ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್, ಸೆ. 17ಕ್ಕೆ ನಿರ್ಣಯ ಸಾಧ್ಯತೆ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 15: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ಪೆಟ್ರೋಲ್ ತರುವ ಬಗ್ಗೆ ಹಲವಾರು ಬಾರಿ ಚರ್ಚೆಗಳು ನಡೆದಿವೆ. ಈ ಹಿಂದೆ ಧರ್ಮೇಂದ್ರ ಪ್ರಧಾನ್, ನಿತಿನ್ ಗಡ್ಕರಿ, ಅರುಣ್ ಜೇಟ್ಲಿ ಅವರೂ ಸಹ ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ತರಬೇಕಿದೆ ಎಂದು ಹೇಳಿದ್ದರು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯಾವುದೇ ಕಾರಣಕ್ಕೂ ಪೆಟ್ರೋಲ್ ಹಾಗೂ ಡೀಸೆಲ್‌ನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದಿಲ್ಲ ಎಂದಿದ್ದಾರೆ. 45ನೇ ಜಿಎಸ್‌ಟಿ ಕೌನ್ಸಿಲ್ ಸಭೆ ಸೆ.17ರಂದು ನಡೆಯಲಿದ್ದು, ಈ ಬಗ್ಗೆ ಚರ್ಚೆಯಂತೂ ನಡೆಯಲಿದೆ ಎಂಬ ಮಾಹಿತಿಯಿದೆ. ಆದರೆ, ನಿರ್ಣಯದ ಬಗ್ಗೆ ಒಮ್ಮತ ಮೂಡುವುದು ಕಷ್ಟ.

ಜಿಎಸ್‌ಟಿ ಜಾರಿಗೆ ಬಂದ ಕಾಲದಿಂದ ಇಂಧನ ಉತ್ಪನ್ನಗಳನ್ನು ಹೊಸ ತೆರಿಗೆ ವ್ಯಾಪ್ತಿಗೆ ತರುವ ಬಗ್ಗೆ ಚರ್ಚೆ ನಡೆದಿದೆ. ಕೇಂದ್ರದ ತೆರಿಗೆಗಳಾದ ಅಬಕಾರಿ ಸುಂಕ, ರಾಜ್ಯಗಳ ಸೆಸ್, ವ್ಯಾಟ್ ವ್ಯಾಪ್ತಿ ಬಗ್ಗೆ ಜುಲೈ 1, 2017ರಂದು ವರದಿ ಸಲ್ಲಿಸಲಾಯಿತು. ಆದರೆ, ಪೆಟ್ರೋಲ್, ಡೀಸೆಲ್, ಕಚ್ಚಾ ತೈಲ, ನೈಸರ್ಗಿಕ ಅನಿಲ ಹಾಗೂ ವೈಮಾನಿಕ ಇಂಧನವನ್ನು ಇದರ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

ಪೆಟ್ರೋಲ್ ಹಾಗೂ ಡೀಸೆಲ್‌ಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಈ ಹಿಂದೆ ಬಹುತೇಕ ಎಲ್ಲಾ ರಾಜ್ಯಗಳು ವಿರೋಧಿಸಿದ್ದವು.

ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ತರುವುದರಿಂದ ಪೆಟ್ರೋಲ್ ಮೇಲಿನ ಬೆಲೆ ನಿಯಂತ್ರಣ ಸಾಧ್ಯವಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 38ರು ಆಗಲಿದೆ ಎಂಬ ಎಣಿಕೆಯಿದೆ. ಆದರೆ, ಪೆಟ್ರೋಲ್-ಡಿಸೇಲ್ ಮೇಲೆ ಸಂಪೂರ್ಣ ಜಿಎಸ್‌ಟಿ ಪ್ರಪಂಚದಲ್ಲಿ ಎಲ್ಲೂ ಜಾರಿಗೆ ಬಂದಿಲ್ಲ. ಭಾರತದಲ್ಲೂ ಜಿಎಸ್‌ಟಿ ಜೊತೆ ಆಯಾ ರಾಜ್ಯಗಳ ಸೆಸ್ ಹಾಗೂ ಇನ್ನಿತರ ಸೆಸ್, ತೆರಿಗೆಗಳ ಸಮ್ಮಿಶ್ರದೊಂದಿಗೆ ಜಾರಿಗೊಳಿಸಬೇಕಾಗುತ್ತದೆ.

