• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

15ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಜಿ ಮೇಲ್, ಏನು ವಿಶೇಷ?

|

ಸುಮಾರು 15 ವರ್ಷಗಳ ಹಿಂದೆ ವೆಬ್ ಆಧಾರಿತ ಇಮೇಲ್ ಸೇವೆ ಜಿ ಮೇಲ್ ಅನ್ನು ಗೂಗಲ್ ತನ್ನ ಬಳಕೆದಾರರಿಗೆ ಪರಿಚಯಿಸಿತ್ತು. ಏಪ್ರಿಲ್ 01ರಂದು ಈ ಹೊಸ ಉತ್ಪನ್ನ ಹೊರ ಬಂದಾಗ ಇದು ಏಪ್ರಿಲ್ ಫೂಲ್ ಮಾಡಲು ಗೂಗಲ್ ಮಾಡಿರುವ ಯೋಜನೆ ಎಂದೇ ಹಲವರು ಭಾವಿಸಿದ್ದರು.ಈಗ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಕೆಲವು ಹೊಸ ಫೀಚರ್ ಗಳನ್ನು ಘೋಷಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸರ್ಚ್ ಇಂಜಿನ್ ದಿಗ್ಗಜ ಗೂಗಲ್ ನ ಅತ್ಯಂತ ಜನಪ್ರಿಯ ಉತ್ಪನ್ನಗಳ ಪೈಕಿ ಜಿ ಮೇಲ್ ಕೂಡಾ ಒಂದು ಜೀ ಮೇಲ್ ಗೆ ಲಾಗಿನ್ ಆದರೆ ಸಾಕು ಹತ್ತಾರು ಗೂಗಲ್ ಉತ್ಪನ್ನಗಳಿಗೆ ರಹದಾರಿ ಸಿಗುತ್ತದೆ.

ಹೊಸದೇನಿದೆ?: ಜಿ ಮೇಲ್ ನಲ್ಲಿ ಇನ್ಮುಂದೆ ಸ್ಮಾರ್ಟ್ ಕಂಪೋಸ್ ಫೀಚರ್ ನೀಡಲಾಗುತ್ತದೆ. ಇದರಿಂದ ಇನ್ ಸ್ಟಂಟ್ ಆಗಿ ಇಮೇಲ್ ಬರೆದು ಕಳಿಸಬಹುದು. ಹಾಗೂ ಬಂದಿರುವ ಇಮೇಲ್ ಗೆ ಉತ್ತರಿಸಬಹುದು. ಇದಕ್ಕೆ ನೆರವಾಗಲು ಕೆಲವು ಪೂರ್ವ ನಿಗದಿತ ಪದ, ವಾಕ್ಯಗಳನ್ನು ಕೂಡಾ ನೀಡಲಾಗಿದೆ. ಸದ್ಯಕ್ಕೆ ಈ ಹೊಸ ಫೀಚರ್ ಆಂಡ್ರಾಯ್ಡ್ ಸಾಧನಗಳು ಹಾಗೂ ಐಒಎಸ್ ನಲ್ಲಿ ಲಭ್ಯ. ಸ್ಪಾನೀಷ್, ಫ್ರೆಂಚ್, ಇಟಾಲಿಯನ್ ಹಾಗೂ ಪೋರ್ಚುಗೀಸ್ ಭಾಷೆಯಲ್ಲೂ ಲಭ್ಯ.

ಮತ್ತೊಂದು ಹೊಸ ಸೌಲಭ್ಯವೆಂದರೆ ಜಿ ಮೇಲ್ ನಲ್ಲೀಗ ಇ ಮೇಲ್ ಗಳನ್ನು ಶೆಡ್ಯೂಲ್ ಮಾಡಬಹುದು. ಈಗ ಇ ಮೇಲ್ ಬರೆದು ನಂತರ ಬೇಕಾದ ಸಮಯಕ್ಕೆ ಪತ್ರವನ್ನು ಕಳಿಸಬಹುದು.

