ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಯೂಸು ಇಟ್ಟಿಗೆಯಾಗುವ, ಮೊಟ್ಟೆ ಕಲ್ಲಾಗುವ ಸಿಯಾಚಿನ್ ಎಂಬ ಮಾಯಾ ತಾಣ!

|
Google Oneindia Kannada News

ಗಳಗಳನೆ ಹರಿದುಹೋಗುವ ಜ್ಯೂಸು ಕ್ಷಣ ಮಾತ್ರದಲ್ಲಿ ಇಟ್ಟಿಗೆಯಂತಾದರೆ? ಒಂಚೂರು ಭಾರ ಬಿದ್ದರೆ ಸಾಕು ಠಳ್ಳಂಥ ಒಡೆದು ಹೋಗುವ ಮೊಟ್ಟೆ ಕಲ್ಲಗಿಂತ ಗಟ್ಟಿಯಾದರೆ...? ಇದೇನಿದು ಮ್ಯಾಜಿಕ್ಕಾ? ಖಂಡಿತ ಇಲ್ಲ, ಸಿಯಾಚಿನ್ ಎಂಬ ಅತ್ಯಂತ ಅಪಾಯಕಾರಿ ಯುದ್ಧಭೂಮಿಯ ನೈಜ ಚಿತ್ರಣ ಇದು...

ಕೆಲ ತಿಂಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಅಂಥದೊಂದು ವಿಡಿಯೋ ಹರಿದಾಡಿತ್ತು. ಜ್ಯೂಸ್ ಇಟ್ಟಿಗೆಯಂತಾಗುವ, ಮೊಟ್ಟೆ ಕಲ್ಲಾಗುವ ಈ ವಿಡಿಯೋ ಸಿಯಾಚಿನ್ ನಲ್ಲಿರುವ ಸೈನಿಕರ ದುರಂತ ಸ್ಥಿತಿಯನ್ನು ತೆರೆದಿಟ್ಟಿತ್ತು.

ಭಾರತೀಯ ನಾಗರಿಕರಿಗೆ ಸಿಯಾಚಿನ್ ಪ್ರವೇಶ; ಗೊತ್ತಿರಬೇಕಾದ 5 ಸಂಗತಿಭಾರತೀಯ ನಾಗರಿಕರಿಗೆ ಸಿಯಾಚಿನ್ ಪ್ರವೇಶ; ಗೊತ್ತಿರಬೇಕಾದ 5 ಸಂಗತಿ

ಪ್ರತಿಕೂಲ ಹವಾಮಾನ, ಒಮ್ಮೊಮ್ಮೆ -50, -60, -70 ಡಿಗ್ರಿ ಸೆಲ್ಷಿಯಸ್ ವರೆಗೆ ತಲುಪುವ ತಾಪಮಾನ, ಯಾವಾಗ ಹಿಮಪಾತವಾಗುತ್ತದೋ ಗೊತ್ತಿಲ್ಲದ ಸ್ಥಿತಿ... ಇದು ಸಿಯಾಚಿನ್ ಎಂಬ ರುದ್ರ, ರಮಣೀಯ ಪರಿಸರದ ಚಿತ್ರಣ. ಸಮುದ್ರ ಮಟ್ಟದಿಂದ ಸುಮಾರು 20,000 ಅಡಿ ಎತ್ತರದಲ್ಲಿರುವ ಈ ಪ್ರದೇಶ ವಿಶ್ವದ ಅತೀ ಎತ್ತರದ ಯುದ್ಧಭೂಮಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಿಯಾಚಿನ್ ಸಂಘರ್ಷ: ಹಿಮದ ಸೌಂದರ್ಯದ ಮೇಲೆ ಯುದ್ಧ ಮೂಡಿಸಿದ ನೆತ್ತರ ಕಲೆಸಿಯಾಚಿನ್ ಸಂಘರ್ಷ: ಹಿಮದ ಸೌಂದರ್ಯದ ಮೇಲೆ ಯುದ್ಧ ಮೂಡಿಸಿದ ನೆತ್ತರ ಕಲೆ

