ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ವೆಸ್ಟ್‌ಕೋಸ್ಟ್‌' ಹೋಟೆಲ್‌: ಕೃತಕ ಬಣ್ಣವಿಲ್ಲ, ರುಚಿಗೆ ಬರವಿಲ್ಲ

|
Google Oneindia Kannada News

ಮಾಡರ್ನ್ ಫುಡ್‌ ಜತೆಗೆ ದೇಸಿ ಸ್ವಾದ, ಕರಾವಳಿ ಮಾಂಸಾಹಾರಕ್ಕೆ ಪಕ್ಕಾ ಹಳ್ಳಿ ಸ್ಪರ್ಶ, ಇವೆಲ್ಲದರ ಜತೆಗೆ ಉತ್ತಮ ಆತಿಥ್ಯ ಬೇಕೆಂದರೆ ಗ್ಲೋಬಲ್ ವಿಲೇಜ್ ಬಳಿ ಇರುವ ' ಗ್ಲೋಬಲ್ ವೆಸ್ಟ್‌ ಕೋಸ್ಟ್' ಹೇಳಿ ಮಾಡಿಸಿದ ಹೋಟೆಲ್‌ ಆಗಿದೆ.

ಉತ್ತರಹಳ್ಳಿ ಕೆಂಗೇರಿ ಮುಖ್ಯರಸ್ತೆಯಲ್ಲಿ ಬಿಜಿಎಸ್ ಆಸ್ಪತ್ರೆ ಹಾಗೂ ಗ್ಲೋಬಲ್ ವಿಲೇಜ್‌ಗೆ ತೆರಳುವ ಜಂಕ್ಷನ್‌ನಲ್ಲಿರುವ, ವೆಸ್ಟ್‌ ಕೋಸ್ಟ್‌ ಹೋಟೆಲ್ ಕಳೆದ ವರ್ಷ ಕೊರೊನಾ ಲಾಕ್‌ಡೌನ್‌ಗೆ ಕೆಲವೇ ದಿನಗಳಿರುವ ಮುನ್ನ ಆರಂಭವಾಯಿತು.

ಲಾಕ್‌ಡೌನ್‌ನಿಂದಾಗಿ ಬೆಂಗಳೂರು ಸೇರಿದಂತೆ ದೇಶದ ಇತರೆಡೆ ಹೋಟೆಲ್ ಉದ್ಯಮವೇ ನೆಲ ಕಚ್ಚಿ ಹೋಯಿತು. ಎಷ್ಟೋ ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಲಾಕ್‌ಡೌನ್‌ಗೂ ಮೊದಲಿದ್ದ ರುಚಿಯೇ ಕಾಣಿಸುತ್ತಿಲ್ಲ. ಹೋಟೆಲ್‌ ಗೆ ಹಳೆಯ ಅಡುಗೆ ಭಟ್ಟರು ಸಿಗದೆ ಅದೆಷ್ಟೋ ಮಾಲಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆದರೆ ಇವೆಲ್ಲಾ ಸವಾಲುಗಳ ಮಧ್ಯೆ ವೆಸ್ಟ್‌ ಕೋಸ್ಟ್‌ ಎನ್ನುವ ವಿನೂತನ ಹೋಟೆಲ್‌ನ್ನು ಕಟ್ಟಿ ಬೆಳೆಸಿದ ಶ್ರೇಯ ಹೋಟೆಲ್ ಉದ್ಯಮಿ ' ಮಹಾವೀರ್‌ ಜೈನ್' ಅವರಿಗೆ ಸಲ್ಲುತ್ತದೆ.

ಸ್ವತಃ ಸ್ವಾದಿಷ್ಟಕರವಾಗಿ ಅಡುಗೆ ಮಾಡುವ ಮಹಾವೀರ್ ಜೈನ್ ಅವರು ಹೋಟೆಲ್‌ನಲ್ಲಿ ಲಾಕ್‌ಡೌನ್ ಬಳಿಕವೂ ಅದೇ ರುಚಿಯನ್ನು ಉಳಿಸಿಕೊಳ್ಳಲು ಸಫಲರಾಗಿದ್ದಾರೆ.

