ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದಲ್ಲಿ ಜಿ20: ಭಾರತದ ಅಸ್ತ್ರಕ್ಕೆ ಪಾಕಿಸ್ತಾನ ವಿಲವಿಲ

|
Google Oneindia Kannada News

ನವದೆಹಲಿ, ಜೂನ್ 29: ಮೂರು ವರ್ಷಗಳ ಹಿಂದಿನವರೆಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ವಿದೇಶಿ ಉದ್ಯಮ ಸಂಸ್ಥೆಗಳು ಬಂಡವಾಳ ಹೂಡಿಕೆಗೆ ಮುಂದಾಗಬಹುದು, ಇಲ್ಲಿ ಸಂಧಾನ ಸಭೆ ಹೊರತುಪಡಿಸಿ ಬೇರೆ ಅಂತಾರಾಷ್ಟ್ರೀಯ ಶೃಂಗಸಭೆಗಳೂ ನಡೆಯಬಹುದು ಎಂದು ಯಾರೂ ಊಹಿಸಿರುವುದಿಲ್ಲ. ಈಗ ಇಂಥ ಬೆಳವಣಿಗೆಗಳು ನಡೆಯುತ್ತಿವೆ. ಕಣಿವೆ ರಾಜ್ಯದಲ್ಲಿ 2023ರಲ್ಲಿ ಮೊದಲ ಬಾರಿಗೆ ಜಿ20 ಶೃಂಗಸಭೆ ನಡೆಯಲಿದೆ.

ಜಿ20 ದೇಶಗಳ ಗುಂಪಿನಲ್ಲಿರುವ ಭಾರತ ಈ ಬಾರಿಯ ಶೃಂಗಸಭೆಯ ಅಧ್ಯಕ್ಷ ಸ್ಥಾನ ಹೊಂದಿದೆ. ಉದ್ಯಮ ಸಚಿವ ಪಿಯೂಶ್ ಗೋಯಲ್ ಜಿ20 ಸಭೆಯಲ್ಲಿ ಭಾರತದ ಶೆರ್ಪಾ ಆಗಿ ನೇಮಕವಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಿರುವ ಪಾಕಿಸ್ತಾನಕ್ಕೆ ಈ ಬೆಳವಣಿಗೆ ಜೀರ್ಣಿಸಿಕೊಳ್ಳಲಾಗದ ವಿಚಾರವಾಗಿದೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಜಮ್ಮು ಕಾಶ್ಮೀರ ವಿಚಾರದಲ್ಲಿ ಭಾರತದ ವಿರುದ್ಧ ಅಭಿಪ್ರಾಯ ರೂಪಿಸಲು ಬಾರಿ ಬಾರಿ ವಿಫಲವಾಗುತ್ತಿರುವ ಪಾಕಿಸ್ತಾನಕ್ಕೆ ಈಗ ಜಿ20 ಶೃಂಗಸಭೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ.

ತನ್ನ ಆಪ್ತ ಮಿತ್ರರಾದ ಚೀನಾ, ಟರ್ಕಿ ಮೊದಲಾದ ದೇಶಗಳಿಗೆ ಈ ಜಿ೨೦ ಶೃಂಗಸಭೆಯನ್ನೇ ಬಹಿಷ್ಕರಿಸಬೇಕೆಂದು ಪಾಕಿಸ್ತಾನ ಮನವಿ ಮಾಡಲಿದೆ. ಹಾಗೆಯೇ, ಅಮೆರಿಕ, ಬ್ರಿಟನ್ ಮೊದಲಾದ ದೇಶಗಳೊಂದಿಗೂ ಪಾಕಿಸ್ತಾನ ಮಾತನಾಡುವ ಸಾಧ್ಯತೆ ಇದೆ. ಆದರೆ, ಹಿಂದಿನ ರೀತಿಯಲ್ಲೂ ಈ ಬಾರಿಯೂ ಪಾಕಿಸ್ತಾನದ ಪ್ರಯತ್ನ ಫಲಕೊಡುವ ಸಾಧ್ಯತೆ ಕಡಿಮೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಜಿ20 ಶೃಂಗಸಭೆ ನಡೆಸುವುದನ್ನು ತಪ್ಪಿಸಲು ಪಾಕಿಸ್ತಾನಕ್ಕೆ ತಪ್ಪಿಸಲು ಅಸಾಧ್ಯದ ಮಾತೇ ಸರಿ.

ಮಕ್ಕಿ ಎಂಬ ಭಯೋತ್ಪಾದಕನಿಗೆ ಚೀನಾ ಬೆಂಬಲ- ಏನಿದರ ಮರ್ಮ?ಮಕ್ಕಿ ಎಂಬ ಭಯೋತ್ಪಾದಕನಿಗೆ ಚೀನಾ ಬೆಂಬಲ- ಏನಿದರ ಮರ್ಮ?

