ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್‌ನ ಮೊಟ್ಟ ಮೊದಲ ತ್ವರಿತ ಮೆಸೇಜಿಂಗ್ ವೇದಿಕೆಗೆ ಗುಡ್ ಬೈ

|
Google Oneindia Kannada News

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಬಳಕೆದಾರರ ಸ್ನೇಹಿ ಸೌಲಭ್ಯಗಳನ್ನು ಕಾಲಕಾಲಕ್ಕೆ ನೀಡುತ್ತಾ ಬಂದಿದೆ. ಆದರೆ, ಪ್ರತಿಸ್ಪರ್ಧೆ ಎದುರಿಸಲಾಗದೆ ಅನೇಕ ಸೌಲಭ್ಯಗಳ ಸ್ವರೂಪ ಬದಲಾಯಿಸಿದೆ, ಮತ್ತೆ ಕೆಲವು ಸೌಲಭ್ಯಗಳನ್ನು ಶಾಶ್ವತವಾಗಿ ಬಂದ್ ಮಾಡಿದೆ.

ಯಾಹೂ ಮೆಸೆಂಜರ್ ನಂತರ ಭಾರತ ಉಪಖಂಡದಲ್ಲಿ ಹೆಚ್ಚು ಬಳಕೆಯಲ್ಲಿದ್ದ ಮೊಟ್ಟ ಮೊದಲ ತ್ವರಿತ ಮೆಸೇಜಿಂಗ್ ವೇದಿಕೆ ಎನಿಸಿಕೊಂಡಿದ್ದ ಗೂಗಲ್ ಟಾಕ್ ಸೇವೆ ಸ್ಥಗಿತವಾಗುತ್ತಿದೆ. ಜೂನ್ 16 ರಂದು ಗೂಗಲ್ ಟಾಕ್ ಎಂಬ ತನ್ನ ತ್ವರಿತ ಸಂದೇಶ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಗೂಗಲ್ ತನ್ನ ಅಧಿಕೃತ ಬ್ಲಾಗಿನಲ್ಲಿ ಬರೆದುಕೊಂಡಿದೆ.

ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ?ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ?

ಫೇಸ್ ಬುಕ್ ಮೆಸೆಂಜರ್, ಇನ್ಸ್ಟ್ರಾಗ್ರಾಂ ಅಲ್ಲದೆ ವಾಟ್ಸಾಪ್, ಸಿಗ್ನಲ್ ಜಮಾನದಲ್ಲೂ ಬಳಕೆಯಲ್ಲಿದ್ದ ಗೂಗಲ್ ಟಾಕ್ ಕೊನೆಗೂ ತನ್ನ ತ್ವರಿತ ಸಂದೇಶ ಸೇವೆ ಕೊನೆಗೊಳಿಸುತ್ತಿದೆ. ಗೂಗಲ್ ಟಾಕ್ ಬಂದಾಗ ಎಲ್ಲರಿಗೂ ತಕ್ಷಣಕ್ಕೆ ಮೆಸೇಜ್ ಕಳಿಸಲು, ಚಾಟ್ ಮಾಡಲು ಸುಲಭವಾದ ವೇದಿಕೆ ಇದಾಗಿತ್ತು. ಜಿಮೇಲ್ ಬಳಕೆದಾರರಿಗೆ ತ್ವರಿತ ಸಂಭಾಷಣೆ ನಡೆಸಲು ಸಹಾಯಕಾಗಿ ವಿನ್ಯಾಸಗೊಳಿಸಲಾಗಿತ್ತು. ಅಗತ್ಯಕ್ಕೆ ತಕ್ಕಂತೆ ನಂತರದ ವರ್ಷಗಳಲ್ಲಿ ಅದನ್ನು Hangouts ಮತ್ತು Google Chat ನಂತಹ ಹೊಸ Google ಸೇವೆಗಳಿಂದ ಬದಲಾಯಿಸಲಾಯಿತು.

Google to shut down its first instant messaging platform June 16

ಕಂಪನಿಯು 2013 ರಲ್ಲಿ Google Talk ಸೇವೆಯನ್ನು ಹಂತ ಹಂತವಾಗಿ ಹಿಂಪಡೆದು, ಶಾಶ್ವತವಾಗಿ ಮುಚ್ಚುವ ನಿರ್ಧಾರಕ್ಕೆ ಬಂದಿತ್ತು. ಆ ಸಮಯದಲ್ಲಿ, Hangouts ಕಂಪನಿಯು ನೀಡುವ ಬದಲಿ ಸೇವೆಯಾಗಿದ್ದು ಅದು ಈಗ ಬಳಕೆಯಲ್ಲಿಲ್ಲ. Google Talk ಬಳಕೆದಾರರಿಗೆ ಪಠ್ಯ ಮತ್ತು ಧ್ವನಿಯ ಮೂಲಕ ಸಂವಹನ ನಡೆಸಲು ಅನುಮತಿಸುತ್ತದೆ.

