ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

WWWಗೆ 30ರ ಹರೆಯ, ಗೂಗಲ್ ಡೂಡ್ಲ್ ನಿಂದ ಸಂಭ್ರಮಾಚರಣೆ

|
Google Oneindia Kannada News

ಬೆಂಗಳೂರು, ಮಾರ್ಚ್ 12: ಇಂಟರ್ನೆಟ್ ಬಲ್ಲವರಿಗೆ ಬ್ರೌಸ್ ಮಾಡುವಾಗ URL ಹಾಕುವಾಗ ಕಾಣ ಸಿಗುವ WWW ಎಂಬ ಜಾಲಕ್ಕೆ ಇಂದು 30ನೇ ಹುಟ್ಟುಹಬ್ಬ. World Wide Web (WWW) 30ನೇ ಹುಟ್ಟುಹಬ್ಬದ ಸಂಭ್ರಮವನ್ನು ಸರ್ಚ್ ಇಂಜಿನ್ ದೈತ್ಯ ಗೂಗಲ್​ ವಿಶೇಷವಾದ ಡೂಡ್ಲ್ ಮೂಲಕ ಆಚರಿಸುತ್ತಿದೆ.​

ಯೂರೋಪಿನ CERN​ ಲ್ಯಾಬಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬ್ರಿಟಿಷ್ ವೈದ್ಯ ಸರ್​ ಟಿಮ್ ಬರ್ನರ್ಸ್​ ಲೀ ಎಂಬುವರು ಮಾರ್ಚ್ 12, 1989ರಂದು ನ್ಫರ್ಮೇಷನ್​ ಮ್ಯಾನೇಜ್​ಮೆಂಟ್​: ಎ ಪ್ರೊಪೋಸಲ್ ಎಂಬ ವರದಿಯನ್ನು ಸಲ್ಲಿಸಿದ್ದರು. ವ್ಯವಸ್ಥಿತವಾಗಿ ಮಾಹಿತಿಯನ್ನು ಸುರಕ್ಷಿತವಾಗಿ ಒದಗಿಸುವ ಜಾಲದ ಉಗಮಕ್ಕೆ ಇದು ನಾಂದಿ ಹಾಡಿತು.

Google Doodle Celebrates World Wide Webs 30th Birthday

ಗೂಗಲ್ 20ರ ಹುಟ್ಟುಹಬ್ಬದ ಸಂಭ್ರಮಕ್ಕೆ ವಿಶೇಷ ವಿಡಿಯೋ ಗೂಗಲ್ 20ರ ಹುಟ್ಟುಹಬ್ಬದ ಸಂಭ್ರಮಕ್ಕೆ ವಿಶೇಷ ವಿಡಿಯೋ

ಸ್ವಿಟ್ಜರ್ಲೆಂಡಿನ ಅಣುಭೌತಶಾಸ್ತ್ರ ಪ್ರಯೋಗಾಲಯ ಎನಿಸಿರುವ ಸಿಇಆರ್​ಎನ್​ನಲ್ಲಿರುವ ವಿಜ್ಞಾನಿಗಳಿಗೆ ತಮ್ಮ ನಡುವೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಮಾತ್ರ WWW ಸೀಮಿತವಾಗಿತ್ತು. ನಂತರ ಎಚ್​ಟಿಎಂಎಲ್ ಲಾಂಗ್ವೇಜ್ ಬಳಸಿ ಎಚ್​ಟಿಟಿಪಿ ಅಪ್ಲಿಕೇಷನ್​ಮತ್ತು WorldWideWeb.app ಅನ್ನು ಅಭಿವೃದ್ಧಿಪಡಿಸಲಾಯಿತು, ಹೈಪರ್ ಟೆಕ್ಸ್ಟ್ ಲಿಂಕ್ ಗಳ ಮೂಲಕ ಒಂದು ವೆಬ್ ಪುಟ ಒಂದು ಪದವನ್ನು ಕ್ಲಿಕ್ ಮಾಡಿದ ತಕ್ಷಣ ಅದು ನೇರವಾಗಿ ಸಂಪರ್ಕ ಸಾಧಿಸುವುದನ್ನು ಕಾಣಲಾಯಿತು.

Google Doodle Celebrates World Wide Webs 30th Birthday

WWW ಎಂಬುದು ಆನ್ ಲೈನ್ ಅಪ್ಲಿಕೇಷನ್ ಆಗಿದ್ದು, ಎಚ್ ಟಿ ಎಂಎಲ್ ಲಾಂಗ್ವೇಜ್, URL ವಿಳಾಸ, ಹೈಪರ್ ಟೆಕ್ಸ್ಟ್ ಟ್ರಾನ್ಸ್ ಫರ್ ಪ್ರೊಟೊಕಾಲ್ ಅಥವಾ HTTP ಮೂಲಕ ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಗೂಗಲ್ ತನ್ನ ಬ್ಲಾಗಿನಲ್ಲಿ ಬರೆದುಕೊಂಡಿದೆ. ಗೂಗಲ್ ಡೂಡ್ಲ್ ನಲ್ಲಿ ತಂತ್ರಜ್ಞಾನದ ಅಭಿವೃದ್ಧಿ ಹಂತಗಳನ್ನು ಪ್ರದರ್ಶಿಸಲಾಗಿದೆ. ಡೆಸ್ಕ್ ಟಾಪ್ ಮಾನಿಟರ್ ನಿಂದ ಇಂದಿನ ಅತಿವೇಗದ ಡೌನ್ ಲೋಡ್ ಯುಗದ ತನಕ ವಿವರ ಸಿಗಲಿದೆ. ಹೆಚ್ಚಿನ ಮಾಹಿತಿಯನ್ನು ಇಲ್ಲಿ ಓದಿರಿ

ಭಾರತರತ್ನ ಸರ್‌ಎಂ. ವಿಶ್ವೇಶ್ವರಯ್ಯನವರಿಗೆ ಗೂಗಲ್ ಡೂಡಲ್ ಗೌರವ ಭಾರತರತ್ನ ಸರ್‌ಎಂ. ವಿಶ್ವೇಶ್ವರಯ್ಯನವರಿಗೆ ಗೂಗಲ್ ಡೂಡಲ್ ಗೌರವ

ಇಂಟರ್ನೆಟ್ ಆವಿಷ್ಕರಿಸಿದ್ದು ಯಾರು? ಎಂಬುದನ್ನು ಈ ವಿಡಿಯೋದಲ್ಲಿ ನೋಡಬಹುದು.

English summary
On the 30th anniversary of the birth of the World Wide Web, Google is celebrating it with a doodle that is the reminder of how things were like in its early years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X