ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಹುದ್ದೆಗೆ ಮೋದಿ ಹೆಸರು ಸೂಚಿಸಿದ್ದ ಜೇಟ್ಲಿ ಎಂಬ ಟ್ರಬಲ್ ಶೂಟರ್

|
Google Oneindia Kannada News

Recommended Video

ಅರುಣ್ ಜೇಟ್ಲಿ ವ್ಯಕ್ತಿಚಿತ್ರ | Oneindia Kannada

ಆಗಸ್ಟ್ 24, 2019. ಆಗಷ್ಟೇ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಭಾರೀ ಬಹುಮತದಿಂದ ಗೆದ್ದು, ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿತ್ತು. ಸ್ವಾತಂತ್ರ್ಯ ನಂತರ ಸುದೀರ್ಘ ಕಾಲ ಕಾಂಗ್ರೆಸ್ ಆಳ್ವಿಕೆ ಕಂಡ ದೇಶದಲ್ಲಿ ಅಧಿಕಾರ ರಾಜಕಾರಣಕ್ಕೆ ಬಿಜೆಪಿಯನ್ನು ಜನ ಮತ್ತೊಮ್ಮೆ ಆಯ್ಕೆ ಮಾಡಿದ್ದರು. ಪ್ರಧಾನಿ ಮೋದಿ ನೇತೃತ್ವದ ಸರಕಾರಕ್ಕೆ ಜನ ಮತ್ತೊಮ್ಮೆ ಜನಾದೇಶ ನೀಡಿದ್ದರು. ಸತತವಾಗಿ ಎರಡನೇ ಬಾರಿಗೆ ಕೇಂದ್ರದ ಅಧಿಕಾರ ಹಿಡಿಯುವ ಅಪರೂಪದ ಅವಕಾಶ ಇದಾಗಿದ್ದರಿಂದ ಬಿಜೆಪಿ ನಾಯಕರಿಗೆ ಇದು ಸಹಜವಾಗಿಯೇ ಸಂಭ್ರಮಿಸುವ ಕಾಲವಾಗಿತ್ತು. ಅವತ್ತಿನ ಗೆಲುವಿಗೆ ಕಾರಣರಾದ ಕೇಸರಿ ಪಕ್ಷದ ಧುರೀಣರು ಸಂಭ್ರಮಾಚರಣೆಯಲ್ಲಿರುವಾಗಲೇ ಅದೊಂದು ಪತ್ರ ಅವರ ಕೈಸೇರಿತ್ತು ಮತ್ತು ದಂಗುಬಡಿಯುವಂತೆ ಮಾಡಿತ್ತು.

ಅರುಣ್ ಜೇಟ್ಲಿ ಬದುಕಿನ ಅಪರೂಪದ ಚಿತ್ರಗಳು

'2019 ರ ಮೋದಿ ಸಂಪುಟದಲ್ಲಿ ನಾನು ಮಂತ್ರಿಯಾಗುವುದಿಲ್ಲ. ಅನಾರೋಗ್ಯದಿಂದ ಬಳಲುತ್ತಿರುವ ನನಗೆ ವಿಶ್ರಾಂತಿಯ ಅಗತ್ಯವಿದೆ' ಎಂಬ ಒಕ್ಕಣೆಯ ಆ ಪತ್ರ ಬರೆದಿದ್ದು ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ. ಈ ಪತ್ರ ಬಂದ ದಿನ ರಾತ್ರಿಯೇ ಮೋದಿ ಅವರು ಜೇಟ್ಲಿ ಅವರ ನಿವಾಸಕ್ಕೆ ತೆರಳಿದ್ದರು. ಜೇಟ್ಲಿ ಅವರ ಮನವೊಲಿಸುವ ಪ್ರಯತ್ನ ನಡೆಸಿದ್ದರು. ಆದರೆ ಜೇಟ್ಲಿ, ಮತ್ತವರ ಕುಟುಂಬ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.

LIVE: ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ವಿಧಿವಶ LIVE: ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ವಿಧಿವಶ

ಹಾಗೆ ಅರುಣ್ ಜೇಟ್ಲಿ ಎಂಬ ರಾಜಕಾರಣಿ ಕೊನೆಯ ಕಾಲದಲ್ಲಿ ಅಧಿಕಾರದಿಂದ ದೂರ ಉಳಿದರು. ಅವರು ಹಣಕಾಸು ಇಲಾಖೆ ಹೊಣೆ ಹೊತ್ತಾದಗಲೇ ಅವರ ಅನಾರೋಗ್ಯದ ಕುರಿತು ವರದಿಗಳು ಬಂದಿದ್ದವು.

