ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಕನಸಿನ ಮುದ್ರಾ ಯೋಜನೆ ವೈಫಲ್ಯ ಸರ್ಕಾರಿ ಸಮೀಕ್ಷಾ ವರದಿ

|
Google Oneindia Kannada News

ಸಣ್ಣ ಪ್ರಮಾಣದ ಕೈಗಾರಿಕೋದ್ಯಮಿಗಳಿಗೆ ಸಾಲ ನೀಡುವ, ಸ್ವಯಂ ಉದ್ಯೋಗಕ್ಕೆ ದಾರಿ ಮಾಡಿಕೊಡಲು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹೊರ ತಂದ ಮುದ್ರಾ ಯೋಜನೆ ಹಳ್ಳ ಹಿಡಿದಿದೆಯೇ? ಹೌದು ಎನ್ನುತ್ತಿದೆ ಸರ್ಕಾರ ನಡೆಸಿದ ಸಮೀಕ್ಷಾ ವರದಿ.

ಯುವಕರಿಗೆ ಸ್ವಉದ್ಯೋಗ ಆರಂಭಿಸುವ ಅವಕಾಶವನ್ನೂ ಸೃಷ್ಟಿಸುವುದು, ಮುದ್ರಾ ಯೋಜನೆಯ ಮೂಲಕ ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಮತ್ತು ಉದ್ಯಮಿಗಳನ್ನು ಸೃಷ್ಟಿಸುವಲ್ಲಿ ನರೇಂದ್ರ ಮೋದಿ ಸರ್ಕಾರ 2015ರಿಂದ ನಿರತವಾಗಿದೆ. ಕಾಲಕಾಲಕ್ಕೆ ಕಾರ್ಮಿಕ ಇಲಾಖೆಯಿಂದ ಈ ಯೋಜನೆಯ ಪ್ರಗತಿ ಕುರಿತಂತೆ ವರದಿ ಕೂಡಾ ನೀಡಲಾಗುತ್ತದೆ.

ಮುದ್ರಾ ಯೋಜನೆ ಎಂದರೇನು?

ಇತ್ತೀಚಿನ ವರದಿ ಪ್ರಕಾರ, ಮುದ್ರಾ ಯೋಜನೆಯಡಿ ಸಾಲ ಪಡೆದು ಹೊಸ ಉದ್ಯಮ ಸ್ಥಾಪನೆ ಮಾಡಿದವರ ಸಂಖ್ಯೆ ವಿರಳವಾಗಿದ್ದು, ಐವರಲ್ಲಿ ಒಬ್ಬರು ಮಾತ್ರ ಈ ಪ್ರಯೋಜನೆ ಪಡೆದುಕೊಂಡಿದ್ದಾರೆ. ಮಿಕ್ಕವರು ಬಂದ ಮೊತ್ತವನ್ನು ಈಗಾಗಲೆ ಸ್ಥಾಪಿತ ಉದ್ಯಮದ ವಿಸ್ತರಣೆಗೆ ಬಳಸಿಕೊಂಡಿದ್ದಾರೆ, ಈ ಯೋಜನೆಯ ಫಲ ಶೇ 20.6ರಷ್ಟಿದೆ ಎಂದು ತಿಳಿದು ಬಂದಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಯೋಜನೆ ಜಾರಿಗೊಂಡ 33 ತಿಂಗಳುಗಳಲ್ಲಿ ಸಾಧನೆ

ಯೋಜನೆ ಜಾರಿಗೊಂಡ 33 ತಿಂಗಳುಗಳಲ್ಲಿ ಸಾಧನೆ

ಏಪ್ರಿಲ್ 2015 ರಿಂದ ಡಿಸೆಂಬರ್ 2017 ಅವಧಿಯಲ್ಲಿ 1.12 ಕೋಟಿ ಹೆಚ್ಚುವರಿ ಉದ್ಯೋಗ ಸೃಷ್ಟಿಯಾಗಿದೆ. ಇದು ಯೋಜನೆ ಜಾರಿಗೊಂಡ 33 ತಿಂಗಳುಗಳಲ್ಲಿ ಸಾಧನೆಯಾಗಿದೆ. 51.06 ಸ್ವಯಂ ಉದ್ಯೋಗಿಗಳು ಹಾಗೂ 60.94 ಲಕ್ಷ ಉದ್ಯೋಗಿಗಳ ಪೈಕಿ ಗುತ್ತಿಗೆ ಆಧಾರಿತ ಉದ್ಯೋಗಿಗಳಿದ್ದಾರೆ.