ಕೃತಕ ಬಣ್ಣವಿಲ್ಲ , ರುಚಿಗೆ ಬರವಿಲ್ಲ

ಕೃತಕ ಬಣ್ಣವಿಲ್ಲ , ರುಚಿಗೆ ಬರವಿಲ್ಲ

ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿನ ಸಾಕಷ್ಟು ಹೋಟೆಲ್‌ಗಳಿಗೆ ಹೋದರೆ, ಆಹಾರವನ್ನು ರುಚಿಯಾಗಿ ಕೊಡುವುದರ ಜತೆಗೆ ಆಕರ್ಷಣೆಯ ಉದ್ದೇಶಕ್ಕಾಗಿ ಕೃತಕ ಬಣ್ಣಗಳ ಬಳಕೆ ಹೆಚ್ಚಾಗುತ್ತಿದೆ.

ಇದರಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮ ಒಂದೆರಡಲ್ಲ. ಆದರೆ ಖುದ್ದು ಶೆಫ್ ಆಗಿರುವ ಮಹಾವೀರ್ ಜೈನ್ ಹೇಳುವಂತೆ ಅವರ ಹೋಟೆಲ್‌ನಲ್ಲಿ ಸೂಪ್, ಸ್ಟಾರ್ಟರ್ಸ್ ಸೇರಿ ಯಾವುದೇ ಆಹಾರಕ್ಕೂ ಕೃತಕ ಬಣ್ಣವನ್ನು ಸೇರಿಸುವುದಿಲ್ಲವಂತೆ, ಆದರೂ ವೆಸ್ಟ್‌ ಕೋಸ್ಟ್ ನ ಯಾವುದೇ ಮಸಾಲಾ ಪದಾರ್ಥಗಳಲ್ಲಿ ಬಣ್ಣಕ್ಕೆ ಕೊರತೆಯಾಗುವುದಿಲ್ಲ ಅದಕ್ಕೆ ಕಾರಣ ಅವರು ಬಳಸುವ ಕಾಶ್ಮೀರಿ, ಬ್ಯಾಡಗಿ ಮೆಣಸು ಬಳಕೆ ಮಾಡಲಾಗುತ್ತದೆ.

ವೆಸ್ಟ್‌ಕೋಸ್ಟ್‌ನ ಸ್ಪೆಷನ್ ಫುಡ್‌

ವೆಸ್ಟ್‌ಕೋಸ್ಟ್‌ನ ಸ್ಪೆಷನ್ ಫುಡ್‌

ಚಿಕನ್, ಫಿಶ್, ಮೊಟ್ಟೆಯಿಂದ ತಯಾರಿಸಿದ ಸಾಕಷ್ಟು ಆಹಾರಗಳು ಲಭ್ಯವಿದೆ. ಆದರೆ ಚಿಕನ್ ಗೀ ರೋಸ್ಟ್‌, ಬಾಳೆಲೆ ಮೀನು ಊಟ, ನೀರು ದೋಸೆ, ಕಾಣೆ ಕರಿ, ಅಂಜಲ್ ತವಾ ಫ್ರೈ, ಚಿಕನ್ ಸುಕ್ಕಾ ಫಿಶ್ ಮೀಲ್, ಪ್ರಾನ್ಸ್ ಕರಿ ಫೇಮಸ್ ಆಹಾರಗಳಾಗಿವೆ.

ಅದ್ಭುತ ಸಸ್ಯಾಹಾರಿ ಆಹಾರಗಳೂ ಲಭ್ಯ

ಅದ್ಭುತ ಸಸ್ಯಾಹಾರಿ ಆಹಾರಗಳೂ ಲಭ್ಯ

ವೆಸ್ಟ್‌ಕೋಸ್ಟ್‌ನಲ್ಲಿ ಉತ್ತಮ ಮಾಂಸಾಹಾರಿ ಆಹಾರಗಳ ಜತೆ ಕೆಲವು ಸಸ್ಯಾಹಾರಿ ಪದಾರ್ಥಗಳೂ ದೊರೆಯುತ್ತವೆ. ಇದರ ಜತೆಗೆ ಅದರ ಪಕ್ಕದಲ್ಲಿಯೇ ಸಸ್ಯಾಹಾರಕ್ಕೆಂದೇ ಪ್ರತ್ಯೇಕ ಹೋಟೆಲ್ ಕೂಡ ಇದೆ.

