ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಗೂಗಲ್ ಕ್ರೋಮ್ ಅಪ್‌ಡೇಟ್ ಮಾಡಿ; ಸರಕಾರದಿಂದ ಸೆಕ್ಯೂರಿಟಿ ವಾರ್ನಿಂಗ್

|
Google Oneindia Kannada News

ನವದೆಹಲಿ, ಮೇ 3: ಗೂಗಲ್ ಕ್ರೋಮ್ ವಿಶ್ವದಲ್ಲಿ ಅತಿಹೆಚ್ಚು ಬಳಕೆಯಲ್ಲಿರುವ ಬ್ರೌಸರ್‌ಗಳಲ್ಲಿ ಒಂದು. ಹೀಗಾಗಿ, ಹ್ಯಾಕರ್ಸ್‌ಗೆ ಇದು ದೊಡ್ಡ ಟಾರ್ಗೆಟ್. ಬಹಳ ಮಂದಿ ವೈಯಕ್ತಿಕವಾಗಿ ಬಳಸುವ ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳಲ್ಲಿ ಗೂಗಲ್ ಕ್ರೋಮ್ ಬ್ರೌಸರ್‌ನಲ್ಲಿ ಬಹಳಷ್ಟು ಪಾಸ್‌ವರ್ಡ್‌ಗಳನ್ನ ಆಟೊಸೇವ್ ಮಾಡಿರುತ್ತಾರೆ. ಈ ಪಾಸ್‌ವರ್ಡ್‌ಗಳನ್ನ ದೋಚಲು ಹ್ಯಾಕರ್ಸ್ ಅಥವಾ ವಂಚಕರು ಬಹಳ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ವಿವಿಧ ರೀತಿಯಲ್ಲಿ ಬಳಕೆದಾರರ ಮಾಹಿತಿ ಕದಿಯಲು ಪ್ರಯತ್ನಿಸುತ್ತಿರುತ್ತಾರೆ. ಈಗ ಬಂದಿರುವ ಮಾಹಿತಿ ಪ್ರಕಾರ ಗೂಗಲ್ ಕ್ರೋಮ್‌ನ ಹಿಂದಿನ ಕೆಲ ಆವೃತ್ತಿಗಳಲ್ಲಿ ಭದ್ರತಾ ಲೋಪ ಕಂಡುಬಂದಿದೆ.

ಭಾರತದ ಸೈಬರ್ ಕ್ರೈಮ್ ಕಣ್ಗಾವಲು ಸಂಸ್ಥೆಯಾದ ಸಿಇಆರ್‌ಟಿ-ಇನ್ (CERT-In) ಕ್ರೋಮ್ ಭದ್ರತಾ ದೋಷದ ಬಗ್ಗೆ ಎಚ್ಚರಿಕೆ ಹೊರಡಿಸಿದೆ. ಗೂಗಲ್ ಕ್ರೋಮ್‌ನ ಇತ್ತೀಚಿನ ವರ್ಷನ್ ಆಗಿರುವ 101.0.4951.41 ಗಿಂತ ಮುಂಚಿನ ಕ್ರೋಮ್ ಆವೃತ್ತಿಗಳು ವಂಚಕರ ದಾಳಿಗೆ ಈಡಾಗುವಷ್ಟು ಭದ್ರತಾ ದೋಷ ಹೊಂದಿವೆ ಎಂಬುದು CERT-In ಕಂಪನಿಯ ಅಭಿಪ್ರಾಯ.

ಕಾಲ್ ರೆಕಾರ್ಡರ್ ಆ್ಯಪ್ಸ್‌ಗೆ ನಿಷೇಧ, ಗೂಗಲ್‌ನಿಂದ ಏಕೀ ವಿರೋಧ? ಕಾಲ್ ರೆಕಾರ್ಡರ್ ಆ್ಯಪ್ಸ್‌ಗೆ ನಿಷೇಧ, ಗೂಗಲ್‌ನಿಂದ ಏಕೀ ವಿರೋಧ?

ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳಲ್ಲಿ ಬಳಸುವ ಕ್ರೋಮ್‌ನಲ್ಲಿ ಭದ್ರತಾ ಅಪಾಯ ಹೆಚ್ಚಿರುವುದು ಕಂಡುಬಂದಿದೆ. ವಂಚಕರಿಗೆ ತಮ್ಮ ಜಾಡು ಸಿಗದಷ್ಟು ಸಲೀಸಾಗಿ ಕ್ರೋಮ್‌ನಲ್ಲಿ ಬಳಕೆದಾರರ ಮಾಹಿತಿ ಕದಿಯಬಹುದಂತೆ. ನೀವು ಏನೇ ಸೆಕ್ಯೂರಿಟಿ ಸೆಟ್ ಮಾಡಿದರೂ ಸುಲಭವಾಗಿ ಅದನ್ನ ಭೇದಿಸಲು ಸಾಧ್ಯವಾಗಬಹುದು ಎಂದು ತಜ್ಞರು ಹೇಳುತ್ತಾರೆ.

