ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬಾರಿ ದುನಿಯಾ: ಸಕ್ಕರೆ, ಬೇಳೆ-ಕಾಳು ಬೆಲೆ ಏರಿಕೆಗೆ ಕಂಟೇನರ್ ಕಾರಣ!?

|
Google Oneindia Kannada News

ನವದೆಹಲಿ, ಫೆಬ್ರವರಿ.02: ಚೀನಾದಲ್ಲಿ ಮೊದಲ ಕಾಣಿಸಿಕೊಂಡ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಇಡೀ ವಿಶ್ವಕ್ಕೆ ವ್ಯಾಪಿಸಿದೆ. ಕೋಟ್ಯಂತರ ಜನರ ಜೀವ ಹಿಂಡಿದ ಮಹಾಮಾರಿಯಿಂದ ಲಕ್ಷಾಂತರ ಜನರು ಪ್ರಾಣ ಬಿಟ್ಟಿದ್ದಾರೆ. ಆರೋಗ್ಯ ಸಮಸ್ಯೆಗಳ ಜೊತೆಗೆ ಕೊವಿಡ್-19 ಜಗತ್ತಿನಲ್ಲಿ ಸೃಷ್ಟಿಸಿದ ಸಮಸ್ಯೆಗಳು ಒಂದು ಎರಡಲ್ಲ.

ವಿಶ್ವದ 10,40,10,760 ಜನರಿಗೆ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡಿರುವುದು ವೈದ್ಯಕೀಯ ತಪಾಸಣೆಯಲ್ಲಿ ಖಾತ್ರಿಯಾಗಿದೆ. ಕೊವಿಡ್-19 ಸೋಂಕಿನಿಂದ 22,49,872ಕ್ಕೂ ಹೆಚ್ಚು ಜನರು ಪ್ರಾಣ ಬಿಟ್ಟಿದ್ದಾರೆ. ಚೀನಾದಲ್ಲಿ ಹುಟ್ಟಿಕೊಂಡ ರೋಗಕ್ಕೆ ಅಮೆರಿಕಾದಲ್ಲಿ ಅತಿಹೆಚ್ಚು ಜನರು ಬಲಿಯಾದರು. ಅಷ್ಟಾಗಿ ಕೊರೊನಾವೈರಸ್ ಜನರನ್ನು ಒಂದು ರೋಗವಾಗಿಯಷ್ಟೇ ಕಾಡಲಿಲ್ಲ. ಬದಲಿಗೆ ಸಾಂಕ್ರಾಮಿಕ ಪಿಡುಗಿನಿಂದ ಜಗತ್ತಿನಾದ್ಯಂತ ಬಹುತೇಕ ರಾಷ್ಟ್ರಗಳ ಹಲವು ರೀತಿ ಸಮಸ್ಯೆಗಳನ್ನು ಎದುರಿಸಿದವು.

ಈ ದೇಶದಲ್ಲಿ 1 ಕೋಟಿ ಮಂದಿಗೆ ದಿನಕ್ಕೆ ಒಂದೇ ಹೊತ್ತು ಊಟ!ಈ ದೇಶದಲ್ಲಿ 1 ಕೋಟಿ ಮಂದಿಗೆ ದಿನಕ್ಕೆ ಒಂದೇ ಹೊತ್ತು ಊಟ!

