ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಗೀತು ಕಥೆ! ನಾವೇ ಮಾಡಿದ ತಪ್ಪಿಗೆ, ನಮಗೇ ಕಾದಿದೆ ಕಂಟಕ!

|
Google Oneindia Kannada News

ವಿಜ್ಞಾನಿಗಳು ಪರಿಪರಿಯಾಗಿ ಬೇಡಿದರೂ ಕೇಳಲಿಲ್ಲ ತಜ್ಞರು ನೂರಾರು ವರದಿ ಕೊಟ್ಟರೂ ಕೇರ್ ಮಾಡಲಿಲ್ಲ. ಇದರ ಪರಿಣಾಮವೇ ಜಾಗತಿಕ ತಾಪಮಾನ ಏರಿಕೆ, ಅರ್ಥಾತ್ ಸಾಮಾನ್ಯ ಭಾಷೆಯಲ್ಲಿ ಇದು 'ಪ್ರಳಯ'ವೇ ಆಗಿದೆ. ಇದೀಗ ಎಲ್ಲರನ್ನು ಬೆಚ್ಚಿಬೀಳಿಸುವ ವರದಿಯೊಂದು ರಿವೀಲ್ ಆಗಿದೆ, 2025ರ ವೇಳೆಗೆ ತಾಪಮಾನವು 1.5 ಡಿಗ್ರಿ ಸೆಲ್ಸಿಯಸ್ ಏರಿಕೆ ಕಾಣಲಿದೆಯಂತೆ.

ಜಗತ್ತಿನ ತಾಪಮಾನ ಏರುತ್ತಿದೆ, ಹಿಮಪದರವೂ ಕರಗುತ್ತಿದೆ, ನೀರಿನ ಮಟ್ಟ ಏರುತ್ತಿದೆ. ಬಹುಶಃ ಕಳೆದ ಎರಡು ದಶಕಗಳಿಂದ ಈ ಡೈಲಾಗ್ ಕಾಮನ್ ಆಗಿದೆ. ಆದ್ರೆ ಈಗಿನ ಪರಿಸ್ಥಿತಿ ಮಾತ್ರ ಭಯಾನಕವಾಗಿದೆ. ಏಕೆಂದರೆ ಪ್ರಕೃತಿ ವಿಕೋಪಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲೇ ಮತ್ತೆ ಕಂಟಕ ಎದುರಾಗುತ್ತಿದೆ.

ತಾಪಮಾನ ವರ್ಷದಿಂದ ವರ್ಷಕ್ಕೆ ಏರಿಕೆ ಕಂಡಷ್ಟೂ ಭೂತಾಯಿ ಆರೋಗ್ಯ ಕೂಡ ಹದಗೆಡುತ್ತಿದೆ. 2020ರಲ್ಲೇ ಜಗತ್ತು ಬೆಚ್ಚಿಬೀಳುವ ಅಂಕಿ-ಅಂಶ ರಿವೀಲ್ ಆಗಿತ್ತು. ಮಾನವನ ಇತಿಹಾಸದಲ್ಲೇ 2020 3ನೇ ಅತಿಹೆಚ್ಚು ತಾಪಮಾನ ತೋರಿದ ವರ್ಷವಾಗಿ ಸ್ಥಾನ ಪಡೆದಿತ್ತು.

ಮನುಷ್ಯನೇ ಸೃಷ್ಟಿಸಿದ ಪ್ರಳಯ! ಅಳಿಸಿ ಹೋಗುತ್ತಾ ಮಾನವರ ಇತಿಹಾಸ?ಮನುಷ್ಯನೇ ಸೃಷ್ಟಿಸಿದ ಪ್ರಳಯ! ಅಳಿಸಿ ಹೋಗುತ್ತಾ ಮಾನವರ ಇತಿಹಾಸ?

2016 ಹಾಗೂ 2019ರ ನಂತರ 2020 ಅತಿಹೆಚ್ಚು ತಾಪಮಾನ ಹೊಂದಿರುವ ವರ್ಷವಾಗಿ ಸ್ಥಾನ ಪಡೆದಿದ್ದವು. 2020ರಲ್ಲಿ ಜಗತ್ತಿನ ತಾಪಮಾನ 1.2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿತ್ತು, ಆದ್ರೆ ಈ ಪ್ರಮಾಣ 2025ರ ವೇಳೆಗೆ 1.5 ಡಿಗ್ರಿ ತಲುಪಲಿದೆ ಎಂದರೆ ನೀವೇ ಊಹಿಸಿ ಪರಿಸ್ಥಿತಿ ಎಷ್ಟು ಕೈಮೀರಿ ಹೋಗಬೇಡ ಎಂಬುದನ್ನು..

