ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಹಾರ ಯೋಜನೆಯನ್ನು ಅಸೂಯೆಯಿಂದ ನೋಡಬಾರದು; ಮಹದೇವಪ್ಪ

|
Google Oneindia Kannada News

ಜಗತ್ತಿನ ಎಲ್ಲಾ ದೇಶಗಳ ಆರ್ಥಿಕತೆಯು ಸುಸ್ಥಿರವಾಗಿ ಇರಬೇಕಾದರೆ ಅಲ್ಲಿನ ಜನರು ಸೂಕ್ತ ಆಹಾರ ಭದ್ರತೆಯನ್ನು ಹೊಂದಿರಬೇಕೆಂದು ಅರ್ಥಶಾಸ್ತ್ರದ ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಯಾರಿಗೆ ಆಹಾರ ಭದ್ರತೆಯ ಯೋಜನೆಯ ಕುರಿತಂತೆ ಜ್ಞಾನವಿಲ್ಲವೋ ಅಂತಹ ದೇಶಗಳು ಚಿತ್ರ ವಿಚಿತ್ರವಾದ ತೊಂದರೆಗಳಿಗೆ ಸಿಲುಕುತ್ತವೆ.

ಇದು ಆರೋಗ್ಯ ಶಿಕ್ಷಣ ಮತ್ತು ಇನ್ನಿತರೆ ವಲಯಗಳ ಹೆಚ್ಚುವರಿ ವೆಚ್ಚ ಮತ್ತು ಅಸಮತೋಲನಕ್ಕೆ ಕಾರಣವಾಗುತ್ತದೆ. ಅತಿ ಹೆಚ್ಚಿನ ಬಡತನ ಮತ್ತು ಅಪೌಷ್ಠಿಕತೆಯ ಸಮಸ್ಯೆಯನ್ನು ಎದುರಿಸುತ್ತಿರುವ ದೇಶಗಳು ಈ ದಿನ ಮಾನವ ಸಂಪನ್ಮೂಲದ ಅಭಿವೃದ್ಧಿಯನ್ನು ಸರಿಯಾಗಿ ನಿರ್ವಹಿಸದೇ ಇರುವುದರಿಂದ ಹೆಚ್ಚು ತೊಂದರೆಗೆ ಸಿಲುಕಿದ್ದು ಅದು ಆ ದೇಶದ ಸುಸ್ಥಿರ ಆರ್ಥಿಕತೆಗೂ ತೊಡಕಾಗಿದೆ.

 'ರಾಜ್ಯದಲ್ಲಿ ನೆಲೆಯೇ ಇಲ್ಲದ ಬಿಜೆಪಿಯನ್ನು ಬೆಳೆಸಿದ್ದು ಎಸ್.ಬಂಗಾರಪ್ಪ' 'ರಾಜ್ಯದಲ್ಲಿ ನೆಲೆಯೇ ಇಲ್ಲದ ಬಿಜೆಪಿಯನ್ನು ಬೆಳೆಸಿದ್ದು ಎಸ್.ಬಂಗಾರಪ್ಪ'

ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ವ್ಯಾಖ್ಯಾನದ ಪ್ರಕಾರ ಆಹಾರದ ಕೊರತೆ ಮತ್ತು ಅಪೌಷ್ಠಿಕತೆಯು ಯಾವುದೇ ದೇಶದ ಒಟ್ಟು ದೇಶೀಯ ಉತ್ಪನ್ನದ ಬೆಳವಣಿಗೆಗೆ ತೊಂದರೆ ಉಂಟು ಮಾಡುತ್ತದೆ. ಈ ಹಿನ್ನಲೆಯಲ್ಲಿ ದೇಶವೊಂದರ ಆಹಾರ ಲಭ್ಯತೆ ಮತ್ತು ಪೌಷ್ಠಿಕತೆ ಸಾಧನೆಯು ಆ ದೇಶದ ಆರ್ಥಿಕತೆಯ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತದೆ.