ಚೀನಾ, ಅಮೆರಿಕಾ, ಇಂಗ್ಲೆಂಡ್, ಫ್ರಾನ್ಸ್ ಸೇರಿದಂತೆ ಮುಂದುವರಿದ ರಾಷ್ಟ್ರಗಳಲ್ಲೇ ಸಾಕಷ್ಟು ರೀತಿ ಸಮಸ್ಯೆಗಳು ಎದುರಾದವು. ದೇಶಗಳ ಆರ್ಥಿಕತೆ ಹೊಡೆತ ಕೊಟ್ಟ ಕೊವಿಡ್-19 ರೋಗದಿಂದ ಸೃಷ್ಟಿಯಾದ ಬಹುದೊಡ್ಡ ಸವಾಲುಗಳಲ್ಲಿ ಆಹಾರ ಪೂರೈಕೆ, ದವಸ-ಧಾನ್ಯಗಳ ಆಮದು ಮತ್ತು ರಫ್ತು ಸಹ ಸೇರಿದೆ. ವಿಶ್ವದಲ್ಲಿ ಸರಕು ಸಾಮಗ್ರಿಗಳ ಸಾಗಾಟಕ್ಕೆ ಅಗತ್ಯವಿರುವ ಕಂಟೇನರ್ ಗಳ ಕೊರತೆಯಿಂದ ಸಮಸ್ಯೆಗಳು ದ್ವಿಗುಣಗೊಳ್ಳುತ್ತಿವೆ. ಕಂಟೇನರ್ ಮತ್ತು ಆಹಾರ ಸಾಮಗ್ರಿಗಳ ಸಾಗಾಟದಲ್ಲಿ ಎದುರಾಗಿರುವ ಸಮಸ್ಯೆ ಮತ್ತು ಬೆಲೆ ಏರಿಕೆಗೆ ಕಾರಣಗಳ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ನೋಡಿ.

ಕಂಟೇನರ್ ಕೊರತೆಯಿಂದ ಸರಕು ಸಾಗಾಟಕ್ಕೆ ಅಡ್ಡಿ

ಕಂಟೇನರ್ ಕೊರತೆಯಿಂದ ಸರಕು ಸಾಗಾಟಕ್ಕೆ ಅಡ್ಡಿ

ಥೈಲ್ಯಾಂಡ್ ರಾಷ್ಟ್ರದಿಂದ ಅಕ್ಕಿಯನ್ನು ರಫ್ತು ಮಾಡುವುದಕ್ಕೆ ಆಗುತ್ತಿಲ್ಲ. ಕೆನಡಾದಿಂದ ಬಟಾಣಿಯನ್ನು ರಫ್ತು ಮಾಡುವುದಕ್ಕೆ ಸಾಧ್ಯವಾಗಿಲ್ಲ. ಭಾರತದಲ್ಲಿರುವ ರಾಶಿ ರಾಶಿ ಸಕ್ಕರೆಯನ್ನು ವಿದೇಶಗಳಿಗೆ ಕಳುಹಿಸಿ ಕೊಡುವುದಕ್ಕೆ ಪರದಾಡುವಂತಾ ಸ್ಥಿತಿ ಎದುರಾಗಿದೆ. ಏಕೆಂದರೆ, ಜಾಗತಿಕ ಮಾರುಕಟ್ಟೆಯಲ್ಲಿ ಸರಕು ಸಾಮಗ್ರಿಗಳ ಸಾಗಾಟಕ್ಕೆ ಅಗತ್ಯವಾಗಿರುವ ಸ್ಟೀಲ್ ಕಂಟೇನರ್ ಕೊರತೆಯು ಹೆಚ್ಚಾಗಿದೆ.