ಏಪ್ರಿಲ್ -ನವೆಂಬರ್ 2018ರ ಅವಧಿಯಲ್ಲಿ 97000 ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಿ ತಯಾರಿಸಲಾದ ಸಮೀಕ್ಷಾ ವರದಿಯಂತೆ:
* 5.71 ಲಕ್ಷ ಕೋಟಿ ರು ಸಾಲ ನೀಡಲಾಗಿದೆ. ಶಿಶು, ಕಿಶೋರ ಹಾಗೂ ತರುಣ್ ಮೂರು ವಿಭಾಗಗಳಲ್ಲಿ ನೀಡಿದ ಸಾಲದ ಪ್ರಮಾಣ ಇದಾಗಿದೆ. 12.27 ಕೋಟಿ ಸಾಲ ಖಾತೆಗಳಿಗೆ ಮೊದಲ ಮೂರು ವರ್ಷದ ಅವಧಿಗೆ ಸಂದಾಯವಾದ ಮೊತ್ತ.
* ಫಲಾನುಭವಿಗಳಿಗೆ 2 ರಿಂದ 10 ಲಕ್ಷ ರು ತನಕ ಸಣ್ಣ ಉದ್ದಿಮೆದಾರರಿಗೆ ಸಾಲ ನೀಡಲಾಗುತ್ತದೆ.

ಮೋದಿ ಕನಸುಗಳು: ಸ್ವಚ್ಛಭಾರತದಿಂದ ಡಿಜಿಟಲ್ ಇಂಡಿಯಾ ತನಕಮೋದಿ ಕನಸುಗಳು: ಸ್ವಚ್ಛಭಾರತದಿಂದ ಡಿಜಿಟಲ್ ಇಂಡಿಯಾ ತನಕ

ಒಟ್ಟಾರೆ ಸಾಲ ಪ್ರಮಾಣ ಎಷ್ಟು?

ಒಟ್ಟಾರೆ ಸಾಲ ಪ್ರಮಾಣ ಎಷ್ಟು?

* ಶಿಶು ಸಾಲ (50,000 ರು ತನಕ), 2017-18ರ ಅವಧಿಯಲ್ಲಿ ನೀಡಲಾದ ಒಟ್ಟಾರೆ ಸಾಲ ಪ್ರಮಾಣದಲ್ಲಿ ಇದು ಶೇ 42ರಷ್ಟು ಪಾಲು ಹೊಂದಿದೆ.
* ಕಿಶೋರ್ ಸಾಲ(50,000 ರು ನಿಂದ 5 ಲಕ್ಷ ರು), 2017-18ರ ಅವಧಿಯಲ್ಲಿ ನೀಡಲಾದ ಒಟ್ಟಾರೆ ಸಾಲ ಪ್ರಮಾಣದಲ್ಲಿ ಇದು ಶೇ 34ರಷ್ಟು ಪಾಲು ಹೊಂದಿದೆ.
* ತರುಣ್ ಸಾಲ(5 ಲಕ್ಷ ರು ನಿಂದ 10 ಲಕ್ಷ ರು), 2017-18ರ ಅವಧಿಯಲ್ಲಿ ನೀಡಲಾದ ಒಟ್ಟಾರೆ ಸಾಲ ಪ್ರಮಾಣದಲ್ಲಿ ಇದು ಶೇ 24ರಷ್ಟು ಪಾಲು ಹೊಂದಿದೆ.