ಇವರದೇ ಮಾಲಿಕತ್ವದ ಗ್ಲೋಬಲ್ ಕೃಷ್ಣಲೀಲಾ ಈಗಾಗಲೇ ಸುತ್ತಮುತ್ತಲಿನ ಜನರ ಇಷ್ಟದ ಹೋಟೆಲ್‌ ಆಗಿದೆ. ದಕ್ಷಿಣ ಹಾಗೂ ಉತ್ತರ ಭಾರತದ ಎಲ್ಲಾ ರೀತಿಯ ಆಹಾರದ ಜತೆಗೆ, ಚಾಟ್ಸ್, ಜ್ಯೂಸ್, ಐಸ್‌ಕ್ರೀಂ ಕೂಡ ಇಲ್ಲಿ ಲಭ್ಯವಿದೆ.

ಹೋಟೆಲ್ ಉದ್ಯಮ ಆರಂಭದ ಹಿಂದಿನ ಕತೆ

ಹೋಟೆಲ್ ಉದ್ಯಮ ಆರಂಭದ ಹಿಂದಿನ ಕತೆ

ಉದ್ಯಮಿ ಮಹಾವೀರ್ ಜೈನ್ ಹೇಳುವಂತೆ, ' ನಾನು ಮೂಲತಃ ಕುಂದಾಪುರದವನು, ದ್ವಿತೀಯ ಪಿಯುಸಿ ಮುಗಿಯುತ್ತಿದ್ದಂತೆ, ಊರು ಬಿಟ್ಟು ಬಾಂಬೆಗೆ ಓಡಿ ಹೋಗಿದ್ದೆ, ಯಾವುದೋ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ, ಹಾಗೆಯೇ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಬೇಕು ಎಂಬ ಹಂಬಲವೂ ಶುರುವಾಗಿತ್ತು. ಬೆಳಗ್ಗೆ ಕಾಲೇಜಿಗೆ ಹೋಗುತ್ತಾ ಸಂಜೆ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದೆ, ಹೀಗೆ ಹೋಟೆಲ್ ಉದ್ಯಮಕ್ಕೆ ಕಾಲಿಟ್ಟೆ, ಈಗ ಗ್ಲೋಬಲ್ ಕೃಷ್ಣಲೀಲಾ, ವೆಸ್ಟ್‌ಕೋಸ್ಟ್‌ ಎನ್ನುವ 2 ಹೋಟೆಲ್‌ಗಳನ್ನು ನಿರ್ಮಿಸಿದ್ದೇನೆ' ಎಂದು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.

