಾಯಿಕ ಕರಕುಶಲ ಕಲೆಗಳ ತೊಟ್ಟಿಲು ಕರ್ನಾಟಕ' ಹೆಸರಿನ ಸ್ತಬ್ಧಚಿತ್ರ ಪ್ರದರ್ಶನವಾಗಲಿದೆ.

* ಸ್ತಬ್ಧಚಿತ್ರ ಮುಂಭಾಗದಲ್ಲಿ ಮೈಸೂರಿನ ದಸರಾ ಆನೆ ಮತ್ತು ಉಡುಪಿಯ ಯಕ್ಷಗಾನ ಗೊಂಬೆಗಳು ಇರಲಿವೆ.

* ಮಧ್ಯದಲ್ಲಿ ಬಿದರಿ ಕಲೆ, ನವಿಲಿನ ಮೂರ್ತಿ, ಕಿನ್ನಾಳ ಕಲೆಯ ಆಂಜನೇಯನ ಪ್ರತಿಮೆ ಇರಲಿದೆ.

* ಹಿಂಭಾಗದಲ್ಲಿ ಬಾಗಿನ ಹಿಡಿದ ಕಮಲಾದೇವಿ ಚಟ್ಟೋಪಾಧ್ಯಾಯ ಮೂರ್ತಿ ಹಾಗೂ ಕಿನ್ನಾಳ ಹುಡುಗಿ

* ಮೈಸೂರು ರೇಷ್ಮೆ, ಇಳಕಲ್ ಮತ್ತು ಮೊಳಕಾಲ್ಮೂರು ಸೀರೆಗಳ ಬಳಕೆ. ಬಿದಿರು, ತಾಳೆ, ಬೆತ್ತ ಬಳಸಿ ಸ್ತಬ್ಧಚಿತ್ರ ತಯಾರಿಸಲಾಗಿದೆ.

* ಕರ್ನಾಟಕದ ಸ್ತಬ್ಧಚಿತ್ರವು 45 ಅಡಿ ಉದ್ದ, 16 ಅಡಿ ಎತ್ತರ ಮತ್ತು 14 ಅಡಿ ಅಗಲ ಇರಲಿದೆ.

English summary
Bagalkote district's Guledgudd khana, Ilkal Saree part of Karnataka's tableau at Republic Day parade 2022 in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X