ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಉದ್ಯಮಿ ಗೌತಮ್ ಅದಾನಿಗೆ 5ನೇ ಸ್ಥಾನ

|
Google Oneindia Kannada News

ನವದೆಹಲಿ, ಏಪ್ರಿಲ್ 26: ಭಾರತದ ಉದ್ಯಮಿ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಜಗತ್ತಿನ ಐದನೇ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ. ಪ್ರಸಿದ್ಧ ಹೂಡಿಕೆದಾರ ವಾರೆನ್ ಬಫೆಟ್ ಅವರನ್ನು ಹಿಂದಿಕ್ಕಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿದ್ದಾರೆ.

ಫೋರ್ಬ್ಸ್ ವರದಿಯ ಪ್ರಕಾರ, 59 ವರ್ಷ ವಯಸ್ಸಿನ ಅದಾನಿ ಶುಕ್ರವಾರದ ಮಾರುಕಟ್ಟೆಯ ಅಂತ್ಯದ ವೇಳೆಗೆ 123.7 ಶತಕೋಟಿ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ, ಬಫೆಟ್ ಅವರು 121.7 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದ್ದಾರೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಕೈಗಾರಿಕೋದ್ಯಮಿ ಗೌತಮ್ ಅದಾನಿ 2022 ರಲ್ಲಿ ತನ್ನ ಸಂಪತ್ತಿಗೆ 43 ಬಿಲಿಯನ್ ಡಾಲರ್ ಅನ್ನು ಸೇರ್ಪಡೆಯಾಗಿದೆ. ಇದು ಅವರ ಒಟ್ಟು ಆದಾಯದ ಮೌಲ್ಯವನ್ನು ಶೇ.56.2ರಷ್ಟು ಹೆಚ್ಚಿಸಿದೆ.

Gautam Adani overtakes Warren Buffett in Forbes Report: Becomes worlds fifth richest person

ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಅದಾನಿಗೆ 5ನೇ ಸ್ಥಾನ:

ಪ್ರಸಿದ್ಧ ಹೂಡಿಕೆದಾರ ವಾರೆನ್ ಬಫೆಟ್ ಅವರನ್ನು ಹಿಂದಿಕ್ಕಿರುವ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗಿದ್ದರೆ ಇವರಿಗಿಂತ ಮುಂದಿರುವ ನಾಲ್ಕು ಶ್ರೀಮಂತರ ಹೆಸರು ಮತ್ತು ಆಸ್ತಿ ಮೌಲ್ಯ ಎಷ್ಟಿದೆ ಎಂಬುದರ ಪಟ್ಟಿ ಇಲ್ಲಿದೆ.

ಜಗತ್ತಿನ ಟಾಪ್-5 ಶ್ರೀಮಂತರ ಪಟ್ಟಿ

1. ಎಲೋನ್ ಮಸ್ಕ್ 269.7 ಶತಕೋಟಿ ಡಾಲರ್

2. ಜೆಫ್ ಬೆಜೋಸ್ 170.2 ಶತಕೋಟಿ ಡಾಲರ್

Gautam Adani overtakes Warren Buffett in Forbes Report: Becomes worlds fifth richest person

3. ಬರ್ನಾರ್ಡ್ ಅರ್ನಾಲ್ಟ್ 167.9 ಶತಕೋಟಿ ಡಾಲರ್

4. ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ 130.2 ಶತಕೋಟಿ ಡಾಲರ್

5. ಗೌತಮ್ ಅದಾನಿ 123.70 ಶತಕೋಟಿ ಡಾಲರ್

ಅದಾನಿ ಗ್ರೂಪ್ ಬಗ್ಗೆ ತಿಳಿಯಿರಿ:

ಫೋರ್ಬ್ಸ್ ಪಟ್ಟಿ ಪ್ರಕಾರ ಜಗತ್ತಿನ ಟಾಪ್-5 ಶ್ರೀಮಂತರ ಪಟ್ಟಿಗೆ ಸೇರ್ಪಡೆ ಆಗಿರುವ ಗೌತಮ್ ಅದಾನಿ ಅವರು ಅದಾನಿ ಗ್ರೂಪ್‌ನ ಅಧ್ಯಕ್ಷರು ಮತ್ತು ಸಂಸ್ಥಾಪಕರಾಗಿದ್ದಾರೆ. ಈ ಅದಾನಿ ಗ್ರೂಪ್ ವಿಮಾನ ನಿಲ್ದಾಣಗಳಿಂದ ಬಂದರುಗಳವರೆಗೆ ಮತ್ತು ವಿದ್ಯುತ್ ಉತ್ಪಾದನೆಯಿಂದ ವಿತರಣೆಯವರೆಗೆ ಹಲವಾರು ವ್ಯವಹಾರಗಳನ್ನು ನಡೆಸುತ್ತದೆ. ಇದು ಅದಾನಿ ಎಂಟರ್‌ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿ ಪವರ್ ಸೇರಿದಂತೆ ಭಾರತದಲ್ಲಿ ಆರು ಸಾರ್ವಜನಿಕವಾಗಿ ವ್ಯಾಪಾರಿ ಕಂಪನಿಗಳನ್ನು ಹೊಂದಿದೆ.

ಅದಾನಿ ಗ್ರೂಪ್ ಕಳೆದ ಏಪ್ರಿಲ್ 08 ರಂದು ಅಬುಧಾಬಿ ಮೂಲದ ಇಂಟರ್ ನ್ಯಾಷನಲ್ ಹೋಲ್ಡಿಂಗ್ ಕಂಪನಿ PJSC (IHC)ಯು ಮೂರು ಅದಾನಿ ಪೋರ್ಟ್ ಪೋಲಿಯೊ ಕಂಪನಿಗಳಲ್ಲಿ 2 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಅದಾನಿ ಗ್ರೀನ್ ಎನರ್ಜಿ (AGEL), ಅದಾನಿ ಟ್ರಾನ್ಸ್ಮಿಷನ್ (ATL), ಮತ್ತು ಅದಾನಿ ಎಂಟರ್ಪ್ರೈಸಸ್ (AEL).

English summary
Gautam Adani overtakes Warren Buffett in Forbes Report: Becomes world's fifth richest person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X