ರಾಜ್ಯದ ಸಂಸದರಲ್ಲಿ ಯಾರ ವಿರುದ್ಧ ಎಷ್ಟು ಕ್ರಿಮಿನಲ್ ಪ್ರಕರಣಗಳಿವೆ?

ಮುರ್ನಾಲ್ಕು ವರ್ಷಗಳ ಹಿಂದೆ ಗೂಗಲ್ ನಲ್ಲಿ Undo send ಆಯ್ಕೆಯನ್ನು ಪರಿಚಯಿಸಲಾಗಿತ್ತು. ಹೀಗಾಗಿ ಆತುರಕ್ಕೆ ಕಳಿಸಿದ ಇಮೇಲ್ ನಲ್ಲಿ ಏನಾದರೂ ತಪ್ಪಾಗಿದ್ದರೆ ಅದನ್ನು ತಿದ್ದು ಮತ್ತೊಮ್ಮೆ ಕಳಿಸಬಹುದಾಗಿದೆ. ಈ ಆಯ್ಕೆ ಬಳಸಿಕೊಳ್ಳಲು ಸುಮಾರು 6 ರಿಂದ 30 ಸೆಕೆಂಡುಗಳ ಕಾಲ ಅವಕಾಶ ಕಲ್ಪಿಸಲಾಗಿದೆ

2004ರಲ್ಲಿ ಹೊರ ಬಂದ ಉತ್ಪನ್ನ ಜಿ ಮೇಲ್

2004ರಲ್ಲಿ ಹೊರ ಬಂದ ಉತ್ಪನ್ನ ಜಿ ಮೇಲ್

ಹಾಟ್ ಮೇಲ್, ಯಾಹೂ ಮೇಲ್ ಮುಂಚೂಣಿಯಲ್ಲಿದ್ದ ಕಾಲದಲ್ಲಿ 2004ರಲ್ಲಿ ಗೂಗಲ್ ತನ್ನದೇ ಆದ ಉಚಿತ ಇ ಮೇಲ್ ಸೇವೆ ಆರಂಭಿಸಿತು. ಮೊದಲ ಅನುಭವದಲ್ಲೇ ಜಿ ಮೇಲ್ ಹಲವರಿಗೆ ಇಷ್ಟವಾಯಿತು. ನಂತರ ಗೂಗಲ್ ಇತರೆ ಉತ್ಪನ್ನಗಳ ಜೊತೆ ಹೊಂದಾಣಿಕೆ ಮಾಡಲಾಯಿತು. ವಿಶೇಷವೆಂದರೆ ಜುಲೈ 7,2009ರ ತನಕ ಪರೀಕ್ಷಾ ಹಂತದಲ್ಲಿರಿಸಲಾಗಿತ್ತು. ನಂತರ ವಾಣಿಜ್ಯ ಉದ್ದೇಶಕ್ಕಾಗಿ ಲಭ್ಯವಾಯಿತು.

ಜಿ ಮೇಲ್ ಡೆವಲಪರ್ ಯಾರು?

ಜಿ ಮೇಲ್ ಡೆವಲಪರ್ ಯಾರು?

ಏಂಜೆಲ್ ಹೂಡಿಕೆದಾರರಾಗಿದ್ದ ಪಾಲ್ ಬುಶೆಟ್ ಅವರು ಜಿ ಮೇಲ್ ನ ಅಭಿವೃದ್ಧಿಪಡಿಸಿದವರು ಎಂಬ ಶ್ರೇಯಸ್ಸು ಹೊಂದಿದ್ದಾರೆ. ಗೂಗಲ್ ನ 23ನೇ ಉದ್ಯೋಗಿಯಾಗಿರುವ ಇವರು 2001ರಿಂದ ಈ ಯೋಜನೆಯಲ್ಲಿ ತೊಡಗಿಕೊಂಡಿದ್ದರು. ಜಿ ಮೇಲ್ ಅಲ್ಲದೆ, ಬಹು ಕೋಟಿ ಆಡ್ ಸೆನ್ಸ್ ವಿನ್ಯಾಸಗೊಳಿಸಿದ್ದು ಇದೆ ವ್ಯಕ್ತಿ. ಆದರೆ, 2006ರಲ್ಲಿ ಗೂಗಲ್ ತೊರೆದು ಫ್ರೆಂಡ್ ಫೀಡ್ ಆರಂಭಿಸಿದರು, ನಂತರ ಅದು ಫೇಸ್ ಬುಕ್ ಪಾಲಾಯಿತು.