ಇನ್ನು ದೇಶವೊಂದು ಆರ್ಥಿಕತೆವಾಗಿ ಮುಂದುವರೆದಿದೆ ಎಂದಾಕ್ಷಣ ಅಲ್ಲಿ ಆಹಾರ ಮತ್ತು ಅಪೌಷ್ಠಿಕತೆ ಸಮಸ್ಯೆಯು ಪೂರ್ಣವಾಗಿ ಪರಿಹಾರವಾಗಿದೆ ಎಂದು ಭಾವಿಸಬೇಕಿಲ್ಲ. ಆರೋಗ್ಯ ಮತ್ತು ಪೌಷ್ಠಿಕತೆಯ ವಲಯಕ್ಕೆ ಸಂಬಂಧಿಸಿದ ಜಗತ್ತಿನ ಪ್ರತಿಷ್ಠಿತ ನಿಯತಕಾಲಿಕೆ (ಜರ್ನಲ್) "ಲ್ಯಾನ್ಸೆಟ್" ಪ್ರಕಾರ ದೇಶವೊಂದರಲ್ಲಿ 10% ನಷ್ಟು ಆರ್ಥಿಕ ಅಭಿವೃದ್ಧಿ ಆದರೂ ಕೂಡಾ ಅದು ಅಪೌಷ್ಠಿಕತೆಯ ಪ್ರಮಾಣವನ್ನು ಕೇವಲ 6% ನಷ್ಟು ಮಾತ್ರವೇ ತಗ್ಗಿಸಬಲ್ಲದು.

ಬಾಬಾ ಸಾಹೇಬರ ಜಯಂತಿ ಎಂದರೆ ರಾಜಕೀಯ ಜಯಂತಿಯಲ್ಲ ಬಾಬಾ ಸಾಹೇಬರ ಜಯಂತಿ ಎಂದರೆ ರಾಜಕೀಯ ಜಯಂತಿಯಲ್ಲ

 ಯುಪಿಎ ಸರ್ಕಾರದ 2013 ರ ಆಹಾರ ಭದ್ರತಾ ಕಾಯ್ದೆ

ಯುಪಿಎ ಸರ್ಕಾರದ 2013 ರ ಆಹಾರ ಭದ್ರತಾ ಕಾಯ್ದೆ

ಈ ನಿಟ್ಟಿನಲ್ಲಿ ಆಹಾರ ಮತ್ತು ಅಪೌಷ್ಠಿಕತೆ ಎಂಬುದು ಆರ್ಥಿಕತೆಯ ವಿಷಯಕ್ಕೆ ಸಂಬಂಧಿಸಿದಂತೆ ಪರಸ್ಪರ ಕೊಡು ಕೊಳ್ಳುವಿಕೆ ಸಂಬಂಧವನ್ನು ಹೊಂದಿದೆ. ಜೊತೆಗೆ ಕೇವಲ ಆರ್ಥಿಕತೆ ಅಭಿವೃದ್ಧಿಯು ದೇಶದ ಹಸಿವು ಮತ್ತು ಅಪೌಷ್ಠಿಕತೆಯನ್ನು ಹೋಗಲಾಡಿಸುವುದಿಲ್ಲ.

ಅಲ್ಲಿ ಸರ್ಕಾರವೊಂದರ ದೂರದೃಷ್ಟಿಯ ಆಹಾರ ಯೋಜನೆಯೂ ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ ಎಂಬ ಅರ್ಥಶಾಸ್ತ್ರದ ಅಂಶವನ್ನು ನಾವು ನೆನಪಿಟ್ಟುಕೊಂಡರೆ ಯುಪಿಎ ಸರ್ಕಾರದ 2013 ರ ಆಹಾರ ಭದ್ರತಾ ಕಾಯ್ದೆ ಮತ್ತು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದ ಅನ್ನಭಾಗ್ಯ, ಮಾತೃಪೂರ್ಣ (ಗರ್ಭಿಣಿ ಮಹಿಳೆಯರಿಗೆ), ಇಂದಿರಾ ಕ್ಯಾಂಟೀನ್, ಮಕ್ಕಳಿಗೆ ಶಾಲೆಯಲ್ಲಿ ಹಾಲು ಮತ್ತು ಮೊಟ್ಟೆಯ ವಿತರಣೆ, ಡೈರಿ ಹಾಲಿನ ಉತ್ಪನ್ನಗಳಿಗೆ ಸಬ್ಸಿಡಿ ಮತ್ತು ಹೆಚ್ಚಿನ ಬೆಂಬಲ ಬೆಲೆ, ಆಹಾರದ ವಿಷಯಕ್ಕೆ ಸಂಬಂಧಿಸಿದ ಕೃಷಿಕರ 50 ಸಾವಿರದ ವರೆಗಿನ ಸಾಲ ಮನ್ನಾ, ಆಹಾರ ಉತ್ಪಾದನೆಗೆ ಸಂಬಂಧಿಸಿದ ಕೃಷಿಯನ್ನು ನಿರ್ವಹಿಸಲು ಸಹಕರಿಸಿದ ಕೃಷಿ ಯಂತ್ರಧಾರೆ ಯೋಜನೆಗಳು ಆರ್ಥಿಕ ಅಭಿವೃದ್ಧಿ ಸಾಧಿಸುವುದಕ್ಕೆ ಪೂರಕವಾಗಿ ಮಾನವ ಸಂಪನ್ಮೂಲಗಳನ್ನು ಸಮರ್ಥಗೊಳಿಸುವ ಮಹತ್ತರ ಉದ್ದೇಶವನ್ನೇ ಹೊಂದಿವೆ.

