ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಸ್‌ಮಸ್ ಸ್ಟಾರ್‌ ಬಗ್ಗೆ ನಿಮಗೆ ಗೊತ್ತೆ..? ಬಾಹ್ಯಾಕಾಶದಲ್ಲಿ ಸಹಸ್ರಮಾನದ ಅಚ್ಚರಿ..!

|
Google Oneindia Kannada News

ಕ್ರಿಸ್‌ಮಸ್ ಹಬ್ಬಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಜೀಸಸ್ ಹುಟ್ಟಿದ ದಿನವನ್ನು ಭರ್ಜರಿಯಾಗಿ ಸಂಭ್ರಮಿಸಲು ಜಗತ್ತು ಸಜ್ಜಾಗಿದೆ. ಆದರೆ 2020ರ ಕ್ರಿಸ್‌ಮಸ್‌ ಒಂದು ವಿಶೇಷತೆ ಹೊಂದಿದೆ. ಈ ಬಾರಿ ಕ್ರಿಸ್‌ಮಸ್‌ಗೆ ಒಂದು ವಿಶೇಷ ಘಟನೆ ಕಣ್ತುಂಬಿಕೊಳ್ಳಬಹುದು. ಅದೊಂದು ಬಾಹ್ಯಾಕಾಶದ ಅಚ್ಚರಿ ಕೂಡ ಹೌದು. ಸುಮಾರು 400 ವರ್ಷಗಳಿಗೆ ಒಮ್ಮೆ ಘಟಿಸುವ ಘಟನೆ ಅದು.

ಸೌರಮಂಡಲದಲ್ಲಿ 2 ಬೃಹತ್ ಗ್ರಹಗಳು ಒಂದಾಗಲಿವೆ. ಗುರುಗ್ರಹ ಹಾಗೂ ಶನಿಗ್ರಹಗಳ ಮಿಲನಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಅಂದಹಾಗೆ ಸೂರ್ಯನಿಂದ 150 ಕೋಟಿ ಕಿಲೋಮೀಟರ್ ದೂರ ಇರುವ ಶನಿಗ್ರಹ ಮತ್ತು ಸೂರ್ಯನಿಂದ 76 ಕೋಟಿ ಕಿಲೋಮೀಟರ್ ಅಂತರದಲ್ಲಿರುವ ಗುರು ಒಂದೇ ಜಾಗದಲ್ಲಿ ಸಂಧಿಸಲಿವೆ. ಡಿಸೆಂಬರ್ 21ರ ಸೋಮವಾರ ಅಚ್ಚರಿ ಸಂಭವಿಸುವ ನಿರೀಕ್ಷೆ ಇದೆ.

unfogettable 2020: ಸಾವಿರ ತಲೆಮಾರು ತಿಂದರೂ ಕರಗದಷ್ಟು ಸಂಪತ್ತು ಪತ್ತೆ!unfogettable 2020: ಸಾವಿರ ತಲೆಮಾರು ತಿಂದರೂ ಕರಗದಷ್ಟು ಸಂಪತ್ತು ಪತ್ತೆ!

4 ಶತಮಾನಗಳ ಬಳಿಕ ಸಂಭವಿಸುತ್ತಿರುವ ಈ ಘಟನೆ ಕಣ್ತುಂಬಿಕೊಳ್ಳಲು ಇಡೀ ಜಗತ್ತು ಕಾತುರದಿಂದ ಕಾಯುತ್ತಿದೆ. ಈ ಮೂಲಕ 2020ರ ಕ್ರಿಸ್‌ಮಸ್‌ಗೆ ಬಿಗ್ ಗಿಫ್ಟ್ ಸಿಗುತ್ತಿದೆ.