ಚೀನಾಗೆ ಖಾಲಿ ಕಂಟೇನರ್ ಕಳುಹಿಸಿದರೆ ಲಾಭ

ಚೀನಾಗೆ ಖಾಲಿ ಕಂಟೇನರ್ ಕಳುಹಿಸಿದರೆ ಲಾಭ

ಕೊರೊನಾವೈರಸ್ ಪಿಡುಗಿನಿಂದ ವೇಗವಾಗಿ ಚೇತರಿಸಿಕೊಂಡಿರುವ ಚೀನಾ ತನ್ನ ರಫ್ತು ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಹೊರಟಿದೆ. ಅದಕ್ಕಾಗಿ ಕಂಟೇನರ್‌ಗಳಿಗೆ ಭಾರಿ ಹಣವನ್ನು ನೀಡುತ್ತಿದೆ. ಕಂಟೇನರ್ ಗಳನ್ನು ಪುನಃ ತುಂಬಿಸುವುದಕ್ಕಿಂತ ಖಾಲಿ ವಾಪಸ್ ಕಳುಹಿಸುವುದು ಹೆಚ್ಚು ಲಾಭದಾಯಕವಾಗಿದೆ ಎಂಬುದೇ ಪ್ರಮುಖ ವಿಷಯವಾಗಿದೆ. ಈ ಹಿನ್ನೆಲೆ ಆಹಾರವನ್ನು ಹೊತ್ತೊಯ್ದ ಕಂಟೇನರ್ ಗಳಲ್ಲಿ ಸರಕುಗಳನ್ನು ತುಂಬಿ ಕಳುಹಿಸುವುದಕ್ಕಿಂತ ಖಾಲಿಯಾಗಿ ಹಿಂತಿರುಗಿಸಲಾಗುತ್ತಿದೆ. ಇದರಿಂದ ಏಷ್ಯಾದಲ್ಲಿ ಬೇಡಿಕೆಯಿರುವ ಮತ್ತು ಅಗತ್ಯವಾಗಿರುವ ಸೋಯಾಬಿನ್ ನ್ನು ಅಮೆರಿಕಾದಿಂದ ರಫ್ತು ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ.

ಹಸಿವಿನ ನೋವು-2: ಅಮೆರಿಕಾದಲ್ಲಿ ಹಣ ಕೊಟ್ಟರೂ ಆಹಾರ ಸಿಗುತ್ತಿಲ್ಲವೇಕೆ?ಹಸಿವಿನ ನೋವು-2: ಅಮೆರಿಕಾದಲ್ಲಿ ಹಣ ಕೊಟ್ಟರೂ ಆಹಾರ ಸಿಗುತ್ತಿಲ್ಲವೇಕೆ?

ಅಂದುಕೊಂಡ ದೇಶಗಳಿಂದ ಆಹಾರ ಆಮದು ಆಗುತ್ತಿಲ್ಲ

ಅಂದುಕೊಂಡ ದೇಶಗಳಿಂದ ಆಹಾರ ಆಮದು ಆಗುತ್ತಿಲ್ಲ

ಈ ಮೊದಲಿನಂತೆ ಗ್ರಾಹಕರ ಅಗತ್ಯಕ್ಕೆ ತಕ್ಕ ಹಾಗೆ ಅಗತ್ಯವಿರುವ ದೇಶಗಳಿಂದ ಸರಕುಗಳನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಐಎಂ-ಎಎಕ್ಸ್ ಗ್ಲೋಬಲ್ ಇಂಕ್‌ನ ಲಾಜಿಸ್ಟಿಕ್ಸ್ ನಿರ್ದೇಶಕ ಸ್ಟೀವ್ ಕ್ರಾನಿಗ್ ಹೇಳಿದ್ದಾರೆ. ಸರಕು ಸಾಗಣೆದಾರರು ಅಕ್ಕಿ, ಬಾಳೆಹಣ್ಣು ಮತ್ತು ಕುಂಬಳಕಾಯಿ ಸೇರಿದಂತೆ ಸರಕುಗಳನ್ನು ಏಷ್ಯಾದಿಂದ ಯುಎಸ್‌ಗೆ ರವಾನಿಸಲಾಗುತ್ತಿತ್ತು. "ನಮ್ಮ ಒಂದು ಗ್ರಾಹಕ ಸಂಸ್ಥೆಯು ಪ್ರತಿವಾರ 8 ರಿಂದ 10 ಕಂಟೇನರ್ ಗಳಲ್ಲಿ ಅಕ್ಕಿಯನ್ನು ಥೈಲ್ಯಾಂಡ್‌ನಿಂದ ಲಾಸ್ ಏಂಜಲೀಸ್‌ಗೆ ರವಾನಿಸುತ್ತಿದ್ದರು. ಆದರೆ ಇದೀಗ ವಾರಕ್ಕೆ 2 ರಿಂದ 3 ಕಂಟೇನರ್ ಗಳಲ್ಲಿ ಮಾತ್ರ ಸರಕು ಸಾಗಾಟ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಏಷ್ಯಾ ರಾಷ್ಟ್ರಗಳಲ್ಲಿ ಆಹಾರ ಬೆಲೆಯ ಏರಿಕೆ