ಪರಿಸ್ಥಿತಿ ಕೈಮೀರಿ ಎಲ್ಲಾ ನಾಶವಾಗುತ್ತಿದೆ

ಪರಿಸ್ಥಿತಿ ಕೈಮೀರಿ ಎಲ್ಲಾ ನಾಶವಾಗುತ್ತಿದೆ

ಎಷ್ಟೇ ಹೇಳಿದರೂ, ಎಷ್ಟೇ ಬೇಡಿದರೂ ಮಾನವ ಪ್ರಕೃತಿ ಮೇಲೆ ತೋರುತ್ತಿರುವ ದೌರ್ಜನ್ಯ ನಿಲ್ಲುತ್ತಿಲ್ಲ. ಇದರ ಎಫೆಕ್ಟ್ ಭೂಮಿ ಮೇಲಾಗುತ್ತಿದೆ. ಇದು ಮಾನವನಿಗೇ 'ತಿರುಗಬಾಣ'ವಾಗುತ್ತಿದ್ದು, ಪ್ರಕೃತಿ ಮೇಲಿನ ದೌರ್ಜನ್ಯ ರಿಸಲ್ಟ್ ಕೊಡುತ್ತಿದೆ. ಗ್ರೀನ್‌ ಲ್ಯಾಂಡ್‌ನಲ್ಲಿರುವ ಹಿಮಪದರ ಸುಮಾರು 17 ಲಕ್ಷ ಚದರ ಕಿ.ಮೀ ವ್ಯಾಪ್ತಿಯಲ್ಲಿ ಹರಡಿದ್ದು, ಇದು ಮುಂದಿನ 900 ವರ್ಷದಲ್ಲಿ ಕರಗಿ ನೀರಾಗಿ ಸಮುದ್ರ ಸೇರಲಿದೆ. ಅಲ್ಲಿಗೆ ಮಾನವನ ಭವಿಷ್ಯ ನಾಶವಾಗಿ ಹೋಗಲಿದೆ ಎಂದು ಕೋಪನ್ ಹೇಗನ್ ವಿವಿ, ನಾರ್ವೆಯ ಆರ್ಕ್ಟಿಕ್ ವಿವಿ ಅಧ್ಯಯನ ತಿಳಿಸಿದೆ.

ತುರ್ತಾಗಿ ಕ್ರಮ ಕೈಗೊಳ್ಳಬೇಕಿದೆ..!

ತುರ್ತಾಗಿ ಕ್ರಮ ಕೈಗೊಳ್ಳಬೇಕಿದೆ..!

ಭೂಮಿ ಮೇಲೆ ತಾಪಮಾನ ಏರಿಕೆ ಹಾಗೂ ವಾತಾವರಣ ಬದಲಾವಣೆ ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿದೆ. ವಿಜ್ಞಾನಿಗಳು ಅದೆಷ್ಟು ಬಾರಿ ಎಚ್ಚರಿಕೆ ನೀಡಿದರೂ ಪ್ರಯೋಜನ ಆಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ನಾಯಕನ ಸ್ಥಾನದಲ್ಲಿ ನಿಂತು, ಈ ಸಮಸ್ಯೆ ಬಗೆಹರಿಸಲು ಬಲಾಢ್ಯ ರಾಷ್ಟ್ರಗಳು ಮುಂದಾಗಬೇಕಿದೆ. ಅದರಲ್ಲೂ ಜಾಗತಿಕ ಶಕ್ತಿಗಳು ಎಂದೇ ಗುರುತಿಸಿಕೊಂಡಿರುವ ಅಮೆರಿಕ-ಚೀನಾ ಭೂಮಿ ತಾಪಮಾನ ನಿಯಂತ್ರಣಕ್ಕೆ ತರುವ ಬಗ್ಗೆ ಸಾಕಷ್ಟು ಮುಂಜಾಗ್ರತೆ ವಹಿಸಬೇಕಿದೆ. ಆದರೆ ಇಷ್ಟು ದಿನ ಅದು ಸಾಧ್ಯವಾಗಿರಲಿಲ್ಲ. ಈಗ ಕಾರ್ಯರೂಪಕ್ಕೆ ಬರುವ ಲಕ್ಷಣಗಳು ಗೋಚರಿಸುತ್ತಿವೆ.

