ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರಿನೊಳಗಿದ್ದ ಭೂತ ಗ್ರಾಮ ಪತ್ತೆ: ಅಪರೂಪದ ದೃಶ್ಯ ಕಾಣಲು ಜನಸಾಗರ

|
Google Oneindia Kannada News

ಸ್ಪೇನ್‌ ಫೆಬ್ರವರಿ 15: ಸ್ಪೇನ್‌ನಲ್ಲಿ 30 ವರ್ಷಗಳ ಕಾಲ ನೀರಿನಲ್ಲಿ ಮುಳುಗಿದ ಭೂತ ಗ್ರಾಮ ಬರಗಾಲದಿಂದಾಗಿ ಕಾಣಿಸಿಕೊಂಡಿದೆ. ಸ್ಪೇನ್‌ನಲ್ಲಿ 30 ವರ್ಷಗಳಿಂದ ಆಣೆಕಟ್ಟಿನ ನೀರಿನಿಂದ ಮುಳುಗಿದ್ದ ಹಳ್ಳಿಯೊಂದು ಬರದಿಂದ ಜಲಾಶಯ ಖಾಲಿಯಾಗಿ ಈಗ ಗೋಚರಿಸಿದೆ. ಅಸೆರೆಡೊ ಹೆಸರಿನ ಈ ಸ್ಪ್ಯಾನಿಷ್ ಗ್ರಾಮವು 1992 ರಿಂದ ನೀರಿನ ಅಡಿಯಲ್ಲಿದೆ. ಆದರೀಗ ಬರಗಾಲದಿಂದಾಗಿ ನೀರು ಬತ್ತಿ ಗೋಚರಿಸುತ್ತಿದೆ. ಹೀಗಾಗಿ ಇದು ಅನೇಕ ಪ್ರವಾಸಿಗರನ್ನು ಆಕರ್ಷಿಸಿದೆ. ಈ ಸ್ಥಳದಲ್ಲಿ ಹಳೆಯ ಕಟ್ಟಡಗಳು ಶಿಥಿಲಗೊಂಡ ಆಕಾರದಲ್ಲಿ ಗೋಚರಿಸುತ್ತಿದ್ದು ಅನೇಕರು ಇದನ್ನು ನೋಡಲು ಆಗಮಿಸುತ್ತಿದ್ದಾರೆ.

ಪಿಂಚಣಿದಾರ ಮ್ಯಾಕ್ಸಿಮಿನೊ ಪೆರೆಜ್ ರೊಮೆರೊ ಅವರು ಭೂತ ಗ್ರಾಮವನ್ನು ಕಂಡು ತನಗೆ ಹೇಗೆ ಅನಿಸಿತು ಎಂಬುದರ ಕುರಿತು ದಿ ಸನ್‌ನೊಂದಿಗೆ ಮಾತನಾಡುತ್ತಾ, ಚಲನಚಿತ್ರವನ್ನು ನೋಡುತ್ತಿರುವಂತೆ ಭಾಸವಾಗುತ್ತಿದೆ ಎಂದು ಹೇಳಿದರು."ನನಗೆ ಆತಂಕದ ಭಾವನೆ ಇದೆ. ಹವಾಮಾನ ಬದಲಾವಣೆ, ಬರಗಾಲದಿಂದ ಮುಂದಿನ ವರ್ಷಗಳಲ್ಲಿ ಏನಾಗುತ್ತದೆ ಎಂಬುದು ನನ್ನ ಯೋಜನೆ" ಎಂದಿದ್ದಾರೆ. "ಇಡೀ ಸ್ಥಳವು ಎಲ್ಲಾ ದ್ರಾಕ್ಷಿತೋಟಗಳು, ಕಿತ್ತಳೆ, ಎಲ್ಲಾ ಮರಗಳಿಂದ ಹಸಿರಾಗಿ ಮತ್ತು ಸುಂದರವಾಗಿತ್ತು," 1992 ಕ್ಕಿಂತ ಮೊದಲು ತನ್ನ ಸ್ನೇಹಿತರೊಂದಿಗೆ ಬಾರ್‌ಗೆ ಭೇಟಿ ನೀಡುತ್ತಿದ್ದ 72 ವರ್ಷದ ವ್ಯಕ್ತಿ ಹೇಳಿದರು. ಹವಾಮಾನ ಬದಲಾವಣೆಯೇ ಇಂತಹ ಅತಿವೃಷ್ಟಿಗೆ ಕಾರಣ ಎನ್ನುತ್ತಾರೆ ತಜ್ಞರು.

ಎಲ್ಲಿದೆ ಈ ಗ್ರಾಮ?

ಎಲ್ಲಿದೆ ಈ ಗ್ರಾಮ?

ಮಾಧ್ಯಮ ವರದಿಗಳ ಪ್ರಕಾರ, ಅಸೆರೆಡೊ ಗ್ರಾಮದ ಬಳಿ 1992 ರಲ್ಲಿ ಅಣೆಕಟ್ಟನ್ನು ನಿರ್ಮಿಸಲಾಯಿತು. ನೀರು ತುಂಬಿದಾಗ ಗ್ರಾಮ ಸಂಪೂರ್ಣ ಮುಳುಗಡೆಯಾಗಿತ್ತು. ಇದೀಗ ಅಣೆಕಟ್ಟೆಗೆ ಮಾಡಿದ ಕೆರೆಗೆ ನೀರು ಹರಿಸಿದ್ದರಿಂದ ನೀರು ಕಡಿಮೆಯಾಗಿ ಗ್ರಾಮ ಮತ್ತೆ ಉದ್ಭವವಾಗಿದೆ. ಆಶ್ಚರ್ಯಕರ ವಿಷಯವೆಂದರೆ ಇನ್ನೂ 15 ಪ್ರತಿಶತದಷ್ಟು ಗ್ರಾಮ ಸುರಕ್ಷಿತವಾಗಿದೆ ಮತ್ತು ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಕೆಫೆಯಲ್ಲಿ ಮದ್ಯದ ಬಾಟಲಿಗಳು