ಗೆಲಿಲಿಯೋ ಕಾಲದಲ್ಲಿ ನಡೆದಿತ್ತು ಅಚ್ಚರಿ

ಗೆಲಿಲಿಯೋ ಕಾಲದಲ್ಲಿ ನಡೆದಿತ್ತು ಅಚ್ಚರಿ

ಗುರು ಮತ್ತು ಶನಿ ಗ್ರಹಗಳು ಈ ರೀತಿ ಕೊನೆಯಬಾರಿಗೆ ಒಂದಾಗಿದ್ದು ಮಹಾನ್ ವಿಜ್ಞಾನಿ ಗೆಲಿಲಿಯೋ ಗೆಲಿಲಿ ಕಾಲಘಟ್ಟದಲ್ಲಿ. 1623ರಲ್ಲಿ ಈ ಅಚ್ಚರಿಯ ಘಟನೆ ಬಾಹ್ಯಾಕಾಶದಲ್ಲಿ ನಡೆದಿತ್ತು. 1623ರ ಜುಲೈ ತಿಂಗಳಲ್ಲಿ ಈ ರೀತಿ ಗುರು ಹಾಗೂ ಶನಿ ಗ್ರಹಗಳು ಒಂದೇ ಪಥಕ್ಕೆ ಬಂದ ಬಗ್ಗೆ ದಾಖಲೆಗಳಿವೆ. ಇದಾದ ನಂತರ 2020ರಲ್ಲಿ ಗುರು ಹಾಗೂ ಶನಿ ಗ್ರಹಗಳು ಒಂದಾಗುತ್ತಿವೆ. ಎರಡೂ ಗ್ರಹಗಳು ಸಮೀಪಕ್ಕೆ ಬಂದಾಗ ಗ್ರಹಗಳ ನಡುವೆ 45 ಕೋಟಿ ಕಿಲೋಮೀಟರ್ ಅಂತರ ಇರಲಿದೆ.

ಗುರು ಗ್ರಹವೇ ಒಂದು ಅಚ್ಚರಿ..!

ಗುರು ಗ್ರಹವೇ ಒಂದು ಅಚ್ಚರಿ..!

ಹೌದು, ಇಡೀ ಸೌಮಂಡದಲ್ಲಿ ಗುರು ಗ್ರಹ ಒಂದು ಅಚ್ಚರಿ. ಏಕೆಂದರೆ ಇತರ ಎಲ್ಲಾ ಗ್ರಹಗಳಿಗಿಂತ ಗುರು ಅತ್ಯಂತ ದೊಡ್ಡ ಗ್ರಹ. ಕೆಲ ವಿಚಾರಗಳಲ್ಲಿ ಸೂರ್ಯನಿಗೂ ಸೆಡ್ಡು ಹೊಡೆಯುವ ತಾಕತ್ತು ಗುರು ಗ್ರಹಕ್ಕಿದೆ. ಅಷ್ಟೇ ಅಲ್ಲ, ಗುರು ಗ್ರಹದೊಳಗೆ ನಡೆಯುತ್ತಿರುವ ಆಂತರಿಕ ಕ್ರಿಯೆಗಳು ನಕ್ಷತ್ರಗಳ ಕ್ರಿಯೆಗೆ ಹೋಲುತ್ತದೆ ಎಂಬ ಅನುಮಾನ ಕೂಡ ಇದೆ. ಈ ಅನುಮಾನಗಳಿಗೆ ವಿಜ್ಞಾನಿಗಳು ಬಲವಾದ ಕಾರಣವನ್ನೂ ನೀಡುತ್ತಾರೆ. ಗುರು ಗ್ರಹದಲ್ಲಿ ಅನಿಲಗಳ ಸಂಯೋಜನೆ ಇದೆ, ನಕ್ಷತ್ರದಲ್ಲೂ ಇದೇ ರೀತಿಯ ವಸ್ತುಗಳು ಅಡಗಿರುತ್ತವೆ. ಹೀಗಾಗಿ ಮುಂದೊಂದು ದಿನ ಸೂರ್ಯನ ನಂತರ ಗುರು ಗ್ರಹವೇ ನಮಗೆಲ್ಲಾ ಸೂರ್ಯನ ಸ್ಥಾನ ಪಡೆದರೂ ಅಚ್ಚರಿ ಪಡಬೇಕಿಲ್ಲ.

ಚಂದ್ರನ ಅಂಗಳದಿಂದ ಶಿಲೆ, ಮಣ್ಣು ಹೊತ್ತು ತಂದ ಚೀನಾಚಂದ್ರನ ಅಂಗಳದಿಂದ ಶಿಲೆ, ಮಣ್ಣು ಹೊತ್ತು ತಂದ ಚೀನಾ

 ಇನ್ನೊಂದು ಗುರುಗ್ರಹ ಪತ್ತೆಯಾಗಿತ್ತು..!

ಇನ್ನೊಂದು ಗುರುಗ್ರಹ ಪತ್ತೆಯಾಗಿತ್ತು..!

