ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.1ರಿಂದ ಜಾರಿಯಾಗಲಿವೆ ಹಲವು ಹೊಸ ನಿಯಮಗಳು: ಏನೆಲ್ಲ ಬದಲಾಗಲಿದೆ?

|
Google Oneindia Kannada News

ನವದೆಹಲಿ, ಅಕ್ಟೋಬರ್ 31: ನವೆಂಬರ್ 1ರಿಂದ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಿಂದ ಹಿಡಿಯು ಹೊಸ ರೈಲ್ವೆ ವೇಳಾಪಟ್ಟಿಯವರೆಗೆ ಅನೇಕ ಪ್ರಮುಖ ಬದಲಾವಣೆಗಳು ಜಾರಿಗೆ ಬರುತ್ತಿವೆ. ಹಲವು ಬದಲಾವಣೆಗಳು ಜನಸಾಮಾನ್ಯರ ದೈನಂದಿನ ಜೀವನದಲ್ಲಿನ ಬದಲಾವಣೆಗಳಿಗೂ ಕಾರಣವಾಗಲಿದೆ. ಈ ಎಲ್ಲ ಹೊಸ ನಿಯಮಾವಳಿಗಳು ದೇಶದೆಲ್ಲೆಡೆ ಅನ್ವಯವಾಗುವುದಿಲ್ಲ. ಕೆಲವು ಬದಲಾವಣೆಗಳು ಹಂತ ಹಂತವಾಗಿ ದೇಶದಾದ್ಯಂತ ಜಾರಿಯಾಗಲಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಅನಿಲದ ದರವನ್ನು ಆಧರಿಸಿ ತೈಲ ಮಾರುಕಟ್ಟೆ ಕಂಪೆನಿಗಳು ಪ್ರತಿ ತಿಂಗಳ ಮೊದಲ ದಿನದಂದು ದೇಶದಾದ್ಯಂತ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ನಿರ್ಧಾರ ಮಾಡುತ್ತವೆ. ಹೀಗಾಗಿ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಜತೆಗೆ ಅದರ ದರದಲ್ಲಿಯೂ ಬದಲಾವಣೆಯಾಗುವ ಸಾಧ್ಯತೆ ಇದೆ. ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಏರಿಕೆಯಾಗುವ ಸಂಭವ ಕೂಡ ಇದೆ.

ವಾಟ್ಸಾಪ್ ಮೂಲಕ LPG ಸಿಲಿಂಡರ್ ಬುಕ್ ಮಾಡೋದು ಹೇಗೆ?ವಾಟ್ಸಾಪ್ ಮೂಲಕ LPG ಸಿಲಿಂಡರ್ ಬುಕ್ ಮಾಡೋದು ಹೇಗೆ?

ಈ ನಿಯಮಾವಳಿಗಳು ನಿಮ್ಮ ದಿನನಿತ್ಯದ ಬದುಕಿನ ಮೇಲೆ ವಿವಿಧ ರೀತಿಯ ಪರಿಣಾಮಗಳನ್ನು ಬೀರಲಿವೆ. ನವೆಂಬರ್ ಒಂದರಿಂದ ಏನೆಲ್ಲ ಬದಲಾಗಬಹುದು? ಮುಂದೆ ಓದಿ.

ಎಲ್‌ಪಿಜಿ ಪೂರೈಕೆ ವ್ಯವಸ್ಥೆ

ಎಲ್‌ಪಿಜಿ ಪೂರೈಕೆ ವ್ಯವಸ್ಥೆ

ತೈಲ ಕಂಪೆನಿಗಳು ಎಲ್‌ಪಿಜಿ ಸಿಲಿಂಡರ್‌ಗಳನ್ನು ಮನೆಗೆ ಸರಬರಾಜು ಮಾಡುವಾಗ ಪೂರೈಕೆ ದೃಢೀಕರಣ ಕೋಡ್ (ಡಿಎಸಿ) ಜಾರಿಗೆ ತರುತ್ತಿದ್ದು, ಇದು ನ.1ರಿಂದ ಅನ್ವಯವಾಗಲಿದೆ. ಮನೆಗೆ ಪೂರೈಕೆಯಾಗುವ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪಡೆಯಲು ಗ್ರಾಹಕರು ಇನ್ನು ಮುಂದೆ ಒನ್ ಟೈಮ್ ಪಾಸ್‌ವರ್ಡ್ (ಒಟಿಪಿ) ನೀಡಬೇಕಾಗುತ್ತದೆ. ರಾಜಸ್ಥಾನದ ಜೈಪುರದಲ್ಲಿ ಈಗಾಗಲೇ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಈ ವ್ಯವಸ್ಥೆಯನ್ನು ಮೊದಲು 100 ಸ್ಮಾರ್ಟ್ ಸಿಟಿಗಳಲ್ಲಿ ಜಾರಿಗೆ ತರಲಾಗುತ್ತದೆ. ಮನೆಗೆ ಎಲ್‌ಪಿಜಿ ಸಿಲಿಂಡರ್ ಪೂರೈಕೆಯನ್ನು ಬಯಸುವ ಗ್ರಾಹಕರು ಅವರ ನೋಂದಾಯಿತ ಮೊಬೈಲ್ ನಂಬರ್‌ಗೆ ಕೋಡ್ ಪಡೆದುಕೊಳ್ಳಲಿದ್ದಾರೆ. ಪೂರೈಕೆ ಮಾಡುವ ಸಿಬ್ಬಂದಿಗೆ ಒಟಿಪಿ ನೀಡಿದರೆ ಮಾತ್ರವೇ ಎಲ್‌ಪಿಜಿ ಸಿಲಿಂಡರ್ ನೀಡಲಾಗುತ್ತದೆ.