Government warns of security flaw in Google Chrome, asks users to update

ಯಾರಾದರೂ ಗೂಗಲ್ ಕ್ರೋಮ್ ಬ್ರೌಸರ್ ಬಳಕೆ ಮಾಡುತ್ತಿದ್ದಲ್ಲಿ ಕೂಡಲೇ ಅದು ಯಾವ ಆವೃತ್ತಿಯದ್ದು ಮೊದಲು ಪರಿಶೀಲಿಸಿ. 101.0.4951.41 ಆವೃತ್ತಿಗೆ ಕೂಡಲೇ ಅದನ್ನ ಅಪ್‌ಡೇಟ್ ಮಾಡಿ ಎಂದು ಭಾರತದ ಸೈಬರ್ ಕ್ರೈಮ್ ಸಂಸ್ಥೆ ಸೂಚಿಸಿದೆ.

Breaking; ಜೂಲಿಯನ್ ಅಸ್ಸಾಂಜೆ ಗಡಿಪಾರಿಗೆ ಅಧಿಕೃತ ಆದೇಶ Breaking; ಜೂಲಿಯನ್ ಅಸ್ಸಾಂಜೆ ಗಡಿಪಾರಿಗೆ ಅಧಿಕೃತ ಆದೇಶ

ಗೂಗಲ್ ಕ್ರೋಮ್ ಬ್ರೌಸರ್ ಅಪ್‌ಡೇಟ್ ಮಾಡುವ ಕ್ರಮ ಇದು:
ಗೂಗಲ್ ಕ್ರೋಮ್ ಅನ್ನು ಮ್ಯಾನುಯಲ್ ಆಗಿ ನಾವು ಅಪ್‌ಡೇಟ್ ಮಾಡಬಹುದು. ಮೊದಲಿಗೆ ನಿಮ್ಮ ಪಿಸಿಗೆ ಇಂಟರ್ನೆಟ್ ಕನೆಕ್ಟ್ ಆಗಿರಬೇಕು.
* ಬಳಿಕ ಗೂಗಲ್ ಕ್ರೋಮ್ ಓಪನ್ ಮಾಡಿ
* ಮೇಲಿನ ಬಲಭಾಗದಲ್ಲಿ ಕಾಣುವ ಮೂರು ಡಾಟ್‌ಗಳಿರುವ ಮೆನು ಮೇಲೆ ಕ್ಲಿಕ್ ಮಾಡಿ.
* Helpಗೆ ಸ್ಜ್ರಾಲ್ ಡೌನ್ ಮಾಡಿದಾಗ About Google Chrome ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
* ಅದರಲ್ಲಿ ಈಗಿನ ಗೂಗಲ್ ಕ್ರೋಮ್ ಆವೃತ್ತಿ ಯಾವುದು ಎಂಬ ಮಾಹಿತಿ ಸಿಗುತ್ತದೆ.
* ಗೂಗಲ್ ಕ್ರೋಮ್‌ನ ಇತ್ತೀಚಿನ ಅವೃತ್ತಿಗೆ ಅಪ್‌ಡೇಟ್ ಮಾಡಿ.
* ನಂತರ ನಿಮ್ಮ ಸಿಸ್ಟಂ ರೀಸ್ಟಾರ್ಟ್ ಮಾಡಿ.
ಗೂಗಲ್ ಸಂಸ್ಥೆಯೂ ಈ ಭದ್ರತಾ ಲೋಪಗಳನ್ನ ಪತ್ತೆ ಹೆಚ್ಚಿದ್ದು, ಏಳು ಪ್ರಮುಖ ದೋಷಗಳ ಪಟ್ಟಿ ಮಾಡಿದೆ. ನಂತರ ತ್ವರಿತವಾಗಿ ಹೊಸ ವರ್ಷನ್ ಬಿಡುಗಡೆ ಮಾಡಿದೆ ಎನ್ನಲಾಗಿದೆ.

Recommended Video

ಮನೆಗಳನ್ನೇ ಎತ್ತಿ ಬಿಸಾಡಿದ ರಣಭೀಕರ ಸುಂಟರಗಾಳಿ | Oneindia Kannada

(ಒನ್ಇಂಡಿಯಾ ಸುದ್ದಿ)

English summary
Google Chrome version 100 carries a high-level security issue and government has asked everyone to update their Google Chrome browser to the 101 version right away.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X