ರಾಜ್ಯಕ್ಕೆ ಬರುವ ಆದಾಯ ಶೇ 50ರಷ್ಟು ಕುಸಿಯುತ್ತದೆ

ರಾಜ್ಯಕ್ಕೆ ಬರುವ ಆದಾಯ ಶೇ 50ರಷ್ಟು ಕುಸಿಯುತ್ತದೆ

ಒಂದು ವೇಳೆ ಪೆಟ್ರೋಲ್- ಡೀಸೆಲ್ ಅನ್ನು ಜಿಎಸ್‌ಟಿ ಕೆಳಗೆ ತಂದುಬಿಟ್ಟರೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಇದರಿಂದ ಬರುತ್ತಿರುವ ಆದಾಯ ಶೇ 50ರಷ್ಟು ಕುಸಿದು ಹೋಗುತ್ತದೆ. ಜಿಎಸ್‌ಟಿ ಅಡಿಯಲ್ಲಿ ಈಗಾಗಲೇ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಪ್ರವೇಶ ತೆರಿಗೆ ತೆಗೆದಿರುವುದರಿಂದ ಕರ್ನಾಟಕ ಸರಕಾರಕ್ಕೆ ಬರಬೇಕಾದ 200 ಕೋಟಿ ಪ್ಲಸ್ ಆದಾಯ ಕೈ ತಪ್ಪಿದೆ.

ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯ ವ್ಯಾಪ್ತಿಗೆ ತರಲು ಕೋರಿ ಸಲ್ಲಿಸಿರುವ ಅರ್ಜಿಯ ಕುರಿತು ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಆರು ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

''ಬೆಲೆ ಏಕರೂಪವಾಗಿರಬೇಕು. ಆಗಾಗ್ಗೆ ಬೆಲೆ ಏರಿಕೆ ಸಾಮಾನ್ಯ ಜನರ ಜೀವನವನ್ನು ಶೋಚನೀಯವಾಗಿಸುತ್ತಿದೆ. ಚುನಾವಣಾ ಅವಧಿಯಲ್ಲಿ ಇಂಧನ ಬೆಲೆಗಳನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಇಂಧನ ಬೆಲೆಗಳ ಹೆಚ್ಚಳವು ಅಗತ್ಯ ವಸ್ತುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ,'' ಎಂದು ಕೂಡಾ ಅರ್ಜಿದಾರರು ಹೇಳಿದ್ದರು.

ಹೆಚ್ಚು ಬಳಕೆ ಹೆಚ್ಚು ಆದಾಯ

ಹೆಚ್ಚು ಬಳಕೆ ಹೆಚ್ಚು ಆದಾಯ

ಗುಜರಾತ್ ರಾಜ್ಯಕ್ಕೆ ಹೋಲಿಸಿದರೆ ಹೆಚ್ಚು ಜನಸಂಖ್ಯೆಯುಳ್ಳ ಉತ್ತರಪ್ರದೇಶ ಹಾಗೂ ಬಿಹಾರ ಮುಂತಾದ ರಾಜ್ಯಗಳಲ್ಲಿ ಈ ಉತ್ಪನ್ನಗಳ ಬಳಕೆ ಸಹಜವಾಗಿ ಹೆಚ್ಚಾಗಿದೆ ಹಾಗಾಗಿ ಹೆಚ್ಚು ಆದಾಯ ದೊರೆಯಲಿದೆ.

