ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2015ರಲ್ಲಿ ದಿಮಾಪುರದ ಹೆಲಿಕಾಪ್ಟರ್ ಅಪಘಾತದಲ್ಲಿ ಬದುಕುಳಿದಿದ್ದ ಜನರಲ್ ರಾವತ್

|
Google Oneindia Kannada News

ಹೊಸದಿಲ್ಲಿ ಡಿಸೆಂಬರ್ 8: ಭಾರತೀಯ ವಾಯುಪಡೆಯು ಇಂದು ತಮಿಳುನಾಡಿನ ಕೂನೂರು ಬಳಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರಿದ್ದ IAF Mi-17V5 ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಎಂದು ಹೇಳಿದೆ. ಅಪಘಾತದ ಕಾರಣ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ. ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮಿಳುನಾಡಿನ ನೀಲಗಿರಿಯಲ್ಲಿ ಇಂದು ಮುಂಜಾನೆ ಪತನಗೊಂಡ ಸೇನಾ ಹೆಲಿಕಾಪ್ಟರ್‌ನಲ್ಲಿ 13 ಮಂದಿಯೊಂದಿಗೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದರು.

ಡಿಸೆಂಬರ್ 31, 2019 ರಂದು ಭಾರತದ ಮೊದಲ ಸಿಡಿಎಸ್ ಆಗಿ ಅಧಿಕಾರ ವಹಿಸಿಕೊಂಡ ಜನರಲ್ ರಾವತ್ ಒಮ್ಮೆ ಹೆಲಿಕಾಪ್ಟರ್ ಅಪಘಾತದಿಂದ ಬದುಕುಳಿದರು. ಹೆಲಿಕಾಪ್ಟರ್ 20 ಮೀಟರ್ ಏರುವ ಮೊದಲು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿತ್ತು. ಫೆಬ್ರವರಿ 3, 2015 ರಂದು ನಾಗಾಲ್ಯಾಂಡ್‌ನ ದಿಮಾಪುರದಲ್ಲಿ ಚೀತಾ ಅಪಘಾತದಲ್ಲಿ ರಾವತ್ ಬದುಕುಳಿದಿದ್ದರು. ಆ ಸಮಯದಲ್ಲಿ ಅವರು ಲೆಫ್ಟಿನೆಂಟ್ ಜನರಲ್ ಆಗಿದ್ದರು. ಎಂಜಿನ್ ವೈಫಲ್ಯದಿಂದ ಹೆಲಿಕಾಪ್ಟರ್ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡು ರಾವತ್ ಅವರೊಂದಿಗೆ ಇಬ್ಬರು ಪೈಲಟ್‌ಗಳು ಮತ್ತು ಕರ್ನಲ್ ಬದುಕುಳಿದಿದ್ದರು. ಘಟನೆಯಲ್ಲಿ ಜನರಲ್ ರಾವತ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.

ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ನಿಧನ; ಮೋದಿ ಸೇರಿ ಗಣ್ಯರ ಸಂತಾಪಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ನಿಧನ; ಮೋದಿ ಸೇರಿ ಗಣ್ಯರ ಸಂತಾಪ

ಜನರಲ್ ಬಿಪಿನ್ ರಾವತ್ ವ್ಯಾಪಕ ಕಾರ್ಯಾಚರಣೆಗಳ ಮೂಲಕ ಹೆಚ್ಚಿನ ಅನುಭವವನ್ನು ಪಡೆದುಕೊಂಡಿದ್ದು, ವ್ಯಾಪಕ ಶ್ರೇಣಿಯ ಯುದ್ಧ ಮತ್ತು ಸಂಘರ್ಷದ ಸಂದರ್ಭಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಪೂರ್ವ ವಲಯದಲ್ಲಿ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಪದಾತಿದಳದ ಬೆಟಾಲಿಯನ್ ಮತ್ತು ಕಾಶ್ಮೀರ ಕಣಿವೆಯಲ್ಲಿ ರಾಷ್ಟ್ರೀಯ ರೈಫಲ್ಸ್ ಸೆಕ್ಟರ್‌ಗೆ ಕಮಾಂಡರ್ ಆಗಿದ್ದರು. ಬಿಪಿನ್ ರಾವತ್ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಪದಾತಿ ದಳದ ವಿಭಾಗ ಉಸ್ತುವಾರಿ ನೋಡಿಕೊಳ್ಳಲು ನಿಯೋಜಿಸಲಾಯಿತು. ಈಶಾನ್ಯದಲ್ಲಿ ಕಾರ್ಪ್ಸ್ ಕಮಾಂಡರ್ ಆಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. ಆರ್ಮಿ ಕಮಾಂಡರ್ ಆಗಿ, ಅವರು ಪಾಶ್ಚಿಮಾತ್ಯ ಮುಂಭಾಗದಲ್ಲಿ ಮರುಭೂಮಿ ವಲಯದಲ್ಲಿ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿದ್ದರು. ಜನರಲ್ ಬಿಪಿನ್ ರಾವತ್ ಅವರನ್ನು 31 ಡಿಸೆಂಬರ್ 2019 ರಂದು ಭಾರತದ ಮೊದಲ ರಕ್ಷಣಾ ಸಿಬ್ಬಂದಿಯಾಗಿ ನೇಮಿಸಲಾಯಿತು.

