ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ಕು ಗ್ರಹಗಳ ಸಾಲು; ಸಾವಿರ ವರ್ಷಗಳಿಗೊಮ್ಮೆ ಕಾಣುವ ಗಗನ ವೈಭವ

|
Google Oneindia Kannada News

ಭುವನೇಶ್ವರ್: ಬ್ರಹ್ಮಾಂಡದ ಶಕ್ತಿ ಮತ್ತು ವ್ಯವಹಾರವೇ ಅಂಥದ್ದು. ಕ್ಷಣಕ್ಷಣವೂ ಬೆರಗಾಗುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವು ನಮ್ಮ ಕಣ್ಣಿಗೆ ನಿಲುಕುತ್ತವೆ. ಟೆಲಿಸ್ಕೋಪ್‌ಗಳ ಕಣ್ಣಿಗೂ ಬೀಳದೇ ಉಳಿಯುವ ವಿಸ್ಮಯಗಳೇ ಹೆಚ್ಚಿನವು. ಈಗ ಅಂಥದ್ದೊಂದು ಪುಟ್ಟ ವಿಸ್ಮಯವನ್ನು ನೋಡುವ ಅವಕಾಶ ನಮಗೆ ಸಿಕ್ಕಿದೆ.

ಆಕಾಶದ ಮೇಲೆ ಒಂದೇ ರೇಖೆಯಲ್ಲಿ ಎರಡು, ಮೂರು ಗ್ರಹಗಳು ಆಗಸದಲ್ಲಿ ಸಂಯೋಜನೆಗೊಂಡಿರುವುದನ್ನು ನಾವು ನೋಡಿರಬಹುದು. ಇವು ವರ್ಷದಲ್ಲಿ ಹಲವು ಭಾರಿ ಕಾಣಸಿಗುತ್ತವೆ. ಅದರೆ, ನಾಲ್ಕು ಗ್ರಹಗಳು ಒಂದೇ ರೇಖೆಯಲ್ಲಿ ಮೆರವಣಿಗೆಯಲ್ಲಿದ್ದಂತೆ ಕಾಣುವುದು ತೀರಾ ಅಪರೂಪ. ಎಷ್ಟು ಅಪರೂಪ ಎಂದರೆ ಇದು ಸಾವಿರ ವರ್ಷದಲ್ಲಿ ಒಮ್ಮೆ ಮಾತ್ರ ನಡೆಯುವಂತಹ ವಿದ್ಯಮಾನ. ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಒಂದೇ ಸಾಲಿನಲ್ಲಿ ಆಗಸದಲ್ಲಿರುವುದನ್ನು ನಾವು ನೋಡಬಹುದು. ಈ ಅದ್ಭುತ ಗಗನ ದೃಶ್ಯವೈಭವವನ್ನ ಬರಿಗಣ್ಣಿಂದಲೇ ನೋಡಿ ಕಣ್ತುಂಬಿಸಿಕೊಳ್ಳಬಹುದು. ಇದನ್ನೆ ಗ್ರಹಗಳ ಪೆರೇಡ್ (Planet Parade) ಎಂದು ಆಡುನುಡಿಯಲ್ಲಿ ಬಣ್ಣಿಸುತ್ತಾರೆ.

Solar Eclipse 2022: ವರ್ಷದ ಮೊದಲ ಸೂರ್ಯ ಗ್ರಹಣ: ಯಾವ ಸಮಯ, ಹೇಗೆ ನೋಡುವುದು?Solar Eclipse 2022: ವರ್ಷದ ಮೊದಲ ಸೂರ್ಯ ಗ್ರಹಣ: ಯಾವ ಸಮಯ, ಹೇಗೆ ನೋಡುವುದು?

