ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಲ್ಲಿ ಗದ್ದುಗೆ ಏರಿದ್ದ ಕಪೂರ್ತಲದ ಕುವರಿ: ಶೀಲಾ ದೀಕ್ಷಿತ್ ಅಪರೂಪದ ವ್ಯಕ್ತಿಚಿತ್ರ

|
Google Oneindia Kannada News

ನವದೆಹಲಿ, ಜುಲೈ 20: ಸಂಸದೆ, ಮೂರು ಬಾರಿ ಸಿಎಂ, ರಾಜ್ಯಪಾಲೆ, ಪಕ್ಷದ ರಾಜ್ಯಾಧ್ಯಕ್ಷೆ, ಹಲವು ವಿವಾದಗಳನ್ನು ಎದುರಿಸಿದರೂ ರಾಜಕೀಯದಲ್ಲಿ ಸಕ್ರಿಯವಾಗಿದ್ದ ಕಾಂಗ್ರೆಸ್ಸಿನ ಹಿರಿತಲೆ ಶೀಲಾ ದೀಕ್ಷಿತ್ ಇನ್ನಿಲ್ಲ.

ದೀರ್ಘಕಾಲದಿಂದ ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶೀಲಾ ದೀಕ್ಷಿತ್(81)ಗೆ 2019ರ ಜುಲೈ 19ರಂದು ಎದೆನೋವು ಕಾಣಿಸಿದ್ದರಿಂದ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ತೊಂದರೆಯೂ ಕಾಣಿಸಿದ್ದರಿಂದ ವೆಂಟಿಲೇಟರ್ ಅಳವಡಿಸಿ, ಚಿಕಿತ್ಸೆ ನೀಡಲಾಗಿತ್ತು. ಆದರೆ, ಜುಲೈ 20, 2019ರ ಮಧ್ಯಾಹ್ನ 3.30ರ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ನಿಧನದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ನಿಧನ

ಶೀಲಾ ದೀಕ್ಷಿತ್ ಅವರನ್ನು ಮತ್ತೊಮ್ಮೆ ಸಕ್ರಿಯ ರಾಜಕೀಯಕ್ಕೆ ಕರೆ ತಂದು ದೆಹಲಿ ಕಾಂಗ್ರೆಸ್ ಅಧ್ಯಕ್ಷೆಯಾಗಿ ನೇಮಿಸಲಾಗಿತ್ತು. ಆದರೆ, ಲೋಕಸಭೆ ಚುನಾವಣೆ 2019ರಲ್ಲಿ ಕಾಂಗ್ರೆಸ್ಸಿಗೆ ಬಲ ತುಂಬಲು ಯತ್ನಿಸಲಾಗಿತ್ತು. ಆದರೆ, ಆಮ್ ಆದ್ಮಿ ಪಕ್ಷದ ಜೊತೆಗಿನ ಮೈತ್ರಿ ಭಿನ್ನಾಭಿಪ್ರಾಯದಿಂದ ದೆಹಲಿಯಲ್ಲಿ ಕಾಂಗ್ರೆಸ್ ಎಲ್ಲಾ 7 ಕ್ಷೇತ್ರಗಳಲ್ಲಿ ಸೋಲು ಅನುಭವಿಸಿತ್ತು. ಶೀಲಾ ಅವರ ರಾಜಕೀಯ, ವೈಯಕ್ತಿಕ ಬದುಕಿನ ಪ್ರಮುಖ ಘಟನಾವಳಿಗಳು, ಅವರ ವಿರುದ್ಧ ಬಂದಿದ್ದ ಆರೋಪ, ವಿವಾದಗಳ ಸುತ್ತ ಮುಂದು ನೋಟ ಇಲ್ಲಿದೆ...

ರಾಜಕೀಯ ಬದುಕು

ರಾಜಕೀಯ ಬದುಕು

ನೆಹರೂ -ಗಾಂಧಿ ಮನೆತನಕ್ಕೆ ಆಪ್ತರಾಗಿದ್ದ ಶೀಲಾ ಅವರು ದೆಹಲಿಯಲ್ಲಿ ಕಾಂಗ್ರೆಸ್ ಆಡಳಿತ ದಶಕಗಳ ಕಾಲ ನಡೆಯುವಂತೆ ನೋಡಿಕೊಂಡು ಜನಪ್ರಿಯತೆ ಗಳಿಸಿದವರು. ಶೀಲಾ ದೀಕ್ಷಿತ್ ಅವರು 1984 ಮತ್ತು 1989 ಅವಧಿಯಲ್ಲಿ ಉತ್ತರಪ್ರದೇಶದ ಕನೌಜ್ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ನಂತರ 1998 ರಿಂದ 2013ರವರೆಗೆ ಮೂರು ಬಾರಿ ದೆಹಲಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಶೀಲಾ ದೀಕ್ಷಿತ್ ಅವರು ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಭಾರಿ ಸೋಲು ಅನುಭವಿಸಿದ್ದರು. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ತಾವೂ ಹೀನಾಯವಾಗಿ ಸೋತು, ತಮ್ಮ ಪಕ್ಷದ ಸೋಲಿಗೂ ಕಾರಣರಾಗಿದ್ದ ಶೀಲಾ ದೀಕ್ಷಿತ್ ಅವರಿಗೆ ಕೇರಳದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುವ ಉಡುಗೊರೆಯನ್ನು ಕಾಂಗ್ರೆಸ್ ನೀಡಿತ್ತು.