ಏಷ್ಯಾ ರಾಷ್ಟ್ರಗಳಲ್ಲಿ ಆಹಾರ ಬೆಲೆಯ ಏರಿಕೆ

ಕಂಟೇನರ್ ಕೊರತೆಯಿಂದಾಗಿ ಸರಕುಗಳ ಸಾಗಾಟಕ್ಕೆ ಅಡ್ಡಿಯಾಗುತ್ತಿದ್ದು ಏಷ್ಯಾ ರಾಷ್ಟ್ರಗಳಲ್ಲಿ ಬೆಲೆ ಏರಿಕೆ ಆತಂಕ ಹೆಚ್ಚಾಗುತ್ತಿದೆ ಎಂದು ಸೋಯಾಬಿನ್ ಮತ್ತು ಧಾನ್ಯಗಳ ಒಕ್ಕೂಟದ ಕಾರ್ಯನಿರ್ವಾಹಕ ನಿರ್ದೇಶಕ ಎರಿಕ್ ವೆನ್ಬರ್ಗ್ ಹೇಳಿದ್ದಾರೆ. ಕಳೆದ ತಿಂಗಳಷ್ಟೇ ಬಿಳಿ ಸಕ್ಕರೆಯ ಬೆಲೆಯು ಮೂರು ವರ್ಷಗಳಲ್ಲೇ ಅತಿಹೆಚ್ಚಾಗಿದೆ. ಯುಎಸ್ ನಿಂದ ಸೋಯಾಬಿನ್ ರಫ್ತು ವಿಳಂಬವಾದಷ್ಟು ಬೆಲೆ ಏರಿಕೆ ಆಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.

ಖಾಲಿ ಕಂಟೇನರ್ ಕಳುಹಿಸಲು ಇನ್ನೊಂದು ಕಾರಣ

ಖಾಲಿ ಕಂಟೇನರ್ ಕಳುಹಿಸಲು ಇನ್ನೊಂದು ಕಾರಣ

ಹಡಗುಗಳಲ್ಲಿ ಎರಡು ಕಡೆಗಳಿಂದ ಕಂಟೇನರ್ ಗಳನ್ನು ತುಂಬಿಕೊಂಡು ಹೋಗುವುದಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಅಮೆರಿಕಾದಿಂದ ಸರಕು ತುಂಬಿಕೊಂಡು ಹೋದ ಕಂಟೇನರ್ ನಲ್ಲಿ ಮತ್ತೆ ಸರಕು ತುಂಬಿಕೊಂಡು ಬಂದರೆ ಸಾರಿಗೆಗೆ ಹೆಚ್ಚು ಲಾಭದಾಯಕವಾಗಿರುತ್ತದೆ. ಆದರೆ ಒಂದು ಬಾರಿ ಚೀನಾದಿಂದ ಅಮೆರಿಕಾಗೆ ಸರಕು ತುಂಬಿಕೊಂಡು ಹೋದ ಕಂಟೇನರ್ ನಲ್ಲಿ ಅಮೆರಿಕಾದಿಂದ ಮತ್ತೆ ಚೀನಾಗೆ ಸರಕು ತುಂಬಿ ಕಳುಹಿಸುವುದಕ್ಕೆ ಸುಮಾರು 10 ಪಟ್ಟು ಹೆಚ್ಚು ಹಣ ಖರ್ಚಾಗುತ್ತದೆ. ಈ ಕಾರಣಕ್ಕಾಗಿಯೇ ಚೀನಾಗೆ ಖಾಲಿ ಕಂಟೇನರ್ ಗಳನ್ನು ಕಳುಹಿಸಿ ಕೊಡಲಾಗುತ್ತದೆ ಎಂದು ಫ್ರೈಟೋಸ್ ದತ್ತಾಂಶವು ಸ್ಪಷ್ಟವಾಗಿ ಹೇಳುತ್ತದೆ.