ಸಿಯಾಚಿನ್ ನಲ್ಲಿ ಕೆಲಸ ಮಾಡಬೇಕೆಂದರೆ ಅದು ಮಾಮೂಲಿ ಸೈನಿಕರಿಗೆಲ್ಲ ಸಾಧ್ಯವಿಲ್ಲದ ಮಾತು. ಎಂಥ ಪೈಲ್ವಾನ್ ಆದರೂ ಆ ಪ್ರತಿಕೂಲ ಹವಾಮಾನದೊಂದಿಗೆ ಸೆಣಸಲು ಸಾಧ್ಯವಿಲ್ಲ. ಕೇವಲ ದೈಹಿಕ ದಾರ್ಢ್ಯ ಮಾತ್ರವಲ್ಲ, ಅದಕ್ಕಿಂತ ಹೆಚ್ಚಾಗಿ ಮಾನಸಿಕ ಸ್ಥೈರ್ಯ, ಉಸಿರಾಟದಲ್ಲಿ ಹಿಡಿತವಿದ್ದರೆ ಮಾತ್ರ ಈ ಪ್ರದೇಶದಲ್ಲಿ ಬದುಕಲು ಸಾಧ್ಯ.

ಇಟ್ಟಿಗೆಯಂತಾಗುವ ಜ್ಯೂಸ್, ಕಲ್ಲಿನಂತಾಗುವ ಮೊಟ್ಟೆ; ಇದು ಸಿಯಾಚಿನ್ಇಟ್ಟಿಗೆಯಂತಾಗುವ ಜ್ಯೂಸ್, ಕಲ್ಲಿನಂತಾಗುವ ಮೊಟ್ಟೆ; ಇದು ಸಿಯಾಚಿನ್

ಇದು ಯುದ್ಧಭೂಮಿಯಾದರೂ ಇಲ್ಲಿ ಯುದ್ಧದಲ್ಲಿ ಸಾವಿಗೀಡಾದವರಿಗಿಂತ ಹಿಮಪಾತದಲ್ಲಿ ಸಾವಿಗೀಡಾದವರೇ ಹೆಚ್ಚು. ಚಳಿಗಾಲದಲ್ಲಿ ಇಲ್ಲಿ ಸರಾಸರಿ 1000 ಸೆಂ.ಮೀ. ನಷ್ಟು ಹಿಪಾತವಾಗುತ್ತದೆ.

ಏನಿದು ಸಿಯಾಚಿನ್ ನೀರ್ಗಲ್ಲು?

ಏನಿದು ಸಿಯಾಚಿನ್ ನೀರ್ಗಲ್ಲು?

ಉತ್ತರ ಹಿಮಾಲಯದ ಕೊರಾಕೊರಮ್ ಪ್ರದೇಶದಲ್ಲಿ ಬರುವ ಸಿಯಾಚಿನ್ ನೀರ್ಗಲ್ಲು ಪ್ರದೇಶ, ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿನಿಯಂತ್ರಣ ರೇಖೆಯ ಕೊನೆಯಿಂದ ಆರಂಭವಾಗುತ್ತದೆ. ಸುಮಾರು 76 ಕಿಮೀ ಉದ್ದದ ಈ ನಿರ್ಗಲ್ಲು ವಿಶ್ವದಲ್ಲೇ ಎರಡನೆಯ ದೊಡ್ಡ ನೀರ್ಗಲ್ಲು ಎಂದು ಪ್ರಸಿದ್ಧಿ ಪಡೆದಿದೆ. ಇಂದಿರಾ ಕೊಲ್ ನಲ್ಲಿ ಈ ನೀರ್ಗಲ್ಲಿನ ತುತ್ತತುದಿಯಿದ್ದು, ಅದು ಸಮುದ್ರ ಮಟ್ಟದಿಂದ 5753 ಮೀಟರ್ ಮತ್ತು ಇದರ ಬುಡ ಸಮುದ್ರ ಮಟ್ಟದಿಂದ 3620 ಮೀ. ಎತ್ತರದಲ್ಲಿದೆ. ಇಲ್ಲಿ ಹುಟ್ಟುವ ನೂಬ್ರಾ ನದಿ ಕೊನೆಗೂ ಸಿಂಧೂ ನದಿಯನ್ನು ಸೇರುತ್ತದೆ. ಅತೀ ಹೆಚ್ಚು ಶುದ್ಧ ನೀರನ್ನು ಹೊಂದಿರುವ ಪ್ರದೇಶವಾಗಿಯೂ ಇದು ಪ್ರಸಿದ್ಧಿ ಪಡೆದಿದೆ. ಚೀನಾ ಮತ್ತು ಪಾಕಿಸ್ತಾನದಿಂದ ಸಿಯಾಚಿನ್ ಅನ್ನು ಕಾಪಾಡಿಕೊಳ್ಳಲು ಭಾರತ ತನ್ನ ಸೈನಿಕರನ್ನು ಸದಾ ಅಲ್ಲಿ ಜಮಾವಣೆ ಮಾಡುತ್ತಲೇ ಬಂದಿದೆ. ಅದೇ ಕಾರಣಕ್ಕಾಗಿಯೇ ಅದು ಸೈನಿಕರನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರೂ ಆದು ಇಂದಿಗೂ ತಾರ್ಕಿಕ ಅಂತ್ಯ ಕಾಣುವಲ್ಲಿ ವಿಫಲವಾಗಿದೆ.

