ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020ರಲ್ಲಿ ಅತಿ ಹೆಚ್ಚು ಗೂಗಲ್‌ ಸರ್ಚ್‌ ಆದ ಟಾಪ್ 10 ವ್ಯಕ್ತಿಗಳು

|
Google Oneindia Kannada News

ನವದೆಹಲಿ, ಡಿಸೆಂಬರ್ 09: ಕೊರೊನಾವೈರಸ್ ಸಾಂಕ್ರಾಮಿಕದಲ್ಲೇ ಕಳೆದ 2020ರ ವರ್ಷವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಈ ವರ್ಷ ಯಾವಾಗ ಮುಗಿಯುತ್ತೆ ಎಂದು ಕಾಯುತ್ತಿರುವವರು ಅನೇಕರು. ಇದರ ನಡುವೆ ಗೂಗಲ್‌ನಲ್ಲಿ ಈ ವರ್ಷ ಅತಿ ಹೆಚ್ಚು ಜನರಿಂದ ಹುಡುಕಲ್ಪಟ್ಟ ಟಾಪ್ 10 ಸೆಲೆಬ್ರೆಟಿಗಳ ಪಟ್ಟಿ ಬಿಡುಗಡೆಗೊಂಡಿದೆ.

2020ರಲ್ಲಿ ಜಗತ್ತಿನ ದೈತ್ಯ ಸರ್ಚ್‌ ಎಂಜಿನ್ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡಕಲ್ಪಟ್ಟ ಜನರಲ್ಲಿ ರಾಜಕಾರಣಿಗಳು, ಸಿನಿಮಾ ನಟ, ನಟಿಯರು, ಕ್ರಿಕೆಟಿಗರು, ಹಾಗೂ ಪತ್ರಕರ್ತರು ಸೇರಿದ್ದಾರೆ. ಹಾಗಿದ್ದರೆ ಗೂಗಲ್‌ನಲ್ಲಿ ಹುಡಕಲ್ಪಟ್ಟ ಟಾಪ್‌ 10 ವ್ಯಕ್ತಿಗಳು ಯಾರು ಎಂಬುದನ್ನು ಈ ಕೆಳಗೆ ತಿಳಿಯಿರಿ

1) ಜೋ ಬಿಡೆನ್

1) ಜೋ ಬಿಡೆನ್

ಅಮೆರಿಕಾದ ಚುನಾಯಿತ ಅಧ್ಯಕ್ಷ ಜೋ ಬಿಡೆನ್ 2020ನೇ ಇಸವಿಯಲ್ಲಿ ಅತಿ ಹೆಚ್ಚು ಸರ್ಚ್‌ ಆದ ವ್ಯಕ್ತಿಯಾಗಿದ್ದಾರೆ. ಹಿಂದಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ವಿರುದ್ಧ ಡೆಮಾಕ್ರೆಟಿಕ್ ಪಕ್ಷದ ಪರ ನಿಂತಿದ್ದ ಜೋ ಬಿಡೆನ್ ಅಮೆರಿಕಾದ 46ನೇ ಅಧ್ಯಕ್ಷರಾಗಿ ಆಯ್ಕೆಯಾದರು.

Yahooನಲ್ಲಿ ಈ ವರ್ಷ ಅತಿ ಹೆಚ್ಚು ಸರ್ಚ್ ಆದ ರಾಜಕಾರಣಿಗಳು!Yahooನಲ್ಲಿ ಈ ವರ್ಷ ಅತಿ ಹೆಚ್ಚು ಸರ್ಚ್ ಆದ ರಾಜಕಾರಣಿಗಳು!

ತೀವ್ರ ಹಣಾಹಣಿಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರಿಗೆ ಸೋಲುಣಿಸಿರುವ ಜೋ ಬಿಡೆನ್, ಅಮೆರಿಕದ ಇತಿಹಾಸದಲ್ಲೇ ಅತೀ ಹೆಚ್ಚು ಮತಗಳನ್ನು ಪಡೆದು ಅಧ್ಯಕ್ಷರಾಗುತ್ತಿರುವ ಮೊದಲ ವ್ಯಕ್ತಿ. ಜೋ ಬಿಡೆನ್ ಒಟ್ಟು 75,197,525 ಮತಗಳನ್ನು ಪಡೆದಿದ್ದರೆ, ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ 70,805,603 ಮತಗಳನ್ನು ಪಡೆದಿದ್ದಾರೆ.

