ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

75ನೇ ಸ್ವಾತಂತ್ರ್ಯದ ಗೂಗಲ್-ಡೂಡಲ್‌ನಲ್ಲಿ ಗಾಳಿಪಟ ತಯಾರಿಸಿದ ಕೇರಳದ ಕಲಾವಿದರು

|
Google Oneindia Kannada News

ಭಾರತವು 75 ವರ್ಷಗಳ ಸ್ವಾತಂತ್ರ್ಯವನ್ನು ಪೂರೈಸಿದೆ ಮತ್ತು ಇಂದು ಭಾರತವು ತನ್ನ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಗೂಗಲ್ ಕೂಡ ಡೂಡ್ಲ್ ರಚನೆ ಮಾಡುವ ಮೂಲಕ ದೇಶದ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿದೆ. ಈ ಡೂಡಲ್‌ನ್ನು ಕೇರಳ ಮೂಲದ ಅತಿಥಿ ಕಲಾವಿದರಾದ ನೀತಿ ಎಂಬುವರು ತಯಾರಿಸಿದ್ದಾರೆ.

ಈ ಡೂಡಲ್‌ನಲ್ಲಿ, ಜನರು ಭಾರತದ ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತಿರುವುದನ್ನು ಕಾಣಬಹುದು. ಅದರ ಥೀಮ್ ಸ್ವಾತಂತ್ರ್ಯ ದಿನದಂದು ಗಾಳಿಪಟ ಹಾರಿಸುವುದು. ಇದರೊಂದಿಗೆ ಆಕಾಶದಲ್ಲಿ ಹಾರಾಡುವ ಗಾಳಿಪಟವೂ ಕಳೆದ 75 ವರ್ಷಗಳಲ್ಲಿ ಭಾರತ ಎಲ್ಲಿಗೆ ತಲುಪಿದೆ ಎಂಬುದನ್ನು ತೋರಿಸುತ್ತದೆ. ಈ ಗೂಗಲ್ ಡೂಡಲ್ ಅಭಿವೃದ್ಧಿಯ ಕಥೆಯನ್ನು ತೋರಿಸುತ್ತದೆ ಮತ್ತು ಹೊಸ ಎತ್ತರವನ್ನು ಮುಟ್ಟುವ ಭಾರತದ ಭಾರತದ ಕನಸನ್ನು ಈ ಗಾಳಿಪಟವು ಸಕಾರಗೊಳಿಸುತ್ತಿದೆ ಎಂಬ ಸಂದೇಶ ಸಾರುತ್ತಿದೆ.

2022ರ ಸ್ವಾತಂತ್ರ್ಯ ದಿನದ ಡೂಡಲ್‌ನಲ್ಲಿ ಸುಂದರವಾದ ಗಾಳಿಪಟಗಳನ್ನು ತಯಾರಿಸುವ ಕಲೆಯನ್ನು ಚಿತ್ರಿಸಲಾಗಿದೆ. ಈ ಗೂಗಲ್ ಡೂಡಲ್‌ನಲ್ಲಿ, ಕೆಲವರು ಗಾಳಿಪಟಗಳನ್ನು ಹಾರಿಸುತ್ತಿರುವುದು ಕಂಡುಬಂದರೆ, ಮಹಿಳೆ ಗಾಳಿಪಟವನ್ನು ಸಹ ಮಾಡುತ್ತಿರುವುದು ಕಂಡುಬಂದಿದೆ. 75 ವರ್ಷಗಳ ಸ್ವಾತಂತ್ರ್ಯವನ್ನು ಬಿಂಬಿಸುವ ಗಾಳಿಪಟವು ತೆರೆದ ಆಕಾಶದಲ್ಲಿ ಹಾರುತ್ತಿದೆ. Gif ಅನಿಮೇಷನ್ ಈ ಡೂಡಲ್‌ಗೆ ಜೀವ ತುಂಬುತ್ತದೆ.