'ನಾನು ಉತ್ತರ ಪ್ರದೇಶದ ಸೊಸೆ, ರಾಜಕೀಯದಲ್ಲಿ ನಿವೃತ್ತಿಗೆ ವಯಸ್ಸಿಲ್ಲ' ಎಂದಿದ್ದ ಶೀಲಾರನ್ನು 2016ರಲ್ಲಿ ಉತ್ತರಪ್ರದೇಶದ ಸಿಎಂ ಅಭ್ಯರ್ಥಿಯಾಗಿ ಬಿಂಬಿಸಿ, ಬ್ರಾಹ್ಮಣ ಮತಗಳನ್ನು ಸೆಳೆಯಲು ಕಾಂಗ್ರೆಸ್ ವಿಫಲ ಯತ್ನ ನಡೆಸಿತ್ತು. ಇದಾದ ಬಳಿಕ, 2019ರ ಲೋಕಸಭೆ ಚುನಾವಣೆಗಾಗಿ ವಿಶೇಷವಾಗಿ ಶೀಲಾ ಅವರನ್ನು ಪುನಃ ದೆಹಲಿ ಅಂಗಳಕ್ಕೆ ಕಾಂಗ್ರೆಸ್ ಹೈ ಕಮಾಂಡ್ ಕರೆಸಿಕೊಂಡಿತ್ತು.

ಅಜಯ್ ಮಾಕೇನ್ ಅವರಿಂದ ತೆರವಾದ ಸ್ಥಾನಕ್ಕೆ ಶೀಲಾ ದೀಕ್ಷಿತ್ ಅವರಿಂದ ತೆರವಾದ ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ(ಡಿಪಿಸಿಸಿ) ಅಧ್ಯಕ್ಷ ಸ್ಥಾನವನ್ನು ಶೀಲಾ ದೀಕ್ಷಿತ್ ಅವರು ಅಲಂಕರಿಸಿದ್ದರು. ಶೀಲಾ ದೀಕ್ಷಿತ್ ಅವರಿಗೆ ಚಾಂದನಿ ಚೌಕ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ನಿರೀಕ್ಷೆಯಿತ್ತು, ಆದರೆ, ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದು ಸೋಲು ಕಂಡಿದ್ದರು. ಈರುಳ್ಳಿ ಬೆಲೆ ಏರಿಕೆ ಬಿಕ್ಕಟ್ಟನ್ನು ಬಳಸಿಕೊಂಡು ಗದ್ದುಗೆಗೇರಿದ್ದ ಶೀಲಾ ಅವರು ಬೆಲೆ ಏರಿಕೆ ಮಿತಿ ಮೀರಿದಾಗ(1 ಕೆಜಿಗೆ 100 ರು ಆದಾಗ ಸರ್ಕಾರ ಪತನ ಎಂಬ ಅಘೋಷಿತ ಮಾತಿದೆ) ಸ್ಥಾನದಿಂದ ಕೆಳಗಿಳಿಯಬೇಕಾಗಿ ಬಂದಿತು.

'ದೆಹಲಿಯ ರೂಪ ಬದಲಿಸಿದ ನಾಯಕಿ'ಗೆ ಗಣ್ಯರ ಶ್ರದ್ಧಾಂಜಲಿ 'ದೆಹಲಿಯ ರೂಪ ಬದಲಿಸಿದ ನಾಯಕಿ'ಗೆ ಗಣ್ಯರ ಶ್ರದ್ಧಾಂಜಲಿ

