ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಎರಡು ಖಗೋಳ ವಿಸ್ಮಯ: ಗೂಗಲ್ ಡೂಡಲ್ ವಿಶೇಷ

|
Google Oneindia Kannada News

ನವದೆಹಲಿ, ಡಿಸೆಂಬರ್ 21: ವರ್ಷದ ಅತಿ ಸಣ್ಣ ಹಗಲು ಮತ್ತು ಅತಿ ದೀರ್ಘಾವಧಿಯ ರಾತ್ರಿಯ ದಿನವಾದ ಚಳಿಗಾಲದ ಅಯನ ಸಂಕ್ರಾಂತಿಯ ನಿಮಿತ್ತ ಸೋಮವಾರ ಗೂಗಲ್ ವಿಶೇಷ ಡೂಡಲ್ ಮಾಡಿದೆ. ಭೂಮಿಯ ಧ್ರುವಗಳಲ್ಲಿ ಒಂದು ಭಾಗವು ಸೂರ್ಯನಿಂದ ಗರಿಷ್ಠ ದೂರಕ್ಕೆ ಸಾಗುವುದರಿಂದ ಈ ವಿದ್ಯಮಾನ ಘಟಿಸುತ್ತದೆ.

ಇದಕ್ಕೆ 'ಸಾಲ್‌ಸ್ಟೈಸ್' ಎಂದು ಕರೆಯಲಾಗುತ್ತದೆ. ಸಾಲ್‌ಸ್ಟೈಸ್ ಎಂಬ ಪದವು ಲ್ಯಾಟಿನ್‌ನ ಸಾಲ್‌ಸ್ಟಿಟಿಯುಮ್, ಅಂದರೆ 'ಸೂರ್ಯ ದೂರದಲ್ಲಿದ್ದಾನೆ' ಎಂಬ ಅರ್ಥ ಹೊಂದಿದೆ. ಉತ್ತರ ಹೆಮಿಸ್ಪೇರ್‌ನಲ್ಲಿ ಚಳಿಗಾಲದ ಅಯನ ಸಂಕ್ರಾಂತಿ ಡಿಸೆಂಬರ್ 19ರಿಂದ 23ರ ಒಳಗೆ ಬರುತ್ತದೆ. ಈ ಬಾರಿ ಡಿ. 21ರಂದು ಸಂಭವಿಸುತ್ತಿದೆ.

ಕ್ರಿಸ್‌ಮಸ್ ಸ್ಟಾರ್‌ ಬಗ್ಗೆ ನಿಮಗೆ ಗೊತ್ತೆ..? ಬಾಹ್ಯಾಕಾಶದಲ್ಲಿ ಸಹಸ್ರಮಾನದ ಅಚ್ಚರಿ..!ಕ್ರಿಸ್‌ಮಸ್ ಸ್ಟಾರ್‌ ಬಗ್ಗೆ ನಿಮಗೆ ಗೊತ್ತೆ..? ಬಾಹ್ಯಾಕಾಶದಲ್ಲಿ ಸಹಸ್ರಮಾನದ ಅಚ್ಚರಿ..!

ಚಳಿಗಾಲಯದ ಅಯನ ಸಂಕ್ರಾಂತಿಯ ಬಳಿಕ ಉತ್ತರ ಹೆಮಿಸ್ಪೇರ್‌ನಲ್ಲಿ ದಿನಗಳು ಹೆಚ್ಚು ಸುದೀರ್ಘ ಮತ್ತು ರಾತ್ರಿ ಕಡಿಮೆ ಅವಧಿಯದ್ದಾಗಿರಲಿದೆ. ದಕ್ಷಿಣ ಹೆಮಿಸ್ಪೇರ್‌ನಲ್ಲಿನ ಜನರಿಗೆ ಇದು ಸಂಪೂರ್ಣ ತದ್ವಿರುದ್ಧವಾಗಿರಲಿದೆ. ಈ ಬಾರಿಯ ಚಳಿಗಾಲ ಅಯನ ಸಂಕ್ರಾಂತಿಯು ಮತ್ತೊಂದು ಬಾಹ್ಯಾಕಾಶದ ಅತ ಅಪರೂಪದ ವಿದ್ಯಮಾನ ಶನಿ ಮತ್ತು ಗುರು ಗ್ರಹದ 'ಮಹಾನ್ ಸಂಯೋಗ'ದ ದಿನದಂದೇ ನಡೆಯುತ್ತಿರುವುದು ವಿಶೇಷ.