 ಸ್ವಾತಂತ್ರ್ಯ ಹೋರಾಟಗಾರರು ಗಾಳಿಪಟ ಬಳಸುತ್ತಿದ್ದರು

ಸ್ವಾತಂತ್ರ್ಯ ಹೋರಾಟಗಾರರು ಗಾಳಿಪಟ ಬಳಸುತ್ತಿದ್ದರು

ಈ ಗೂಗಲ್ ಡೂಡಲ್ ಚಿತ್ರ ರಚಿಸಿರುವ ಮಾಡುವ ಹಿಂದೆ ತನ್ನ ಆಲೋಚನೆಯ ಬಗ್ಗೆ ಮಾತನಾಡಿರುವ ಕಲಾವಿದರಾದ ನೀತಿ, ಗಾಳಿಪಟ ಹಾರಿಸುವುದು ನಮ್ಮ ನೆಚ್ಚಿನ ನೆನಪುಗಳಲ್ಲಿ ಒಂದಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಗಾಳಿಪಟ ಹಾರಿಸುವ ಪದ್ಧತಿ ದಶಕಗಳಿಂದ ಬಂದಿದ್ದು, ಈ ಸಂದರ್ಭದಲ್ಲಿ ಈ ಡೂಡಲ್ ಮಾಡಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಬ್ರಿಟಿಷರ ಆಡಳಿತದ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರರು ಗಾಳಿಪಟವನ್ನು ಬಳಸುತ್ತಿದ್ದರು. ಅಂದು ಬ್ರಿಟಿಷರ ವಿರುದ್ಧ ಸಂದೇಶಗಳನ್ನು ಬರೆದು ಅವರ ವಿರುದ್ಧ ಪ್ರತಿಭಟನೆಯಾಗಿ ಗಾಳಿಪಟಗಳ ಮೇಲೆ ಗಾಳಿಪಟ ಹಾರಿಸಲಾಗುತ್ತಿತ್ತು ಎನ್ನುವ ಸಂದೇಶವು ಇದೆ ಎನ್ನತ್ತಾರೆ ಕಲಾವಿದರಾದ ನೀತಿ.

 Google Doodle ಮಾಡಲು ಆಹ್ವಾನಿಸಲಾಗುತ್ತದೆ

Google Doodle ಮಾಡಲು ಆಹ್ವಾನಿಸಲಾಗುತ್ತದೆ

ನಿಮ್ಮ ಮಗು ಕೂಡ ಗೂಗಲ್‌ ಡೂಡಲ್ ಮಾಡಬೇಕು ಮತ್ತು ನಿಮ್ಮ ಮಗುವಿನ ಕಲೆಯನ್ನು ಗೂಗಲ್‌ನ ಮುಖಪುಟದಲ್ಲಿ ಪ್ರದರ್ಶಿಸಬೇಕು ಎಂದು ನೀವು ಭಾವಿಸಿದರೆ, ವಿಶೇಷವಾಗಿ ನಿಮ್ಮ ಮಕ್ಕಳನ್ನು Google-Doodle ಮಾಡಲು ಆಹ್ವಾನಿಸಲಾಗುತ್ತದೆ. ಮಕ್ಕಳು ನಮ್ಮ ದೇಶದ ಭವಿಷ್ಯದ ಮತ್ತು ಭವಿಷ್ಯದ ಭರವಸೆ ಮತ್ತು ಕನಸುಗಳು. ಮುಂದಿನ 25 ವರ್ಷಗಳಲ್ಲಿ ನೀವು ಭಾರತವನ್ನು ಎಲ್ಲಿ ನೋಡಲು ಬಯಸುತ್ತೀರಿ, ಮುಂದಿನ 25 ವರ್ಷಗಳ ಭಾರತದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಗೂಗಲ್‌ ನಿಮಗೆ ಅವಕಾಶವನ್ನು ನೀಡುತ್ತಿದೆ. ಮತ್ತು ಬಹುಶಃ ನಿಮ್ಮ ಮಗು ಮುಂದಿನ ಗೂಗಲ್‌ ಡೂಡಲ್‌ನಲ್ಲಿ ಕಾಣಿಸಬಹುದು.