ಪ್ರಮುಖ ಹುದ್ದೆಗಳು, ಸಾಧನೆಗಳು

ಪ್ರಮುಖ ಹುದ್ದೆಗಳು, ಸಾಧನೆಗಳು

* ಸಂಸದೆಯಾಗಿ 1984 ರಿಂದ 1989
* ವಿಶ್ವಸಂಸ್ಥೆಯ ಮಹಿಳಾ ಸ್ಥಿತಿಗತಿಗಳ ಆಯೋಗ 1984 ರಿಂದ 1989.
* ಕೇಂದ್ರ ಸಚಿವೆ 1986-89, ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವೆ ನಂತರ ಪಿಎಂಒ ರಾಜ್ಯ ಸಚಿವೆ.
* ಅಖಿಲ ಭಾರತ ಇಂದಿರಾಗಾಂಧಿ ಸ್ಮಾರಕ ಟ್ರಸ್ಟ್ ನ ಕಾರ್ಯದರ್ಶಿ
* ದೆಹಲಿಯಲ್ಲಿ ವೃತ್ತಿನಿರತ ಮಹಿಳೆಯರಿಗಾಗಿ ಹಾಸ್ಟೆಲ್ ಸ್ಥಾಪನೆ.
* 2008ರಲ್ಲಿ ಜರ್ನಲಿಸ್ಟ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ ಭಾರತದ ಉತ್ತಮ ಮುಖ್ಯಮಂತ್ರಿ ಎಂದು ಆಯ್ಕೆ.
* 2009ರಲ್ಲಿ ಎನ್ಡಿಟಿವಿಯಿಂದ ವರ್ಷದ ರಾಜಕಾರಣಿ ಎಂದು ಆಯ್ಕೆ.
* 2010ರಲ್ಲಿ ಇಂಡೋ- ಇರಾನ್ ಸಮಾಜ ನೀಡುವ ದಾರಾ ಶಿಕೋವ್ ಪ್ರಶಸ್ತಿ.
* 2013ರಲ್ಲಿ ಅಖಿಲ ಭಾರತ ಲೇಡಿಸ್ ಲೀಗ್ ನಿಂದ ಉತ್ತಮ ಸಮಾಜ ಸೇವೆಗಾಗಿ ದಶಕದ ಸಾಧಕಿ ಪ್ರಶಸ್ತಿ

ಈರುಳ್ಳಿ ಬೆಲೆ ಏರಿಕೆ ಸರ್ಕಾರ ಉರುಳಿಸುತ್ತದೆಯೇ? ಈರುಳ್ಳಿ ಬೆಲೆ ಏರಿಕೆ ಸರ್ಕಾರ ಉರುಳಿಸುತ್ತದೆಯೇ?

ವೈಯಕ್ತಿಕ ಬದುಕು

ವೈಯಕ್ತಿಕ ಬದುಕು

ಪಂಜಾಬ್ ಪ್ರಾಂತ್ಯದ ಖಾತ್ರಿ ಕುಟುಂಬದಲ್ಲಿ ಶೀಲಾ ಕಪೂರ್ ಆಗಿ ಕಪೂರ್ತಲದಲ್ಲಿ 1938ರ ಮಾರ್ಚ್ 31ರಂದು ಜನಿಸಿದರು. ನವದೆಹಲಿಯ ಜೀಸಸ್ ಕಾನ್ವೆಂಟ್, ಮೇರಿ ಸ್ಕೂಲ್ ಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದರು.ದೆಹಲಿ ವಿಶ್ವ ವಿದ್ಯಾಲಯದ ಮಿರಾಂಡಾ ಹೌಸ್ ನಿಂದ ಕಲೆ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.
* ಪಶ್ಚಿಮ ಬಂಗಾಲದ ಮಾಜಿ ರಾಜ್ಯಪಾಲರಾದ ಉಮಾಶಂಕರ್ ಅವರ ಪುತ್ರ ಐಎಎಸ್ ಅಧಿಕಾರಿ ವಿನೋದ್ ದೀಕ್ಷಿತ್ ಅವರನ್ನು ಶೀಲಾ ಕಪೂರ್ ಅವರು ವರಿಸಿದರು.
* ದೀಕ್ಷಿತ್ ದಂಪತಿಗೆ ಇಬ್ಬರು ಮಕ್ಕಳು. ಪುತ್ರ ಸಂದೀಪ್ ದೀಕ್ಷಿತ್ 15ನೇ ಲೋಕಸಭಾ ಸದಸ್ಯರಾಗಿದ್ದರು. ಪುತ್ರಿ ಲತಿಕಾ ಸಯ್ಯದ್.