ಸಿಯಾಚಿನ್ ಬೇಸ್ ಕ್ಯಾಂಪ್

ಸಿಯಾಚಿನ್ ಬೇಸ್ ಕ್ಯಾಂಪ್

ಸಮುದ್ರ ಮಟ್ಟದಿಂದ 3,658 ಮೀಟರ್ ಎತ್ತರದಲ್ಲರುವ ಸಿಯಾಚಿನ್ ನೀರ್ಗಲ್ಲಿನಲ್ಲಿರುವ ಸೇನಾ ಶಿಬಿರಕ್ಕೆ ಸಿಯಾಚಿನ್ ಬೇಸ್ ಕ್ಯಾಂಫ್ ಎಂದು ಹೆಸರು. ಇಲ್ಲಿಯವರಗೂ ವಾಹನದಲ್ಲಿ ಹೋಗುವುದಕ್ಕೆ ರಸ್ತೆಗಳಿವೆ. ಆದರೆ ಇಲ್ಲಿಂದ ಮುಂದೆ ಸಿಯಾಚಿನ್ ನ ರುದಿ ತಲುಪಬೇಕೆಂದರೆ 60 ಕಿ.ಮೀ. ದೂರದವರೆಗೆ ಟ್ರೆಕ್ಕಿಂಗ್ ಮಾಡೀಕೊಂಡೇ ತೆರಳಬೇಕು.ಸಿಯಾಚಿನ್ ಬೇಸ್ ಕ್ಯಾಂಪಗೆ ಸೈನಿಕರನ್ನು ಆರಯ್ಕೆ ಮಾಡುವ ಮುನ್ನ ಪಾರ್ಥಪುರ ಎಂಬಲ್ಲಿ ಪೂರ್ವಭಾವಿ ಶಿಬಿರ ನಡೆಸಲಾಗುತ್ತದೆ. ಮೂರು ತಿಂಗಳಗಳ ಕಾಲ ಇಲ್ಲಿ ತರಬೇತಿ ನೀಡಿ, ಅವರು ಆಯ್ಕೆಯಾದರೆ ಮಾತ್ರವೇ ಸಿಯಾಚಿನ್ ಬೇಸ್ ಕ್ಯಾಂಪ್ ಗೆ ಕಳಿಸಲಾಗುತ್ತದೆ. ಸಿಯಾಚಿನ್ ನೀರ್ಗಲ್ಲಿನಲ್ಲಿ ಒಂದು ರೆಜಿಮೆಂಟಿಗೆ ಕೇವಲ ಮೂರು ತಿಂಗಳು ಮಾತ್ರ ಪೋಸ್ಟಿಂಗ್ ಮಾಡಲಾಗುತ್ತದೆ. ನಂತರ ಅವರನ್ನು ವಾಪಸ್ ಕರೆಸಿಕೊಳ್ಳಲಾಗುತ್ತದೆ. ನಂತರ ಮತ್ತೊಂದು ತಂಡವನ್ನು ಕಳಿಸಲಾಗುತ್ತದೆ. ಸೈನಿಕರಿಗೆ ಹೈ ಅಲ್ಟಿಟ್ಯೂಡ್ ವಾರ್ ಫೇರ್ ತರಬೇತಿ ನೀಡಿದ ನಂತರವೇ ಇಲ್ಲಿಗೆ ಕಳಿಸಲಾಗುತ್ತದೆ.

ಹನುಮಂತಪ್ಪನ ಸ್ಮರಣೆಯಲ್ಲಿ ಸಿಯಾಚಿನ್ ಮಿಲಿಟರಿ ಮುಕ್ತವಾಗಲಿಹನುಮಂತಪ್ಪನ ಸ್ಮರಣೆಯಲ್ಲಿ ಸಿಯಾಚಿನ್ ಮಿಲಿಟರಿ ಮುಕ್ತವಾಗಲಿ

ಸಿಯಾಚಿನ್ ಬೇಸ್ ಕ್ಯಾಂಪ್ ಬಗ್ಗೆ...

ಸಿಯಾಚಿನ್ ಬೇಸ್ ಕ್ಯಾಂಪ್ ಬಗ್ಗೆ...

