ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಾಧ್ಯಕ್ಷ, ಪ್ರಧಾನಿಗೂ ಅಂಟಿದ ಕೊವಿಡ್-19: ಅತಿದೊಡ್ಡ ಪಟ್ಟಿ!

|
Google Oneindia Kannada News

ನವದೆಹಲಿ, ಜುಲೈ.09: ವಿಶ್ವದಾದ್ಯಂತ ಕೊರೊನಾವೈರಸ್ ಅಟ್ಟಹಾಸಕ್ಕೆ ಲಕ್ಷಾಂತರ ಜನರು ಪ್ರಾಣ ಬಿಟ್ಟಿದ್ದಾರೆ. ಚೀನಾದಲ್ಲಿ ಮೊದಲ ಜನ್ಮ ತಾಳಿದ ಮಹಾಮಾರಿ ಸಾಮಾನ್ಯ ಜನರಿಂದ ಹಿಡಿದು ಸರ್ವಾಧಿಕಾರಿ ವರೆಗೂ ಯಾರನ್ನೂ ಬಿಟ್ಟಿಲ್ಲ.

Recommended Video

Rohit Sharma ಟಿ20ಗೆ ನಾಯಕನಾಗಲಿ | T20 Captain? | Oneindia Kannada

ಜಾಗತಿಕ ಮಟ್ಟದಲ್ಲಿ 1,21,92,761ಕ್ಕೂ ಅಧಿಕ ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಈ ಪೈಕಿ 70,90,230 ಜನರು ಗುಣಮುಖರಾಗಿದ್ದರೆ, 5,52,534 ಮಂದಿ ಮಹಾಮಾರಿಗೆ ಪ್ರಾಣ ಬಿಟ್ಟಿದ್ದಾರೆ.

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಪತ್ನಿಗೆ ಕೊರೊನಾ ಸೋಂಕುಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಪತ್ನಿಗೆ ಕೊರೊನಾ ಸೋಂಕು

ಅಮೆರಿಕಾದಲ್ಲೇ ಅತಿಹೆಚ್ಚು ಜನರು ಕೊರೊನಾವೈರಸ್ ನಿಂದ ಬಳಲುತ್ತಿದ್ದು, 1,34,873ಕ್ಕೂ ಅಧಿಕ ಮಂದಿ ಸಾವಿನ ಮನೆ ಸೇರಿದ್ದಾರೆ. ಬ್ರೆಜಿಲ್ ಜಾಗತಿಕ ಮಟ್ಟದಲ್ಲಿ ಕೊವಿಡ್-19ಗೆ ಸಿಕ್ಕು ನಲುಗಿದ ರಾಷ್ಟ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಭಾರತವು ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಕೊರೊನಾವೈರಸ್ ಸೋಂಕಿತರಲ್ಲಿ ಗೋಚರಿಸುವ ಲಕ್ಷಣಗಳು ಯಾವುವು?ಕೊರೊನಾವೈರಸ್ ಸೋಂಕಿತರಲ್ಲಿ ಗೋಚರಿಸುವ ಲಕ್ಷಣಗಳು ಯಾವುವು?

ಇತ್ತೀಚಿಗೆ ಬ್ರೆಜಿಲ್ ಅಧ್ಯಕ್ಷರಿಗೂ ಮಹಾಮಾರಿ ಅಂಟಿಕೊಂಡಿರುವುದನ್ನು ಸ್ವತಃ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೋ ಹೇಳಿಕೊಂಡಿದ್ದರು. ಬ್ರೆಜಿಲ್ ಅಧ್ಯಕ್ಷರಷ್ಟೇ ಅಲ್ಲ, ಜಗತ್ತಿನ ದೈತ್ಯ ರಾಷ್ಟ್ರಗಳಲ್ಲಿನ ಪ್ರಮುಖ ಮುಖಂಡರಲ್ಲೇ ಕೊವಿಡ್-19 ಕಾಣಿಸಿಕೊಂಡಿದ್ದು, ಯಾವ ಯಾವ ರಾಷ್ಟ್ರಗಳಲ್ಲಿ ಪ್ರಧಾನಮಂತ್ರಿಗಳು ಮತ್ತು ಅಧ್ಯಕ್ಷರು ಮಹಾಮಾರಿಯ ಮನೆ ಬಾಗಿಲು ಹೊಕ್ಕು ಬಂದಿದ್ದಾರೆ ಎನ್ನುವುದರ ಕುರಿತು ಒಂದು ವಿಶೇಷ ವರದಿ ನಮ್ಮ 'ಒನ್ ಇಂಡಿಯಾ' ಓದುಗರಿಗಾಗಿ.