ಮುದ್ರಾ ಯೋಜನೆಯಿಂದ ಉದ್ಯೋಗ ಸೃಷ್ಟಿ

ಮುದ್ರಾ ಯೋಜನೆಯಿಂದ ಉದ್ಯೋಗ ಸೃಷ್ಟಿ

* ಶಿಶು ಸಾಲದ ಮೂಲಕ 66% ಹೊಸ ಉದ್ಯೋಗ ಸೃಷ್ಟಿ
* ಕಿಶೋರ್ ಸಾಲದ ಮೂಲಕ 18.85% ಹೊಸ ಉದ್ಯೋಗ ಸೃಷ್ಟಿ
* ತರುಣ್ ಸಾಲದ ಮೂಲದ 15.51% ಹೊಸ ಉದ್ಯೋಗ ಸೃಷ್ಟಿ.
ಒಟ್ಟಾರೆ, 5.1 ಲಕ್ಷದಷ್ಟು ಹೆಚ್ಚುವರಿ ಉದ್ಯೋಗ ಅವಕಾಶಗಳು ಮಾತ್ರ ಸೃಷ್ಟಿಯಾಗಿವೆ, ಹೊಸ ಉದ್ಯೋಗ ಸೃಷ್ಟಿ ಪ್ರಮಾಣ ಏರಿಕೆಯಾಗದ ಕಾರಣ, ಹೊಸ ಉದ್ಯೋಗ ಸ್ಥಾಪನೆ ಪ್ರಮಾಣವೂ ಇಳಿಕೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 5 ಕೋಟಿ ಗೂ ಅಧಿಕ ಮಂದಿ ಉದ್ಯೋಗ ಪಡೆದುಕೊಂಡಿದ್ದಾರೆ

5 ಕೋಟಿ ಗೂ ಅಧಿಕ ಮಂದಿ ಉದ್ಯೋಗ ಪಡೆದುಕೊಂಡಿದ್ದಾರೆ

ಕೃಷಿ ಸಂಬಂಧಿತ ಉದ್ಯೋಗಗಳು 22.77ರಷ್ಟು ಹೆಚ್ಚಾಗಿ ಸೃಷ್ಟಿಯಾಗಿದ್ದರೆ, ಉತ್ಪಾದನಾ ಕ್ಷೇತ್ರದಲ್ಲಿ 13.10ರಷ್ಟು ಉದ್ಯೋಗ ಅವಕಾಶಗಳು ಲಭ್ಯವಾಗಿವೆ. ಒಟ್ಟಾರೆ ಇಲ್ಲಿ ತನಕ ಮುದ್ರಾ ಯೋಜನೆಯಡಿಯಲ್ಲಿ 3.1 ಸ್ವಯಂ ಉದ್ಯೋಗಿಗಳು, 1.95 ಕೋಟಿ ಬಾಡಿಗೆ ಉದ್ಯೋಗಿಗಳು ಸೇರಿದಂತೆ 5 ಕೋಟಿ ಗೂ ಅಧಿಕ ಮಂದಿ ಉದ್ಯೋಗ ಪಡೆದುಕೊಂಡಿದ್ದಾರೆ.

ಮೋದಿಯವರ ಮುದ್ರಾ ಯೋಜನೆಯ ಯಶಸ್ಸಿನ ಜಾಡುಮೋದಿಯವರ ಮುದ್ರಾ ಯೋಜನೆಯ ಯಶಸ್ಸಿನ ಜಾಡು

ಉದ್ಯೋಗ ಅವಕಾಶ ಕುರಿತಂತೆ National Sample Survery Office(NSSO) ನೀಡಿರುವ ಆಘಾತಕಾರಿ ವರದಿಗೆ ಪ್ರತಿಯಾಗಿ ಮುದ್ರಾ ಯೋಜನೆಯ ಸಮೀಕ್ಷಾ ವರದಿ ನೀಡಲು ಸರ್ಕಾರ ಮುಂದಾಗಿತ್ತು. NSSO ವರದಿಯಂತೆ 2017-18ರಲ್ಲಿ ನಿರುದ್ಯೋಗ ಪ್ರಮಾಣ ಶೇ6.1ರಷ್ಟಿದೆ. ಡಿಸೆಂಬರ್ 2018ರಲ್ಲಿ ತಯಾರದ ಈ ವರದಿಯನ್ನು ಲೋಕಸಭೆ ಚುನಾವಣೆ ಮುಗಿದ ಬಳಿಕ ಮೇ 31, 2019ರಲ್ಲಿ ಪ್ರಕಟಿಸಲಾಯಿತು.

English summary
Under MUDRA Yojana, the government provides refinancing to micro credit institutions and non-banking financial corporations engaged in lending to micro enterprises. Just 1 in 5 Mudra beneficiaries started new business, half of extra jobs were self-employment says Government survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X