ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ಪಡೆದಾಗಿದೆ, ಕೊರೊನಾ ಸೋಂಕಿನ ಲಕ್ಷಣವಿದೆ ಏನು ಮಾಡಬೇಕು?

|
Google Oneindia Kannada News

ನವದೆಹಲಿ, ಜೂನ್ 04: ಬೆಳಗ್ಗೆ ಏಳುವಾಗ ಸ್ವಲ್ಪ ಶೀತ, ಗಂಟಲು ನೋವು ಹಾಗೆಯೇ ಜ್ವರ ಬಂದರೆ ನಿಮಗೆ ಮೊದಲು ಅನಿಸುವುದೇ ಕೊರೊನಾ ಬಂದಿರಬೇಕು ಎಂದು.

ಆದರೆ ನೀವು ಈಗಾಗಲೇ ಎರಡು ಬಾರಿ ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿದ್ದೀರಿ, ಆದರೂ ಜ್ವರ ಬಂದಿದೆ ನನಗೆ ಈಗಲೂ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಕೊರೊನಾ ಲಸಿಕೆ ಹಾಕಿಸಿಕೊಂಡಾಕ್ಷಣ ಕೊರೊನಾ ಬರುವುದಿಲ್ಲ ಎಂದೇನಿಲ್ಲ, ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ ಸೋಂಕು ತಗುಲಬಹುದು . ಆದರೆ ತಗುಲುವ ಪ್ರಮಾಣ ಕಡಿಮೆ ಇರಬಹುದು.

ಇನ್ನೊಂದೆಡೆ ದೇಶದಲ್ಲಿ ಡೆಲ್ಟಾ ರೂಪಾಂತರಿ ಆತಂಕವನ್ನು ಸೃಷ್ಟಿ ಮಾಡಿದೆ. ಈ ಲಸಿಕೆಗಳು ಎಲ್ಲಾ ರೂಪಾಂತರಿ ವಿರುದ್ಧ ಗೆಲ್ಲಬಹುದೇ ಎನ್ನುವುದೂ ಕೂಡ ಮತ್ತೊಂದು ಪ್ರಶ್ನೆಯಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಕೂಡ ಡೆಲ್ಟಾ ರೂಪಾಂತರ ವೈರಸ್ ಅತ್ಯಂತ ಕಳವಳಕಾರಿಯಾಗಿದೆ ಎಂದು ಹೇಳಿದ್ದು, ಉಳಿದೆರೆಡು ತಳಿಗಳು ಅಷ್ಟು ಅಪಾಯಕಾರಿಯಲ್ಲ ಎಂದು ಕೂಡ ಹೇಳಿತ್ತು.

9 ಖಾಸಗಿ ಆಸ್ಪತ್ರೆಗಳಿಗೆ ಶೇ. 50 ಕೋವಿಡ್‌ ಲಸಿಕೆ - ಹುಟ್ಟಿದೆ ಅಸಮಾನತೆ ಪ್ರಶ್ನೆ 9 ಖಾಸಗಿ ಆಸ್ಪತ್ರೆಗಳಿಗೆ ಶೇ. 50 ಕೋವಿಡ್‌ ಲಸಿಕೆ - ಹುಟ್ಟಿದೆ ಅಸಮಾನತೆ ಪ್ರಶ್ನೆ

ಭಾರತದಲ್ಲಿ ಏಕಾಏಕಿ ಕೋವಿಡ್ ಸ್ಫೋಟಕ್ಕೆ ಕಾರಣವೆಂದು ಹೇಳಲಾದ ವೈರಸ್‌ನ ಬಿ.1.617 ರೂಪಾಂತರವು ಮೂರು ವಂಶಾವಳಿಗಳಾಗಿ ವಿಂಗಡಣೆ ಆಗಿರುವುದರಿಂದ ಅದನ್ನು ಟ್ರಿಪಲ್ ರೂಪಾಂತರಿ ವೈರಸ್ ಎಂದು ಕರೆಯುತ್ತೇವೆ.

ಕಳೆದ ತಿಂಗಳು ಎಲ್ಲಾ ರೂಪಾಂತರಿ ವೈರಸ್‌ಗಳು ಕಳವಳಕಾರಿ ಎಂದು ಘೋಷಿಸಿದ್ದ ವಿಶ್ವ ಆರೋಗ್ಯ ಸಂಸ್ಥೆ ಉಪ ವಂಶಾವಳಿಗಳಲ್ಲಿ ಒಂದು ಮಾತ್ರ ಆ ಲೇಬಲ್‌ಗೆ ಅರ್ಹವಾಗಿದೆ ಎಂದು ಹೇಳಲಾಗಿತ್ತು.