ಏಷ್ಯಾಗೆ ವಾಪಸ್ಸಾಗುವ 4ರ ಪೈಕಿ 3 ಖಾಲಿ ಕಂಟೇನರ್

ಏಷ್ಯಾಗೆ ವಾಪಸ್ಸಾಗುವ 4ರ ಪೈಕಿ 3 ಖಾಲಿ ಕಂಟೇನರ್

ಅಮೆರಿಕಾದ ಲಾಸ್ ಏಂಜಿಲ್ಸ್ ಬಂದರು ನೀಡಿರುವ ಅಂಕಿ ಅಂಶಗಳ ಪ್ರಕಾರ, ಏಷ್ಯಾ ಖಂಡದ ರಾಷ್ಟ್ರಗಳಿಗೆ ವಾಪಸ್ಸಾಗುವ ಪ್ರತಿ ನಾಲ್ಕು ಕಂಟೇನರ್ ಗಳ ಪೈಕಿ ಮೂರು ಕಂಟೇನರ್ ಗಳನ್ನು ಖಾಲಿಯಾಗಿ ಕಳುಹಿಸಿ ಕೊಡಲಾಗುತ್ತದೆ ಎಂದು ಕಾರ್ಯನಿರ್ವಹಣಾ ನಿರ್ದೇಶಕ ಜೆನೆ ಸೆರೋಕಾ ತಿಳಿಸಿದ್ದಾರೆ. ಕಂಟೇನರ್ ಗಳಲ್ಲಿ ಮತ್ತೆ ಸರಕುಗಳನ್ನು ತುಂಬುವುದಕ್ಕೆ ಮೂರು ದಿನ ಬೇಕಾಗುತ್ತದೆ. ಅದರ ಬದಲಿಗೆ ಖಾಲಿ ಕಂಟೇನರ್ ಕಳುಹಿಸುವುದರಿಂದ 7 ಗಂಟೆಗಳಲ್ಲೇ ಕೆಲಸ ಮುಗಿಯುತ್ತದೆ ಎಂದು ಡಬ್ಲ್ಯುಟಿಸಿ ಗ್ರೂಪ್ ವೈಸ್ ಪ್ರೆಸಿಟೆಂಡ್ ಜೋರ್ಡಾನ್ ಎಟ್ಕಿನ್ ಹೇಳಿದ್ದಾರೆ.

ಹಡಗುಗಳಲ್ಲಿ ದ್ವಿದಳ ಧಾನ್ಯಗಳ ಸಾಗಾಟ ಸುಲಭವಲ್ಲ

ಹಡಗುಗಳಲ್ಲಿ ದ್ವಿದಳ ಧಾನ್ಯಗಳ ಸಾಗಾಟ ಸುಲಭವಲ್ಲ

ಸದ್ಯದ ಸಂದಿಗ್ಧ ಸ್ಥಿತಿಯಲ್ಲಿ ಕಂಟೇನರ್ ಗಳನ್ನು ತುಂಬಿ ಕಳುಹಿಸುವುದರಿಂದ ಹೆಚ್ಚು ಲಾಭ ಗಳಿಸುವುದಕ್ಕೆ ಸಾಧ್ಯವಾಗದು ಎಂದು ಡಬ್ಲ್ಯುಟಿಸಿ ಗ್ರೂಪ್ ವೈಸ್ ಪ್ರೆಸಿಟೆಂಡ್ ಜೋರ್ಡಾನ್ ಎಟ್ಕಿನ್ ತಿಳಿಸಿದ್ದಾರೆ. ಕೆನಡಾ ರಾಷ್ಟ್ರವು ಜಗತ್ತಿನಲ್ಲೇ ಅತಿಹೆಚ್ಚು ದ್ವಿದಳ ಧಾನ್ಯಗಳನ್ನು ಉತ್ಪಾದಿಸುವ ರಾಷ್ಟ್ರವಾಗಿದೆ. ಆದರೆ ಹಡಗುಗಳಲ್ಲಿ ದ್ವಿದಳ ಧಾನ್ಯಗಳನ್ನು ರಫ್ತು ಮಾಡುವುದಕ್ಕೆ ಹೆಣಗಾವಂತಾ ಸ್ಥಿತಿಯಿದೆ ಎಂದು ಅವರು ಹೇಳಿದ್ದಾರೆ.

