ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್19 ತಡೆಗೆ ಹೊಸ ಸಾಧನ ಪರಿಚಯಿಸಿದ ಬೆಂಗಳೂರಿನ ರಾಜೇಶ್

|
Google Oneindia Kannada News

ಬೆಂಗಳೂರು, ಏಪ್ರಿಲ್ 22: ಅತ್ಯುತ್ತಮ ಜಗತ್ತು ನಿರ್ಮಾಣಕ್ಕಾಗಿ ಪರಿಹಾರಗಳನ್ನು ವಿನ್ಯಾಸಗೊಳಿಸುವ ಮುಂದಿನ ಪೀಳಿಗೆಯ ಆವಿಷ್ಕಾರಗಳಿಗೆ ಗ್ಲೋಬಲ್ ಗ್ರ್ಯಾಡ್ ಶೋ ಒಂದು ಪ್ರಮುಖವಾದ ವೇದಿಕೆಯಾಗಿದೆ. ಇದು ಮುಂಚೂಣಿಯಲ್ಲಿರುವ ಸಾಮಾಜಿಕ ಪರಿಣಾಮ ಆವಿಷ್ಕಾರ ವೇದಿಕೆ ಎಂಬ ಹೆಸರು ಗಳಿಸಿದೆ. ಇನ್ವೆಸ್ಟ್ ಕಾರ್ಪೊರೇಷನ್ ಆಫ್ ದುಬೈ (ಐಸಿಡಿ) ಯೊಂದಿಗಿನ ಪಾಲುದಾರಿಕೆ ಮತ್ತು ಎ.ಆರ್.ಎಂ ಹೋಲ್ಡಿಂಗ್ ಅಂಡ್ ದುಬೈ ಕಲ್ಚರ್ ಸಂಸ್ಥೆಯೊಂದಿಗೆ ಇದೇ ಮೊದಲ ಬಾರಿಗೆ ಸಹಭಾಗಿತ್ವ ಪಡೆದು ಕೊವಿಡ್-19 ಗೆ ಸಂಬಂಧಿಸಿದ ಪರಿಹಾರಗಳನ್ನು ವಿನ್ಯಾಸಗೊಳಿಸುವ ಸ್ಪರ್ಧೆಯನ್ನು ಏರ್ಪಡಿಸಿದೆ.

Recommended Video

ಹಿಂದೂ ಮುಸ್ಲಿಂ ಒಗ್ಗಟ್ಟಾದ್ರೆ ಮಾತ್ರ ಕೊರೊನಾ ವಿರುದ್ಧದ ಹೋರಾಟ ಫಲಿಸುತ್ತೆ | Oneindia Kannada

ಈ ಕಾರ್ಯಕ್ರಮಕ್ಕೆ ಪ್ರಮುಖವಾಗಿ ಬೆಂಗಳೂರಿನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಡಿಸೈನ್ ನ ರಾಜೇಶ್ ನಿಟ್ಟೂರ್ ಸೇರಿದಂತೆ 40 ದೇಶಗಳ 125 ವಿಶ್ವವಿದ್ಯಾಲಯಗಳಿಂದ 390 ಅರ್ಜಿಗಳು ಬಂದಿವೆ. ಈ ಸ್ಪರ್ಧೆಯಲ್ಲಿ ಭಾರತೀಯ ಸ್ಪರ್ಧಿಗಳು ಸಹ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಈ ಉಪಕ್ರಮದ ಅಂಗವಾಗಿ ಸ್ಪರ್ಧೆ ಮಾಡಿರುವ ಭಾರತದ ಪ್ರಮುಖ ವಿಶ್ವವಿದ್ಯಾಲಯಗಳ ವಿವರಗಳು ಮುಂದಿವೆ.