ಬೆಳದು ಬಂದ ಹಾದಿ:
ಬಿಜೆಪಿ ಪಕ್ಷದ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಿನ್ನೆಲೆಯಿಂದ ಬಂದವರು ಅರುಣ್ ಜೇಟ್ಲಿ . ಹಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಕನಸನ್ನು ನನಸು ಮಾಡಿದ ರಾಜಕೀಯ ನಿಸ್ಸೀಮರು. ಪಕ್ಷಕ್ಕೆ ಅವರು ನೀಡಿದ ಕೊಡುಗೆ ಅಪಾರ.

ಎರಡು ದಶಕಗಳಿಂದ ಬೇರೆ ಬೇರೆ ಸರ್ಕಾರಗಳು ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಯನ್ನು ಜಾರಿಗೆ ತರಲು ಹರಸಾಹಸ ಪಟ್ಟರೂ ಸಾಧ್ಯವಾಗಿರಲಿಲ್ಲ. ಆದರೆ ಅದನ್ನು ಸಾಧ್ಯವಾಗಿಸಿದ್ದು ಇದೇ ಜೇಟ್ಲಿ. ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ತಲೆದೋರಿದರೆ, ಯಾವುದೇ ರಾಜ್ಯದಲ್ಲಿ ಚುನಾವಣೆಗೆ ಕಾರ್ಯತಂತ್ರ ರೂಪಿಸಬೇಕಾದರೆ, ಕಾನೂನು ಸಲಹೆಯ ಅಗತ್ಯವಿದ್ದ ಸಮಯದಲ್ಲಿ ನೆನಪಾಗುತ್ತಿದ್ದವರು ಅರುಣ್ ಜೇಟ್ಲಿ.

Breaking News ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಇನ್ನಿಲ್ಲ Breaking News ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಇನ್ನಿಲ್ಲ

ಅಟಲ್ ಬಿಹಾರಿ ವಾಜಪೇಯಿ, ಪ್ರಣಬ್ ಮುಖರ್ಜಿ ಮತ್ತು ಬರಾಕ್ ಒಬಾಮಾ ಅವರು ತಮ್ಮ ಆದರ್ಶ ರಾಜಕಾರಣಿಗಳು ಎನ್ನುತ್ತಿದ್ದ ಜೇಟ್ಲಿ, ಅಮಿತ್ ಶಾ ಮತ್ತು ನರೇಂದ್ರ ಮೋದಿ ಅವರೊಂದಿಗೂ ಆತ್ಮೀಯ ಒಡನಾಟವನ್ನಿಟ್ಟುಕೊಂಡಿದ್ದವರು. ಯಾವುದೇ ಗೌಪ್ಯ ಅಥವಾ ಮಹತ್ವದ ವಿಚಾರವಿದ್ದರೆ ಅರುಣ್ ಜೇಟ್ಲಿ ಅವರಲ್ಲಿ ಹೇಳಿದರೆ ಅಡ್ಡಿಯಿಲ್ಲ ಎಂಬಷ್ಟರ ಮಟ್ಟಿಗೆ ಪಕ್ಷದ ಮುಖಂಡರಲ್ಲಿ ಉತ್ತಮ ಅಭಿಪ್ರಾಯ ಉಳಿಸಿಕೊಂಡಿದ್ದರು.

