ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನರಲ್ ಬಿಪಿನ್ ರಾವತ್ ಹಠಾತ್ ನಿಧನ: ಯಾರಾಗಲಿದ್ದಾರೆ ಹೊಸ ಸಿಡಿಎಸ್?

|
Google Oneindia Kannada News

ತಮಿಳುನಾಡಿನ ನೀಲಗಿರಿ ಬೆಟ್ಟದ ತಪ್ಪಲಿನ ಚಹಾ ತೋಟದಲ್ಲಿ ಸೇನಾ ಹೆಲಿಕಾಪ್ಟರ್ ಅಪಘಾತವಾಗಿದ್ದು, ಇಡೀ ದೇಶಕ್ಕೆ ಆಘಾತ ನೀಡಿದೆ. ವೆಲ್ಲಿಂಗ್ಟನ್ ಸೇನಾ ಕಾಲೇಜಿನಲ್ಲಿ ಉಪನ್ಯಾಸ ನೀಡಲು ತೆರಳುತ್ತಿದ್ದ ಜನರಲ್ ಬಿಪಿನ್ ರಾವತ್ ಅವರ ಹಠಾತ್ ಮತ್ತು ದುರದೃಷ್ಟಕರ ನಿಧನ ಮೋದಿ ಸರ್ಕಾರಕ್ಕೆ ತೀವ್ರ ಹಿನ್ನಡೆ ಉಂಟು ಮಾಡಿದೆ.

ಜನರಲ್ ರಾವತ್ ಅಗಲಿಕೆಯಿಂದ ಪ್ರಮುಖ ಹುದ್ದೆಯಾದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಸ್ಥಾನ ಖಾಲಿಯಾಗಿದೆ. ಉನ್ನತ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಪ್ರಕಾರ ಮುಂದಿನ ಏಳರಿಂದ ಹತ್ತು ದಿನಗಳಲ್ಲಿ ಹೊಸ ಸಿಡಿಎಸ್ ನೇಮಕ ಮಾಡಲು ಮೋದಿ ಸರ್ಕಾರ ಮುಂದಾಗಿದ್ದು, ಆರಂಭಿಕ ಪ್ರಕ್ರಿಯೆಗೆ ಚಾಲನೆ ನೀಡಿರುವ ಸುದ್ದಿ ಬಂದಿದೆ.

ಜನರಲ್ ಬಿಪಿನ್ ರಾವತ್ ಅವರ ನಿಧನದೊಂದಿಗೆ, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಅವರು ಈಗ ದೇಶದ ಅತ್ಯಂತ ಹಿರಿಯ ಮಿಲಿಟರಿ ಅಧಿಕಾರಿಯಾಗಿದ್ದಾರೆ. ಆರ್ಮಿ ವೈಸ್ ಚೀಫ್ ಲೆಫ್ಟಿನೆಂಟ್ ಜನರಲ್ ಸಿಪಿ ಮೊಹಂತಿ ಮತ್ತು ಉತ್ತರ ಸೇನೆಯ ಕಮಾಂಡರ್ ಲೆಫ್ಟಿನೆಂಟ್ ಜನರಲ್ ವೈ ಕೆ ಜೋಶಿ ಅವರು ನಂತರದ ಸ್ಥಾನದಲ್ಲಿದ್ದಾರೆ. ಆದರೆ, ಸಿಡಿಎಸ್ ಆಯ್ಕೆ ಅಷ್ಟು ಸುಲಭವಲ್ಲ, ಭೂ, ವಾಯು, ನೌಕಾಪಡೆ ಜೊತೆ ಸಮನ್ವಯ ಸಾಧಿಸಬಲ್ಲ ಹಾಗೂ ಮೂರು ಪಡೆಗಳಿಗೂ ಸಮ್ಮತವಾಗಬಲ್ಲ ಆಯ್ಕೆಯನ್ನು ಮೋದಿ ಸರ್ಕಾರ ಘೋಷಿಸಬೇಕಿದೆ.