ಸಮುದ್ರ ಮಟ್ಟದಿಂದ 11000 ಅಡಿ ಎತ್ತರದಲ್ಲಿರುವ ಸಿಯಾಚಿನ್ ಬೇಸ್ ಕ್ಯಾಂಪ್ ಗೆ ಪ್ರವಾಸಿಗರು ಭೇಟಿ ನೀಡುವುದಕ್ಕೆ ಅನುಮತಿ ಇದೆ. 15000 ಅಡಿ ಎತ್ತರದವರೆಗೂ ಪ್ರವಾಸಿಗರು ತೆರಳಬಹುದು. ಆದರೆ ಅದಕ್ಕಿಂತ ಎತ್ತರ ತೆರಳಲು ಅನುಮತಿ ಇಲ್ಲ. ಇಷ್ಟು ಎಗತ್ತರಕ್ಕೆ ತೆರಳುತ್ತಿದ್ದಂತೆಯೇ ಆಮ್ಲಜನಕದ ಕೊರೆತೆ ಕಾಡುವುದಲ್ಲದೆ, ಹಿಮಪಾತಗಳು ಯಾವಾಗ ಸಂಭವಿಸುತ್ತವೆ ಎನ್ನುವುದಕ್ಕಾಗುವುದಿಲ್ಲ. ಪ್ರವಾಸಿಗರಿಗೆ ಆಹಾರವೂ ದೊರಕುವುದಿಲ್ಲ. ಅಲ್ಲಿ ಸೈನಿಕರಿಗಾಗಿಯೇ ಆಹಾರವನ್ನು ಸಂಗ್ರಹಿಸಿಡುವುದರಿಂದ ಪ್ರವಾಸಿಗರು ತೆರಳಿದರೆ ಅದೇ ಆಹಾರವನ್ನು ಹೆಚ್ಚಿನ ಬೆಲೆಗೆ ಖರೀದಿಸಬೇಕಾಗುತ್ತದೆ. ಇದರಿಂದ ಸೈನಿಕರಿಗೂ ಆಹಾರದ ಅಭಾವ ಕಾಡಬಹುದು. ಸಿಯಾಚಿನ್ ಬೇಸ್ ಕ್ಯಾಂಪಿಗೆ ತೆರಳುವ ಪ್ರವಾಸಿಗರಿಗೆ ಮೊದಲೇ ಸೈನಿಕರು ತರಬೇತಿ ನೀಡುತ್ತಾರೆ. ಜೊತೆಗೆ ದೈಹಿಕವಾಗಿ ಬಲಾಡ್ಯವಾಗಿದ್ದರೆ ಮಾತ್ರವೇ ಅವರಿಗೆ ಬೇಸ್ ಕ್ಯಾಂಪಿಗೆ ತೆರಳಲು ಅನುಮತಿ ನೀಡಲಾಗುತ್ತದೆ.

ಪ್ರತಿಕೂಲ ಹವಾಮಾನದಿಂದ ಎದುರಾಗುವ ಸಮಸ್ಯೆಗಳು

ಪ್ರತಿಕೂಲ ಹವಾಮಾನದಿಂದ ಎದುರಾಗುವ ಸಮಸ್ಯೆಗಳು

ಸಿಯಾಚಿನ್ ನೀರ್ಗಲ್ಲಿನಲ್ಲಿ ನೀರು ಕುಡಿಯುವುದಕ್ಕೂ ಸಾಧ್ಯವಾಗದ ಸ್ಥಿತಿ ಸೈನಿಕರದ್ದು. ಬಾಟಲ್ ನಲ್ಲಿರುವ ನೀರು ನೋಡು ನೋಡುತ್ತಿದ್ದಂತೆಯೇ ಮಂಜುಗಡ್ಡೆಯಂತಾಗುತ್ತದೆ. ತರಕಾರಿಗಳೆಲ್ಲವೂ ಹೆಪ್ಪುಗಟ್ಟುತ್ತವೆ. ತಿನ್ನುವುದಕ್ಕೆ ಹೋದರೆ ಕಲ್ಲಿನಂತಾಗುವ ಅವನ್ನು ಹಲ್ಲಿನಲ್ಲಿ ಜಗಿಯುವುದಕ್ಕೂ ಸಾಧ್ಯವಾಗದ ಸ್ಥಿತಿ. ಬಿಸಿ ಮಾಡಿಕೊಂಡರೂ ಕ್ಷಣ ಮಾತ್ರದಲ್ಲಿ ಅದು ತಣ್ಣಗಾಗಿ ಹೆಪ್ಪುಗಟ್ಟುತ್ತದೆ! ಇಂಥ ಸ್ಥಿತಿಯಲ್ಲಿ ಸೈನಿಕರು ಹಗಲು ರಾತ್ರಿ ಕಳೆಯಬೇಕು. ಚಳಿಯನ್ನು ತಡೆಯುವ ಸಾಕಷ್ಟು ಬೆಚ್ಚಗಿನ ಬಟ್ಟೆ ತೊಟ್ಟರೂ ಅದು ಸಂಪೂರ್ಣವಾಗಿ ಚಳಿ ತಡೆಯುವುದಿಲ್ಲ. ಇದ್ದಕ್ಕಿದ್ದಂತೇ ಹಿಮಪಾತ ಸಂಭವಿಸಿದರೆ ಸಾವಿರಾರು ಅಡಿ ಆಳದ ಹಿಮ ಕಣಿವೆಯಲ್ಲಿ ಬೀಳಬೇಕಾಗುತ್ತದೆ.