 ಜಿ20 ದೇಶಗಳು ಯಾವುವು?

ಜಿ20 ದೇಶಗಳು ಯಾವುವು?

ಜಿ20 ಎಂಬುದು ವಿಶ್ವದ 20 ಅಗ್ರ ಆರ್ಥಿಕ ದೇಶಗಳ ಗುಂಪಾಗಿದೆ. ಭಾರತ, ಅರ್ಜೆಂಟೀನಾ, ಬ್ರಜಿಲ್, ಕೆನಡಾ, ಚೀನಾ, ಜರ್ಮನಿ, ಫ್ರಾನ್ಸ್, ಇಂಡೋನೇಷ್ಯಾ, ಇಟಲಿ, ಜಪಾನ್, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ಸೌತ್ ಆಫ್ರಿಕಾ, ಸೌತ್ ಕೊರಿಯಾ, ಟರ್ಕಿ, ಅಮೆರಿಕ, ಬ್ರಿಟನ್ ಮತ್ತು ಯೂರೋಪಿಯನ್ ಯೂನಿಯನ್ ಈ ಜಿ20 ಗುಂಪಿನಲ್ಲಿವೆ.

ಪಾಕಿಸ್ತಾನದ ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರಾಂತ್ಯ ಚೀನಾ ವಶಕ್ಕೆ? ಅನಾಥ ಕೂಸಾಗಿದೆ ಜಿಬಿಪಾಕಿಸ್ತಾನದ ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರಾಂತ್ಯ ಚೀನಾ ವಶಕ್ಕೆ? ಅನಾಥ ಕೂಸಾಗಿದೆ ಜಿಬಿ

 ಗಲ್ಫ್ ರಾಷ್ಟ್ರಗಳ ಹೂಡಿಕೆ

ಗಲ್ಫ್ ರಾಷ್ಟ್ರಗಳ ಹೂಡಿಕೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಕ್ಷನ್ 370 ರದ್ದಾದ ಬಳಿಕ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ, ಅಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗಿದೆ. ಅಲ್ಲಿನ ಜನರು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾರೆ ಎಂದು ಪಾಕಿಸ್ತಾನ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಬಿಂಬಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಆದರೆ ಇದಕ್ಕೆ ಪ್ರತಿಯಾಗಿ ಭಾರತ ಜಮ್ಮು-ಕಾಶ್ಮೀರವನ್ನು ಅಂತಾರಾಷ್ಟ್ರೀಯವಾಗಿ ತೆರೆದುನಿಲ್ಲಿಸುತ್ತಿದೆ.

ಇತ್ತೀಚೆಗೆ ಇಲ್ಲಿ ಗಲ್ಫ್ ಹೂಡಿಕೆ ಸಭೆ ನಡೆಸಿತ್ತು. 36 ದೇಶಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಯುಎಇ ಸೇರಿದಂತೆ ಹಲವು ಗಲ್ಫ್ ದೇಶಗಳು ಜಮ್ಮು ಕಾಶ್ಮೀರದಲ್ಲಿ ಹೂಡಿಕೆ ಮಾಡಲಿವೆ. ಸದ್ಯ 27 ಸಾವಿರ ರೂ ಮೊತ್ತದಷ್ಟು ಹೂಡಿಕೆ ಪ್ರಸ್ತಾವಗಳಿಗೆ ಕಾಶ್ಮೀರ ಆಡಳಿತ ಅನುಮೋದನೆ ನೀಡಿದೆ.

 ಜಿ20 ಅಸ್ತ್ರ

ಜಿ20 ಅಸ್ತ್ರ

ಹೂಡಿಕೆಯ ಅಸ್ತ್ರದ ಬಳಿಕ ಭಾರತ ಈಗ ಜಿ20 ಅಸ್ತ್ರ ಬಳಸಿದೆ. 2023ರಲ್ಲಿ ನಡೆಯಲಿರುವ ಈ ಬಾರಿಯ ಜಿ20 ಸಮ್ಮೇಳನವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಸಲು ನಿರ್ಧರಿಸಿದೆ. ವಿಶ್ವದ ಬಲಾಢ್ಯ ದೇಶಗಳ ನಾಯಕರು ಜಮ್ಮು ಮತ್ತು ಕಾಶ್ಮೀರಕ್ಕೆ ಆಗಮಿಸಲಿದ್ದಾರೆ. ಇದರೊಂದಿಗೆ ಕಣಿವೆ ರಾಜ್ಯಕ್ಕೆ ಅಂತಾರಾಷ್ಟ್ರೀಯ ಮಾನ್ಯತೆಯೂ ಗಟ್ಟಿಗೊಳ್ಳುವ ನಿರೀಕ್ಷೆ ಇದೆ.

