ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧಿ ಜಯಂತಿ 2021: ಇತಿಹಾಸ, ಮಹತ್ವ, ಘೋಷಣೆಗಳು ಮತ್ತು ಉಲ್ಲೇಖಗಳು

|
Google Oneindia Kannada News

ಶಾಂತಿ, ಅಹಿಂಸೆಗಳ ಹರಿಕಾರನೆಂದು ಕರೆಯಲ್ಪಡುವ ಮಹಾತ್ಮಾ ಗಾಂಧಿ ಹುಟ್ಟಿದ ದಿನ ಬಂದೇ ಬಿಟ್ಟಿದೆ.

ಗಾಂಧೀಜಿಯ ಜೀವನವೇ ಒಂದು ಸಂದೇಶವಾಗಿದ್ದು, ಅವರ ಹೆಸರು ಭಾರತೀಯರ ಮನಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ. ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಅಹಿಂಸಾ ಮಾರ್ಗದಲ್ಲಿ ಹೋರಾಟ ಮಾಡಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿಯಂದು ಅವರನ್ನು ನೆನೆವ ಸಮಯ ಎಂದೇ ಭಾವಿಸಲಾಗುತ್ತದೆ.

1869ರ ಅಕ್ಟೋಬರ್ 2ರಂದು ಗುಜರಾತ್​ನ ಪೋರಬಂದರಿನಲ್ಲಿ ಹುಟ್ಟಿದ ಮೋಹನದಾಸ್ ಕರಮಚಂದ ಗಾಂಧಿ ಮುಂದೆ ಮಹಾತ್ಮ ಎಂದು ಕರೆಯಲ್ಪಟ್ಟರು. ಕಸ್ತೂರ ಬಾ ಅವರನ್ನು ಮದುವೆಯಾಗಿದ್ದ ಗಾಂಧೀಜಿ ಭಾರತದಲ್ಲಿ ಮಾತ್ರವಲ್ಲದೆ ದಕ್ಷಿಣ ಆಫ್ರಿಕಾದಲ್ಲೂ ವರ್ಣಭೇದ ನೀತಿಯ ವಿರುದ್ಧ ಹೋರಾಡಿ, ಮನೆಮಾತಾದರು. ಇದೇ ಕಾರಣಕ್ಕೆ ದಕ್ಷಿಣ ಆಫ್ರಿಕಾದಲ್ಲಿಯೂ ಅನೇಕ ಕಡೆ ಗಾಂಧೀಜಿಯವರ ಪುತ್ಥಳಿಗಳನ್ನು ನಿರ್ಮಿಸಲಾಗಿದೆ.

ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಭಾರತದ ಸ್ವಾತಂತ್ರ್ಯ ಚಳುವಳಿಯನ್ನು ಮುನ್ನಡೆಸಿದರು, ಇತರ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಹುರಿದುಂಬಿಸುತ್ತಾ ಅವರು ಹಲವಾರು ನಾಗರಿಕ ಹಕ್ಕು ಚಳುವಳಿಗಳನ್ನು ಆರಂಭಿಸಿದರು.

Gandhi Jayanti 2021: Date, History, Significance, Slogans And Quotes Of Mahatma Gandhi In Kannada

ಅಹಿಂಸೆಯೇ ಅವರ ಅಸ್ತ್ರವಾಗಿತ್ತು. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಕೊಡುಗೆಗಳನ್ನು ಗೌರವಿಸಲು ಅವರ ಜನ್ಮದಿನವಾದ ಅಕ್ಟೋಬರ್ 2 ಅನ್ನು ರಾಷ್ಟ್ರೀಯ ರಜಾದಿನವೆಂದು ಗುರುತಿಸಲಾಗಿದೆ.

ವಿಶ್ವಸಂಸ್ಥೆಯು ಗಾಂಧಿ ಜಯಂತಿಯನ್ನು 'ಅಂತರಾಷ್ಟ್ರೀಯ ಅಹಿಂಸಾ ದಿನ' ಎಂದು ಆಚರಿಸಿ ಮಹಾತ್ಮ ಗಾಂಧಿಗೆ ತಮ್ಮ ಗೌರವ ನಮನಗಳನ್ನು ಸಲ್ಲಿಸುತ್ತದೆ. ಸ್ವಾತಂತ್ರ್ಯ ಹೋರಾಟಕ್ಕೆ ಅವರ ಅಮೂಲ್ಯ ಕೊಡುಗೆಗಳನ್ನು ಗೌರವಿಸಲು ಈ ದಿನದಂದು ಗಾಂಧೀಜಿಯವರ ಚಿಂತನೆಗಳನ್ನು ಮತ್ತು ತತ್ವಶಾಸ್ತ್ರಗಳನ್ನು ಪ್ರಚಾರ ಮಾಡುವ ಅನೇಕ ಕಾರ್ಯಕ್ರಮಗಳನ್ನು ದೇಶಾದ್ಯಂತ ಆಯೋಜಿಸಲಾಗುತ್ತದೆ. ಗಾಂಧೀಜಿಯವರ ಜೀವನ ಮತ್ತು ಆದರ್ಶಗಳು ಜನರ ಜೀವನದ ಮೇಲೆ ಪ್ರಭಾವ ಬೀರುತ್ತಲೇ ಇರುತ್ತದೆ.