ತುರ್ತು ಪರಿಸ್ಥಿತಿಯ ದಿನಗಳು

ತುರ್ತು ಪರಿಸ್ಥಿತಿಯ ದಿನಗಳು

ವೃತ್ತಿಯಲ್ಲಿ ವಕೀಲರಾಗಿದ್ದ ಜೇಟ್ಲಿ 1977 ರಲ್ಲಿ ಜನಸಂಘದ ಮೂಲಕ ರಾಜಕೀಯಕ್ಕೆ ಅಂಬೆಗಾಲಿಟ್ಟವರು. ಎಬಿವಿಪಿಯ ದೆಹಲಿ ಘಟಕದ ಅಧ್ಯಕ್ಷರಾಗಿದ್ದ ಅರುಣ್ ಜೇಟ್ಲಿ ಅವರಿಗೆ ಸಂಘ ಪರಿವಾರದ ಸಂಪರ್ಕ ನಿಕಟವಾಗಿಯೇ ಇತ್ತು. 1975ರಲ್ಲಿ ತುರ್ತು ಪರಿಸ್ಥಿಯ ವಿರುದ್ಧ ಹೋರಾಡಿದ್ದ ಅರುಣ್ ಜೇಟ್ಲಿ ರಾಜ್ ನಾರಾಯಣ್, ಜಯಪ್ರಕಾಶ್ ನಾರಾಯಣ್ ಅವರ ಸಂಪರ್ಕಕ್ಕೂ ಬಂದಿದ್ದರು. ಜೈಲುವಾಸವನ್ನೂ ಅನುಭವಿಸಿದ್ದರು. ಸುಪ್ರೀಂ ಕೋರ್ಟ್ ವಕೀಲರಾಗಿದ್ದ ಜೇಟ್ಲಿ ಹಲವು ಮಹತ್ವದ ಪ್ರಕರಣಗಳಲ್ಲಿ ವಾದ ಮಂಡಿಸಿದ್ದರು. ಶರದ್ ಯಾದವ್, ಎಲ್.ಕೆ.ಅಡ್ವಾಣಿ, ಮಾಧವ್ ರಾವ್ ಸಿಂದಿಯಾ ಸೇರಿದಂತೆ ಹಲವು ಪ್ರಮುಖ ರಾಜಕಾರಣಿಗಳ ಪರ ಜೇಟ್ಲಿ ಬೇರೆ ಬೇರೆ ಪ್ರಕರಣಗಳಲ್ಲಿ ವಾದ ಮಂಡಿಸಿದ್ದರು.

ಜೇಟ್ಲಿ ಬೆನ್ನಿಗೆ ಬಿದ್ದ ಅಪರೂಪದ ಕಾಯಿಲೆ

ಜೇಟ್ಲಿ ಬೆನ್ನಿಗೆ ಬಿದ್ದ ಅಪರೂಪದ ಕಾಯಿಲೆ

ಚಾರ್ಟರ್ಡ್ ಅಕೌಂಟಂಟ್ ಆಗುವ ಕನಸು ಕಂಡಿದ್ದ ಜೇಟ್ಲಿ ನಂತರ ವಕೀಲರಾಗಿ, ರಾಜಕಾರಣಿಯಾಗಿ, ರಾಷ್ಟ್ರಮಟ್ಟದ ರಾಜಕೀಯದಲ್ಲಿ ಸಾಕಷ್ಟು ಕಾಲ ಆಯಕಟ್ಟಿನ ಹುದ್ದೆಗಳಲ್ಲಿ ಕೆಲಸ ಮಾಡಿದ್ದರು. ದಶಕಗಳ ಕಾಲ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿಯೂ ಕೆಲಸ ನಿರ್ವಹಿಸಿದ್ದರು. ಅದರೆ 2018 ರಲ್ಲಿ ಮೂತ್ರಪಿಂಡ ಕಸಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅರುಣ್ ಜೇಟ್ಲಿ ಅವರು ನಂತರ ಹಲವು ಕಾಲ ರಾಜಕೀಯದಿಂದ ದೂರವೇ ಉಳಿದರು. 2019 ರ ಜನವರಿಯಲ್ಲಿ ಸಾಫ್ಟ್ ಟಿಶ್ಯೂ ಸರ್ಕೊಮಾ ಎಂಬ ಅಪರೂಪದ ಕಾಯಿಲೆಗೆ ಜೇಟ್ಲಿ ತುತ್ತಾಗಿರುವುದು ತಿಳಿದುಬಂತು. ಅದಕ್ಕಾಗಿ ಹಲವು ದಿನ ಅವರು ನ್ಯೂಯಾರ್ಕಿನಲ್ಲಿ ಚಿಕಿತ್ಸೆ ಪಡೆದರು. ಆದರೆ ಅದಾದ ನಂತರ ಅವರು ರಾಜಕೀಯ ಬದುಕಿನಿಂದ ದೂರವೇ ಉಳಿಯಬೇಕಾಯ್ತು.