 ಆಹಾರ ಮತ್ತು ಅಪೌಷ್ಠಿಕತೆಯ ನಿರ್ವಹಣೆ

ಆಹಾರ ಮತ್ತು ಅಪೌಷ್ಠಿಕತೆಯ ನಿರ್ವಹಣೆ

ಲ್ಯಾಟಿನ್ ಅಮೆರಿಕಾದ ದೇಶಗಳಲ್ಲೂ ಸಹ ಆಹಾರ ಮತ್ತು ಅಪೌಷ್ಠಿಕತೆಯ ನಿರ್ವಹಣೆಯು ಅತ್ಯುತ್ತಮವಾದ ಫಲಿತಾಂಶವನ್ನೇ ನೀಡಿದೆ. ಉದಾರಣೆಗೆ ಬ್ರೆಜಿಲ್ ನಂತಹ ದೇಶದಲ್ಲಿ ಉತ್ತಮ ಆಹಾರ ಯೋಜನೆಗಳು ಮತ್ತು ಅಪೌಷ್ಠಿಕತೆಯ ನಿರ್ವಹಣೆಯ ಪರಿಣಾಮ 1996 ರಿಂದ 2007 ರ ಒಳಗೆ ಅಪೌಷ್ಠಿಕತೆಯ ಪ್ರಮಾಣವು 37.1 ರಿಂದ 7.1% ಗೆ ಇಳಿಕೆಯಾಯಿತು. ಇದು ಆ ದೇಶಕ್ಕೆ ಮುಂದೆ ಗುಣ ಮಟ್ಟದ ಶಿಕ್ಷಣ, ಉತ್ತಮ ಆರೋಗ್ಯ ಸೌಲಭ್ಯಗಳು ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಯ ಜೊತೆಗೆ ಅವರ ಕೊಳ್ಳುವ ಶಕ್ತಿಯನ್ನೂ ಕೂಡಾ ಹೆಚ್ಚು ಮಾಡಿತು ಎಂಬುದನ್ನು ಈ ವೇಳೆ ನಾವು ಗಮನಿಸಬೇಕು.

 ಶ್ರೀಮಂತರ ತಿಜೋರಿಯನ್ನು ತುಂಬಿಸುವುದು

ಶ್ರೀಮಂತರ ತಿಜೋರಿಯನ್ನು ತುಂಬಿಸುವುದು

ಭಾರತದಲ್ಲೂ ಸಹ ಆಹಾರ ಭದ್ರತಾ ಕಾಯ್ದೆ ಪರಿಣಾಮದಿಂದಾಗಿ 2004-06 ರಲ್ಲಿ 21.7% ನಷ್ಟಿದ್ದ ಹಸಿವು ಮತ್ತು ಅಪೌಷ್ಠಿಕತೆಯ ಪ್ರಮಾಣವು 2017 ರ ಹೊತ್ತಿಗೆ 14% ಗೆ ಇಳಿಕೆಯಾಯಿತು. ನನ್ನ ಪ್ರಕಾರ ಇದು ಆಹಾರ ಭದ್ರತೆಯ ಮತ್ತು ಆಹಾರ ಯೋಜನೆಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. ಆದರೆ ವಿಪರ್ಯಾಸದ ಸಂಗತಿ ಎಂದರೆ ಈ ದಿನ ಮತ್ತೆ ಹಸಿವು ಮತ್ತು ಅಪೌಷ್ಠಿಕತೆಯ ಪ್ರಮಾಣ ಹೆಚ್ಚಾಗಿದೆ. ಆಹಾರ ಯೋಜನೆಗಳು ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತದೆ ಎಂದು ಹೇಳುತ್ತಿರುವ ಕೋಮುವಾದಿ ಸರ್ಕಾರಗಳು ಶ್ರೀಮಂತರ ತಿಜೋರಿಯನ್ನು ತುಂಬಿಸುವುದಕ್ಕೆ ತಮ್ಮೆಲ್ಲಾ ದೇಶಪ್ರೇಮವನ್ನು ಖರ್ಚು ಮಾಡುತ್ತಿವೆ.