General Bipin Rawats sudden demise; Centre may appoint new CDS soon

ಜನರಲ್ ಬಿಪಿನ್ ರಾವತ್ ಅವರು 2020 ರ ಜನವರಿಯಲ್ಲಿ ದೇಶದ ಮೊದಲ ರಕ್ಷಣಾ ಸಿಬ್ಬಂದಿಯ (ಸಿಡಿಎಸ್) ಮುಖ್ಯಸ್ಥರಾದರು. 2019 ರಲ್ಲಿ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಿಡಿಎಸ್ ಅನ್ನು ನೇಮಕ ಮಾಡಲಾಗುವುದು ಎಂದು ಘೋಷಿಸಿದ್ದರು. ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥರ ಸಮ್ಮತಿ ಇದಕ್ಕಿತ್ತು, ದೇಶದ ಮಹಾ ದಂಡನಾಯಕ ರಾಷ್ಟ್ರಪತಿಗಳ ಅನುಮತಿ ಸಿಕ್ಕಿ ಸಿಡಿಎಸ್ ಹುದ್ದೆಗೆ ಹಿರಿಯ ಅಧಿಕಾರಿ ಜನರಲ್ ಬಿಪಿನ್ ಆಯ್ಕೆಯಾಗಿದ್ದರು. ಅವರ ಸೇವಾವಧಿ ಡಿಸೆಂಬರ್ 31, 2021ಕ್ಕೆ ಮುಕ್ತಾಯವಾಗುತ್ತಿತ್ತು. ನವರಣೆ ಅವರ ಸೇವಾವಧಿ ಏಪ್ರಿಲ್ 2022ರ ತನಕ ಇದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಲೋಕಸಭೆಯಲ್ಲಿ ಬೆಳಿಗ್ಗೆ 12ಕ್ಕೆ ಮತ್ತು ರಾಜ್ಯಸಭೆಯಲ್ಲಿ ಕಟ್ಟೇರಿಯಲ್ಲಿ ನಡೆದ ಹೆಲಿಕಾಪ್ಟರ್ ದುರಂತದ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾರತವು ಚೀನಾದೊಂದಿಗಿನ ಗಡಿ ಬಿಕ್ಕಟ್ಟಿನಲ್ಲಿ ಸಿಲುಕಿರುವ ಸಮಯದಲ್ಲಿ ಹೊಸ ಸಿಡಿಎಸ್‌ನ ಘೋಷಣೆಯು ಹೆಚ್ಚು ಮಹತ್ವದ್ದಾಗಿದೆ.

ಸಿಡಿಎಸ್ ಹುದ್ದೆ: ದೇಶದ ರಕ್ಷಣೆಗಾಗಿ ಭೂಸೇನೆ, ವಾಯುಸೇನೆ ಹಾಗೂ ನೌಕಾಸೇನೆ ಎಂಬ ಮೂರು ಸೇನೆಗಳ ಮಹಾದಂಡನಾಯಕರಾಗಿ ರಾಷ್ಟ್ರಪತಿ ಕಾರ್ಯನಿರ್ವಹಿಸುತ್ತಾರೆ. ಮಹಾದಂಡನಾಯಕರ ಹೊರತಾಗಿ ಸೇನೆಗಳ ನಡುವೆ ಉತ್ತಮ ಸಂವಹನ, ಸಮನ್ವಯ ಸಾಧಿಸಿ ಅವನ್ನು ಮುನ್ನಡೆಸಲು ಓರ್ವ ಮುಖ್ಯ ದಂಡನಾಯಕರ ಅಗತ್ಯವಿದೆ .ಎಂಬುದಾಗಿ ಕಾರ್ಗಿಲ್ ಪುನರ್ ಪರಿಶೀಲನಾ ಸಮಿತಿ ಶಿಫಾರಸು ಮಾಡಿತ್ತು.

Centre may appoint new CDS soon

ಸಿಡಿಎಸ್ ಹುದ್ದೆಗೆ ಅರ್ಹತೆ, ಮಾನದಂಡ

* ಸಶಸ್ತ್ರ ಪಡೆಗಳ ಯಾವುದೇ ಕಮಾಂಡಿಂಗ್ ಅಧಿಕಾರಿಗಳು ಅಥವಾ ಧ್ವಜ ಅಧಿಕಾರಿಗಳು ನಿಯಮಗಳ ಪ್ರಕಾರ ಸ್ಥಾನಕ್ಕೆ ಅರ್ಹರಾಗಿರುತ್ತಾರೆ.

* ಸಾಮಾನ್ಯವಾಗಿ, ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಗೆ ಗರಿಷ್ಠ ವಯಸ್ಸಿನ ಮಿತಿಯನ್ನು 65 ವರ್ಷಗಳಿಗೆ ನಿಗದಿಪಡಿಸಲಾಗಿದೆ.

* ಶೇಕಟ್ಕರ್ ಸಮಿತಿಯ ಶಿಫಾರಸಿನ ಪ್ರಕಾರ ಸರ್ಕಾರವು ಮೂರು ಸೇವಾ ಮುಖ್ಯಸ್ಥರ ಪೈಕಿ ಸಿಡಿಎಸ್ ಅನ್ನು ಆಯ್ಕೆ ಮಾಡಬೇಕು.

* ಮೊದಲ ಎರಡು ಅಥವಾ ಮೂರು CDS ನೇಮಕಾತಿಗಳು ಸೇನೆಯಿಂದ ಆಗಿರಬೇಕು ಎಂದು ಭದ್ರತಾ ಸಂಸ್ಥೆಯಲ್ಲಿ ಹಲವರು ನಂಬುತ್ತಾರೆ.

* ಏಕೆಂದರೆ ದೇಶವು ಎದುರಿಸುತ್ತಿರುವ ಭದ್ರತಾ ಸವಾಲುಗಳು ಎರಡು ಪ್ರಮುಖ ಗಡಿಯಲ್ಲಿದೆ.

* ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯದಲ್ಲಿ ಜನರಲ್ ರಾವತ್ ಅವರ ಅನುಭವವು ಅವರನ್ನು CDS ಹುದ್ದೆಗೆ ನೇಮಿಸಲು ಕಾರಣವಾಗಿದೆ.

* ಜನರಲ್ ರಾವತ್ ಅವರು ಇಬ್ಬರು ಉನ್ನತ ಜನರಲ್‌ಗಳಾದ ಲೆಫ್ಟಿನೆಂಟ್ ಜನರಲ್ ಪ್ರವೀಣ್ ಬಕ್ಷಿ ಮತ್ತು ಲೆಫ್ಟಿನೆಂಟ್ ಜನರಲ್ ಪಿಎಂ ಹರಿಜ್ ಅವರನ್ನು ಹಿಂದಿಕ್ಕಿದರು.

ಸಿಡಿಎಸ್ ಅಧಿಕಾರ ಹಾಗೂ ಜವಾಬ್ದಾರಿ
* ದೇಶದ ರಕ್ಷಣಾ ಮಂತ್ರಿ ಹಾಗೂ ಮೂರೂ ಸಶಸ್ತ್ರಪಡೆಗಳ ದಂಡನಾಯಕರಿಗೆ ಮುಖ್ಯ ಸೇನಾ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾರೆ. ಮೂರೂ ಸಶಸ್ತ್ರಪಡೆಗಳ ದಂಡನಾಯಕರು ಕೂಡ ರಕ್ಷಣಾ ಮಂತ್ರಿಗಳಿ ಆಯಾ ಪಡೆಗಳ ಕುರಿತು ನೇರವಾಗಿ ಸಲಹೆ ನೀಡಬಹುದಾಗಿದೆ.

* ಸಿಡಿಎಸ್‌ ಯಾವುದೇ ಸಮರಾಭ್ಯಾಸಗಳಲ್ಲಿ ತೊಡಗುವುದಿಲ್ಲ.

* ಸಿಡಿಎಸ್‌ ಮೂರೂ ಸಶಸ್ತ್ರಪಡೆಗಳ ಆಡಳಿತಾಧಿಕಾರ ಹೊಂದಿರಲಿದ್ದಾರೆ. ಇದಲ್ಲದೆ ಬಾಹ್ಯಾಕಾಶ ಮತ್ತು ಸೈಬರ್‌ಸ್ಪೇಸ್‌ ಕ್ಷೇತ್ರಗಳೂ ಸಿಡಿಎಸ್‌ ಅಧಿಕಾರ ವ್ಯಾಪ್ತಿಗೆ ಬರಲಿವೆ.

* 'ರಕ್ಷಣಾ ಶಸ್ತ್ರಾಸ್ತ್ರಗಳ ಖರೀದಿ ಮಂಡಳಿ' ಹಾಗೂ 'ರಕ್ಷಣಾ ಯೋಜನಾ ಸಮಿತಿ ಯ ಸದಸ್ಯರಾಗಿ ಇರಲಿದ್ದಾರೆ.

* ಮೂರೂ ಸಶ್ತ್ರಪಡೆಗಳ ನಡುವೆ ಕಾರ್ಯನಿರ್ವಹಣೆ, ತರಬೇತಿ, ಸಾರಿಗೆ, ಸೇವೆ, ಸಂಪರ್ಕ, ನಿರ್ವಹಣೆ ಮೊದಲಾದಂತೆ ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು.

* ಲಭ್ಯವಿರುವ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಕೆಯಾಗುವಂತೆ ಮಾಡುವುದು.

* ದೇಶೀಯ ಶಸ್ತ್ರಾಸ್ತ್ರಗಳ ಪ್ರಮಾಣ ಹೆಚ್ಚಾಗುವಂತೆ ಮಾಡುವುದು.

Recommended Video

2015 ರ ಏರ್ ಕ್ರ್ಯಾಶ್‌ನಲ್ಲಿ ಪವಾಡದಂತೆ ಪಾರಾಗಿದ್ರು ಬಿಪಿನ್ ರಾವತ್ | Oneindia Kannada

* ಪಂಚವಾರ್ಷಿಕ ರಕ್ಷಣಾ ಬಂಡವಾಳ ಸ್ವಾಧೀನ ಯೋಜನೆ ಹಾಗೂ ವಾರ್ಷಿಕ ಖರೀದಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದು.

* ಅಂತಾರಾಷ್ಟ್ರೀಯ ರಕ್ಷಣಾ ಸಹಕಾರ ಯೋಜನೆಗಳನ್ನು ದೇಶಕ್ಕೆ ಅನುಕೂಲವಾಗುವಂತೆ ನೋಡಿಕೊಳ್ಳುವುದು.

English summary
With the sudden and unfortunate demise of General Bipin Rawat in a military helicopter crash, Centre may appoint new CDS soon in next 7 days amid know the eligibility criteria of CDS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X