20 ಸಾವಿರ ಕೋಟಿ ರೂ.ಗಳ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಇಂಧನವನ್ನು ಜಿಎಸ್ಟಿ ವ್ಯಾಪ್ತಿಗೆ ತಂದರೆ ಕೇಂದ್ರ ಸರ್ಕಾರ 20 ಸಾವಿರ ಕೋಟಿ ರೂ.ಗಳ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ನೀಡಬೇಕಾಗುತ್ತದೆ. ಅಲ್ಲದೇ, ರಾಜ್ಯಗಳು ತುರ್ತು ಪರಿಸ್ಥಿತಿಯಲ್ಲಿ ಇಂಧನದ ಮೇಲೆ ತೆರಿಗೆ ಹೆಚ್ಚಿಸುವ ಆಯ್ಕೆಯನ್ನು ಮುಕ್ತವಾಗಿಟ್ಟುಕೊಳ್ಳಲು ಬಯಸಿವೆ. ಕೇಂದ್ರ ಸರ್ಕಾರ ಪ್ರಸಕ್ತ ಪೆಟ್ರೋಲ್ ಮೇಲೆ ಪ್ರತಿ ಲೀಟರ್ ಗೆ 32.80ರೂ. ಹಾಗೂ ಡೀಸೆಲ್ ಮೇಲೆ 31.80 ರೂ. ತೆರಿಗೆ ವಿಧಿಸುತ್ತಿದೆ. ರಾಜ್ಯಗಳು ವ್ಯಾಟ್ ಹೇರುತ್ತಿವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಎರಡೂ ಇಂಧನಗಳ ಮೇಲಿನ ಮಾರಾಟ ತೆರಿಗೆ ಅತಿ ಕಡಿಮೆ ಶೇ.6ರಷ್ಟಿದೆ. ಪೆಟ್ರೋಲ್ ಮೇಲಿನ ವ್ಯಾಟ್ ಶೇ. 39.12. ಒಂದು ವೇಳೆ ಜಿಎಸ್ಟಿ ಅಡಿಗೆ ಬಂದರೆ ಕೇಂದ್ರ ಹಾಗೂ ರಾಜ್ಯ 50: 50 ಅನುಪಾತದಲ್ಲಿ ತೆರಿಗೆ ಆದಾಯ ಹಂಚಿಕೊಳ್ಳಬೇಕಾಗುತ್ತದೆ. ಈ ಪದ್ಧತಿಗೆ ರಾಜ್ಯಗಳು ಒಪ್ಪಿದರೆ ಆದಾಯ ಖೋತಾ ಆಗಲಿದೆ.

ಶೇ 28ರಷ್ಟು ಜಿಎಸ್ಟಿ ವಿಧಿಸಿದರೆ ಹೇಗೆ?

ಶೇ 28ರಷ್ಟು ಜಿಎಸ್ಟಿ ವಿಧಿಸಿದರೆ ಹೇಗೆ?

ಒಂದು ವೇಳೆ ಪೆಟ್ರೋಲ್-ಡಿಸೇಲ್ ಜಿಎಸ್ಟಿ ಅಡಿಯಲ್ಲಿ ಬಂದ್ರೆ ಈಗ ಸರಾಸರಿ 100 ರು ನಷ್ಟಿರುವ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಸುಮಾರು 65-10 ರೂಪಾಯಿಯಷ್ಟು ಇಳಿಕೆಯಾಗುವ ಸಾಧ್ಯತೆಯಿದೆ