ಇಂಗ್ಲೆಂಡ್ ಪ್ರಧಾನಿ ದೇಹವನ್ನು ಹೊಕ್ಕ ಕೊರೊನಾವೈರಸ್

ಇಂಗ್ಲೆಂಡ್ ಪ್ರಧಾನಿ ದೇಹವನ್ನು ಹೊಕ್ಕ ಕೊರೊನಾವೈರಸ್

ಕಳೆದ ಮಾರ್ಚ್.27ರಂದು ಇಂಗ್ಲೆಂಡ್ ಪ್ರಧಾನಮಂತ್ರಿ ಬೋರಿಸ್ ಜಾನ್ಸರ್ ಅವರಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿತ್ತು. ಆರಂಭದಲ್ಲಿ ಗೃಹ ದಿಗ್ಬಂಧನದಲ್ಲಿ ಇರಿಸಲಾಗಿದ್ದು, ಆರೋಗ್ಯ ಸ್ಥಿತಿ ಕೆಡುತ್ತಿದ್ದಂತೆ ಏಪ್ರಿಲ್.07ರಂದು ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಗೆ ಒಳಪಡಿಸಲಾಯಿತು. ನಂತರ ಅವರ ಆರೋಗ್ಯ ಸ್ಥಿತಿಯಲ್ಲಿ ಕೊಂಚ ಚೇತರಿಕೆ ಕಂಡು ಬಂದಿದೆ ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿದವು.

ಪತ್ನಿಗೆ ಕೊವಿಡ್-19 ಪಾಸಿಟಿವ್, ಕೆನಡಾ ಪ್ರಧಾನಿಗೆ ಗೃಹ ದಿಗ್ಬಂಧನ

ಪತ್ನಿಗೆ ಕೊವಿಡ್-19 ಪಾಸಿಟಿವ್, ಕೆನಡಾ ಪ್ರಧಾನಿಗೆ ಗೃಹ ದಿಗ್ಬಂಧನ

ಲಂಡನ್ ಪ್ರವಾಸದಿಂದ ವಾಪಸ್ ಆಗಿದ್ದ ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ಅವರ ಪತ್ನಿ ಸೋಫಿ ಗ್ರೆಗೊಯಿರ್ ಅವರಿಗೆ ಮಾರ್ಚ್.12ರಂದು ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಟ್ರುಡೊ ಪತ್ನಿ ಗ್ರೆಗೊಯಿರ್ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಟ್ರುಡೊ ಅವರು ಸ್ವಯಂ ಪ್ರೇರಿತರಾಗಿ 14 ದಿನಗಳ ಪ್ರತ್ಯೇಕವಾಗಿ ದಿಗ್ಬಂಧನದಲ್ಲಿದ್ದರು. ಮಾರ್ಚ್.29ರಂದು ತಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವ ಬಗ್ಗೆ ವೈದ್ಯರು ದೃಢೀಕರಿಸಿದ್ದಾರೆ ಎಂದು ಸೋಫಿ ಗ್ರೆಗೊಯಿರ್ ಸ್ಪಷ್ಟನೆ ನೀಡಿದ್ದರು.

