• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕ, ಚೀನಾ, ಪಾಕಿಸ್ತಾನ ಮತ್ತು ಶ್ರೀಲಂಕಾಕ್ಕಿಂತ ಭಾರತದಲ್ಲಿ ಪೆಟ್ರೋಲ್ ಬೆಲೆ ದುಬಾರಿನಾ?

|
Google Oneindia Kannada News

ನವದೆಹಲಿ, ಮೇ 18: ದೇಶದಲ್ಲಿ ಜನರು ಬಂಗಾರದ ಬೆಲೆಯಿಂದ ಹಿಡಿದು ಅಡುಗೆ ಎಣ್ಣೆ ಬೆಲೆಯ ಲೆಕ್ಕಾಚಾರ ಹಾಕುತ್ತಾರೆ. ಅಲ್ಲದೆ ತಮ್ಮ ದಿನನಿತ್ಯ ಜೀವನದಲ್ಲಿ ಲೆಕ್ಕಾಚಾರ ಮಾಡದೆ ಹೋದರೆ ಈ ಬದುಕು ಶೂನ್ಯ ಎಂದು ಕೊಂಡಿದ್ದಾರೆ. ಏಕೆಂದರೆ ಇದಕ್ಕೆಲ್ಲ ಮೂಲ ಕಾರಣವೇ ಬೆಲೆ ಏರಿಕೆಯೇ ಮೂಲ ಕಾರಣ ಎನ್ನಲಾಗುತ್ತಿದೆ. ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಬಗ್ಗೆಯು ಚರ್ಚೆ ಮಾಡುವುದು ಮನೆಮಾತಾಗಿದೆ. ಇನ್ನು ಪೆಟ್ರೋಲ್ ಬೆಲೆ ಗಗನಕ್ಕೇರಿದೆ ಎಂಬ ಸುದ್ದಿ ಕ್ಷಣ ಕ್ಷಣಕ್ಕೂ ಪೈಸೆ ಲೆಕ್ಕದಲ್ಲಿ ಏರಿಕೆಯಾಗುತ್ತಲೇ ಇರುತ್ತದೆ. ಹೀಗಿರುವಾಗ ವಿದೇಶಗಳಲ್ಲೂ ಪೆಟ್ರೋಲ್ ಬೆಲೆ ಭಾರತದ ಬೆಲೆಗಿಂತಲೂ ಕಡಿಮೆ ಬೆಲೆ ಇದೆ ಎಂಬ ಮಾಹಿತಿಯನ್ನು ಬ್ಯಾಂಕ್ ಆಫ್ ಬರೋಡಾ ನಡೆಸಿರುವ ತನ್ನ ಅರ್ಥಶಾಸ್ತ್ರದ ಸಂಶೋಧನೆಯಿಂದ ತಿಳಿದು ಬಂದಿದೆ.

ಪೆಟ್ರೋಲ್ ಬೆಲೆ ಚೀನಾ, ಬ್ರೆಜಿಲ್, ಜಪಾನ್, ಯುಎಸ್ಎ, ರಷ್ಯಾ, ಪಾಕಿಸ್ತಾನ ಮತ್ತು ಶ್ರೀಲಂಕಾಕ್ಕೆ ಹೋಲಿಸಿದರೆ ಭಾರತದಲ್ಲಿ ಪೆಟ್ರೋಲ್ ದುಪ್ಪಟ್ಟು ದುಬಾರಿಯಾಗಿದೆ ಬ್ಯಾಂಕ್ ಆಫ್ ಬರೋಡಾ ಅರ್ಥಶಾಸ್ತ್ರ ಸಂಶೋಧನಾ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಇದಕ್ಕೆ ಮೂಲ ಕಾರಣಗಳನ್ನೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನ ಮುಟ್ಟುತ್ತಿದೆ. ಈ ನಡುವೆ ಸಂಶೋಧನೆಯೊಂದರಲ್ಲಿ ಕೆಲವು ಸಂಗತಿಗಳು ಬೆಳಕಿಗೆ ಬಂದಿವೆ.