ಸೂರ್ಯನ ಸುತ್ತ ಒಂಬತ್ತು ಗ್ರಹಗಳು (ಪ್ಲೂಟೋವನ್ನು ಪರಿಗಣಿಸಿದರೆ) ಸುತ್ತುತ್ತಿರುತ್ತವೆ. ಇವು ಆಗೊಮ್ಮೆ ಈಗೊಮ್ಮೆ ಹತ್ತಿರ ಬರುತ್ತಿರುತ್ತವೆ, ದೂರ ಹೋಗುತ್ತಿರುತ್ತವೆ. ಕೆಲವೊಮ್ಮೆ ಒಂದೇ ಸಾಲಿನಲ್ಲಿ ಬಂದಿರುತ್ತವೆ. ಇವು ಸೃಷ್ಟಿಯ ನಿರಂತರ ಚಲನೆಯ ವೇಳೆ ಆಗುವ ಘಟನೆಗಳು.

Four planets align in a line after 1000 years, Know when and how to see

ಈಗ ನಡೆಯುತ್ತಿರುವ ಪ್ಲಾನೆಟ್ ಪರೇಡ್ ಹೇಗೆ ನೋಡುವುದು?
ಏಪ್ರಿಲ್ ಕೊನೆಯ ವಾರದಲ್ಲಿ ನಾಲ್ಕು ಗ್ರಹಗಳು ಮತ್ತು ಚಂದ್ರ ಗ್ರಹಗಳು ಹೆಚ್ಚೂ ಕಡಿಮೆ ಒಂದೇ ರೇಖೆಯಲ್ಲಿದ್ದಂತೆ ಕಾಣಿಸುತ್ತವೆ. ಬೆಳಗ್ಗೆ ಸೂರ್ಯೋದಯಕ್ಕೆ ಒಂದು ಗಂಟೆ ಪೂರ್ವ ದಿಕ್ಕಿನ ಆಗಸದಲ್ಲಿ ಚಂದ್ರನ ಪಕ್ಕಪಕ್ಕದಲ್ಲಿ ಗುರು, ಶುಕ್ರ, ಮಂಗಳ ಮತ್ತು ಶನಿ ಗ್ರಹಗಳು ಬರಿಗಣ್ಣಿಗೆ ಕಾಣಿಸುತ್ತವೆ. ಮೋಡ ಕವಿಯದೇ ಇದ್ದಲ್ಲಿ ಬರಿಗಣ್ಣಿನಲ್ಲಿ ಬಹಳ ಸ್ಪಷ್ಟವಾಗಿ ಈ ದೃಶ್ಯವನ್ನು ಕಾಣಬಹುದು. ಏಪ್ರಿಲ್ 26 ಮತ್ತು 27ರಂದು, ಅಂದರೆ ನಿನ್ನೆ ಮತ್ತು ಇವತ್ತು ಇದು ಬಹಳ ಸ್ಪಷ್ಟವಾಗಿ ಗೋಚರಿಸಿತ್ತು. ಇನ್ನೂ ಎರಡು ಮೂರು ದಿನಗಳವರೆಗೆ ನೀವು ಬೆಳಗಿನ ಜಾವ 5 ಗಂಟೆಗೆ ಎದ್ದು ಆಕಾಶವನ್ನು ವೀಕ್ಷಿಸಿದರೆ ಶುಕ್ರ, ಗುರು ಗ್ರಹಗಳು ಬಹಳ ಸಮೀಪದಲ್ಲಿರುವುದನ್ನು ಕಾಣಬಹುದು.

ಅಪರೂಪದ 'ಪಿಂಕ್ ಮೂನ್' ಯಾವಾಗ ಕಾಣಲಿದೆ? ಇಲ್ಲಿದೆ ವಿವರಅಪರೂಪದ 'ಪಿಂಕ್ ಮೂನ್' ಯಾವಾಗ ಕಾಣಲಿದೆ? ಇಲ್ಲಿದೆ ವಿವರ

ಮೂರು ರೀತಿಯ ಪೆರೇಡ್‌ಗಳು:
ಒಡಿಶಾದ ಭುವನೇಶ್ವರ್ ನಗರದ ಪ್ಲಾನಿಟೋರಿಯಂನ ಹಿರಿಯ ಅಧಿಕಾರಿ ಸುಭೇಂದು ಪಟ್ಟನಾಯಕ್ ಅವರು ಈ ಬಗ್ಗೆ ಒಂದಷ್ಟು ಆಸಕ್ತಿಕರ ಸಂಗತಿಗಳನ್ನ ತಿಳಿಸಿದ್ದಾರೆ. ಗ್ರಹಗಳ ಪೆರೇಡ್‌ನಲ್ಲೇ ಮೂರು ಪ್ರಮುಖ ವಿಧಗಳಿರುವುದನ್ನು ಅವರು ವಿವರಿಸಿದ್ದಾರೆ.