ಆನ್‌ಲೈನ್ ಬುಕಿಂಗ್

ಆನ್‌ಲೈನ್ ಬುಕಿಂಗ್

ಅತ್ಯಧಿಕ ಭದ್ರತೆಯ ನೋಂದಣಿ ಫಲಕ ಹಾಗೂ ಕಲರ್ ಕೋಡೆಡ್ ಸ್ಟಿಕ್ಕರ್‌ಗಳ ಆನ್‌ಲೈನ್ ಬುಕಿಂಗ್ ಅನ್ನು ದೆಹಲಿ ಸರ್ಕಾರ ರಾಜಧಾನಿಯ ಕೆಲವು ಸ್ಥಳಗಳಲ್ಲಿ ಪ್ರಾಯೋಗಿಕವಾಗಿ ನ. 1ರಿಂದ ಆರಂಭಿಸುತ್ತಿದೆ. ವೆಬ್‌ಸೈಟ್‌ನ ಹೊಸ ಅವೃತ್ತಿಯು ಸಾರ್ವಜನಿಕರಿಗೆ ಲಭ್ಯವಾಗುತ್ತಿದ್ದು, ಒಂದು ವೆಬ್‌ಸೈಟ್ ಯುಆರ್‌ಎಲ್, ಎಸ್‌ಐಎಎಂ ಮೂಲಕ ಎಚ್‌ಎಸ್‌ಆರ್‌ಪಿ ಮತ್ತು ಕಲರ್ ಕೋಡೆಡ್ ಸ್ಟಿಕ್ಕರ್‌ಗಳನ್ನು ಬುಕ್ ಮಾಡಬಹುದಾಗಿದೆ. ಬುಕ್ ಮಾಡಿದ ಬಳಿಕ ಎಸ್ಎಂಎಸ್ ಮೂಲಕ ಗ್ರಾಹಕರಿಗೆ ಪ್ರತಿ ಹಂತದ ಮಾಹಿತಿ ಸಿಗಲಿದೆ. ಪೂರೈಕೆಯಲ್ಲಿ ತಡವಾಗದಂತೆ ಕನಿಷ್ಠ ಎರಡು ದಿನಗಳ ಮೊದಲು ಅಪಾಯಿಂಟ್‌ಮೆಂಟ್‌ನ ಮಾಹಿತಿ ನೀಡಲಾಗುತ್ತದೆ.

ಇಂಡೇನ್ ಗ್ಯಾಸ್ ಬುಕ್ಕಿಂಗ್

ಇಂಡೇನ್ ಗ್ಯಾಸ್ ಬುಕ್ಕಿಂಗ್

ಇಂಡೇನ್ ಕಂಪೆನಿಯ ಅನಿಲ ಬುಕಿಂಗ್ ಸಂಖ್ಯೆ ನಾಳೆಯಿಂದ ಬದಲಾಗುತ್ತಿದೆ. ಬುಕಿಂಗ್‌ನ ಹಳೆಯ ಸಂಖ್ಯೆಗಳನ್ನು ಸ್ವೀಕರಿಸುವುದಿಲ್ಲ. ಇಂಡೇನ್ ಈಗಾಗಲೇ ಹೊಸ ಬುಕ್ಕಿಂಗ್ ಸಂಖ್ಯೆಯನ್ನು ನೀಡಿದ್ದು, ಅದು ದೇಶದೆಲ್ಲೆಡೆ ಏಕಸ್ವರೂಪದ್ದಾಗಿರಲಿದೆ. ಇಂಡೇನ್ ಗ್ರಾಹಕರು ಇನ್ನು ಮುಂದೆ ಬುಕ್ಕಿಂಗ್ ಮಾಡಲು 77189 55555 ಸಂಖ್ಯೆಗೆ ಕರೆ ಮತ್ತು ಸಂದೇಶ ರವಾನಿಸಬಹುದು.

ರೈಲ್ವೆ ವೇಳಾಪಟ್ಟಿ

ರೈಲ್ವೆ ವೇಳಾಪಟ್ಟಿ

ಭಾರತೀಯ ರೈಲ್ವೆಯು ದೇಶದೆಲ್ಲೆಡೆ ರೈಲ್ವೆ ಸಂಚಾರದ ವೇಳಾಪಟ್ಟಿಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದೆ. ಅಕ್ಟೋಬರ್ 31ರಿಂದಲೇ ಈ ಬದಲಾವಣೆ ಜಾರಿಯಾಗಬೇಕಿತ್ತು. ಆದರೆ ಅದನ್ನು ನ.1ಕ್ಕೆ ಮುಂದೂಡಲಾಗಿತ್ತು. ಹೀಗಾಗಿ ಅನೇಕ ಪ್ರಮುಖ ರೈಲುಗಳ ಸಂಚಾರದ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆಗಳನ್ನು ನೋಡಬಹುದು. ಇದರ ಜತೆಗೆ ದೆಹಲಿ-ಚಂಡೀಗಡ ತೇಜಸ್ ಎಕ್ಸ್‌ಪ್ರೆಸ್ ರೈಲು ನ.1ರಿಂದ ಮತ್ತೆ ತನ್ನ ಸಂಚಾರ ಆರಂಭಿಸುತ್ತಿದೆ. ದೆಹಲಿ-ಚಂಡೀಗಡ ಅಂತರವನ್ನು ಕೇವಲ 3 ಗಂಟೆಗಳಲ್ಲಿ ಇದು ಕ್ರಮಿಸಲಿದೆ.

English summary
All rules, including LPG cylinders to the timetable for trains, will change from November 1. Check details in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X