 75 ವರ್ಷಗಳ ಸ್ವಾತಂತ್ರ್ಯವನ್ನು ಬಿಂಬಿಸುವ ಗಾಳಿಪಟ

75 ವರ್ಷಗಳ ಸ್ವಾತಂತ್ರ್ಯವನ್ನು ಬಿಂಬಿಸುವ ಗಾಳಿಪಟ

2022ರ ಸ್ವಾತಂತ್ರ್ಯ ದಿನದ ಡೂಡಲ್‌ನಲ್ಲಿ ಸುಂದರವಾದ ಗಾಳಿಪಟಗಳನ್ನು ತಯಾರಿಸುವ ಮತ್ತು ಹಾರಿಸುವ ಕಲೆಯನ್ನು ಚಿತ್ರಿಸಲಾಗಿದೆ. ಅದೇ ಸಮಯದಲ್ಲಿ, ಡೂಡಲ್‌ನಲ್ಲಿ ಕೆಲವರು ಗಾಳಿಪಟಗಳನ್ನು ಹಾರಿಸುತ್ತಿರುವುದು ಕಂಡುಬರುತ್ತದೆ. 75 ವರ್ಷಗಳ ಸ್ವಾತಂತ್ರ್ಯವನ್ನು ಬಿಂಬಿಸುವ ಗಾಳಿಪಟವು ತೆರೆದ ಆಕಾಶದಲ್ಲಿ ಹಾರುತ್ತಿದೆ. Gif ಅನಿಮೇಷನ್ ಈ ಡೂಡಲ್‌ಗೆ ಜೀವ ತುಂಬುತ್ತದೆ.

 'ಗಾಳಿಪಟ ಹಾರಿಸುವುದು ನಮ್ಮ ನೆಚ್ಚಿನ ನೆನಪು'

'ಗಾಳಿಪಟ ಹಾರಿಸುವುದು ನಮ್ಮ ನೆಚ್ಚಿನ ನೆನಪು'

ನಾನು ಈ ಡೂಡಲ್ ಮಾಡುವಾಗ, ಕಲಾವಿದರಾದ ನೀತಿ ಮಾತನಾಡುತ್ತಾ, ಗಾಳಿಪಟ ಹಾರಿಸುವುದು ನಮ್ಮ ನೆಚ್ಚಿನ ನೆನಪುಗಳಲ್ಲಿ ಒಂದಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಗಾಳಿಪಟ ಹಾರಿಸುವ ಪದ್ಧತಿ ದಶಕಗಳಿಂದ ಬಂದಿದ್ದು, ಈ ಸಂದರ್ಭದಲ್ಲಿ ಈ ಡೂಡಲ್ ಮಾಡಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಬ್ರಿಟಿಷರ ಆಡಳಿತದ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರರು ಗಾಳಿಪಟವನ್ನು ಬಳಸುತ್ತಿದ್ದರು. ಆ ಸಮಯದಲ್ಲಿ ಬ್ರಿಟಿಷರ ವಿರುದ್ಧ ಸಂದೇಶಗಳನ್ನು ಬರೆಯುವ ಮೂಲಕ ಅವರ ವಿರುದ್ಧ ಪ್ರತಿಭಟನೆಯಾಗಿ ಗಾಳಿಪಟಗಳ ಮೇಲೆ ಗಾಳಿಪಟಗಳನ್ನು ಹಾರಿಸಲಾಯಿತು ಎಂದು ಕಲಾವಿದರು ಹೇಳಿದ್ದಾರೆ.

English summary
As India is celebrating its 75th Independence Day on Monday, search engine Google has dedicated its doodle to honour the World's largest democracy,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X