ಬಾಲ್ಯದ ದಿನಗಳು

ಬಾಲ್ಯದ ದಿನಗಳು

28 ಡಿಸೆಂಬರ್ 1952 ರಲ್ಲಿ ದೆಹಲಿಯಲ್ಲಿ ಜನಿಸಿದ ಅರುಣ್ ಜೇಟ್ಲಿ, ಸೇಂಟ್ ಕ್ಸೇವಿಯರ್ ಶಾಲೆ, ದೆಹಲಿಯಲ್ಲಿ ತಮ್ಮ ಪ್ರಾಥಮಿಕ, ಪ್ರೌಡ ಶಿಕ್ಷಣ ಮುಗಿಸಿದ್ದರು. ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ ಪದವಿ ಮತ್ತು ದೆಹಲಿ ವಿವಿಯ ಫಾಕಲ್ಟಿ ಆಫ್ ಲಾ ದಲ್ಲಿ ಪದವಿ ಪಡೆದರು. ಜೇಟ್ಲಿ ಅವರದ್ದು ಪಂಜಾಬಿ ಬ್ರಾಹ್ಮಣ ಕುಟುಂಬ. 1947 ದೇಶ ವಿಭಜನೆಯಾದಾಗ ಲಾಹೋರ್ ನಿಂದ ಭಾರತಕ್ಕೆ ಬಂದ ಕುಟುಂಬ ನಂತರ ಇಲ್ಲಿಯೇ ಬದುಕು ಕಂಡುಕೊಂಡಿತ್ತು. ತಂದೆ ಮಹಅರಾಜ್ ಕಿಶನ್ ಜೇಟ್ಲಿ, ತಾಯಿ ರತನ್ ಪ್ರಭಾ ಜೇಟ್ಲಿ. ವಿದ್ಯಾರ್ಥಿಯಾಗಿದ್ದಾಗನಿಂದಲೂ ಎಬಿವಿಪಿಯಲ್ಲಿ ಕೆಲಸ ಮಾಡಿದ್ದ ಜೇಟ್ಲಿ ಭಾರತೀಯ ಜನಸಂಘ, ನಂತರ ಜನತಾ ಪಾರ್ಟಿಯಲ್ಲಿ ಕೆಲಸ ಮಾಡಿದರು. ಜನಸಂಘ ಬಿಜೆಪಿಯಾಗಿ ಬದಲಾದ ನಂತರ ತಮ್ಮ ಬಿಜೆಪಿಯಲ್ಲೇ ಮುಂದುವರಿದರು.

ರಾಜಕೀಯ ಬದುಕಿನ ಪ್ರಮುಖ ಘಟ್ಟ

ರಾಜಕೀಯ ಬದುಕಿನ ಪ್ರಮುಖ ಘಟ್ಟ

1980ರಲ್ಲಿ ಬಿಜೆಪಿ ಯು ಘಟಕದ ಅಧ್ಯಕ್ಷರಾಗುವ ಮೂಲಕ ಪಕ್ಷದ ಆಯಕಟ್ಟಿನ ಹುದ್ದೆ ಪಡೆದ ಜೇಟ್ಲಿ, ನಂತರ 1991 ರಲ್ಲಿ ಮೊದಲ ಬಾರಿಗೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದರು. 1999 ಬಿಜೆಪಿ ವಕ್ತಾರ, ನಂತರ ಮಾಹಿತಿ ಮತ್ತು ಪ್ರಸಾರ ಖಕಾತೆಯ ರಾಜ್ಯ ಸಚಿವ ರಾಗಿ ವಾಜಪೇಯಿ ಸರ್ಕಾರದಲ್ಲಿ ಕಾರ್ಯ ನಿರ್ವಹಿಸಿದರು.

2000 ನೇ ಇಸವಿಯಲ್ಲಿ ರಾಮ್ ಜೇಠ್ಮಲಾನಿ ಅವರ ರಾಜೀನಾಮೆಯ ನಂತರ ಅವರನ್ನು ಕಾನೂನು, ನ್ಯಾಯ ಇಲಾಖೆ ಸಚಿವರನ್ನಾಗಿ ನೇಮಿಸಲಾಯಿತು. ಇದು ಜೇಟ್ಲಿ ಅವರ ರಾಜಕೀಯ ಬದುಕಿನ ಪ್ರಮುಖ ಘಟ್ಟವಾಯಿತು.

2002 ರಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ವಕ್ತಾರರಾಗಿ ಜೇಟ್ಲಿ ಕಾರ್ಯ ನಿರ್ವಹಿಸಿದರು.