ಕ್ಲೌಡ್ ಸ್ಟೋರೆಜ್ ಹೆಚ್ಚಳ

ಕ್ಲೌಡ್ ಸ್ಟೋರೆಜ್ ಹೆಚ್ಚಳ

ಮೊಟ್ಟ ಮೊದಲ ಜಿ ಮೇಲ್ ಅವೃತ್ತಿ ಕೇವಲ 1 ಜಿಬಿ ಕ್ಲೌಡ್ ಸ್ಟೋರೇಜ್ ಆಫರ್ ನೀಡುತ್ತಿತ್ತು. ನಂತರ ಉಚಿತ ಸ್ಟೋರೇಜ್ ಮಿತಿ 2012ರ ವೇಳೆಗೆ ಹೆಚ್ಚಳ ಕಂಡು 7.5 ಜಿಬಿಯಿಂದ 10 ಜಿಬಿ ಆಯಿತು. 2013ರ ನಂತರ ಗೂಗಲ್ ಡ್ರೈವ್, ಫೋಟೋಸ್ ಜತೆ ಸಿಂಕ್ ಮಾಡಲಾಯಿತು. ಸದ್ಯ 15 ಜಿಬಿ ತನಕ ಉಚಿತ ಸ್ಟೋರೇಜ್ ಲಭ್ಯವಿದೆ.

ಇಂಟರ್ ಫೇಸ್ ಬಳಕೆ ಅಧಿಕ

ಇಂಟರ್ ಫೇಸ್ ಬಳಕೆ ಅಧಿಕ

2004ರಲ್ಲಿ ಜಿ ಮೇಲ್ ಆರಂಭವಾದರೂ 2011ರ ವೇಳೆಗೆ ಸೂಕ್ತವಾದ ಇಂಟರ್ ಫೇಸ್ ಹೊಂದಲು ಸಾಧ್ಯವಾಯಿತು. ಲೇಬಲ್ಸ್, ಫಿಲ್ಟರ್ಸ್ ಸೇರಿದಂತೆ ಸುಲಭವಾಗಿ ಇಮೇಲ್ ಬಳಕೆಗೆ ನಾಂದಿ ಹಾಡಲಾಯಿತು.

ಕೃತಿಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್

ಕೃತಿಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್

ಮಷಿನ್ ಲರ್ನಿಂಗ್ ಸೌಲಭ್ಯದ ಮೂಲಕ ಇ ಮೇಲ್ ಇನ್ನಷ್ಟು ಸ್ಮಾರ್ಟ್ ಆಗಿದೆ. ಇಮೇಲ್ ಗೆ ಸ್ಮಾರ್ಟ್ ಆಗಿ ತಕ್ಷಣವೆ ಪ್ರತಿಕ್ರಿಯಿಸಲು ಸಾಧ್ಯವಾಗಿದೆ. ನಿಮ್ಮ ಇಮೇಲ್ ಡ್ರಾಫ್ಟ್ ಮಾಡಲು, ನಿಮಗೆ ಅಗತ್ಯವಿರುವ ಪದ, ವಾಕ್ಯ ರಚನೆಗೆ ನೆರವಾಗಲಿದೆ. ಇದಲ್ಲದೆ, ಇ ಮೇಲ್ ಸೇವೆ ದೊಡ್ಡ ತಲೆನೋವಾದ ಸ್ಪಾಮ್ ಸಂದೇಶಗಳನ್ನು ಬ್ಲಾಕ್, ಫಿಲ್ಟರ್ ಮಾಡುವುದು ಸುಲಭವಾಗಿದೆ.

English summary
Fifteen years ago, Google introduced its web-based email service, Gmail. The free service offered more storage than competing services back in 2004. As the search giant marks the 15th anniversary of its very popular product, there are a handful of new features which are also making their way into Gmail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X