ಜಿಎಸ್ಟಿ ವ್ಯಾಪಿಗೆ ಬಂದರೆ ಶೇ 5 ರಿಂದ ಶೇ 28ರಷ್ಟು ವಿಧಿಸಬಹುದಾಗಿದೆ. ಹೀಗಾಗಿ, ಶೇ 28ರಷ್ಟು ಜಿಎಸ್ಟಿ ಹೇರಿಕೆಯಾದರೆ ಜತೆಗೆ ಆಯಾ ರಾಜ್ಯಗಳ ಮಾರಾಟ ತೆರಿಗೆ, ಸೆಸ್ ಸೇರಿಸಿದರೆ ತೈಲ ಬೆಲೆ ಈಗಿನಷ್ಟೇ ಆಗಲಿದೆ. ಉದಾಹರಣೆಗೆ ಸದ್ಯ ದೆಹಲಿಯಲ್ಲಿ ಪೆಟ್ರೋಲ್ ಮೇಲೆ ವ್ಯಾಟ್ ಶೇ 27ರಷ್ಟಿದ್ದರೆ, ಡೀಸೆಲ್ ಮೇಲೆ 17.2ರು ಪ್ರತಿ ಲೀಟರ್ ಗೆ ಪಡೆಯಲಾಗುತ್ತಿದೆ. ಮುಂಬೈ, ಥಾಣೆ ಹಾಗೂ ನವೀ ಮುಂಬೈನಲ್ಲಿ ಈ ಪ್ರಮಾಣ ಶೇ 39.12ರಷ್ಟಿದೆ, ತೆಲಂಗಾಣದಲ್ಲಿ ಶೇ26ರಷ್ಟಿದೆ.

ಶೇ 97.54ರಷ್ಟು ತೆರಿಗೆ ಹಾಕಲಾಗುತ್ತಿದೆ

ಶೇ 97.54ರಷ್ಟು ತೆರಿಗೆ ಹಾಕಲಾಗುತ್ತಿದೆ

ಅಬಕಾರಿ ಸುಂಕದ ಲೆಕ್ಕಾಚಾರ: ಪ್ರತಿ ಲೀಟರ್ ಪೆಟ್ರೋಲ್ ಮೇಲೆ 19.48ರು ನಷ್ಟಿದ್ದರೆ, ಡೀಸೆಲ್ ಮೇಲೆ 15.33ರು ಪ್ರತಿ ಲೀಟರ್ ಸುಂಕ ತೆರಬೇಕಾಗಿದೆ. ಅಂಡಮಾನ್ ಹಾಗೂ ನಿಕೋಬಾರ್ ದ್ವೀಪದಲ್ಲಿ ಶೇ6ರಷ್ಟು ಮಾರಾಟ ತೆರಿಗೆ ಹಾಕಲಾಗುತ್ತಿದೆ. ಅಲ್ಲದೆ, ಇಂಧನ ಮೇಲಿನ ಅಬಕಾರಿ ಸುಂಕ ಇಳಿಸುವ ಗೋಜಿಗೆ ಕೇಂದ್ರ ಸರ್ಕಾರ ಹೋಗುತ್ತಿಲ್ಲ. ಅಬಕಾರಿ, ಇಂಧನ ಮುಂತಾದ ಉತ್ಪನ್ನಗಳ ಮೇಲೆ ಸದ್ಯ ಜಿಎಸ್ಟಿ ಜಾರಿಯಾಗಿಲ್ಲ. ಜಿಎಸ್ಟಿ ಜಾರಿಗೆ ಬಂದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಮಾನವಾಗಿ ತೆರಿಗೆ ವಿಧಿಸಲಿದೆ. ಸದ್ಯ ವಾಹನ ಸವಾರರು ಪೆಟ್ರೋಲ್ ಗೆ ಶೇಕಡಾ 55.5 ಹಾಗೂ ಡಿಸೇಲ್ ಗೆ 47.3ರಷ್ಟು ತೆರಿಗೆ ನೀಡುತ್ತಾರೆ. ಇದ್ರಲ್ಲಿ ಮುಖ್ಯವಾಗಿ ಕೇಂದ್ರ ಸರ್ಕಾರದ ತೆರಿಗೆ ಸುಂಕ ಹಾಗೂ ರಾಜ್ಯ ಸರ್ಕಾರಗಳ ವ್ಯಾಟ್, ಸೆಸ್ ಕೂಡಾ ಸೇರಿವೆ. ಪೆಟ್ರೋಲ್ ಗೆ ಶೇ 97.54ರಷ್ಟು ತೆರಿಗೆ ಹಾಕಲಾಗುತ್ತಿದೆ.