2) ಅರ್ನಬ್ ಗೋಸ್ವಾಮಿ

2) ಅರ್ನಬ್ ಗೋಸ್ವಾಮಿ

2018ರಲ್ಲಿ ಇಂಟೀರಿಯರ್ ಡಿಸೈನರ್ ಒಬ್ಬರ ಆತ್ಮಹತ್ಯೆ ಕೇಸಿಗೆ ಸಂಬಂಧಪಟ್ಟಂತೆ ಜೈಲು ಸೇರಿ ಮಧ್ಯಂತರ ಜಾಮೀನು ಮೇರೆಗೆ ಹೊರಗಿರುವ ಖಾಸಗಿ ಚಾನೆಲ್‌ವೊಂದರ ಮುಖ್ಯಸ್ಥನಾಗಿರುವ ಅರ್ನಬ್ ಗೋಸ್ವಾಮಿ 2020ರಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಭಾರತದ ವ್ಯಕ್ತಿಯಾಗಿದ್ದು, ವಿಶ್ವದಲ್ಲಿಯೇ ಎರಡನೇ ವ್ಯಕ್ತಿ ಎನಿಸಿಕೊಂಡಿದ್ದಾರೆ.

3) ಕನ್ನಿಕಾ ಕಪೂರ್

3) ಕನ್ನಿಕಾ ಕಪೂರ್

ಬಾಲಿವುಡ್ ಸಿನಿಮಾ ಗಾಯಕಿ ಕನ್ನಿಕಾ ಕಪೂರ್ ಕೂಡ 2020ರಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಕೋವಿಡ್-19 ಪಾಸಿಟಿವ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದ ಈಕೆಯ ಕುರಿತಾಗಿ ಜನರು ಹೆಚ್ಚು ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದಾರೆ.

unforgettable 2020: ನಮ್ಮನ್ನು ಅಗಲಿದ ಸೆಲೆಬ್ರಿಟಿಗಳ ಸ್ಮರಣೆunforgettable 2020: ನಮ್ಮನ್ನು ಅಗಲಿದ ಸೆಲೆಬ್ರಿಟಿಗಳ ಸ್ಮರಣೆ

Recommended Video

ಮಂಡ್ಯ: ಅಂಬೇಡ್ಕರ್ ಭವನದಲ್ಲಿ ಪೊಲೀಸ್ ಜನಸಂಪರ್ಕ ಸಭೆ | Oneindia Kannada
ಟಾಪ್‌ 10ನಲ್ಲಿ ಇನ್ನು ಯಾರಿಗೆಲ್ಲಾ ಸ್ಥಾನ ಸಿಕ್ಕಿದೆ?

ಟಾಪ್‌ 10ನಲ್ಲಿ ಇನ್ನು ಯಾರಿಗೆಲ್ಲಾ ಸ್ಥಾನ ಸಿಕ್ಕಿದೆ?

ಗೂಗಲ್‌ ಅತಿ ಹೆಚ್ಚು ಹುಡುಕಲ್ಪಟ್ಟ ಉಳಿದ ವ್ಯಕ್ತಿಗಳಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌-ಜಾಂಗ್-ಉನ್, ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್, ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್, ಬಾಲಿವುಡ್ ನಟಿ, ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ, ಅಮೆರಿಕಾ ಚುನಾಯಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಬಾಲಿವುಡ್ ನಟಿಯರಾದ ಅಂಕಿತಾ ಲೋಕಂಡೆ, ಹಾಗೂ ಕಂಗನಾ ರನೌತ್ ಸೇರಿದ್ದಾರೆ.

ಬಾಲಿವುಡ್ ನಟಿ ಕಂಗನಾ ರನೌತ್ 2020ರಲ್ಲಿ ಅತಿ ಹೆಚ್ಚು ನೆಗೆಟಿವ್ ಆಗಿಯೇ ಸುದ್ದಿಯಾಗಿದ್ದರು. ನಟ ಸುಶಾಂತ್‌ಸಿಂಗ್ ಆತ್ಮಹತ್ಯೆ ಪ್ರಕರಣದ ಕುರಿತು ಹಲವು ಖ್ಯಾತನಾಮರ ವಿರುದ್ಧ ನೇರ ಆರೋಪಗಳನ್ನು ಮಾಡಿದ್ದಾರೆ. ಇದಲ್ಲದೆ ಕಂಗನಾ ರನೌತ್‌ ಮುಂಬೈ ಕಚೇರಿಯನ್ನು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಕೆಡವಲು ಪ್ರಯತ್ನಿಸಿದಾಗ, ಕಂಗನಾ ಹೆಚ್ಚು ಪ್ರಚಾರವಾಗಿದ್ದರು.

English summary
Google Year In Search 2020: India's top searched personalities, news events, movies & more. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X