ಸಕ್ಕೆರ ರಫ್ತಿನಲ್ಲಿ ಐದು ಪಟ್ಟು ಇಳಿಕೆ

ಸಕ್ಕೆರ ರಫ್ತಿನಲ್ಲಿ ಐದು ಪಟ್ಟು ಇಳಿಕೆ

ವಿಶ್ವದಲ್ಲಿ ಅತಿಹೆಚ್ಚು ಸಕ್ಕರೆ ಉತ್ಪಾದಿಸುವ ರಾಷ್ಟ್ರಗಳಲ್ಲಿ ಭಾರತಕ್ಕೆ ಎರಡನೇ ಸ್ಥಾನವಿದೆ. ಕಳೆದ ಜನವರಿಯಲ್ಲಿ ಭಾರತವು ಕೇವಲ 70,000 ಮೆಟ್ರಿಕ್ ಟನ್ ಸಕ್ಕರೆಯನ್ನು ರಫ್ತು ಮಾಡಿದೆ. ಇದು ಕಳೆದ ಒಂದು ವರ್ಷದಲ್ಲಿ ಹೋಲಿಸಿಕೊಂಡರೆ ಸಕ್ಕರೆ ರಫ್ತು ಪ್ರಮಾಣದಲ್ಲಿ ಐದು ಪಟ್ಟು ಇಳಿಕೆಯಾಗಿದೆ ಎಂದು ರೇಣುಕಾ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಅಧ್ಯಕ್ಷ ರವಿ ಗುಪ್ತಾ ತಿಳಿಸಿದ್ದಾರೆ.

ಶೇ.20ರಷ್ಟು ಕಾಫಿ ಬೀಜ ರಫ್ತಿನಲ್ಲಿ ಇಳಿಮುಖ

ಶೇ.20ರಷ್ಟು ಕಾಫಿ ಬೀಜ ರಫ್ತಿನಲ್ಲಿ ಇಳಿಮುಖ

ಜಗತ್ತಿನಲ್ಲೇ ಅತಿಹೆಚ್ಚು ಕಾಫಿ ಬೀಜ ಬೆಳೆಯುವ ರಾಷ್ಟ್ರಗಳ ಪೈಕಿ ವಿಯೆಟ್ನಾ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಕಳೆದ ನವೆಂಬರ್ ತಿಂಗಳಿನಲ್ಲಿ ವಿಯೆಟ್ನಾನಿಂದ ಬೇರೆ ರಾಷ್ಟ್ರಗಳಿಗೆ ರಫ್ತು ಆಗಿರುವ ಕಾಫಭಿ ಬೀಜದ ಪ್ರಮಾಣದಲ್ಲಿ ಶೇ.20ರಷ್ಟು ಇಳಿಕೆಯಾಗಿದೆ ಎಂದು ಸಿಮೆಕ್ಸೋ-ಡಾಕ್-ಲಾಕ್ ಚೇರಮನ್ ಲೆ ಟಿಯಾನ್ ಹುಂಗ್ ತಿಳಿಸಿದ್ದಾರೆ. ಜಗತ್ತಿನಾದ್ಯಂತ ಒಂದು ಭಾಗದಲ್ಲಿ ಆಹಾರ ಧಾನ್ಯಗಳು ಮತ್ತು ಸರಕುಗಳನ್ನು ಖರೀದಿಸಲು ಗ್ರಾಹಕರು ಕಾಯುತ್ತಿದ್ದಾರೆ. ಇನ್ನೊಂದು ಕಡೆಯಲ್ಲಿ ವ್ಯಾಪಾರಿಗಳು ಸರಕುಗಳ ಮಾರಾಟವನ್ನೇ ನಿಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಬೆಲೆ ಏರಿಕೆ ಕೇವಲ ಆಹಾರ ಧಾನ್ಯಗಳಿಗಷ್ಟೇ ಸೀಮಿತವಲ್ಲ