ಭಾರತದ ಪ್ರತಿ ರಾಜ್ಯದಲ್ಲೂ ಗಾಂಧಿ ಜಯಂತಿ ಆಚರಣೆಯು ವಿಶಿಷ್ಟವಾಗಿದ್ದರೂ ಸಹ ಕರ್ನಾಟಕ ಸರ್ಕಾರವು ಬಡತನ ನಿರ್ಮೂಲನೆ, ಪರಿಸರ ಸಂರಕ್ಷಣೆ, ರೈತರ ಕಲ್ಯಾಣ ಮತ್ತು ಗುಡಿ ಕೈಗಾರಿಕೆಗಳ ಸುಧಾರಣೆಯಂತಹ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಈ ಮೂಲಕ ಗಾಂಧಿಯವರ ಆಲೋಚನೆ ವಿಚಾರಗಳನ್ನು ಜನರಿಗೆ ತಿಳಿಸುತ್ತದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮಹಾತ್ಮ ಗಾಂಧಿಯವರು ಐದು ಬಾರಿ ರಾಜ್ಯದ ರಾಜಧಾನಿ ಬೆಂಗಳೂರಿಗೆ ಭೇಟಿ ನೀಡಿದ್ದು ಸ್ಮರಣೀಯ ವಿಷಯವಾಗಿದೆ.

ಬೆಂಗಳೂರಿನ ಹೊರತಾಗಿ, ಬೆಳಗಾವಿಯಲ್ಲಿಯೂ ಗಾಂಧಿ ಜಯಂತಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಏಕೆಂದರೆ ಗಾಂಧಿಯವರು ಇಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮ್ಮೇಳದ ಅಧ್ಯಕ್ಷತೆಯನ್ನು ವಹಿಸಿದ್ದರು.

ಇಲ್ಲಿ ಅವರ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ಹೈಲೈಟ್ ಮಾಡಲು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಖಾದಿ ಉದ್ಯಮಕ್ಕೆ ಹೆಸರುವಾಸಿಯಾಗಿರುವ ಬೆಳಗಾವಿ ಜಿಲ್ಲೆಯ ಹುಡ್ಲಿ ಗ್ರಾಮವು ಗಾಂಧಿಯವರ ತತ್ವಗಳ ಮೇಲೆ ಕಾರ್ಯ ನಿರ್ವಹಿಸುತ್ತದೆ.

ಗಾಂಧಿ ಜಯಂತಿ ಮಹತ್ವ:
ಬ್ರಿಟಿಷ್ ಶಕ್ತಿಯ ವಿರುದ್ಧ ಗಾಂಧಿಯವರ ನಿಷ್ಕ್ರಿಯ ಪ್ರತಿರೋಧ, ಜನಪ್ರಿಯ ವ್ಯಕ್ತಿಗಳ ಸ್ಫೂರ್ತಿ ಮತ್ತು ಪ್ರಭಾವದ ಪ್ರಚಂಡ ಪ್ರತಿಭೆ ಅವರನ್ನು ವಿಶ್ವವ್ಯಾಪಿ ವ್ಯಕ್ತಿಯಾಗಿ ಮಾಡಿತು. ಅವರು ಭಾರತವನ್ನು ಅಸಹಕಾರ ಚಳುವಳಿ, ಸಾಲ್ಟ್ ಮಾರ್ಚ್, ಸ್ವರಾಜ್ ಮತ್ತು ಬ್ರಿಟಿಷ್ ಆಡಳಿತದ ವಿರುದ್ಧ ಪ್ರತಿಭಟಿಸಲು ಅನೇಕ ಅಹಿಂಸಾ ಮಾರ್ಗಗಳನ್ನು ಪರಿಚಯಿಸಿದರು. ಅವರು 'ಸ್ವದೇಶಿ' ಪರಿಕಲ್ಪನೆಯ ಮೂಲಕ ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯುವ ಕಲ್ಪನೆಯನ್ನು ಪ್ರಚಾರ ಮಾಡಿದರು. ಮಹಾತ್ಮ ಗಾಂಧಿ ವಿವಿಧ ಐತಿಹಾಸಿಕ ಘಟನೆಗಳಲ್ಲಿ ಭಾಗವಹಿಸಿದರು ಮತ್ತು ಪ್ರಪಂಚದಾದ್ಯಂತ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾದರು.