ಶೇ 5, 12, 28 ಹೀಗೆ ನಾಲ್ಕು ವರ್ಗೀಕರಣವಿತ್ತು

ಶೇ 5, 12, 28 ಹೀಗೆ ನಾಲ್ಕು ವರ್ಗೀಕರಣವಿತ್ತು

ಶೇ 5, 12, 28 ಹೀಗೆ ನಾಲ್ಕು ವರ್ಗೀಕರಣವಿದೆ ಶೇ 5, 12, 28 ಹೀಗೆ ನಾಲ್ಕು ವರ್ಗೀಕರಣವಿದೆ. ಶೇ 12ಕ್ಕಿಂತ ಕಡಿಮೆ ತೆರಿಗೆ ಅಡಿಯಲ್ಲಿ ಪೆಟ್ರೋಲ್-ಡೀಸೆಲ್ ತರಲು ಸಾಧ್ಯವಿಲ್ಲ. ಹಾಗೆ ಶೇ 12ರ ಲೆಕ್ಕ ಹಾಕಿದರೆ ದೆಹಲಿಯಲ್ಲಿನ ಪೆಟ್ರೋಲ್ ಬೆಲೆ ರು.38.1 ಆಗುತ್ತದೆ. ಅಂದರೆ ಈಗಿನ ದರಕ್ಕಿಂತ ರು.32 ಕಡಿಮೆ. ಶೇ 18ರಷ್ಟಾದರೆ ರು.40.05, ಶೇ 28ರಷ್ಟು ವಿಧಿಸಿದರೆ ರು.43.44 ಆಗುತ್ತದೆ. ಇನ್ನು ಎಸ್ ಯುವಿ ವಾಹನಗಳಿಗೆ ವಿಧಿಸುವ ಸೆಸ್ ಸೇರಿಕೊಂದು ಶೇ 28ರಷ್ಟು ಜಿಎಸ್ ಟಿ ಹಾಕಿದರೂ ರು.50.91 ಆಗುತ್ತದೆ. ಆಗಲೂ ಈಗಿರುವ ಪೆಟ್ರೋಲ್ ದರಕ್ಕಿಂತ 20 ರುಪಾಯಿ ಕಡಿಮೆ ಆಗುತ್ತದೆ. ಇನ್ನು ಡೀಸೆಲ್ ವಿಚಾರಕ್ಕೆ ಬಂದರೆ, ಶೇ 12ರಷ್ಟು ಜಿಎಸ್ ಟಿ ಹಾಕಿದರೆ 36.65 ರು ಆಗುತ್ತದೆ. ಶೇ 18ರ ಜಿಎಸ್ ಟಿಗೆ 38.61 ರು , ಶೇ 28ಕ್ಕೆ 48.88 ರು ಆಗುತ್ತದೆ. ಒಂದು ವೇಳೆ ಎಸ್ ಯುವಿ ಸೆಸ್ ಹಾಕಿದರೂ ದರ 49.08 ರು ಆಗುತ್ತದೆ. ಅಲ್ಲಿಗೂ ಸದ್ಯದ ದರಕ್ಕಿಂತ 9.64 ರು ಕಡಿಮೆಯಾಗುತ್ತದೆ.

ಆದರೆ, ಕಾಲ ಕಾಲಕ್ಕೆ ಜಿಎಸ್ಟಿ ವರ್ಗೀಕರಣದಲ್ಲಿ ಬದಲಾವಣೆ ಮಾಡಲಾಗಿದೆ. ಶೇ 18ರ ಜಿಎಸ್ಟಿ ವರ್ಗವೂ ಇದೆ. ಹೀಗಾಗಿ, ಯಾವ ವರ್ಗಕ್ಕೆ ಯಾವ ಉತ್ಪನ್ನ ಸೇರಿಸಬೇಕು ಎಂಬುದನ್ನು ಚರ್ಚೆ ಬಳಿಕ ನಿರ್ಧರಿಸಲಾಗುತ್ತದೆ.

English summary
The GST Council might on Friday consider taxing petrol, diesel and other petroleum products under the single national GST regime, a move that may require huge compromises by both central and state governments on the revenues they collect from taxing these products.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X