ಜಿ20 ಶೃಂಗಸಭೆಯನ್ನು ಕಾಶ್ಮೀರದಲ್ಲಿ ನಡೆಸಲು ನಿರ್ಧರಿಸುವ ಮೂಲಕ ಭಾರತ ಒಂದೇ ಕಲ್ಲಿಗೆ ಹಲವು ಕಲ್ಲುಗಳನ್ನು ಹೊಡೆಯುತ್ತಿದೆ. ಕಾಶ್ಮೀರದಲ್ಲಿ ಸಹಜ ಸ್ಥಿತಿ ಮರಳಿದೆ, ಭಯೋತ್ಪಾದನೆ ಅಂತ್ಯಗೊಳ್ಳುತ್ತಿದೆ, ಶಾಂತಿ ಮರಳುತ್ತಿದೆ, ಅತ್ಯಂತ ವೇಗದಲ್ಲಿ ಬೆಳವಣಿಗೆ ಸಾಧಿಸುತ್ತಿದೆ ಎಂಬ ಸಂದೇಶವನ್ನು ಭಾರತ ರವಾನೆ ಮಾಡುತ್ತಿದೆ.

 ಪಾಕಿಸ್ತಾನ ವಿಲವಿಲ ಒದ್ದಾಟ

ಪಾಕಿಸ್ತಾನ ವಿಲವಿಲ ಒದ್ದಾಟ

ಕಾಶ್ಮೀರದಲ್ಲಿ ಜಿ20 ಶೃಂಗ ಸಭೆ ನಡೆಸುವುದಕ್ಕೆ ಪಾಕಿಸ್ತಾನ ಅತೀವ ವಿರೋಧ ವ್ಯಕ್ತಪಡಿಸಿದೆ. ಜಿ20 ಗುಂಪಿನಲ್ಲಿ ಪಾಕಿಸ್ತಾನ ಇಲ್ಲದಿದ್ದರೂ ತನ್ನ ಮಿತ್ರ ದೇಶಗಳ ಮೇಲೆ ಪ್ರಭಾವ ಬೀರಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಚೀನಾ, ಟರ್ಕಿ, ಸೌದಿ ಅರೇಬಿಯಾ, ರಷ್ಯಾ ದೇಶಗಳನ್ನು ಎಡತಾಕಲಿರುವ ಪಾಕಿಸ್ತಾನ, ಜಮ್ಮು ಕಾಶ್ಮೀರದಲ್ಲಿ ಈ ಸಭೆ ನಡೆಯಂತೆ ಭಾರತದ ಮೇಲೆ ಒತ್ತಡ ಹಾಕಬೇಕೆಂದು ಮನವಿ ಮಾಡಿಕೊಳ್ಳುವ ಯೋಜನೆಯಲ್ಲಿದೆ.

 370ನೇ ವಿಧಿಯಲ್ಲೂ ಪಾಕಿಸ್ತಾನಕ್ಕೆ ಮುಖಭಂಗ

370ನೇ ವಿಧಿಯಲ್ಲೂ ಪಾಕಿಸ್ತಾನಕ್ಕೆ ಮುಖಭಂಗ

ಈ ಹಿಂದೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ಅನ್ನು ತೆಗೆದುಹಾಕಿದ ಬಳಿಕ ಪಾಕಿಸ್ತಾನ ದೊಡ್ಡ ಕೂಗೆಬ್ಬಿಸಿತು. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಈ ವಿಚಾರವನ್ನು ಮುನ್ನೆಲೆಗೆ ತರಲು ಮಾಡಿದ ಹಲವು ಪ್ರಯತ್ನಗಳು ವಿಫಲವಾದವು. ಭಾರತದ ವಿರುದ್ಧ ಮಸ್ಲಿಮ್ ರಾಷ್ಟ್ರಗಳನ್ನು ಎತ್ತಿಕಟ್ಟುವ ಪ್ರಯತ್ನವೂ ವಿಫಲವಾಗಿದ್ದು ಅಚ್ಚರಿ. ಯುಎಇ ಸೇರಿದಂತೆ ಯಾವ ಇಸ್ಲಾಮಿಕ್ ದೇಶಗಳು ಜಮ್ಮು ಕಾಶ್ಮೀರ ವಿಚಾರ ಭಾರತದ ಆಂತರಿಕ ಎಂದು ಹೇಳಿ, ಮಧ್ಯ ಪ್ರವೇಶಿಸಲು ನಿರಾಕರಿಸಿದ್ದವು. ಇದರಿಂದ ಪಾಕಿಸ್ತಾನಕ್ಕೆ ಮುಖಭಂಗವಾದಂತಾಗಿತ್ತು.

(ಒನ್ಇಂಡಿಯಾ ಸುದ್ದಿ)

English summary
Pakistan has been more desperate situation after India has decided to organize G20 summit in Jammu and Kashmir. It is likely to approach China, Turkey and Other nations to boycott this summit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X