"ನಾವು Google Talk ಅನ್ನು ಮುಕ್ತಾಯಗೊಳಿಸುತ್ತಿದ್ದೇವೆ. ಜೂನ್ 16, 2022 ರಂದು, ನಾವು 2017 ರಲ್ಲಿ ಘೋಷಿಸಿದಂತೆ Pidgin ಮತ್ತು Gajim ಸೇರಿದಂತೆ Third Party ಅಪ್ಲಿಕೇಶನ್‌ಗಳಿಗೆ ನಮ್ಮ ಬೆಂಬಲವನ್ನು ಕೊನೆಗೊಳಿಸುತ್ತೇವೆ" ಎಂದು ಗೂಗಲ್ ತನ್ನ ಬ್ಲಾಗ್‌ಪೋಸ್ಟ್‌ನಲ್ಲಿ ಹೇಳಿದೆ.

Google to shut down its first instant messaging platform June 16

"ನಿಮ್ಮ ಸಂಪರ್ಕಗಳೊಂದಿಗೆ ಚಾಟ್ ಮಾಡುವುದನ್ನು ಮುಂದುವರಿಸಲು, Google Chat ಅನ್ನು ಬಳಸಲು ನಾವು ಶಿಫಾರಸು ಮಾಡುತ್ತೇವೆ. ನೀವು ಇತರರೊಂದಿಗೆ ಸುಲಭವಾಗಿ ಯೋಜಿಸಬಹುದು, ಫೈಲ್‌ಗಳನ್ನು ಹಂಚಿಕೊಳ್ಳಬಹುದು ಮತ್ತು ಸಹಯೋಗಿಸಬಹುದು,Gmail ನಲ್ಲಿ ಮತ್ತು ಸ್ಕ್ರೀನ್ ರೀಡರ್ ಬೆಂಬಲದಂತಹ ಪ್ರವೇಶಿಸುವಿಕೆ ವೈಶಿಷ್ಟ್ಯಗಳು, ಫಿಶಿಂಗ್ ರಕ್ಷಣೆಗಳನ್ನು ನೀವು ಸಹ ಹೊಂದಿದ್ದೀರಿ " ಎಂದು ವಿವರಿಸಲಾಗಿದೆ.

Recommended Video

HD Devegowda ಭಾರತದ ಮುಂದಿನ ಪ್ರೆಸಿಡೆಂಟ್ ಆಗ್ತಾರಾ? | *Politics | Oneindia Kannada

ಜೂನ್ 16, 2022 ರಂದು ಅಥವಾ ನಂತರ Google Talk ಗೆ ಸೈನ್ ಇನ್ ಮಾಡಲು ಪ್ರಯತ್ನಿಸಿದರೆ, ನಿಮಗೆ ಸೈನ್ ಇನ್ ERROR ಎಂದು ತೋರಿಸಲಿದೆ. ನಂತರ ಚಾಲ್ತಿಯಲ್ಲಿರುವ Google Chat ಗೆ ಬದಲಾಯಿಸಲು ಶಿಫಾರಸು ಮಾಡುತ್ತಿದೆ. ನೀವು ವೆಬ್ ಮತ್ತು ಮೊಬೈಲ್‌ನಲ್ಲಿ Google Chat ಅನ್ನು ಪ್ರವೇಶಿಸಬಹುದು ಅಥವಾ ಒಂದೇ ಸ್ಥಳದಲ್ಲಿ ಸಹಯೋಗಿಸಲು ನೀವು ಅದನ್ನು ನಿಮ್ಮ Gmail ಇನ್‌ಬಾಕ್ಸ್‌ಗೆ ಸೇರಿಸಬಹುದು.

English summary
Google has announced that it will shut down its instant messaging service called Google Talk on June 16. For those who do not know, Google Talk was the tech giant’s original instant messaging service that was initially designed to help Gmail users to have a quick conversation but over the years it was replaced by newer Google services such as the Hangouts and Google Chat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X