20 ಸೆಕೆಂಡುಗಳಲ್ಲಿ ಕೊರೊನಾ ವೈರಸ್ ಪತ್ತೆ ಹಚ್ಚಿದ ಆಲಿಬಾಬಾ20 ಸೆಕೆಂಡುಗಳಲ್ಲಿ ಕೊರೊನಾ ವೈರಸ್ ಪತ್ತೆ ಹಚ್ಚಿದ ಆಲಿಬಾಬಾ

ಎವಿಇಎಆರ್- ಇದು ಧರಿಸಬಹುದಾದ ಘಟಕವಾಗಿದ್ದು, ಕೈಗಳನ್ನು ಸ್ವಚ್ಛವಾಗಿಡಲಿದೆ ಮತ್ತು ಕೈಗಳನ್ನು ಮುಖದಿಂದ ದೂರವಿರಿಸಲಿದೆ:
ಮಾರಕ ವೈರಸ್ ಅನ್ನು ದೂರವಿಟ್ಟು ಹೋರಾಟ ಮಾಡಲು ಒಂದು ಪ್ರಮುಖ ಮಾರ್ಗವೆಂದರೆ ನಮ್ಮ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ಮುಖದಿಂದ ದೂರ ಇರುವಂತೆ ಮಾಡುವುದು.

ಬೆಂಗಳೂರಿನ ಎನ್ಐಡಿಯ ರಾಜೇಶ್

ಬೆಂಗಳೂರಿನ ಎನ್ಐಡಿಯ ರಾಜೇಶ್

ಸಾಮಾನ್ಯವಾಗಿ ಬಳಕೆದಾರರ ತಮ್ಮ ಕೈಗಳನ್ನು ಮುಖದತ್ತ ಕೊಂಡೊಯ್ದು ಒರೆಸಿಕೊಳ್ಳುತ್ತಿರುತ್ತಾರೆ. ಆದರೆ, ಈ ಎವಿಇಎಆರ್ ಮೇಲಿರುವ ಕ್ಯಾಪ್ಸೂಲ್ ಅವರನ್ನು ಜಾಗೃತವಾಗಿಸುತ್ತದೆ. ಈ ಮೂಲಕ ಬಳಕೆದಾರರು ಸ್ಯಾನಿಟೈಸಿಂಗ್ ಟ್ಯೂಬ್ ಬಳಸಿ ಕೈಗಳನ್ನು ಸೋಂಕುಮುಕ್ತವನ್ನಾಗಿಸುತ್ತವೆ. ಇದನ್ನು ಬೆಂಗಳೂರಿನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಡಿಸೈನ್ ನ ರಾಜೇಶ್ ನಿಟ್ಟೂರ್ ಅವರು ಅಭಿವೃದ್ಧಿಪಡಿಸಿದ್ದಾರೆ.

ಅನ್ ಟ್ಯಾಪ್ಡ್- ಪಾದದಿಂದ ಮನೆಯ ಡೋರ್ ಲಾಕ್ ಓಪನ್:

ಅನ್ ಟ್ಯಾಪ್ಡ್- ಪಾದದಿಂದ ಮನೆಯ ಡೋರ್ ಲಾಕ್ ಓಪನ್:

ಪ್ರಾಜೆಕ್ಟ್ ಅನ್ ಟ್ಯಾಪ್ಡ್ ಮ್ಯಾಟ್ ಸಾಂಕ್ರಾಮಿಕ ಹರಡುವುದರ ಅಪಾಯದಿಂದ ಪಾರು ಮಾಡುತ್ತದೆ. ಡೋರ್ ಮ್ಯಾಟ್ ಅನ್ನು ಒಂದು ಎಲೆಕ್ಟ್ರಾನಿಕ್ ಸರ್ಕ್ಯೂಟ್ ಗೆ ಸಂಪರ್ಕಿಸಲಾಗಿರುತ್ತದೆ ಮತ್ತು ಸೆನ್ಸಾರ್ ಆಧಾರದಲ್ಲಿ ಇದು ಕೆಲಸ ಮಾಡುತ್ತದೆ. ಬಟನ್ ಗಳಿಂದ ಪಾಸ್ ವರ್ಡ್ ಅನ್ನು ಎಂಟರ್ ಮಾಡುವುದು, ಬಳಕೆದಾರನು ಒಂದು ತನ್ನ ಪಾದದ ಒಂದು ನಿರ್ದಿಷ್ಟ ಪ್ಯಾಟರ್ನ್ ಅನ್ನು ಬಳಸಿ ಲಾಕ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬಹುದಾಗಿದೆ. ಇದನ್ನು ಗಾಂಧಿನಗರದ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಡಿಸೈನ್ ನ ಸಕ್ಷಮ್ ಪಾಂಡ ಅವರು ಆವಿಷ್ಕರಿಸಿದ್ದಾರೆ.

