ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಧಿಯಾ ಆಸ್ತಿ: 2014ರಲ್ಲಿ 33 ಕೋಟಿ ರು, 2019ರಲ್ಲಿ 374 ಕೋಟಿ

|
Google Oneindia Kannada News

ನವದೆಹಲಿ, ಮೇ 14: ಲೋಕಸಭೆ ಚುನಾವಣೆ 2019ರಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಆಸ್ತಿ ವಿವರಗಳನ್ನು ಗಮನಿಸಿದಾಗ ಪುನರ್ ಆಯ್ಕೆ ಬಯಸಿ ಕಣಕ್ಕಿಳಿದಿರುವ ಸಂಸದರ ಸರಾಸರಿ ಆಸ್ತಿ ಪ್ರಮಾಣ ಏರಿಕೆಯಾಗಿದೆ.

2014ರಲ್ಲಿ ಪುನರ್ ಆಯ್ಕೆ ಬಯಸಿದ್ದ 335 ಹಾಲಿ ಸಂಸದರ(ಪಕ್ಷೇತರರು ಸೇರಿ) ಸರಾಸರಿ ಆಸ್ತಿ 16.79 ಕೋಟಿ ರು ನಷ್ಟಿತ್ತು. 2019ರಲ್ಲಿ ಇದೇ ರೀತಿ 335 ಸಂಸದರ ಸರಾಸರಿ 23.65 ಕೋಟಿ ರುಗೇರಿದೆ.

2014ರಿಂದ 2019ರ ಅವಧಿಯಲ್ಲಿ ಪುನರ್ ಅಯ್ಕೆ ಬಯಸಿರುವ ಸಂಸದರ ಸರಾಸರಿ ಅಸ್ತಿ ಏರಿಕೆ 6.86 ಕೋಟಿ ರು ನಷ್ಟಿದೆ. ಒಟ್ಟಾರೆ, 335 ಸಂಸದರ ಸರಾಸರಿ ಆಸ್ತಿ ಲೆಕ್ಕ ಹಾಕಿರುವ ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್ ವರದಿ ಪ್ರಕಾರ, ಶೇ41ರಂತೆ ಏರಿಕೆ ಕಂಡು ಬಂದಿದೆ.

Jyotiraditya Scindia

ಕೆಲ ಅಭ್ಯರ್ಥಿಗಳ ಆಸ್ತಿ ಏರಿಕೆ ಪ್ರಮಾಣ ಹುಬ್ಬೇರಿಸುವಂತಿದೆ. ಮಧ್ಯಪ್ರದೇಶದ ಗುನಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿರಾದಿತ್ಯ ಸಿಂಧಿಯಾ ಅವರ ಆಸ್ತಿ ಮೊತ್ತ 2014ರಲ್ಲಿ 33ಕೋಟಿ ರು ನಷ್ಟಿತ್ತು. 2019ರಲ್ಲಿ 374ಕೋಟಿ ರು ಗೇರಿದೆ. 341.47 ಕೋಟಿ ರು ಏರಿಕೆ ಕಂಡಿದೆ.

ಆದರೆ, ಸಿಂಧಿಯಾ ಅವರಿಗಿಂತ ಹೆಚ್ಚಿನ ಪ್ರಮಾಣದ ಆಸ್ತಿ ಹೊಂದಿರುವುದು ಆಂಧ್ರಪ್ರದೇಶದ ಉದ್ಯಮಿ ಕೊಂಡಾ ವಿಶ್ವೇಶ್ವರ ರೆಡ್ಡಿ. ಚೆವೆಲ್ಲಾ ಕ್ಷೇತ್ರದಿಂದ ಪುನರ್ ಆಯ್ಕೆ ಬಯಸಿರುವ ಕಾಂಗ್ರೆಸ್ ಅಭ್ಯರ್ಥಿ ರೆಡ್ಡಿ ಅವರ ಆಸ್ತಿ ಪ್ರಮಾಣ 366.39 ಕೋಟಿ ರು ಏರಿಕೆ ಕಂಡಿದೆ. 2014ರಲ್ಲಿ 528.62 ಕೋಟಿರು ಆಸ್ತಿ ಹೊಂದಿದ್ದರು. 2019ರಲ್ಲಿ 895.01 ಕೋಟಿ ರು ಆಸ್ತಿ ತೋರಿಸಿದ್ದಾರೆ.

ಇನ್ನು ಕರ್ನಾಟಕದ ಸಿರಿವಂತ ಅಭ್ಯರ್ಥಿಗಳ ಪೈಕಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಅವರ ಅಸ್ತಿ ಪ್ರಮಾಣವೂ ಏರಿಕೆ ಕಂಡಿದೆ. 2014ರಲ್ಲಿ 85.87 ಕೋಟಿ ರು ಇತ್ತು. 2019ರಲ್ಲಿ 338.89 ಕೋಟಿ ರು ಆಗಿದೆ.

English summary
The average assets of these 335 re-contesting MPs fielded by various parties including independents in 2014 was Rs 16.79 Crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X