ಬಿಸಿಲಿನ ಝಳ: 15 ದಿನಗಳಲ್ಲಿ ಪೆಟ್ರೋಲ್ ಮಾರಾಟ ಹೆಚ್ಚಳಬಿಸಿಲಿನ ಝಳ: 15 ದಿನಗಳಲ್ಲಿ ಪೆಟ್ರೋಲ್ ಮಾರಾಟ ಹೆಚ್ಚಳ

 ಯುಕೆ ದೇಶಗಳಿಗಿಂತ ಅಗ್ಗ

ಯುಕೆ ದೇಶಗಳಿಗಿಂತ ಅಗ್ಗ

ಭಾರತದಲ್ಲಿ ಪೆಟ್ರೋಲ್ ಹಾಂಗ್‌ಕಾಂಗ್, ಜರ್ಮನಿ ಮತ್ತು ಯುಕೆ ಮುಂತಾದ ದೇಶಗಳಿಗಿಂತ ಅಗ್ಗವಾಗಿದೆ. ಚೀನಾ, ಬ್ರೆಜಿಲ್, ಜಪಾನ್, ಯುಎಸ್ಎ, ರಷ್ಯಾ, ಪಾಕಿಸ್ತಾನ ಮತ್ತು ಶ್ರೀಲಂಕಾಕ್ಕೆ ಹೋಲಿಸಿದರೆ ದುಬಾರಿಯಾಗಿದೆ. ಆದರೆ ಭಾರತದಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಬೆಲೆಗಳನ್ನು ನಿಯಂತ್ರಣದಲ್ಲಿಡಲು ಯಾವ ಸರ್ಕಾರ, ರಾಜ್ಯ ಅಥವಾ ಕೇಂದ್ರ ತನ್ನ ತೆರಿಗೆಯನ್ನು ಕಡಿಮೆ ಮಾಡಬೇಕೆಂದು ಎಂಬವುದನ್ನು ಈಗ ಚರ್ಚಿಸಲಾಗುತ್ತಿದೆ. ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿನ ಜಿಗಿತದಿಂದಾಗಿ ಇಂಧನ ಬೆಲೆಯಲ್ಲಿ ಹೆಚ್ಚಳವಾಗಿದೆ. ಇದಲ್ಲದೇ ಡಾಲರ್ ಬಲವರ್ಧನೆಯಿಂದ ಕಚ್ಚಾ ತೈಲ ಬೆಲೆಯೂ ಏರಿಕೆಯಾಗಿದೆ.

 ವರದಿಯಲ್ಲಿ ಏನಿದೆ?

ವರದಿಯಲ್ಲಿ ಏನಿದೆ?

ಬ್ಯಾಂಕ್ ಆಫ್ ಬರೋಡಾ ಎಕನಾಮಿಕ್ ರಿಸರ್ಚ್ ವರದಿಯು ತಲಾ ಆದಾಯದೊಂದಿಗೆ ಮೇ 9ರವರೆಗೆ ವಿವಿಧ ದೇಶಗಳಲ್ಲಿ ಪೆಟ್ರೋಲ್ ಬೆಲೆಯನ್ನು ಸಮನಾಗಿರುತ್ತದೆ. 106 ದೇಶಗಳ ತೈಲ ಬೆಲೆಯ ಮಾಹಿತಿ ಲಭ್ಯವಿದ್ದು, ಈ ಡೇಟಾವನ್ನು ನೋಡಿದಾಗ, ಭಾರತವು 1 ಲೀಟರ್‌ ಖರೀದಿಗೆ ಯುಎಸ್‌ ಡಾಲರ್ 1.35 ಬೆಲೆಯೊಂದಿಗೆ 42ನೇ ಸ್ಥಾನದಲ್ಲಿದೆ. ಭಾರತಕ್ಕಿಂತ ಪೆಟ್ರೋಲ್ ಬೆಲೆ ಹೆಚ್ಚಿರುವ 50ಕ್ಕೂ ಹೆಚ್ಚು ದೇಶಗಳು ಈ ಪಟ್ಟಿಯಲ್ಲಿದ್ದು, ಭಾರತ ಮಾತ್ರ ಪೆಟ್ರೋಲ್ ಬೆಲೆ ಹೆಚ್ಚಿಸಿಲ್ಲ ಎಂದು ಸೂಚಿಸುತ್ತದೆ. ಆದರೂ ಅನೇಕ ದೇಶಕ್ಕಿಂತಲೂ ಹೆಚ್ಚು ಬೆಲೆ ಇದೆ. ನಾವು ಈ ಬೇರೆ ದೇಶಗಳನ್ನು ನೋಡಿದರೆ ಸರಾಸರಿ ಬೆಲೆ ಪ್ರತಿ ಲೀಟರ್‌ಗೆ ಯುಎಸ್‌ ಡಾಲರ್ $1.22ರಷ್ಟು ಕಡಿಮೆ ಬಲೆ ನೀಡಿ ಪೆಟ್ರೋಲ್ ಖರೀದಿಸುತ್ತಿವೆ ಎಂದು ತಿಳಿದು ಬಂದಿದೆ.