ಹೋಟೆಲ್ ಮುಚ್ಚಿದ್ದರೂ ಸಂಬಳ ಕೊಡುವುದು ನಿಲ್ಲಿಸಿರಲಿಲ್ಲ

ಹೋಟೆಲ್ ಮುಚ್ಚಿದ್ದರೂ ಸಂಬಳ ಕೊಡುವುದು ನಿಲ್ಲಿಸಿರಲಿಲ್ಲ

ಹೋಟೆಲ್ ಉದ್ಯಮದಲ್ಲಿ ಕೆಲಸಗಾರರನ್ನು ಇರಿಸಿಕೊಳ್ಳುವುದು ಸವಾಲಿನ ಕೆಲಸ, ಹೀಗಾಗಿ ಲಾಕ್‌ಡೌನ್ ಅವಧಿಯಲ್ಲಿ ಹೋಟೆಲ್‌ಗಳು ಸಂಪೂರ್ಣ ಮುಚ್ಚಿದ್ದರೂ, 3 ತಿಂಗಳುಗಳ ಕಾಲ 90ಕ್ಕೂ ಅಧಿಕ ಹೋಟೆಲ್ ಕೆಲಸಗಾರರಿಗೆ ಸಂಬಳ ಕೊಡುವುದು ಮಾತ್ರ ನಿಲ್ಲಿಸಿರಲಿಲ್ಲ. ಭವಿಷ್ಯದ ಉತ್ತಮ ದಿನಗಳಿಗಾಗಿ ಅವರನ್ನು ಉಳಿಸಿಕೊಳ್ಳಲು ಹೋಟೆಲ್‌ ಮುಚ್ಚಿದ್ದರೂ ಸಂಬಳ ಕೊಡುವುದು ಅನಿವಾರ್ಯವಾಗಿತ್ತು.

ಕೊರೊನಾ ಲಾಕ್‌ಡೌನ್‌ ಕಾಲದಿಂದಾದ ನಷ್ಟವನ್ನೇ ಸಹಿಸಿಕೊಳ್ಳುವುದು ಕಷ್ಟವಾಗಿದ್ದರೂ, ಸಿಬ್ಬಂದಿಗೆ ಸಂಬಳ ನೀಡಿ ಉಳಿಸಿಕೊಂಡಿದ್ದೆ, ಸರ್ಕಾರ ಶ್ರಮಿಕ ರೈಲುಗಳನ್ನು ಆರಂಭಿಸಿದ ಬಳಿಕ ಎಲ್ಲರೂ ತಮ್ಮ ಊರುಗಳಿಗೆ ಮರಳಿದ್ದರು.

ಆಗಸ್ಟ್ ತಿಂಗಳಲ್ಲಿ ಮತ್ತೆ ಹೋಟೆಲ್ ಆರಂಭಿಸಿದಾಗ ಪ್ರತಿಯೊಬ್ಬ ಕೆಲಸಗಾರರನ್ನು ಹಿಂದಕ್ಕೆ ಕರೆಸಿಕೊಳ್ಳಲಾಯಿತು ಎನ್ನುತ್ತಾರೆ ಮಹಾವೀರ್ ಜೈನ್.

Recommended Video

Positive Story :ಸಾರ್ವಜನಿಕರ ಬಳಕೆಗೆ ಸಿದ್ಧವಾಗಿದೆ ದೇಶದ ಮೊದಲ ಎಸಿ ರೈಲ್ವೆ ಟರ್ಮಿನಲ್ | Oneindia Kannada
ಹೋಟೆಲ್ ಉದ್ಯಮಿ ಮಹಾವೀರ್ ಜೈನ್ ಹೇಳುವುದೇನು?

ಹೋಟೆಲ್ ಉದ್ಯಮಿ ಮಹಾವೀರ್ ಜೈನ್ ಹೇಳುವುದೇನು?

ಆಗಸ್ಟ್‌ನಿಂದ ಹೋಟೆಲ್‌ಗಳೇನೋ ಆರಂಭವಾಗಿವೆ ಆದರೆ ಕಳೆದ ವರ್ಷ ಲಾಕ್‌ಡೌನ್‌ಗೂ ಮುನ್ನವಿದ್ದ ಆ ಉದ್ಯಮ ಇನ್ನೂ ಆರಂಭವಾಗಿಲ್ಲ, ಸಾಕಷ್ಟು ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ, ಗ್ಲೋಬಲ್ ವಿಲೇಜ್‌ ಕೂಡ ತೆರೆದಿಲ್ಲ, ಮುಂದಿನ ದಿನಗಳಲ್ಲಿ ವ್ಯಾಪಾರ ಚೆನ್ನಾಗಿ ಆಗಬಹುದು ಎನ್ನುವ ಭರವಸೆ ಇದೆ ಎನ್ನುತ್ತಾರೆ ಮಹಾವೀರ್ ಜೈನ್.

English summary
Global West Coast Hotel Famous For Modern Style Non Veg Foods In Rajarajeshwari Nagar In Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X