ಸಿಲಿಮ್-ಪುನರ್ಬಳಕೆಯ ವೈದ್ಯಕೀಯ ಮಾಸ್ಕ್

ಸಿಲಿಮ್-ಪುನರ್ಬಳಕೆಯ ವೈದ್ಯಕೀಯ ಮಾಸ್ಕ್

ಸಿಲಿಮ್- ಆರೋಗ್ಯ ರಕ್ಷಣೆಯಲ್ಲಿ ತೊಡಗಿರುವವರ ಬಳಕೆಗಾಗಿ ಪುನರ್ಬಳಕೆಯ ವೈದ್ಯಕೀಯ ಮಾಸ್ಕ್ ವಿಶ್ವದಾದ್ಯಂತ ಆರೋಗ್ಯ ರಕ್ಷಣೆಯಲ್ಲಿ ತೊಡಗಿರುವವರು ವೈದ್ಯಕೀಯ ವೈಯಕ್ತಿಕ ರಕ್ಷಣಾ ಸಾಧನಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಇದರ ಪರಿಣಾಮ ಲಭ್ಯವಿರುವ ಸಂಪನ್ಮೂಲಗಳಿಂದ ಮಾಸ್ಕ್ ಅನ್ನು ತಯಾರಿಸುವ ಅನಿವಾರ್ಯತೆ ಎದುರಾಗಿದೆ. ಇಂತಹ ಸಮಸ್ಯೆಗಳ ನಿವಾರಣೆಗಾಗಿ ಸಿಲಿಮ್ (Silim) ಎಂಬ ಮಾಸ್ಕ್ ಅನ್ನು ಆವಿಷ್ಕರಿಸಲಾಗಿದೆ.

ಎಂಐಟಿ ಎಡಿಟಿಯ ಅಜಿಂಕ್ಯಾ ಅವರ ವಿನ್ಯಾಸ

ಎಂಐಟಿ ಎಡಿಟಿಯ ಅಜಿಂಕ್ಯಾ ಅವರ ವಿನ್ಯಾಸ

ಸಿಲಿಮ್ ಮಾಸ್ಕ್ ಅನ್ನು ವೈದ್ಯಕೀಯ ಕಾರ್ಯಕರ್ತರ ಉಪಯೋಗಕ್ಕೆಂದೇ ಅಭಿವೃದ್ಧಿಪಡಿಸಲಾಗಿದೆ. ಮೆಡಿಕಲ್ ಗ್ರೇಡ್ ಸಿಲಿಕೊನ್ ನಿಂದ ತಯಾರಿಸಲಾಗಿದೆ ಮತ್ತು ಸಾಂಪ್ರದಾಯಿಕ ವಿಧಾನಗಳಿಂದ ಸ್ಟೆರಿಲೈಸ್ ಮಾಡಲಾಗಿದೆ. ಇದರಲ್ಲಿ ಪ್ರಮುಖವಾಗಿ ಯುವಿ ಲೈಟ್, ಕೆಮಿಕಲ್ ಟ್ರೀಟ್ ಮೆಂಟ್ ನಿಂದ ಸ್ಟೆರಿಲೈಸ್ ಮಾಡಲಾಗಿದೆ. ಈ ಮಾಸ್ಕ್ ಅನ್ನು ಅಭಿವೃದ್ಧಿಪಡಿಸಿರುವವರು ಎಂಐಟಿ ಎಡಿಟಿಯ ಅಜಿಂಕ್ಯಾ ಬಾಲಚಂದ್ರ ಅವರು.

English summary
Global Grad Show: Bengaluru based Rajesh N from National Institute of Design has presented Avear-hand cleaning device as a part of Covid social impact innovation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X