ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೀತಿ ಇದ್ದಲ್ಲಿ ಸ್ನೇಹವೇಕಿರುತ್ತೆ? ಸ್ನೇಹದ ಚೆಂದದ ಉತ್ತರ ಕೇಳಿ...

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

"ಯಾಕ್ ಮಗಾ, ಹುಡ್ಗಿ ಕೈಕೊಟ್ಲಾ...' ಎಂಬಲ್ಲಿಂದ ಹಿಡಿದು, 'ಎರ್ಡು ಪೆಗ್ ಹಾಕು, ಎಲ್ಲ ಸರಿ ಹೋಗತ್ತೆ' ಎಂಬಲ್ಲಿಯವರೆಗೆ 'ಡಿಫರೆಂಟ್, ಡಿಫರೆಂಟ್' ಸ್ನೇಹಿತರಿದ್ದಾರೆ. ಹಲವರ ಬದುಕು ಹಳಿ ತಪ್ಪುವುದಕ್ಕೂ ಕಾರಣವಾದ ಸ್ನೇಹಿತರಿದ್ದಾರೆ. ಮತ್ತೆಷ್ಟೋ ಜನರ ಬದುಕನ್ನು ಉದ್ಧಾರ ಮಾಡಿದವರೂ ಇದ್ದಾರೆ. ಇಂಥ ಸ್ನೇಹಿತರನ್ನೆಲ್ಲ ಇಂದು ನೆನಪಿಸಿಕೊಳ್ಳುವುದಕ್ಕೆ ಕಾರಣವಿದೆ.

ಪ್ರತಿ ವರ್ಷ ಆಗಸ್ಟ್ ಮೊದಲೇ ಭಾನುವಾರ(ಈ ವರ್ಷ ಆಗಸ್ಟ್ 08)ವನ್ನು 'ಸ್ನೇಹಿತರ ದಿನ'ವನ್ನಾಗಿ ಆಚರಿಸಲಾಗುತ್ತದೆ. ವ್ಯಕ್ತಿಯ ಬದುಕಲ್ಲಿ 'ಸ್ನೇಹಿತರು' ವಹಿಸಿರುವ ಅಮೂಲ್ಯ ಪಾತ್ರವನ್ನು ನೆನೆದು ಕೃತಜ್ಞತೆ ಅರ್ಪಿಸುವುದಕ್ಕೆ ಈ ದಿನ ಸಕಾಲ.

ಸ್ನೇಹಿತ, ಕುಚೇಲನ ಹಿಡಿ ಅವಲಕ್ಕಿಯಲ್ಲೇ ಸಂತೃಪ್ತಿ ಪಡುವ ಕೃಷ್ಣನಂಥವನು! ಸ್ನೇಹಿತ, ಕುಚೇಲನ ಹಿಡಿ ಅವಲಕ್ಕಿಯಲ್ಲೇ ಸಂತೃಪ್ತಿ ಪಡುವ ಕೃಷ್ಣನಂಥವನು!

ವ್ಯಕ್ತಿಯ ಬದುಕಿನಲ್ಲಿ ಸ್ನೇಹಿತರ ಪಾತ್ರ ಎಂಥಾದ್ದು? ಎಲ್ಲ ಸ್ನೇಹಿತರೂ ಆತ್ಮದ ಗೆಳೆಯರಾಗೋಕೆ ಸಾಧ್ಯವಿಲ್ಲ ಯಾಕೆ? 'ಹಾಯ್' ಅನ್ನೋಕೆ ನೂರಿರಬಹುದು ಗೆಳೆಯರು. ಆದರೆ ಕಣ್ಣೀರುಕ್ಕಿದಾಗ ಹೆಗಲಾಗಿ ನಿಲ್ಲುವವರು ಕೆಲವರು ಮಾತ್ರ. ಅಂಥ ಸ್ನೇಹಿತರ ಮಹತ್ವವನ್ನು ತಿಳಿಸುವ ಕೆಲವು ಚೆಂದದ ಸಾಲುಗಳು ಇಲ್ಲಿವೆ. ಇವೆಲ್ಲವೂ ಎಲ್ಲೋ ಓದಿ, ಸಂಗ್ರಹಿಸಿದ ಸಾಲುಗಳು. ಇವನ್ನೆಲ್ಲ ಬರೆದ ಮಹಾತ್ಮರಿಗೆ ನಮ್ಮದೊಂದು ಕೃತಜ್ಞತೆ. ಜೊತೆಗೆ ವ್ಯಕ್ತಿಯ ಬದುಕಲ್ಲಿ ಅನೂಹ್ಯ ಪಾತ್ರ ವಹಿಸಿದ ಸ್ನೇಹಿತರಿಗೆಲ್ಲ "ಹ್ಯಾಪಿ ಫ್ರೆಂಡ್ಶಿಪ್ ಡೇ"

ಪ್ರೀತಿ ಇರುವಲ್ಲಿ ಸ್ನೇಹವೇಕಿರುತ್ತೆ?