ಪ್ರಧಾನಿ ಜತೆ ಸಂಪರ್ಕದಲ್ಲಿದ್ದ ಆರೋಗ್ಯ ಸಚಿವರಿಗೂ ವೈರಸ್

ಪ್ರಧಾನಿ ಜತೆ ಸಂಪರ್ಕದಲ್ಲಿದ್ದ ಆರೋಗ್ಯ ಸಚಿವರಿಗೂ ವೈರಸ್

ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಆಗಾಗ್ಗೆ ಸಂಪರ್ಕ ಹೊಂದಿದ್ದ ಇಸ್ರೇಲ್‌ನ ಆರೋಗ್ಯ ಸಚಿವ ಯಾಕೊವ್ ಲಿಟ್ಜಮನ್ ಹಾಗೂ ಪತ್ನಿಗೆ ಏಪ್ರಿಲ್ ತಿಂಗಳಿನಲ್ಲೇ ಕೊರೊನಾವೈರಸ್ ಸೋಂಕು ತಪಾಸಣೆ ನಡೆಸಿರುವ ಬಗ್ಗೆ ಇರಾನ್ ಆರೋಗ್ಯ ಸಚಿವಾಲಯವು ತಿಳಿಸಿತ್ತು. ಈ ವೇಳೆ ಇಬ್ಬರಲ್ಲೂ ಸೋಂಕು ತಗಲಿದ್ದು, ಐಸೋಲೇಷನ್ ನಲ್ಲಿ ಇರಿಸಲಾಗಿತ್ತು.

ಇರಾನ್ ಉಪಾಧ್ಯಕ್ಷೆಗೂ ಬಿಡದ ಕೊರೊನಾವೈರಸ್

ಇರಾನ್ ಉಪಾಧ್ಯಕ್ಷೆಗೂ ಬಿಡದ ಕೊರೊನಾವೈರಸ್

ಇರಾನ್ ಅಧ್ಯಕ್ಷ ಹಸನ್ ರೂಹಾನಿಯವರ ಮಹಿಳಾ ವ್ಯವಹಾರಗಳ ಉಪ ಮತ್ತು ಸರ್ಕಾರದ ಅತ್ಯುನ್ನತ ಶ್ರೇಣಿಯ ಮಹಿಳೆ ಹಾಗೂ ಉಪಾಧ್ಯಕ್ಷೆ ಮಸೌಮೆಹ್ ಎಬ್ಟೆಕರ್ ಅವರಿಗೆ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡಿತ್ತು. ಕಳೆದ ಫೆಬ್ರವರಿ 27ರಂದೇ ಕೊವಿಡ್-19 ತಪಾಸಣೆ ವೇಳೆ ಸೋಂಕು ತಗಲಿದ್ದು, ದೃಢಪಟ್ಟಿದ್ದು, ಅವರನ್ನು ಗೃಹ ದಿಗ್ಬಂಧನದಲ್ಲಿ ಇರಿಸಲಾಗಿತ್ತು.

ಪ್ರಿನ್ಸ್ ಚಾರ್ಲ್ಸ್ ಅವರಿಗೂ ಅಂಟಿಕೊಂಡ ಕೊವಿಡ್-19

ಪ್ರಿನ್ಸ್ ಚಾರ್ಲ್ಸ್ ಅವರಿಗೂ ಅಂಟಿಕೊಂಡ ಕೊವಿಡ್-19

ಕಳೆದ ಮಾರ್ಚ್.25ರಂದು ಇಂಗ್ಲೆಂಡ್ ನ ಪ್ರಿನ್ಸ್ ಚಾರ್ಲ್ಸ್ ಅವರಲ್ಲಿ ಕೊರೊನಾವೈರಸ್ ಸೋಂಕಿತ ಲಕ್ಷಣಗಳು ಕಂಡು ಬಂದಿತ್ತು. ವೈದ್ಯಕೀಯ ತಪಾಸಣೆ ವೇಳೆ COVID-19 ಸೋಂಕು ತಗಲಿರುವುದು ದೃಢಪಟ್ಟಿತು. ಅವರು ಸೋಂಕಿನಿಂದ ಚೇತರಿಸಿಕೊಂಡರು ಮತ್ತು ಮಾರ್ಚ್.30ರಂದು ಸೆಲ್ಫ್ ಐಸೋಲೇಷನ್ ನಿಂದ ಹೊರ ಬಂದರು. ಪ್ರಿನ್ಸ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದರೂ ಕೂಡಾ ಅವರು ಇನ್ನೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿತ್ತು.