ನಮ್ಮದು ಸೌರಮಂಡಲ, ಸೂರ್ಯನ ಕುಟುಂಬದಲ್ಲಿ ವಾಸಿಸುತ್ತಿರುವ ಗುರುಗ್ರಹಕ್ಕೆ ಸೂರ್ಯನಷ್ಟೇ ಮಹತ್ವ ಇದೆ. ಗುರು ಗ್ರಹದಷ್ಟು ದೈತ್ಯವಾದ ಗ್ರಹ ಸೌರಮಂಡಲ ಕಂಡಿಲ್ಲ. ಸೂರ್ಯನಿಗೂ ಸೆಡ್ಡು ಹೊಡೆಯುವಷ್ಟು ಪ್ರಬಲ ಗ್ರಹವೆಂದರೆ ಅದು ಗುರು ಮಾತ್ರ. ಆದರೆ ಒಬ್ಬನೇ ಗುರು ಈ ವಿಶ್ವದಲ್ಲಿಲ್ಲ. ಇಂತಹ ಹಲವು ಗುರು ಗ್ರಹಗಳು ವಿಶ್ವದಲ್ಲಿ ಹರಡಿವೆ ಎಂಬುದಕ್ಕೆ ಸಾಕ್ಷಿ ಸಿಕ್ಕಿದೆ. ನಮಗೆ ಸಮೀಪದ ಗ್ಯಾಲಕ್ಸಿಯಲ್ಲೇ ವಿಜ್ಞಾನಿಗಳು ಗುರು ಗ್ರಹವನ್ನೇ ಹೋಲುವ ಮತ್ತೊಂದು ಗ್ರಹವನ್ನು ಪತ್ತೆ ಮಾಡಿದ್ದಾರೆ. ಈ ಗ್ರಹ ಶ್ವೇತ ಕುಬ್ಜ ಎಂದರೆ, ಬಿಳಿ ನಕ್ಷದ ಸುತ್ತ ಸುತ್ತುತ್ತಿದೆ. ಇದೇ ಶ್ವೇತ ಕುಬ್ಜಗಳು ಮುಂದೆ ಬ್ಲ್ಯಾಕ್ ಹೋಲ್ ಅಥವಾ ಕಪ್ಪುಕುಳಿ ಆಗುತ್ತವೆ.

ಜೀವಿಗಳಿಗೆ ಜಾಗ ನೀಡಿದೆಯಾ ಶನಿಗ್ರಹ..?

ಜೀವಿಗಳಿಗೆ ಜಾಗ ನೀಡಿದೆಯಾ ಶನಿಗ್ರಹ..?

ಶನಿಗ್ರಹದಲ್ಲಿ ಜೀವಿಗಳು ವಾಸವಾಗಿವೆಯಾ ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಏಕೆಂದರೆ ಶನಿಗ್ರಹದ ವಾತಾವರಣ ಜೀವಿಗಳ ಉಗಮಕ್ಕೆ ಕಾರಣವಾಗುವ ಅನಿಲ ಅಥವಾ ಗ್ಯಾಸ್‌ನ್ನು ಹೊಂದಿದೆ. ಅದರಲ್ಲೂ ಶನಿಗೆ ಅಚ್ಚರಿಯ ಉಪಗ್ರಹವಾಗಿರುವ 'ಟೈಟಾನ್‌'ನಲ್ಲಿ ಭಾರಿ ಪ್ರಮಾಣದ ನೀರು ಹಾಗೂ ಪೆಟ್ರೋಲ್ ಇರುವುದನ್ನ ವಿಜ್ಞಾನಿಗಳು ಕನ್ಫರ್ಮ್ ಮಾಡಿದ್ದಾರೆ. ಭೂಮಿ ಮೇಲೆ ಇರುವಂತೆ ಇಲ್ಲಿ ಕೆರೆ, ನದಿಗಳು ಇವೆಯಂತೆ. ಅಲ್ಲದೆ ಹೈಡ್ರೋಕಾರ್ಬನ್ಸ್ (ಪೆಟ್ರೋಲ್‌ನ ಮೂಲ ರೂಪ) ಕೂಡ ಭಾರಿ ಪ್ರಮಾಣದಲ್ಲಿ ಲಭ್ಯವಿವೆ. ಹೀಗಾಗಿಯೇ ಶನಿಗ್ರಹಕ್ಕೆ ವಿಶೇಷ ಸ್ಥಾನಮಾನವನ್ನ ಬಾಹ್ಯಾಕಾಶ ವಿಜ್ಞಾನಿಗಳು ನೀಡುತ್ತಾರೆ.

ಬ್ರಹ್ಮಾಂಡದ ಹುಟ್ಟಿನ ರಹಸ್ಯ ಬಯಲು, 'ಮ್ಯಾಗ್ನೆಟಿಕ್ ಫೀಲ್ಡ್' ಮೂಲ ಪತ್ತೆ..!ಬ್ರಹ್ಮಾಂಡದ ಹುಟ್ಟಿನ ರಹಸ್ಯ ಬಯಲು, 'ಮ್ಯಾಗ್ನೆಟಿಕ್ ಫೀಲ್ಡ್' ಮೂಲ ಪತ್ತೆ..!

English summary
unforgettable 2020: Planet Jupiter and Planet Saturn will merge in the night sky after 4 centuries. Last time 1623 Jupiter and Saturn was merged in the sky.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X