ಬೆಲೆ ಏರಿಕೆ ಕೇವಲ ಆಹಾರ ಧಾನ್ಯಗಳಿಗಷ್ಟೇ ಸೀಮಿತವಲ್ಲ

ಕಂಟೇನರ್ ಅಭಾವ ಮತ್ತು ಸರಕುಗಳ ರಫ್ತಿನಲ್ಲಿ ವಿಳಂಬವು ಕೇವಲ ಆಹಾರ ಸಾಮಗ್ರಿಗಳ ಕೊರತೆಯನ್ನು ತೋರಿಸುತ್ತಿಲ್ಲ. ಅದರ ಬದಲಿಗೆ ಮುಂದಿನ ದಿನಗಳಲ್ಲಿ ಎಲ್ಲ ರೀತಿ ಕೊರತೆಗಳ ಸೃಷ್ಟಿಗೆ ಇದು ಕಾರಣವಾಗಲಿದೆ. 2021-22ನೇ ಸಾಲಿನಲ್ಲಿ ಕೆಲವು ಸರಕುಗಳು ಮತ್ತು ಸಾಗಾಟದ ವೆಚ್ಚವು ಬಹುಪಾಲು ದ್ವಿಗುಣಗೊಳ್ಳುವ ಅಪಾಯವಿದೆ. ಒಂದು ಬಾರಿ ಲಸಿಕೆ ಪಡೆದ ನಂತರ ಉತ್ತರ ಅಮೆರಿಕನ್ನರು ಮತ್ತು ಯುರೋಪಿಯನ್ನರು ಹೊರ ಬಂದಾಗ ಈ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

ಅಮೆರಿಕಾದಿಂದ ಏಷ್ಯಾಗೆ ಧಾನ್ಯಗಳ ರಫ್ತಿಗೆ ಪ್ರಯತ್ನ

ಅಮೆರಿಕಾದಿಂದ ಏಷ್ಯಾಗೆ ಧಾನ್ಯಗಳ ರಫ್ತಿಗೆ ಪ್ರಯತ್ನ

ಸೋಯಾಬಿನ್ ಸೇರಿದಂತೆ ದವಸ-ಧಾನ್ಯಗಳನ್ನು ಕಂಟೇನರ್ ಮುಖೇನ ರಫ್ತು ಮಾಡುವುದಕ್ಕೆ ಅಮೆರಿಕನ್ನರು ಪ್ರಯತ್ನಿಸುತ್ತಿದ್ದಾರೆ. ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಂದಿಜ್ವರ ರೋಗದಿಂದ ರಕ್ಷಿಸಿಕೊಳ್ಳಲು ಚೀನಾ ಅಮೆರಿಕಾದ ಧಾನ್ಯಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದಕ್ಕೆ ಮುಂದಾಗಿದೆ. ಏಕಕಾಲಕ್ಕೆ ಬೃಹತ್ ಪ್ರಮಾಣದಲ್ಲಿ ಧಾನ್ಯಗಳನ್ನು ಖರೀದಿಸಲು ಮುಂದಾಗುತ್ತಿರುವದರ ಹಿನ್ನೆಲೆ ವ್ಯಾಪಾರಿಗಳು ಹಿಂಜರಿಯುತ್ತಿದ್ದಾರೆ.

ಏಷ್ಯಾದಲ್ಲಿ ಕೆಲವು ಉದ್ಯಮಿಗಳು ಕಡಿಮೆ ಪ್ರಮಾಣದ ಬದಲಿಗೆ ಭಾರಿ ಪ್ರಮಾಣದಲ್ಲಿ ದವಸ-ಧಾನ್ಯಗಳನ್ನು ಖರೀದಿಸುವ ವಿಧಾನವನ್ನು ಆಯ್ದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಕೆಲವು ನೋಂದಣಿ ಮತ್ತು ಒಪ್ಪಂದಗಳನ್ನು ರದ್ದುಗೊಳಿಸಿದ್ದೇವೆ ಎಂದು ಜಾಗತಿಕ ದವಸ-ಧಾನ್ಯಗಳ ಸಹಕಾರಿ ಒಕ್ಕೂಟದ ಉಪಾಧ್ಯಕ್ಷ ಡೌಗ್ ಗ್ರೆನನ್ ತಿಳಿಸಿದ್ದಾರೆ.