 ಕೊರೊನಾ ಪರೀಕ್ಷೆ ಮಾಡಿಸಬೇಕು

ಕೊರೊನಾ ಪರೀಕ್ಷೆ ಮಾಡಿಸಬೇಕು

ಈ ಕುರಿತು ತಜ್ಞರೊಬ್ಬರು ಉತ್ತರ ನೀಡಿದ್ದಾರೆ, ಹೌದು, ನೀವು ಎರಡು ಬಾರಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದರೂ ಕೂಡ, ನಿಮಗೆ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದರೆ ಖಂಡಿತವಾಗಿಯೂ ಕೋವಿಡ್ ಪರೀಕ್ಷೆ ಮಾಡಿಸಲೇಬೇಕು ಎಂದು ಹೇಳಿದ್ದಾರೆ.

 ಸೋಂಕು ಹರಡುವ ಸಾಧ್ಯತೆ ಹೆಚ್ಚು

ಸೋಂಕು ಹರಡುವ ಸಾಧ್ಯತೆ ಹೆಚ್ಚು

ಒಂದೊಮ್ಮೆ ಕೊರೊನಾ ಸೋಂಕು ತಗುಲಿಯೂ ನಿಮಗೆ ತೀವ್ರತರದಲ್ಲಿ ಸೋಂಕು ಕಾಣಿಸಿಕೊಂಡಿಲ್ಲ ಎಂದು ಪರೀಕ್ಷೆ ಮಾಡಿಸದೇ ಇರಬೇಡಿ ನಿಮ್ಮಿಂದ ಹಲವು ಮಂದಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

 ಲಸಿಕೆಗಳು ಶೇ.90ರಷ್ಟು ಪರಿಣಾಮಕಾರಿ

ಲಸಿಕೆಗಳು ಶೇ.90ರಷ್ಟು ಪರಿಣಾಮಕಾರಿ

ಫೈಜರ್ ಹಾಗೂ ಮಾಡೆರ್ನಾ ಲಸಿಕೆಗಳು ಶೇ.90ರಷ್ಟು ಪರಿಣಾಮಕಾರಿ, ಕೊರೊನಾ ಸೋಂಕು ತಗುಲಿದರೆ ಆಸ್ಪತ್ರೆಗೆ ತೆರಳುವುದು ಅಥವಾ ಸಾವಿನ ಪ್ರಮಾಣವನ್ನು ಕಡಿಮೆ ಮಾಡುವ ಶಕ್ತಿ ಲಸಿಕೆಗಿದೆ.

 ಲಸಿಕೆಗಳು ಸೋಂಕು ಬಾರದ ಹಾಗೆ ತಡೆಯುತ್ತಾ?

ಲಸಿಕೆಗಳು ಸೋಂಕು ಬಾರದ ಹಾಗೆ ತಡೆಯುತ್ತಾ?

ಕೊರೊನಾ ಲಸಿಕೆಗಳು ಕೊರೊನಾ ಸೋಂಕು ತಗುಲಿದ ಬಳಿಕ ತೀವ್ರ ಸ್ವರೂಪಕ್ಕೆ ಹೋಗದಂತೆ ನೋಡಿಕೊಳ್ಳಲಿದೆ ಆದರೆ ಸೋಂಕು ಬಾರದಂತೆ ತಡೆಯುತ್ತದೆಯೇ ಎಂಬುದಕ್ಕೆ ಉತ್ತರವಿಲ್ಲ. ನಿಮಗೆ ಸೋಂಕು ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದರೂ ಹರಡುವ ಸಾಧ್ಯತೆ ಹೆಚ್ಚಿದೆ.

 ರೋಗ ನಿರೋಧಕ ಶಕ್ತಿ

ರೋಗ ನಿರೋಧಕ ಶಕ್ತಿ

ನೀವು ಎರಡು ಕೊರೊನಾ ಲಸಿಕೆಯ ಡೋಸ್‌ಗಳನ್ನು ಸ್ವೀಕರಿಸಿದರೂ ಕೂಡ ನಿಮಗೆ ಸೋಂಕು ತಗುಲಿದೆ ಎಂದರೆ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿ ವೃದ್ಧಿಯಾಗಿಲ್ಲ ಎಂದು ಅರ್ಥ.

Recommended Video

ಯಾವ Vaccine ಬೆಸ್ಟ್ ಅನ್ನೋದು ಗೊತ್ತಾಗಿದೆ! | Oneindia Kannada

English summary
If you have symptoms of Covid-19, you should get tested for covid 19 even if you are fully vaccinated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X