ಪ್ರಧಾನಿ ಜತೆ ಸಂಪರ್ಕದಲ್ಲಿದ್ದ ಕಾರ್ಯದರ್ಶಿಗೆ ಕೊರೊನಾವೈರಸ್

ಪ್ರಧಾನಿ ಜತೆ ಸಂಪರ್ಕದಲ್ಲಿದ್ದ ಕಾರ್ಯದರ್ಶಿಗೆ ಕೊರೊನಾವೈರಸ್

ಕಳೆದ ಮಾರ್ಚ್.27ರಂದು ತಮಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ ಎಂದು ಬ್ರಿಟಿಷ್ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್ಯಾಕ್ ಅವರು ತಿಳಿಸಿದರು. ಇದಾಗಿ ಎರಡು ಗಂಟೆಯಲ್ಲೇ ಬ್ರಿಟಿಷ್ ಪ್ರಧಾನಿಯವರಿಗೂ ಕೊವಿಡ್-19 ಸೋಂಕು ಪತ್ತೆಯಾಯಿತು. ವೈದ್ಯರ ಸಲಹೆಯಂತೆ ಕೊರೊನಾವೈರಸ್ ಪರೀಕ್ಷೆಗೆ ಒಳಗಾಗುವಂತೆ ನನಗೆ ಸೂಚಿಸಲಾಯಿತು. ನನ್ನಲ್ಲಿ ಕೊವಿಡ್-19 ಸೋಂಕು ಪತ್ತೆಯಾಗಿದ್ದು, ಅದೃಷ್ಟವಶಾತ್ ರೋಗದ ಲಕ್ಷಣಗಳು ಸೌಮ್ಯವಾಗಿವೆ. ಸದ್ಯದ ಮಟ್ಟಿಗೆ ನಾನು ಮನೆಯಲ್ಲಿದ್ದುಕೊಂಡೇ ಸ್ವಯಂ-ಪ್ರತ್ಯೇಕತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಹ್ಯಾನ್ ‌ಕಾಕ್ ಟ್ವಿಟರ್ ‌ನಲ್ಲಿ ಪ್ರಕಟಿಸಿದ್ದರು.

ಸ್ಪ್ಯಾನಿಷ್ ಪ್ರಧಾನಿ ಮತ್ತು ಪತ್ನಿಗೆ ಕೊರೊನಾವೈರಸ್ ಸೋಂಕು

ಸ್ಪ್ಯಾನಿಷ್ ಪ್ರಧಾನಿ ಮತ್ತು ಪತ್ನಿಗೆ ಕೊರೊನಾವೈರಸ್ ಸೋಂಕು

ಸ್ಪ್ಯಾನಿಷ್ ಪ್ರಧಾನಮಂತ್ರಿ ಪೆಡ್ರೊ ಸ್ಯಾಂಚೇಜ್ ಅವರ ಪತ್ನಿ ಬೆಗೊನಾ ಗೊಮೆಜ್ ಅವರಲ್ಲಿ ಮಾರ್ಚ್.15ರಂದು ಕೊರೊನಾವೈರಸ್ ಸೋಂಕು ಪತ್ತೆಯಾಗಿತ್ತು ಎಂದು ಸ್ವತಃ ಪ್ರಧಾನಮಂತ್ರಿ ಕಚೇರಿ ಮೂಲಗಳಿಂದ ತಿಳಿದು ಬಂದಿತ್ತು. ಇಬ್ಬರ ಆರೋಗ್ಯದಲ್ಲೂ ಕೊಂಚ ಚೇತರಿಕೆ ಕಂಡು ಬಂದಿದ್ದು, ಗೃಹ ಪ್ರತ್ಯೇಕತೆಯಲ್ಲಿದ್ದುಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿತ್ತು.

