ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ, ಕುಮಟಾ, ಮಂಗಳೂರು ರೋಮನ್ ಕ್ಯಾಥೋಲಿಕ್‌ರ ಪೂರ್ವಜರು ಜಿಎಸ್‌ಬಿ: ಅಧ್ಯಯನ

|
Google Oneindia Kannada News

ಕಾರವಾರ, ಆಗಸ್ಟ್ 30: ಹೈದರಾಬಾದ್ ಮೂಲದ ಸೆಂಟರ್ ಫಾರ್ ಸೆಲ್ಯುಲಾರ್ ಆ್ಯಂಡ್ ಮೊಲಿಕ್ಯೂಲರ್ ಬಯೋಲಜಿ (CCMB) ಮತ್ತು ಲಕ್ನೋದ ಬೀರಬಲ್ ಸಾಹ್ನಿ ಇನ್ಸ್ಟಿಟ್ಯೂಟ್ ಆಫ್ ಪ್ಯಾಲಿಯೊಸೈನ್ಸ್ (BSIP)ನ ಸಂಶೋಧಕರು ಅನುವಂಶಿಕ ಅಧ್ಯಯನವೊಂದನ್ನು ನಡೆಸಿದ್ದು, ಗೋವಾ, ಕುಮಟಾ ಮತ್ತು ಮಂಗಳೂರು ಪ್ರದೇಶದ ರೋಮನ್ ಕ್ಯಾಥೋಲಿಕ್‌ರು ಪ್ರಾಚೀನ ಭಾರತದ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ವಂಶಸ್ಥರು ಎಂಬುದನ್ನು ಕಂಡುಕೊಂಡಿರುವುದಾಗಿ ಹೇಳಿದ್ದಾರೆ.

ಅಧ್ಯಯನದ ಭಾಗವಾಗಿ ಸಂಶೋಧಕರು ಗೋವಾ, ಕುಮಟಾ ಮತ್ತು ಮಂಗಳೂರಿನ ರೋಮನ್ ಕ್ಯಾಥೋಲಿಕ್ ಸಮುದಾಯದ 110 ವ್ಯಕ್ತಿಗಳ ಡಿಎನ್ಎಯನ್ನು ಪಡೆದು ವಿಶ್ಲೇಷಿಸಿದ್ದಾರೆ. ಈ ಗುಂಪಿನ ಆನುವಂಶಿಕ ಮಾಹಿತಿಯನ್ನು ಭಾರತ ಮತ್ತು ಪಶ್ಚಿಮ ಯುರೇಷಿಯಾದಿಂದ ಹಿಂದೆ ಪ್ರಕಟಿಸಲಾಗಿದ್ದ ಡಿಎನ್ಎ ದತ್ತಾಂಶದೊಂದಿಗೆ ಹೋಲಿಕೆ ಮಾಡಿದ್ದಾರೆ. ದೊರೆತ ಮಾಹಿತಿಗಳನ್ನು ಪುರಾತತ್ವ ಶಾಸ್ತ್ರ, ಭಾಷಾಧ್ಯಯನ ಮತ್ತು ಐತಿಹಾಸಿಕ ದಾಖಲೆಗಳೊಂದಿಗೆ ಸೇರಿಸಿಯೂ ಪ್ರಮಾಣೀಕರಿಸಿಕೊಂಡಿದ್ದಾರೆ.

"ಬಹುತೇಕ ರೋಮನ್ ಕ್ಯಾಥೋಲಿಕ್‌ರ ಅನುವಂಶಿಕ ಸಂಬಂಧಗಳು ಪ್ರಸಕ್ತ ಕೊಂಕಣ ಬ್ರಾಹ್ಮಣರಾದ ಗೌಡ ಸಾರಸ್ವತ್ ಸಮುದಾಯದಕ್ಕೆ ಸೇರಿದವರೊಂದಿಗೆ ಹೊಂದಾಣಿಕೆಯಾಗುತ್ತಿದೆ. ಗೋವಾ, ಕುಮಟಾ ಮತ್ತು ಮಂಗಳೂರು ಪ್ರದೇಶಗಳ ರೋಮನ್ ಕ್ಯಾಥೋಲಿಕ್‌ರು ಭಾರತದ ಬ್ರಾಹ್ಮಣ ಸಮುದಾಯದ ಆರಂಭಿಕ ವಂಶಾವಳಿಗೆ, ಮುಖ್ಯವಾಗಿ ಪ್ರಾಚೀನ ಭಾರತದ ಇಂಡೋ-‌ ಯುರೋಪಿಯನ್ ಜನಾಂಗದ ನಿರ್ದಿಷ್ಟ ಅನುವಂಶಿಕ ಸಂಯೋಜನೆಗೆ ಸೇರಿದವರಾಗಿದ್ದಾರೆ,'' ಎಂದು ಸಿಸಿಎಂಬಿಯ ಮುಖ್ಯ ವಿಜ್ಞಾನಿ ಮತ್ತು ಸಿಡಿಎಫ್‌ಡಿಯ ನಿರ್ದೇಶಕ ಹಾಗೂ ಅಧ್ಯಯನದ ಹಿರಿಯ ಲೇಖಕ ಡಾ. ಕುಮಾರಸ್ವಾಮಿ ತಂಗರಾಜ್ ತಿಳಿಸಿದ್ದಾರೆ.