ಪ್ರೀತಿ ಇರುವಲ್ಲಿ ಸ್ನೇಹವೇಕಿರುತ್ತೆ?

ಅದೊಂದು ದಿನ ಸ್ನೇಹ ಪ್ರೀತಿಯನ್ನು ಕೇಳಿತು.
ನಾನು ಇರುವಲ್ಲಿ ನೀನೂ ಯಾಕೆ ಇರ್ತೀಯಾ?
ಅದಕ್ಕೆ ಸ್ನೇಹ ಹೇಳಿತು.
ನೀನೆಲ್ಲಿ ಕಣ್ಣೀರು ಬರುವಂತೆ ಮಾಡುತ್ತೀಯೋ
ಅಲ್ಲಿ ನಗು ಮೂಡಿಸಲಿಕ್ಕೆ ನಾನಿರುತ್ತೇನೆ!

ಸಾಗರದ ಅಲೆಗಳಂತೆ ಸ್ನೇಹಿತರು!

ಸಾಗರದ ಅಲೆಗಳಂತೆ ಸ್ನೇಹಿತರು!

ನಿನ್ನ ಜೀವನ ಸಮುದ್ರದಂತೆ. ಅದರಲ್ಲಿ ನೀನು ಕಿನಾರೆಯಂತೆ
ಸ್ನೇಹಿತರು ಅಲೆಗಳು!
ಸಮುದ್ರದಲ್ಲಿ ಎಷ್ಟು ಅಲೆಗಳಿವೆ ಎಂಬುದು ಮುಖ್ಯವಲ್ಲ
ಎಷ್ಟು ಅಲೆಗಳು ಕಿನಾರೆಯನ್ನು ತಲುಪುತ್ತವೆ ಎಂಬುದು ಮುಖ್ಯ

ಭಿನ್ನತೆ-ಹೋಲಿಕೆ

ಭಿನ್ನತೆ-ಹೋಲಿಕೆ

ಸ್ನೇಹಕ್ಕೆ ಎರಡು ವಿಷಯಗಳು ಮುಖ್ಯವಾಗುತ್ತವೆ
ಮೊದಲನೆಯದು ಇಬ್ಬರ ನಡುವೆ ಹೋಲಿಕೆಯನ್ನು ಗುರುತಿಸುವುದು
ಎರಡನೆಯದು ಇಬ್ಬರ ನಡುವಿನ ಭಿನ್ನತೆಯನ್ನು ಗೌರವಿಸುವುದು!

ಸ್ನೇಹಿತನೆಂದರೆ...

ಸ್ನೇಹಿತನೆಂದರೆ...

ಸ್ನೇಹಿತನೆಂದರೆ ಅವನು,
ನಮ್ಮ ಎದೆಯೊಳಗಿನ ಕವಿತೆಯನ್ನು ಓದುವವನು
ನಾವು ಮರೆತಾಗ ಅದನ್ನು ಹಾಡುವವನು!

ಪ್ರೀತಿಯಿಂದ ಮೈದಡವಬೇಕು

ಪ್ರೀತಿಯಿಂದ ಮೈದಡವಬೇಕು

ಸ್ನೇಹ ಪಕ್ಷಿ ಇದ್ದಂತೆ. ಅದನ್ನು ಗಟ್ಟಿಯಾಗಿ ಹಿಡಿದರೆ ಸತ್ತು ಹೋಗುತ್ತದೆ.
ಹಿಡಿತ ಸಡಿಲಿಸಿದರೆ ಹಾರಿ ಹೋಗುತ್ತದೆ.
ಪ್ರೀತಿಯಿಂದ ಮೈದಡವಿದರೆ ಸದಾ ನಮ್ಮೊಂದಿಗಿರುತ್ತದೆ.

English summary
Friendship day is a day for celebrating friendship. The day is a popular celebration in several South American countries since it was first proposed in 1958 in Paraguay as the 'International Friendship Day'. On august first sunday of every year, this fest is celebrated in India also. Here are some nice quotes on friendship day in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X