Google Doodle Observes Winter Solstice And Great Conjuction Of Jupiter-Saturn

ಸೋಮವಾರ ಸಂಜೆ ಗುರು ಮತ್ತು ಶನಿ ಗ್ರಹಗಳು ಅಪರೂಪದ ಗ್ರಹ ಜೋಡಣೆಯ ವಿಸ್ಮಯಕ್ಕೆ ಸಾಕ್ಷಿಯಾಗಲಿವೆ. ಸುಮಾರು 800 ವರ್ಷಗಳಲ್ಲಿ ಈ ಎರಡೂ ಗ್ರಹಗಳು ಸಮೀಪಿಸುತ್ತಿವೆ. ಇದು ಮತ್ತೊಮ್ಮೆ ಸಂಭವಿಸಬೇಕಾದರೆ 2080ರವರೆಗೂ ಕಾಯಬೇಕು.

ಕಪ್ಪುಕುಳಿಗೂ ಕೂದಲು, ಬ್ಲ್ಯಾಕ್ ಹೋಲ್‌ನ ಭಯಾನಕ ರಹಸ್ಯಕಪ್ಪುಕುಳಿಗೂ ಕೂದಲು, ಬ್ಲ್ಯಾಕ್ ಹೋಲ್‌ನ ಭಯಾನಕ ರಹಸ್ಯ

ಈ ಎರಡೂ ಘಟನೆಗಳನ್ನು ಗೂಗಲ್ ಡೂಡಲ್‌ನಲ್ಲಿ ಅನಿಮೇಷನ್ ಮೂಲಕ ತೋರಿಸಲಾಗಿದೆ. 'ಮಹಾನ್ ಸಂಯೋಗ'ವನ್ನು 2020ರ ಕ್ರಿಸ್‌ಮಸ್ ತಾರೆ ಎಂದೂ ಕರೆಯಲಾಗುತ್ತಿದೆ. ಈ ಎರಡೂ ಗ್ರಹಗಳು ಡಿಗ್ರಿಯ ಕೇವಲ 10ರಷ್ಟು ಕೋನದಲ್ಲಿ ಸಮೀಪಿಸುತ್ತಿವೆ. ಇದು ಇನ್ನು 60 ವರ್ಷಗಳವರೆಗೆ ಘಟಿಸುವುದಿಲ್ಲ.

ನಮ್ಮ ಸೌರವ್ಯೂಹ ವ್ಯವಸ್ಥೆಯ ಎರಡು ಅತಿ ದೊಡ್ಡ ಗ್ರಹಗಳ ನಡುವಿನ ಸಂಯೋಗವು ತೀರಾ ವಿರಳವೇನೂ ಅಲ್ಲ. ಸೂರ್ಯನ ಸುತ್ತ ಸುತ್ತುವಾಗ ಪ್ರತಿ 20 ವರ್ಷಕ್ಕೊಮ್ಮೆ ಗುರು ಗ್ರಹವು ಶನಿಯ ಸಮೀಪ ಹಾದು ಹೋಗುತ್ತದೆ. ಆದರೆ ಈ ಬಾರಿ ಅದರ ಸಾಮೀಪ್ಯ ಮತ್ತಷ್ಟು ಹತ್ತಿರವಿರಲಿದೆ ಎಂದು ನಾಸಾ ತಿಳಿಸಿದೆ.

English summary
Google Doodle on Monday has showed Winter Solstice and the Great Conjuction of the Jupiter and Saturn.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X