Gowda Saraswat Brahmin Are The Ancestor Of The Roman Catholics Of Goa, Kumata And Mangalore; Study

"ರೋಮನ್ ಕ್ಯಾಥೋಲಿಕ್‌ರ ಶೇಕಡಾ 40ಕ್ಕಿಂತಲೂ ಹೆಚ್ಚು ತಂದೆಯಿಂದ ಆನುವಂಶಿಕವಾಗಿ ಪಡೆದ 'ವೈ' ಕ್ರೋಮೋಸೋಮ್‌ಗಳನ್ನು 'ಆರ್1ಎ' ಹ್ಯಾಪ್ಲಾಗ್ ಗ್ರೂಪ್ ಅಡಿಯಲ್ಲಿ ಗುಂಪು ಮಾಡಬಹುದಾಗಿದೆ. ಇಂತಹ ಆನುವಂಶಿಕ ಸಂಕೇತವು ಉತ್ತರ ಭಾರತ, ಮಧ್ಯಪ್ರಾಚ್ಯ ಮತ್ತು ಯುರೋಪಿನ ಜನರಲ್ಲಿ ಪ್ರಚಲಿತವಾಗಿದೆ. ಕೊಂಕಣ ಪ್ರದೇಶದಲ್ಲಿ ಈ ಜನಸಂಖ್ಯೆಗೆ ವಿಶಿಷ್ಟವಾಗಿದೆ,'' ಎಂದು ಡಾ.ತಂಗರಾಜ್ ಹೇಳಿದ್ದಾರೆ.

"ಇತಿಹಾಸ, ಮಾನವಶಾಸ್ತ್ರ ಮತ್ತು ಮಹತ್ವದ ಮಾಹಿತಿಗಳನ್ನು ಆಧರಿಸಿದ ಈ ಬಹುಶಿಸ್ತಿನ ಅಧ್ಯಯನವು ನಮ್ಮ ದೇಶದ ಅತ್ಯಂತ ವೈವಿಧ್ಯಮಯ ಮತ್ತು ಬಹು ಸಾಂಸ್ಕೃತಿಕ ಪ್ರದೇಶದಿಂದ ರೋಮನ್ ಕ್ಯಾಥೋಲಿಕ್‌ರ ಜನಸಂಖ್ಯೆಯ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡಿದೆ," ಎಂದು ಸಿಸಿಎಂಬಿಯ ನಿರ್ದೇಶಕ ಡಾ. ವಿನಯ್ ಕೆ. ನಂದಿಕೂರಿ ಹೇಳಿದ್ದಾರೆ.

ಗೋವಾದಲ್ಲಿರುವ ರೋಮನ್ ಕ್ಯಾಥೋಲಿಕ್‌ರು ಮೂಲ ಬ್ರಾಹ್ಮಣರೇ ಎಂದು ಅಲ್ಲಿಯವರೂ ಕೂಡ ನಂಬುತ್ತಾರೆ. 16 ಹಾಗೂ 17ನೇ ಶತಮಾನದಲ್ಲಿ ಗೋವಾದಲ್ಲಿ ಪೋರ್ಚುಗೀಸರು ಆಳ್ವಿಕೆ ನಡೆಸುತ್ತಿದ್ದ ವೇಳೆ ಅಲ್ಲಿಯ ಬಹುತೇಕರನ್ನು ಕ್ಯಾಥೋಲಿಕ್ ರೋಮನ್ನರನ್ನಾಗಿ ಮತಾಂತರಗೊಳಿಸಿದ್ದರು.

ಈ ಪೈಕಿ ಹೆಚ್ಚಿನವರು ಗೌಡ ಸಾರಸ್ವತ ಬ್ರಾಹ್ಮಣರು ಹಾಗೂ ದೈವಜ್ಞ ಬ್ರಾಹ್ಮಣರು ಸೇರಿದ್ದರು. ಮುಂದೆ ಈ ಮತಾಂತರಗೊಂಡವರ ಪೀಳಿಗೆ ಕ್ರೈಸ್ತರಾಗಿ, ಹಿಂದೂ ದೇವಾಲಯಗಳಲ್ಲಿ ಪೂಜೆಗಳನ್ನು ಮಾಡುವುದನ್ನು ಬಿಟ್ಟು, ಚರ್ಚ್‌ಗಳನ್ನು ಧಾರ್ಮಿಕ ಕೇಂದ್ರಗಳನ್ನಾಗಿ ಮಾಡಿಕೊಂಡರು.

Recommended Video

ಅತಿ ಹೆಚ್ಚು ನೋಬಾಲ್ ಎಸೆದು ಕೆಂಗಣ್ಣಿಗೆ ಗುರಿಯಾದ ಟೀಮ್ ಇಂಡಿಯಾ ಬೌಲರ್ಸ್ | Oneindia Kannada

English summary
Roman Catholics in Goa, Kumata and Mangaluru are the descendants of the Gowda Saraswat Brahmin community of ancient India, the study said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X