
ನೀತಿಗೆಟ್ಟ ಪ್ರಯತ್ನಗಳ ಮೂಲಕ ಗುಜರಾತ್ ನಲ್ಲಿ ಬಿಜೆಪಿಗೆ ಗೆಲುವು
ಗುಜರಾತ್ ಚುನಾವಣಾ ಫಲಿತಾಂಶವು ಹೊರಬಿದ್ದಿದ್ದು ಬಿಜೆಪಿ ಪಕ್ಷವು ಬಹುಮತವನ್ನು ಪಡೆದುಕೊಂಡಿದೆ. ಕಳೆದ ಬಾರಿ ಅಂದರೆ 2017ನೇ ಇಸವಿಯ ಸಂದರ್ಭದಲ್ಲಿ 82 ಸೀಟುಗಳನ್ನು ಕಾಂಗ್ರೆಸ್ ಪಡೆದಿತ್ತು. ಬಿಜೆಪಿ 100ರ ಒಳಗೆ ಕುಸಿದಿತ್ತು.
ಈ ಬಾರಿ ಕಾಂಗ್ರೆಸ್ ಪಕ್ಷವು ಬಹುಮತ ಪಡೆಯಲಿದೆ ಎಂಬ ಸುಳಿವು ಸಿಕ್ಕ ಕೂಡಲೇ ಬಿಜೆಪಿಗರು ಇನ್ನಿಲ್ಲದ ಕೀಳು ರಾಜಕೀಯವನ್ನು ಮಾಡಲು ಆರಂಭಿಸಿತು. ಮೊದಲಿಗೆ, ಗುಜರಾತ್ ಕಾಂಗ್ರೆಸ್ ನ ಪ್ರಮುಖ ನಾಯಕರಾಗಿದ್ದ ಅಲ್ಪೇಶ್ ಠಾಕೂರ್ ಅವರನ್ನು ತಮ್ಮ ಎಲ್ಲಾ ನೀತಿಗೆಟ್ಟ ಪ್ರಯತ್ನಗಳ ಮೂಲಕ ತಮ್ಮ ಪಕ್ಷಕ್ಕೆ ಸೇರಿಸಿಕೊಂಡ ಬಿಜೆಪಿಯು, ನಂತರ ಪಾಟೀದಾರ್ ಹೋರಾಟದ ರುವಾರಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾಗಿದ್ದ ಹಾರ್ದಿಕ ಪಟೇಲ್ ಅವರನ್ನೂ ಇಡಿ ಐಟಿ ದಾಳಿಗಳ ಮೂಲಕ ಬಿಜೆಪಿ ಸೇರ್ಪಡೆ ಮಾಡಿಕೊಂಡಿತು.
ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳು
ಇದಿಷ್ಟು ಸಾಲದು ಎಂಬಂತೆ ಚುನಾವಣಾ ಹೊತ್ತಿನಲ್ಲಿ ಕಾಂಗ್ರೆಸ್ ಗೆ ಸಿದ್ಧತೆಯ ಸಮಯ ಸಿಗಬಾರದ ರೀತಿಯಲ್ಲಿ ಈ ಬಾರಿ ಗುಜರಾತ್ ನಲ್ಲಿ ಗೆಲುವು ಕಾಣುತ್ತಿದ್ದ ಸುಮಾರು 60 ಕ್ಕೂ ಹೆಚ್ಚಿನ ಜನ ಕಾಂಗ್ರೆಸ್ ನಾಯಕರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಅಕ್ಷರಶಃ ನೀತಿಗೆಟ್ಟ ರಾಜಕೀಯವನ್ನು ಮಾಡಿತು.
ನಿಜಕ್ಕೂ ಹೇಳಬೇಕೆಂದರೆ ಈ ಬಾರಿ ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷ ಬಹುಮತವನ್ನು ಪಡೆದೇ ತೀರುತ್ತಿತ್ತು. ನಮ್ಮ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳುವಂತೆ ಚುನಾವಣೆಗಳನ್ನು ನೇರವಾಗಿ ಎದುರಿಸುವ ಧಮ್ಮು, ತಾಕತ್ತು ಇಲ್ಲದ ಬಿಜೆಪಿಗರು ಕಾಂಗ್ರೆಸಿಗರನ್ನೇ ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ನಾವು ಕಾಂಗ್ರೆಸ್ ಸೋಲಿಸಿದೆವು ಎಂದರೆ ಎಲ್ಲಿಂದ ನಗಬೇಕು ಹೇಳಿ?
ಅದಕ್ಕಿಂತಲೂ ಮುಖ್ಯವಾಗಿ ರಾಜಕೀಯ ಪಕ್ಷವೊಂದನ್ನು ತೊರೆದು ಸಿದ್ಧಾಂತ ಇಲ್ಲದೇ ಅವಕಾಶವಾದಿ ತನದಿಂದ ವರ್ತಿಸಿದರೆ ಪಕ್ಷಗಳು ದುರ್ಬಲಗೊಳುತ್ತದೆ. ಗುಜರಾತ್ ಚುನಾವಣೆಯಲ್ಲಿ ಈ ಬಾರಿ ಉಂಟಾದ ಸೋಲು ಇಂತಹ ಸಿದ್ದಾಂತ ರಹಿತ ವ್ಯಕ್ತಿಗಳ ದ್ರೋಹದ ಫಲವೇ ಆಗಿದೆ.
ದೇಶದಲ್ಲಿ ಮೋದಿಜಿ ಪರ ಅಲೆ ಮತ್ತೆ ಸಾಬೀತು- ನಳಿನ್ಕುಮಾರ್ ಕಟೀಲ್
ಹೀಗೆ ಹೇಳಿದರೆ ನೀವು ಮತ್ತು ಸಿದ್ದರಾಮಯ್ಯನವರು ಜೆಡಿಎಸ್ ಬಿಟ್ಟು ಬರಲಿಲ್ಲವೇ ಎಂದು ಬಹಳಷ್ಟು ಬಾಯಿ ಚಟಕ್ಕೆ ಮಾತನಾಡುತ್ತಾರೆ. ಆದರೆ ಜೆಡಿಎಸ್ ನಿಂದ ನಾವು ಹೊರಗೆ ಬರಲಿಲ್ಲ, ಎಲ್ಲಿ ಹಿಂದುಳಿದವರಿಗೆ ದೊಡ್ಡ ಹುದ್ದೆ ಕೊಡಬೇಕಾಗುತ್ತದೋ ಎಂದು ಅವರೇ ನಮ್ಮನ್ನು ಪಕ್ಷದಿಂದ ಹೊರ ಹಾಕಿದರು ಎಂಬುದನ್ನು ವಿಷಯ ತಿಳಿಯದೇ ಮಾತನಾಡುವವರು ಅರ್ಥ ಮಾಡಿಕೊಂಡರೆ ಒಳ್ಳೆಯದು.