ಚೀನಾ ಸಾಧನೆ ಜಗತ್ತಿಗೆ ಮಾದರಿ

ಚೀನಾ ಸಾಧನೆ ಜಗತ್ತಿಗೆ ಮಾದರಿ

10-15 ವರ್ಷದ ಹಿಂದೆ ಚೀನಾ ಎಂದರೆ ಮಾಲಿನ್ಯ, ಮಾಲಿನ್ಯ ಅಂದ್ರೆ ಚೀನಾ ಎಂದು ಜಗತ್ತು ಜರಿಯುತ್ತಿತ್ತು. ಆದರೆ ಈಗ ಇದೇ ಚೀನಾ ಪ್ರಕೃತಿ ಸೊಬಗಿನ ತವರಾಗಿದೆ. ಅದರಲ್ಲೂ ಚೀನಾ ರಾಜಧಾನಿ ಬೀಜಿಂಗ್ ಎಷ್ಟು ಸುಧಾರಿಸಿದೆ ಎಂದರೆ, ಕೆಲವೇ ವರ್ಷಗಳಲ್ಲಿ ಸಂಪೂರ್ಣ ವಾಯು ಮಾಲಿನ್ಯವನ್ನ ಸರ್ಕಾರ ಕಂಟ್ರೋಲ್‌ಗೆ ತಂದಿದೆ. ಮಾಲಿನ್ಯ ನಿಯಂತ್ರಣದ ಹಿಂದೆ ಹಲವು ಕಠಿಣ ಕ್ರಮಗಳು ಕೂಡ ಪ್ರಭಾವ ಬೀರಿವೆ. ಅದರಲ್ಲೂ ಕಾರ್ಬನ್ ಮತ್ತು ಸಿಎಫ್‌ಸಿ ಅನಿಲ ಹೊರಸೂಸುವ ಯಂತ್ರ, ಮತ್ತಿತರ ವಸ್ತುಗಳಿಗೆ ನಿಷೇಧ ಹೇರಿದ್ದು ಫಲ ನೀಡಿದೆ. ಇನ್ನು ಕೈಗಾರಿಕೆಗಳಿಗೆ ನೀಡಿದ ಖಡಕ್ ವಾರ್ನಿಂಗ್ ಕೂಡ ಚೀನಾದ ಮಾಲಿನ್ಯ ನಿಯಂತ್ರಿಸಿದೆ.

ಕ್ಲೈಮೆಟ್ ಚೇಂಜ್ ಎಫೆಕ್ಟ್

ಕ್ಲೈಮೆಟ್ ಚೇಂಜ್ ಎಫೆಕ್ಟ್

ಮಳೆಗಾಲದಲ್ಲಿ ವಿಪರೀತ ಬಿಸಿಲು, ಚಳಿಗಾಲದಲ್ಲಿ ಮಳೆ, ಇನ್ನು ಬೇಸಿಗೆಯಲ್ಲೂ ವರುಣನ ಅಬ್ಬರ. ಹೀಗೆ ಭೂ ವಾತಾವರಣ ವಿಪರೀತ ಬದಲಾಗುತ್ತಿದೆ. ಮಾನವನ ದುರಾಸೆಯಿಂದಾಗಿ ಮಾಲಿನ್ಯ ಸೃಷ್ಟಿಯಾಗಿದೆ. ಮಾಲಿನ್ಯದ ಪರಿಣಾಮ ಭೂಮಿ ಮೇಲಿನ ವಾತಾವರಣ ನಾಶವಾಗುತ್ತಿದೆ. ಯಾವ ಸಮಯದಲ್ಲಿ ಏನಾಗಬೇಕೋ ಅದೆಲ್ಲಾ ಉಲ್ಟಾ ಆಗುತ್ತಿದೆ. ಇದು ಪರಿಸ್ಥಿತಿಯನ್ನ ಮತ್ತಷ್ಟು ಕಠಿಣಗೊಳಿಸಿದೆ. ರೈತರ ಬೆಳೆ ನಾಶವಾಗುವ ಜೊತೆಗೆ ಇದು ಆಹಾರ ಭದ್ರತೆಗೂ ಕಂಟಕ ಎದುರಾಗುವಂತೆ ಮಾಡಿದೆ. ಅಕಾಲಿಕ ಮಳೆ ನೂರಾರು ಅವಾಂತರ ಸೃಷ್ಟಿಸುತ್ತಿದೆ.

English summary
New study warned that Global temperature can rise up to 1.5 degree by 2025.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X