 ಮನಮೋಹನ್ ಸಿಂಗ್ ಆಡಳಿತದಲ್ಲಿ ಜಾಗತಿಕ ಆರ್ಥಿಕ ಮುಗ್ಗಟ್ಟು

ಮನಮೋಹನ್ ಸಿಂಗ್ ಆಡಳಿತದಲ್ಲಿ ಜಾಗತಿಕ ಆರ್ಥಿಕ ಮುಗ್ಗಟ್ಟು

ಇದೇ ಕಾರಣಕ್ಕಾಗಿಯೇ ಇಂದು ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 55 ರಿಂದ 101 ನೇ ಸ್ಥಾನಕ್ಕೆ ಕುಸಿಯಲ್ಪಟ್ಟಿದ್ದು ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಯು ಕುಂಠಿತಗೊಂಡಿದ್ದು ಮನಮೋಹನ್ ಸಿಂಗ್ ಅವರ ಆಡಳಿತದಲ್ಲಿ ಜಾಗತಿಕ ಆರ್ಥಿಕ ಮುಗ್ಗಟ್ಟಿನ ನಡುವೆಯೂ ಚಾಣಾಕ್ಷತೆಯಿಂದ ಸಾಧಿಸಲಾಗಿದ್ದ 8.5% ಜಿಡಿಪಿ ದರವನ್ನು 5% ಗೆ ಕುಗ್ಗುವಂತೆ ಮಾಡಿದೆ.

 ಅನ್ನ ಭಾಗ್ಯ ಯೋಜನೆ

ಅನ್ನ ಭಾಗ್ಯ ಯೋಜನೆ

ಈ ಹಿನ್ನಲೆಯಲ್ಲಿ ಕರ್ನಾಟಕದ ಮಟ್ಟಿಗೆ ನೋಡುವುದಾದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಜಾರಿಗೊಳಿಸಲಾದ ಅನ್ನ ಭಾಗ್ಯ, ಕ್ಷೀರ ಭಾಗ್ಯ, ಮಾತೃಪೂರ್ಣ ಹಾಗೂ ಇಂದಿರಾ ಕ್ಯಾಂಟೀನ್ ನಂತಹ ಆಹಾರ ಯೋಜನೆಗಳನ್ನು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಮತ್ತು ದೇಶವೊಂದರ ಆರ್ಥಿಕತೆಯ ಅಭಿವೃದ್ಧಿಗೆ ಪೂರಕವಾದ ಯೋಜನೆಗಳೇ ಆಗಿದ್ದರೂ ಸಮಾಜ ವಿರೋಧಿಯಾದ ಮತ್ತು ಬಡವರ ವಿರೋಧಿಯಾದಂತಹ ಕೋಮು ಹಾಗೂ ಬಂಡವಾಳಶಾಹಿ ಹಿತಾಸಕ್ತಿಗಳು ಇವುಗಳನ್ನು ಜನರನ್ನು ಸೋಮಾರಿಗಳನ್ನಾಗಿಸುವ ಯೋಜನೆಗಳು ಎಂದು ಕೆಟ್ಟದಾಗಿ ಚಿತ್ರಿಸುತ್ತಿದ್ದು ಇದು ನಿಜಕ್ಕೂ ಅಮಾನವೀಯತೆಯ ಸಂಕೇತವಾಗಿದೆ. ಅಷ್ಟೇ ಅಲ್ಲದೇ ಅರ್ಥಶಾಸ್ತ್ರಕ್ಕೆ ವಿರುದ್ಧವಾದ, ಕೆಲವೇ ಕೆಲವು ಮಂದಿಯನ್ನು ಶ್ರೀಮಂತರನ್ನಾಗಿಸಬೇಕು ಎನ್ನುವಂತಹ ಬಂಡವಾಳಶಾಹಿ ತರ್ಕವಾಗಿದೆ.

ಹೀಗಾಗಿ ನಮ್ಮ ಯುವಕರು ಈ ಬಗ್ಗೆ ಹೆಚ್ಚು ಚಿಂತಿಸುವಂತಾಗಬೇಕು, ಜನಪರ ಯೋಜನೆಗಳನ್ನು ಅದರಲ್ಲೂ ಆಹಾರ ಯೋಜನೆಗಳನ್ನು ಅಸೂಯೆಯಿಂದ ನೋಡದೇ ಅದರ ಹಿಂದಿನ ಅರ್ಥಶಾಸ್ತ್ರೀಯ ತಿಳುವಳಿಕೆಯನ್ನು ಎಲ್ಲೆಡೆ ಪಸರಿಸುವಂತಾಗಬೇಕು ಎಂದು ಈ ಮೂಲಕ ಆಶಿಸುತ್ತೇನೆ.

English summary
Government food plans should not be viewed with jealousy said former minister and Congress leader Dr. H C Mahadevappa. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X