 ಭಾರತ ಹಾಗೂ ಬೇರೆ ದೇಶದಲ್ಲಿ ಪೆಟ್ರೋಲ್ ಬೆಲೆ ಏಷ್ಟು?

ಭಾರತ ಹಾಗೂ ಬೇರೆ ದೇಶದಲ್ಲಿ ಪೆಟ್ರೋಲ್ ಬೆಲೆ ಏಷ್ಟು?

ಸಂಶೋಧನಾ ವರದಿಯ ಪ್ರಕಾರ ಭಾರತದಲ್ಲಿ ನಗರಗಳಲ್ಲಿ ಇಂಧನ ಬೆಲೆಗಳು ಆಸ್ಟ್ರೇಲಿಯಾ, ಟರ್ಕಿ ಮತ್ತು ದಕ್ಷಿಣ ಕೊರಿಯಾಕ್ಕೆ ಸಮನಾಗಿದೆ. ಭಾರತದಲ್ಲಿ ಪೆಟ್ರೋಲ್ ಬೆಲೆ ಹಾಂಗ್‌ಕಾಂಗ್, ಫಿನ್ಲ್ಯಾಂಡ್, ಜರ್ಮನಿ, ಇಟಲಿ, ನೆದರ್ಲ್ಯಾಂಡ್ಸ್, ಗ್ರೀಸ್, ಫ್ರಾನ್ಸ್, ಪೋರ್ಚುಗಲ್ ಮತ್ತು ನಾರ್ವೆಗಿಂತ ಕಡಿಮೆಯಾಗಿದೆ. ಈ ದೇಶಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 2 ರೂಪಾಯಿ ದಾಟಿದೆ. ಪೆಟ್ರೋಲ್ ಬೆಲೆ ಹಾಂಗ್ ಕಾಂಗ್, ಫಿನ್ಲ್ಯಾಂಡ್, ಜರ್ಮನಿ, ಇಟಲಿ, ನೆದರ್ಲ್ಯಾಂಡ್ಸ್, ಗ್ರೀಸ್, ಫ್ರಾನ್ಸ್, ಪೋರ್ಚುಗಲ್ ಮತ್ತು ನಾರ್ವೆಗಿಂತ ಕಡಿಮೆಯಾಗಿದೆ, ಅಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ಯುಎಸ್ ಡಾಲರ್ 2ಕ್ಕಿಂತಲೂ ಹೆಚ್ಚಿದೆ.

 ಕೆಲವು ದೇಶಗಳಿಗಿಂತ ಕಡಿಮೆಯಾಗಿದೆ

ಕೆಲವು ದೇಶಗಳಿಗಿಂತ ಕಡಿಮೆಯಾಗಿದೆ

ವಿಯೆಟ್ನಾಂ, ಕೀನ್ಯಾ, ಉಕ್ರೇನ್, ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ, ಶ್ರೀಲಂಕಾ ಮತ್ತು ವೆನೆಜುವೆಲಾಕ್ಕಿಂತ ಭಾರತದಲ್ಲಿ ಪೆಟ್ರೋಲ್ ಬೆಲೆ ಹೆಚ್ಚಾಗಿದೆ. ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳ ಬಗ್ಗೆ ಮಾತನಾಡಿದರೆ ಪೆಟ್ರೋಲ್ ಬೆಲೆ ತುಂಬಾ ಕಡಿಮೆಯಾಗಿದೆ. ವರದಿಯ ಪ್ರಕಾರ, ಪೆಟ್ರೋಲ್ ಬೆಲೆ ಕೆಲವು ದೇಶಗಳಲ್ಲಿ ಹೆಚ್ಚಾಗಿದೆ ಮತ್ತು ಕೆಲವು ದೇಶಗಳಿಗಿಂತ ಕಡಿಮೆಯಾಗಿದೆ. ಆದರೆ ತಲಾ ಆದಾಯದೊಂದಿಗೆ ಸಂಯೋಜಿಸಿದಾಗ, ಬೆಲೆಗಳು ಹೆಚ್ಚಿರುವಲ್ಲೆಲ್ಲಾ ತಲಾ ಆದಾಯವು ಭಾರತಕ್ಕಿಂತ ಹೆಚ್ಚು ಇದೆ ಎಂದು ಬ್ಯಾಂಕ್ ಆಫ್ ಬರೋಡಾದ ಅರ್ಥಶಾಸ್ತ್ರದ ಸಂಶೋಧನಾ ವರದಿಯಿಂದ ತಿಳಿದು ಬಂದಿದೆ.

English summary
For a set of 106 countries for which data is available, the price in India at USD 1.35/litre is 42nd in rank,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X