ಅಮರೀಂದರ್ ವಿರುದ್ಧ ಸೋಲು

ಅಮರೀಂದರ್ ವಿರುದ್ಧ ಸೋಲು

2009 ರಲ್ಲಿ ರಾಜ್ಯಸಭೆಯ ವಿರೋಧಪಕ್ಷದ ನಾಯಕರಾದರು. 2014 ರಲ್ಲಿ ಕಾಂಗ್ರೆಸ್ ನ ಕ್ಯಾ.ಅಮರೀಂದರ್ ಸಿಂಗ್ ಅವರ ವಿರುದ್ಧ ಅಮೃತಸರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡರು. ಆದರೆ ಎನ್ ಡಿಎ ಸರ್ಕಾರ ಪೂರ್ಣ ಬಹುಮತದಿಂದ ಅಧಿಕಾರಕಕೆ ಬಂತು. ಅವರನ್ನು ಸಂಪುಟದಿಂದ ಕೈಬಿಡಲು ಇಷ್ಟವಿಲ್ಲದ ಮೋದಿ ಸರ್ಕಾರ, ಅವರನ್ನು ವಿತ್ತ ಸಚಿವರನ್ನಾಗಿ ನೇಮಿಸಿತು. ಗುಜರಾತಿನಿಂದ ರಾಜ್ಯಸಭೆಗೆ ಆಯ್ಕೆ ಮಾಡಿತು. ರಾಜ್ಯಸಭೆಯ ಮುಖ್ಯಸ್ಥರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.

ರಕ್ಷಣಾ ಸಚಿವರಾಗಿ...

ರಕ್ಷಣಾ ಸಚಿವರಾಗಿ...

2017 ರಲ್ಲಿ ಗೋವಾ ಮುಖ್ಯಮಂತ್ರಿಯಾಗಿ ಆಗಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ನೇಮಕವಾದ ನಂತರ ರಕ್ಷಣಾ ಸಚಿವರನ್ನಾಗಿಯೂ ಅರುಣ್ ಜೇಟ್ಲಿ ಅವರನ್ನು ನೇಮಿಸಲಾಗಿತ್ತು. ಹೀಗೆ ಯಾವ ಖಾತೆಯನ್ನು ಕೊಟ್ಟರೂ ಅದನ್ನು ಸಮರ್ಥವಾಗಿ ನಿಭಾಯಿಸಿ, ಬಿಜೆಪಿಯ ಅನಿವಾರ್ಯ ಸದಸ್ಯರ ಪಟ್ಟಿಯಲ್ಲಿ ಹೆಸರು ಪಡೆದಿದ್ದವರು ಅರುಣ್ ಜೇಟ್ಲಿ.

ವೈಯಕ್ತಿಕ ಬದುಕು

ವೈಯಕ್ತಿಕ ಬದುಕು

ಅತ್ಯುತ್ತಮ ಲೇಖಕರಾಗಿ, ಕ್ರೀಡಾ ಪ್ರೇಮಿಯಾಗಿ, ವಕೀಲರಾಗಿ ಅವರು ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಮೇ 24, 1982 ರಲ್ಲಿ ಸಂಗೀತಾ ಎಂಬುವವರನ್ನು ಮದುವೆಯಾದ ಅರುಣ್ ಜೇಟ್ಲಿ ಅವರಿಗೆ ರೋಹನ್ ಮತ್ತು ಸೋನಾಲಿ ಎಂಬ ಮಕ್ಕಳಿದ್ದಾರೆ. ಇಬ್ಬರೂ ವಕೀಲರು ಎಂಬುದು ವಿಶೇಷ. ಸಂಗೀತಾ ಜೇಟ್ಲಿ ಅವರು ಜಮ್ಮು ಮತ್ತು ಕಾಶ್ಮೀರದ ಮಾಜಿ ಹಣಕಾಸು ಸಚಿವ ದಿ. ಗಿರ್ಧಾರಿ ಲಾಲ್ ದೋಗ್ರಾ ಅವರ ಪುತ್ರಿ.

ಪ್ರಧಾನಿ ಹುದ್ದೆಗೆ ಮೋದಿ ಹೆಸರು ಸೂಚಿಸಿದ್ದೇ ಜೇಟ್ಲಿ!

ಪ್ರಧಾನಿ ಹುದ್ದೆಗೆ ಮೋದಿ ಹೆಸರು ಸೂಚಿಸಿದ್ದೇ ಜೇಟ್ಲಿ!

ಗುಜರಾತಿನಲ್ಲಿ 2002 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ, 2004 ರಲ್ಲಿ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮುವಲ್ಲಿ ಅರುಣ್ ಜೇಟ್ಲಿ ಅವರ ಕಾರ್ಯತಂತ್ರವಿದೆ.

ಈ ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ಪ್ರಧಾನಿ ಯಾರು ಎಂಬ ಪ್ರಶ್ನೆ ಎದ್ದಾಗ, ನರೇಂದ್ರ ಮೋದಿ ಅವರ ಹೆಸರನ್ನು ಪ್ರಪ್ರಥಮ ಬಾರಿಗೆ ಸೂಚಿಸಿದ್ದೇ ಅರುಣ್ ಜೇಟ್ಲಿ!

English summary
Former Finance Minister, Rajya Sabha Member from BJP Arun Jaitley Profile,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X