General Rawat, who survived a helicopter crash in Dimapur in 2015

ದೇಶದ ರಕ್ಷಣೆಗಾಗಿ ಭೂಸೇನೆ, ವಾಯುಸೇನೆ ಹಾಗೂ ನೌಕಾಸೇನೆ ಎಂಬ ಮೂರು ಸೇನೆಗಳ ಮಹಾದಂಡನಾಯಕರಾಗಿ ರಾಷ್ಟ್ರಪತಿ ಕಾರ್ಯನಿರ್ವಹಿಸುತ್ತಾರೆ. ಮಹಾದಂಡನಾಯಕರ ಹೊರತಾಗಿ ಸೇನೆಗಳ ನಡುವೆ ಉತ್ತಮ ಸಂವಹನ, ಸಮನ್ವಯ ಸಾಧಿಸಿ ಅವನ್ನು ಮುನ್ನಡೆಸಲು ಓರ್ವ ಮುಖ್ಯ ದಂಡನಾಯಕರ ಅಗತ್ಯವಿದೆ ಎಂಬುದಾಗಿ ಕಾರ್ಗಿಲ್ ಪುನರ್ ಪರಿಶೀಲನಾ ಸಮಿತಿ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಭೂಸೇನಾ ಮುಖ್ಯಸ್ಥರಾಗಿದ್ದು, ಡಿ.31ಕ್ಕೆ ನಿವೃತ್ತರಾಗಲಿರುವ ಜನರಲ್ ಬಿಪಿನ್ ರಾವತ್ ಅವರನ್ನು ಮೊದಲ ಸಿಡಿಎಸ್ ಆಗಿ ಕೇಂದ್ರ ಸರ್ಕಾರ ನೇಮಕ ಮಾಡಿತ್ತು.

General Rawat, who survived a helicopter crash in Dimapur in 2015

ಬಿಪಿನ್ ರಾವತ್ ಅವರ ಸಂಪೂರ್ಣ ಸೇವಾ ವೃತ್ತಿಜೀವನದ 42 ವರ್ಷಗಳ ಅವಧಿಯಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆ ಮತ್ತು ಶೌರ್ಯಕ್ಕಾಗಿ, ಜನರಲ್ ಬಿಪಿನ್ ರಾವತ್ ಅವರಿಗೆ PVSM, UYSM, AVSM, YSM, SM ಮತ್ತು VSM ಸೇರಿದಂತೆ ಹಲವಾರು ರಾಷ್ಟ್ರಪತಿ ಪ್ರಶಸ್ತಿಗಳನ್ನು ನೀಡಲಾಗಿದೆ. ಇವುಗಳ ಜೊತೆಗೆ, ಅವರು ಎರಡು ಸಂದರ್ಭಗಳಲ್ಲಿ ಸೇನಾ ಮುಖ್ಯಸ್ಥರ ಶ್ಲಾಘನೆ ಮತ್ತು ಸೇನಾ ಕಮಾಂಡರ್ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಾಂಗೋದಲ್ಲಿ ಯುಎನ್‌ನೊಂದಿಗೆ ಸೇವೆ ಸಲ್ಲಿಸುತ್ತಿರುವಾಗ, ಅವರಿಗೆ ಎರಡು ಬಾರಿ ಫೋರ್ಸ್ ಕಮಾಂಡರ್‌ನ ಪ್ರಶಂಸೆ ನೀಡಲಾಗಿದೆ.

General Rawat, who survived a helicopter crash in Dimapur in 2015

ಅಪಘಾತದ ವಿವರಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಿಸಿದರು. ಸದ್ಯದಲ್ಲಿಯೇ ಕೇಂದ್ರ ಸಚಿವ ಸಂಪುಟದ ತುರ್ತು ಸಭೆಯನ್ನು ನವದೆಹಲಿಯಲ್ಲಿ ಕರೆಯಲಾಗುವುದು ಎಂದು ವರದಿಯಾಗಿದೆ.

Recommended Video

ವಾಯುಪಡೆಯ Mi-17V5 ಹೆಲಿಕಾಪ್ಟರ್ ಸ್ಪೆಷಾಲಿಟಿ ಏನು? | Oneindia Kannada

English summary
Chief of Defence Staff General Bipin Rawat was on board a military chopper along with 13 others that crashed in Nilgiris, Tamil Nadu earlier today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X