ಸೂರ್ಯನ ಒಂದು ಬದಿಯಲ್ಲಿ ಗ್ರಹಗಳು ಸಂಯೋಜನೆಗೊಳ್ಳುವುದು ಒಂದು ರೀತಿಯ ಪೆರೇಡ್ ಆಗಿದೆ. ಈ ರೀತಿ ಮೂರು ಗ್ರಹಗಳು ಸೂರ್ಯನ ಬದಿಯಲ್ಲಿ ಒಂದೇ ರೇಖೆಯಲ್ಲಿ ಕಾಣುವುದು ಬಹಳ ಸಾಮಾನ್ಯ. ವರ್ಷದಲ್ಲಿ ಹಲವು ಬಾರಿ ನೀವು ಇದನ್ನ ಕಾಣಬಹುದು. ಸೂರ್ಯನ ಬದಿಯಲ್ಲಿ ನಾಲ್ಕು ಗ್ರಹಗಳ ಸಂಯೋಜನೆ ವರ್ಷಕ್ಕೆ ಒಮ್ಮೆ ಆದರೆ, ಐದು ಗ್ರಹಗಳ ಸಂಯೋಜನೆ 19 ವರ್ಷಗಳಿಗೊಮ್ಮೆ ಆಗುತ್ತದೆ. ಇನ್ನು, ಎಲ್ಲಾ ಎಂಟು ಗ್ರಹಗಳು ಈ ರೀತಿ ಒಂದೇ ಅಕ್ಷೆಗೆ ಬರುವುದು 170 ವರ್ಷಗಳಿಗೊಮ್ಮೆ ಮಾತ್ರವಂತೆ. ಆದರೆ, ಇವು ಬರಿಗಣ್ಣಿಗೆ ಕಾಣುವುದಿಲ್ಲ.

ಎರಡನೇ ರೀತಿಯ ಗ್ರಹಗಳ ಮೆರವಣಿಗೆ ಎಂದರೆ, ಸಂಜೆಯ ಆಗಸದಲ್ಲಿ ಗ್ರಹಗಳು ಒಂದೇ ಸಾಲಿನಲ್ಲಿದ್ದರೂ ಗುಚ್ಛಗಳ ಸಂಯೋಜನೆಯಲ್ಲಿ ಇರುತ್ತವೆ.

ಇನ್ನು ಮೂರನೇ ವಿಧದ ಪ್ಲಾನೆಟ್ ಪೆರೇಡ್ ಬಹಳ ಅಪರೂಪದ್ದು. ಆಕಾಶದ ಒಂದೇ ಭಾಗದಲ್ಲಿ ಗ್ರಹಗಳ ಸಂಯೋಜನೆ ಇರುತ್ತದೆ. ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸುತ್ತವೆ. ಈಗ ಆಗಿರುವ ಚಂದ್ರ ಮತ್ತು ನಾಲ್ಕು ಗ್ರಹಗಳ ಸಂಯೋಜನೆ ಈ ಹಿಂದೆ ಕೊನೆಯ ಬಾರಿಗೆ ಆಗಿದ್ದು 10ನೇ ಶತಮಾನದಲ್ಲಂತೆ.

(ಒನ್ಇಂಡಿಯಾ ಸುದ್ದಿ)

English summary
Venus, Juiter, Mars and Saturn planets align in straighline alongside Moon that can be observable from earth. This astronomical event happens once in 1000 years. Know when, where and how to observe this phenomenon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X