ಬ್ರಿಟಿಷ್ ಕಿರಿಯ ಆರೋಗ್ಯ ಸಚಿವರಿಗೂ ಕೊರೊನಾವೈರಸ್

ಬ್ರಿಟಿಷ್ ಕಿರಿಯ ಆರೋಗ್ಯ ಸಚಿವರಿಗೂ ಕೊರೊನಾವೈರಸ್

ಬ್ರಿಟಿಷ್ ಕಿರಿಯ ಆರೋಗ್ಯ ಮಂತ್ರಿ ನಾಡಿನ್ ಡೋರಿಸ್ ಅವರಿಗೂ ಮಹಾಮಾರಿ ಕೊರೊನಾವೈರಸ್ ಅಂಟಿಕೊಂಡಿರುವುದು ಮಾರ್ಚ್.10ರಂದು ನಡೆಸಿದ ವೈದ್ಯಕೀಯ ಪರೀಕ್ಷಯಲ್ಲಿ ದೃಢಪಟ್ಟಿತು. ನಂತರ ಅವರನ್ನು ಹೋಮ್ ಐಸೋಲೇಷನ್ ಗೆ ಒಳಪಡಿಸಲಾಯಿತು. ಡೋರಿಸ್ ತಮಗೆ ಸೋಂಕು ತಗಲಿರುವ ಬಗ್ಗೆ ತಿಳಿದ ಕೂಡಲೇ ವೈದ್ಯರು ನೀಡಿ ಎಲ್ಲಾ ಸಲಹೆಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇನೆ ಎಂದು ಹೇಳಿದರು. ಕಳೆದ ವಾರದಲ್ಲಿ ಡೋರಿಸ್ ಸಂಸತ್ತಿನಲ್ಲಿ ನೂರಾರು ಜನರನ್ನು ಭೇಟಿಯಾದರು ಮತ್ತು ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಎಂದು ಟೈಮ್ಸ್ ವರದಿ ಮಾಡಿತ್ತು.

ಇರಾನ್ ಉಪ ಆರೋಗ್ಯ ಮಂತ್ರಿಗೂ ಕೊರೊನಾವೈರಸ್

ಇರಾನ್ ಉಪ ಆರೋಗ್ಯ ಮಂತ್ರಿಗೂ ಕೊರೊನಾವೈರಸ್

ಇರಾನ್‌ನ ಉಪ ಆರೋಗ್ಯ ಸಚಿವ ಇರಾಜ್ ಹರಿರ್ಚಿ ಅವರಿಗೂ ಮಹಾಮಾರಿ ಕೊರೊನಾವೈರಸ್ ಸೋಂಕು ಅಂಟಿಕೊಂಡಿತ್ತು. ಕಳೆದ ಫೆಬ್ರವರಿ.25ರಂದು ನಡೆಸಿದ ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿಯೇ ಈ ವಿಚಾರ ತಿಳಿದು ಬಂದಿತ್ತು ಎಂದು ಅರೆ ಅಧಿಕೃತ ಸುದ್ದಿ ಸಂಸ್ಥೆ ಐಎಲ್ ಎನ್ಎ ವರದಿ ಮಾಡಿತ್ತು.

ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸಾನಾರೋಗೆ ಕೊವಿಡ್-19

ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸಾನಾರೋಗೆ ಕೊವಿಡ್-19

ಕೊವಿಡ್-19 ಅಟ್ಟಹಾಸಕ್ಕೆ ನಲುಗಿದ ಬ್ರೆಜಿಲ್ ನಲ್ಲಿ ರಾಷ್ಟ್ರ ಅಧ್ಯಕ್ಷರಿಗೆ ಸೋಂಕು ಅಂಟಿಕೊಂಡಿತ್ತು. ಜುಲೈ.07ರಂದು ನಡೆಸಿದ ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೋರಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ದೃಢಪಟ್ಟಿತ್ತು. ರಾಜಧಾನಿ ಬ್ರಸಿಲಿಯಾದಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮಾತನಾಡಿದ ಅಧ್ಯಕ್ಷ ಜೈರ್ ಬೊಲ್ಸಾನಾರೋ ಅವರೇ ಈ ವಿಚಾರವನ್ನು ಸ್ಪಷ್ಟಪಡಿಸಿದ್ದರು. ದೇಶದ ಅಧ್ಯಕ್ಷ ಜೈರ್ ಬೊಲ್ಸೊನಾರೋ ಬಹಳಷ್ಟು ಬಾರಿ ಸಾರ್ವಜನಿಕವಾಗಿ ಬೆಂಬಲಿಗರೊಂದಿಗೆ ಕೈ ಕುಲುಕಿ ಬೆರೆತಿರುವ ಉದಾಹರಣೆಗಳಿವೆ. ಅಲ್ಲದೇ ಕೆಲವೊಂದು ಬಾರಿ ಮಾಸ್ಕ್ ಧರಿಸದೇ ಕಾರ್ಯಕರ್ತರ ನಡುವೆ ಸಂಚರಿಸಿದ ಅಧ್ಯಕ್ಷರಿಗೆ ಬ್ರಸಿಲಿಯಾದ ಕೋರ್ಟ್ ತರಾಟೆ ತೆಗೆದುಕೊಂಡಿತ್ತು.

English summary
Here Is The List Of World Leaders Who Tested Positive For Coronavirus. Take A Look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X