ಅವಶೇಷಗಳನ್ನು ನೋಡಲು ಈ ಪ್ರದೇಶಕ್ಕೆ ಭೇಟಿ ನೀಡಿದ ಜನರು ಕುಸಿದ ಛಾವಣಿಗಳು, ಇಟ್ಟಿಗೆಗಳು ಮತ್ತು ಮರದ ಅವಶೇಷಗಳನ್ನು ಕಂಡುಕೊಂಡಿದ್ದಾರೆ. ಅದು ಒಂದು ಕಾಲದಲ್ಲಿ ಉತ್ತಮ ಸ್ಥಿತಿಯಲ್ಲಿತ್ತು. ಜೊತೆಗೆ ಘೋಸ್ಟ್ ಟೌನ್‌ನಲ್ಲಿರುವ ಕೆಫೆಯಲ್ಲಿ ಹಲವಾರು ಖಾಲಿ ಬಿಯರ್ ಬಾಟಲಿಗಳನ್ನು ಜೋಡಿಸಲಾಗಿರುವುದು ಕಂಡುಬಂದಿದೆ. ಇತರ ವಿಷಯಗಳ ಜೊತೆಗೆ ಅರೆ ನಾಶವಾದ ಹಳೆಯ ಕಾರು ಕಲ್ಲಿನ ಗೋಡೆ, ಕಬ್ಬಿಣ ತುಕ್ಕು ಹಿಡಿಯುತ್ತಿರುವುದನ್ನು ಸ್ಥಳೀಯರು ಗುರುತಿಸಿದ್ದಾರೆ. 30 ವರ್ಷಗಳ ನಂತರ ನೀರಿನ ಕೊರತೆಯಿಂದಾಗಿ ಈ ಗ್ರಾಮವು ಗೋಚರಿಸುತ್ತಿದೆ ಎಂದಿದ್ದಾರೆ.

ಮುಂದಿನ ಜೀವನ ಬಗ್ಗೆ ಆತಂಕ

ಇತ್ತೀಚೆಗಷ್ಟೇ ಘೋಸ್ಟ್ ಟೌನ್‌ಗೆ ಭೇಟಿ ನೀಡಿದ್ದ ಮ್ಯಾಕ್ಸಿಮಿನೊ ಪೆರೆಜ್ ರೊಮೆರೊ ಅವರು ಇದನ್ನು ಸಿನಿಮಾ ನೋಡುತ್ತಿರುವಂತೆ ಭಾಸವಾಗುತ್ತಿದೆ ಎಂದಿದ್ದಾರೆ. ಬರ ಮತ್ತು ಮಳೆ ಕೊರತೆಯಿಂದ ಈ ಗ್ರಾಮ ಜಲಾವೃತವಾಗಿದೆ ಎಂದು ತಿಳಿಸಿದರು. ಇದು ಒಳ್ಳೆಯ ಲಕ್ಷಣವಲ್ಲ ಎಂದಿದ್ದಾರೆ. 'ನನಗೆ ಸ್ವಲ್ಪ ದುಃಖವಾಗಿದೆ. ಹವಾಮಾನ ವೈಪರೀತ್ಯ ಹೀಗೆ ಮುಂದುವರಿದರೆ ನೀರು ಕಡಿಮೆಯಾಗಲಿದೆ. ನೋಡಲು ಗಾಬರಿಯಾದರೂ ಅವರ ನೆನಪುಗಳು ಅಂಟಿಕೊಂಡಿವೆ ಎನ್ನುತ್ತಾರೆ' ಮತ್ತೊಬ್ಬ ಗ್ರಾಮಸ್ಥರು.

ರಾತ್ರೋರಾತ್ರಿ ಕೆರೆಯಿಂದ ಭೂತದ ಗ್ರಾಮ ಪತ್ತೆ

ಕೆಲ ದಿನಗಳ ಹಿಂದೆ ಇಟಲಿಯಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಅಲ್ಲಿಯೂ ರಾತ್ರೋರಾತ್ರಿ ಕೆರೆಯಿಂದ ಭೂತದ ಗ್ರಾಮವೊಂದು ಹೊರಬಂದಿದೆ. 1947 ರಲ್ಲಿ ಜಲವಿದ್ಯುತ್ ಅಣೆಕಟ್ಟನ್ನು ನಿರ್ಮಿಸಲಾಯಿತು. ನಂತರ ಆ ಗ್ರಾಮದ ನಿವಾಸಿಗಳನ್ನು ಹತ್ತಿರದ ಗ್ರಾಮವಾದ ವಾಗ್ಲಿ ಡಿ ಸೊಟೊಗೆ ಸ್ಥಳಾಂತರಿಸಲಾಯಿತು. ನಂತರ ಇಡೀ ಗ್ರಾಮ ಕೆರೆಯ ನೀರಿನಲ್ಲಿ ಮುಳುಗಿತು. ಇದರಲ್ಲಿ ಸುಮಾರು 160 ಮನೆಗಳಿದ್ದವು.

Recommended Video

Virat ಫಾರ್ಮ್ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಗರಂ ಆಗಿ Rohit ಕೊಟ್ಟ ಉತ್ತರ ಸಖತ್!! | Oneindia Kannada

English summary
A village in Spain that was underwater and was submerged by a dam for 30 years has now gotten visible after a drought emptied a reservoir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X