ಗಾಂಧಿ ಜಯಂತಿ ಇತಿಹಾಸ:
ಮಹಾತ್ಮ ಗಾಂಧಿಯನ್ನು ರಾಷ್ಟ್ರಪಿತ ಎಂದು ಕರೆಯಲಾಗುತ್ತದೆ. ಅವರು ಬ್ರಿಟಿಷರ ವಿರುದ್ಧ ನಡೆದ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದರು ಮತ್ತು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖರಾದವರು. ಅವರು ಅಹಿಂಸಾ ಮಾರ್ಗಗಳ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದರು ಮತ್ತು ಅಸ್ಪೃಶ್ಯತೆಯಂತಹ ಹಳೆಯ ಪದ್ಧತಿಗಳನ್ನು ತೊಡೆದುಹಾಕಲು ರಾಷ್ಟ್ರಕ್ಕೆ ಸಹಾಯ ಮಾಡಿದರು. ಅವರ ತತ್ವಶಾಸ್ತ್ರ ಮತ್ತು ನೊಬೆಲ್ ಕೆಲಸದಿಂದಾಗಿ ಅವರಿಗೆ 'ಮಹಾತ್ಮ' ಎಂಬ ಬಿರುದನ್ನು ಪಡೆಯುವಂತೆ ಮಾಡಿತು. ಅಂದರೆ ಅಕ್ಷರಶಃ 'ಮಹಾನ್ ಆತ್ಮ' ಎಂದೂ ಹೇಳಬಹುದು. ಅವರ ಸಿದ್ಧಾಂತಗಳು ಮತ್ತು ತತ್ವಶಾಸ್ತ್ರವು ಅವರನ್ನು ಪ್ರಪಂಚದಾದ್ಯಂತ ಜನಪ್ರಿಯಗೊಳಿಸಿವೆ. ಜೂನ್ 15, 2007 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಕ್ಟೋಬರ್ 2 ಅನ್ನು ಅಂತರರಾಷ್ಟ್ರೀಯ ಅಹಿಂಸಾ ದಿನವೆಂದು ಘೋಷಿಸುವ ನಿರ್ಣಯವನ್ನು ಅಂಗೀಕರಿಸಿತು.

ಮಹಾತ್ಮ ಗಾಂಧಿ ಘೋಷಣೆಗಳು:
ನನ್ನ ಅನುಮತಿಯಿಲ್ಲದೆ ಯಾರೂ ನನ್ನನ್ನು ನೋಯಿಸುವುದಿಲ್ಲ.

ನಿಮ್ಮನ್ನು ಹುಡುಕುವ ಅತ್ಯುತ್ತಮ ಮಾರ್ಗವೆಂದರೆ ಇತರರ ಸೇವೆಯಲ್ಲಿ ನಿಮ್ಮನ್ನು ಕಳೆದುಕೊಳ್ಳುವುದು.
ತೃಪ್ತಿಯು ಪ್ರಯತ್ನದಲ್ಲಿದೆ, ಸಾಧನೆಯಲ್ಲಿಲ್ಲ.

ದುರ್ಬಲರು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ಕ್ಷಮೆಯು ಬಲಶಾಲಿಗಳ ಲಕ್ಷಣವಾಗಿದೆ.

ಶಕ್ತಿ ದೈಹಿಕ ಸಾಮರ್ಥ್ಯದಿಂದ ಬರುವುದಿಲ್ಲ. ಇದು ಅದಮ್ಯ ಇಚ್ಛೆಯಿಂದ ಬರುತ್ತದೆ.

ಪ್ರಾಮಾಣಿಕ ಭಿನ್ನಾಭಿಪ್ರಾಯವು ಸಾಮಾನ್ಯವಾಗಿ ಪ್ರಗತಿಯ ಉತ್ತಮ ಸಂಕೇತವಾಗಿದೆ.

ಕೋಪವು ಅಹಿಂಸೆಯ ಶತ್ರು ಮತ್ತು ಹೆಮ್ಮೆಯು ಅದನ್ನು ನುಂಗುವ ದೈತ್ಯವಾಗಿದೆ.

ತಪ್ಪುಗಳನ್ನು ಮಾಡುವ ಸ್ವಾತಂತ್ರ್ಯವನ್ನು ಒಳಗೊಂಡಿರದಿದ್ದರೆ ಸ್ವಾತಂತ್ರ್ಯವು ಯೋಗ್ಯವಾಗಿರುವುದಿಲ್ಲ.

ನೀವು ಎದುರಾಳಿಯನ್ನು ಎದುರಿಸಿದಾಗಲೆಲ್ಲಾ ಅವನನ್ನು ಪ್ರೀತಿಯಿಂದ ಜಯಿಸಿ.

English summary
Gandhi Jayanti is celebrated on October 2 every year to mark the birth anniversary of Mohandas Karamchand Gandhi, popularly known as Mahatma Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X