ಕಂಟೇನರ್ ಗಳಿಗೆ ಜಾಗತಿಕ ಮಟ್ಟದಲ್ಲಿ ಭಾರಿ ಬೇಡಿಕೆ

ಕಂಟೇನರ್ ಗಳಿಗೆ ಜಾಗತಿಕ ಮಟ್ಟದಲ್ಲಿ ಭಾರಿ ಬೇಡಿಕೆ

ಏಷ್ಯಾ ರಾಷ್ಟ್ರಗಳಿಗೆ ಖಾಲಿ ಕಂಟೇನರ್ ಕಳುಹಿಸುವುದಕ್ಕಾಗಿಯೇ ಉತ್ತರ ಅಮೆರಿಕದ ಕೃಷಿ ಉತ್ಪನ್ನಗಳ ಸಾಗರೋತ್ತರ ಸಾಗಣಿಕೆಯನ್ನು ಸ್ಥಗಿತಗೊಳಿಸುವುದಾಗಿ ಕಳೆದ ವರ್ಷವೇ ಹಪಾಗ್-ಲಾಯ್ಡ್ ಎಜಿ ತಿಳಿಸಿತ್ತು. ಜರ್ಮನಿಯ ಸಮುದ್ರ-ಸರಕು ಸಾಗಣೆ ಕಂಪನಿಯ 40 ಅಡಿ ಕಂಟೇನರ್‌ಗಳಿಗೆ ಪ್ರಬಲವಾದ ಬೇಡಿಕೆಯಿದೆ ಎಂದು ಜಾಗತಿಕ ಕಂಟೇನರ್ ಲಾಜಿಸ್ಟಿಕ್ಸ್‌ನ ನಿರ್ದೇಶಕ ನಿಕೊ ಹೆಕರ್ ಹೇಳಿದ್ದರು.

ಕೊರೊನಾವೈರಸ್ ಸೋಂಕಿನಿಂದಾಗಿ ಕಂಟೇನರ್ ಸಮಸ್ಯೆ

ಕೊರೊನಾವೈರಸ್ ಸೋಂಕಿನಿಂದಾಗಿ ಕಂಟೇನರ್ ಸಮಸ್ಯೆ

ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾವೈರಸ್ ಸೋಂಕಿನಿಂದ ಮುಕ್ತವಾಗುವುದಕ್ಕೆ ಶಿಷ್ಟಾಚಾರ ಪಾಲನೆ ಕಡ್ಡಾಯಗೊಳಿಸಲಾಗಿತ್ತು. ಚೀನಾದಿಂದ ರಫ್ತು ಆಗುವ ಮಾಂಸ ಮತ್ತು ಸಮುದ್ರ ಆಹಾರದ ರಫ್ತು ಮಾಡುವ ಸಂದರ್ಭಗಳಲ್ಲಿ ಕಾರ್ಮಿಕರು ಕಡ್ಡಾಯವಾಗಿ ಕೊವಿಡ್-19 ಪರೀಕ್ಷೆಗೆ ಒಳಪಡಬೇಕು. ಚೀನಾದಿಂದ ರಫ್ತಾಗುವ ಆಹಾರ ಕೊವಿಡ್-19 ಸೋಂಕಿನಿಂದ ಮುಕ್ತವಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕಾಗಿತ್ತು. ವಿಶ್ವದಲ್ಲೇ ಅತಿಹೆಚ್ಚು ಹಂದಿ ಮಾಂಸ ಮಾರುಕಟ್ಟೆ ಹೊಂದಿರುವ ಚೀನಾದಲ್ಲಿ ಆಹಾರದ ಕೊರತೆಯಿಂದ ಕಳೆದ ಸಪ್ಟೆಂಬರ್ ನಲ್ಲಿ ಮಾಂಸದ ಬೆಲೆ ಗಗನಮುಖಿಯಾಗಿತ್ತು.

English summary
Global Food Trade Has Been Upended by a Container Crisis Amid COVID 19 Pandemic and Other Issues Also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X