ಮಾಲಿನ್ಯಕ್ಕೆ ತುತ್ತಾಗುತ್ತಿರುವ ಸಿಯಾಚಿನ್

ಮಾಲಿನ್ಯಕ್ಕೆ ತುತ್ತಾಗುತ್ತಿರುವ ಸಿಯಾಚಿನ್

1970 ಕ್ಕೂ ಮುನ್ನ ಸಿಯಾಚಿನ್ ನಲ್ಲಿ ಮಾನವ ಸಂಚಾರವಿಲ್ಲದಿದ್ದರಿಂದ ಅಲ್ಲಿ ಯಾವುದೇ ರೀತಿಯ ಮಾಲಿನ್ಯ ಉಂಟಾಗಿರಲಿಲ್ಲ. ಆದರೆ ಯಾವಾಗ ಸೈನಿಕರ ಜಮಾವಣೆ ಆರಂಭವಾಯ್ತೋ ಆಗಿನಿಂದ ಮಾಲಿನ್ಯವೂ ಆರಂಭವಾಗಿದೆ. ಸೈನಿಕರು ಉಪಯೋಗಿಸಿದ ಆಹಾರ, ಮತ್ತಿತರ ವಸ್ತುಗಳ ತ್ಯಾಜ್ಯವನ್ನು ಅಲ್ಲೇ ಎಸೆಯದೆ ಬೇರೆ ದಾರಿ ಇಲ್ಲ. ಮಂಜುಗಡ್ಡೆಯಲ್ಲಿ ಈ ತ್ಯಾಜ್ಯಗಳೂ ಕರಗದೆ ಹಾಗೆಯೇ ಉಳಿಯುವುದರಿಂದ ಮಿಕ್ಕ ಪ್ರದೇಶಗಳಿಗೆ ಹೋಲಿಸಿದರೆ ಮಾಲಿನ್ಯ ಈ ಪ್ರದೇಶದಲ್ಲಿ ಹೆಚ್ಚು. ಪ್ರತಿ ವರ್ಷ ಸಿಯಾಚಿನ್ ಬೇಸ್ ಕ್ಯಾಂಪ್ ನಲ್ಲಿ ಸುಮಾರು 236 ಟನ್ ನಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇತ್ತೀಚೆಗೆ ಸಿಯಾಚಿನ್ ಬೇಸ್ ಕ್ಯಾಂಪ್ ಅನ್ನು ಸ್ವಚ್ಛಗೊಳಿಸಿ, ಸುಮಾರು 130 ಟನ್ ನಷ್ಟು ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಸೇನೆಗೆ ಸಂದ ಸಮಯ ಒಂದೂವರೆ ವರ್ಷ! ಜೊತೆಗೆ ಪ್ರವಾಸಿಗರೂ ಆಗಮಿಸುತ್ತಿರುವುದರಿಂದ ಇದು ಮತ್ತಷ್ಟು ಸಮಸ್ಯೆಯನ್ನು ಸೃಷ್ಟಿಸಿದೆ. ರುದ್ರರಮಣೀಯ ಎನ್ನಿಸಿರುವ ಸಿಯಾಚಿನ್ ನೀರ್ಗಲ್ಲು, ತನ್ನ ಪ್ರತಿಕೂಲ ಹವಾಮಾನ ಮಾತ್ರವಲ್ಲದೆ, ಮಾಲಿನ್ಯದಿಂದಲೂ ಇದೀಗ ಸಮಸ್ಯೆಯಾಗಿ ಪರಿಣಮಿಸಿದೆ.

English summary
Siachen Glacier Worlds highest Warfield located in the eastern Karakoram range in the Himalayas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X