2012ರಿಂದ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿ ಬಳಲುತ್ತಿದ್ದ ಶೀಲಾ, ಅಂಜಿಯೋಪಾಸ್ಟಿಗೆ ಒಳಗಾಗಿದ್ದರು, ಫೋರ್ಟಿಸ್ ಎಸ್ಕಾರ್ಟ್ ಹಾರ್ಟ್ ಇನ್ಸಿಟ್ಯೂಟ್ ನಲ್ಲಿ ಯಾವಾಗಲೂ ಚಿಕಿತ್ಸೆ ಪಡೆಯುತ್ತಿದ್ದರು. 2018ರಲ್ಲಿ ಫ್ರಾನ್ಸಿನ ಲಿಲೆ ವಿವಿ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. 2019ರ ಜುಲೈ 19ರಂದು ಎದೆನೋವು ಕಾಣಿಸಿದ್ದರಿಂದ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ತೊಂದರೆಯೂ ಕಾಣಿಸಿದ್ದರಿಂದ ವೆಂಟಿಲೇಟರ್ ಅಳವಡಿಸಿ, ಚಿಕಿತ್ಸೆ ನೀಡಲಾಗಿತ್ತು. ಆದರೆ, ಜುಲೈ 20, 2019ರ ಮಧ್ಯಾಹ್ನ 3.30ರ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ವಿವಾದ, ಆರೋಪಗಳು

ವಿವಾದ, ಆರೋಪಗಳು

* 2009ರಲ್ಲಿ ರಾಜೀವ್ ರತನ್ ಆವಾಸ್ ಯೋಜನೆಯಡಿ ಬಂದ ಅನುದಾನದಲ್ಲಿ 3.5 ಕೋಟಿ ರು ಅಕ್ರಮವಾಗಿದೆ ಎಂದು ಶೀಲಾ ವಿರುದ್ಧ ಬಿಜೆಪಿ ಕಾರ್ಯಕರ್ತೆ ಸುನಿತಾ ಭಾರದ್ವಾಜ್ ಅವರು ದೆಹಲಿ ಲೋಕಾಯುಕ್ತರಿಗೆ ದೂರು ನೀಡಿದ್ದರು. ನಂತರ ಪ್ರಕರಣದಿಂದ ಶೀಲಾಗೆ ಖುಲಾಸೆ ಸಿಕ್ಕಿತ್ತು.
* ಜೆಸ್ಸಿಕಾ ಲಾಲ್ ಕೊಲೆ ಅಪರಾಧಿ ಮನು ಶರ್ಮಗೆ ಪೆರೋಲ್ ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ಶೀಲಾ ದೀಕ್ಷಿತ್ ಅವರು ಮಾಧ್ಯಮಗಳಿಂದ ಛೀಮಾರಿ ಹಾಕಿಸಿಕೊಂಡಿದ್ದರು.
* 2010ರ ಕಾಮನ್ ವೆಲ್ತ್ ಗೇಮ್ಸ್ ಭ್ರಷ್ಟಾಚಾರ ಹಗರಣದಲ್ಲಿ ಶೀಲಾ ದೀಕ್ಷಿತ್ ಹೆಸರನ್ನು ಸಿಎಜಿ ವರದಿಯಲ್ಲೂ ಉಲ್ಲೇಖಿಸಲಾಗಿತ್ತು. ಕ್ರೀಡಾಗ್ರಾಮ ನಿರ್ಮಾಣಕ್ಕೆ ಬಳಸಿದ ಬೀದಿದೀಪಕ್ಕಾಗಿ ಆಮದು ಸಾಮಾಗ್ರಿಗಳನ್ನು ಖರೀದಿಸುವಲ್ಲಿ ಅವ್ಯವಹಾರ ಸಾಬೀತಾಗಿತ್ತು. ಆದರೆ, ಅಂದಿನ ಸಿಎಂ ಕಾರ್ಯಾಲಯ ಆರೋಪವನ್ನು ಅಲ್ಲಗೆಳೆದಿತ್ತು. ಸುರೇಶ್ ಕಲ್ಮಾಡಿ ಪ್ರಮುಖ ಆರೋಪಿಯಾಗಿ ಎಲ್ಲೆಡೆ ಕಾಣಿಸಿಕೊಂಡರು.
* 2008ರ ವಿಧಾನಸಭೆ ಚುನಾವಣೆ ವೇಳೆ ಸರ್ಕಾರಿ ಅನುದಾನವನ್ನು ಅಕ್ರಮವಾಗಿ ಬಳಸಿದ ಆರೋಪದ ಮೇಲೆ 2013ರಲ್ಲಿ ಒಬುಂಡ್ಸನ್ ಕೋರ್ಟಿನಿಂದ ಶೀಲಾ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
* 2014ರಲ್ಲಿ ಶೀಲಾ ದೀಕ್ಷಿತ್ ಐಷಾರಾಮಿ ಬದುಕಿನ ಬಗ್ಗೆ ದೂರು ಕೇಳೀ ಬಂದಿತ್ತು. ಅವರ ಮನೆಯಲ್ಲಿ ಬರೋಬ್ಬರಿ 31 ಎಸಿಗಳಿದ್ದವು. ಜೊತೆಗ 15 ಡೆಸರ್ಟ್ ಕೂಲರ್ಸ್, 25 ಹೀಟರ್ ಗಳಿದ್ದವು. ಈ ಭಾರೀ ಪ್ರಮಾಣದ ಎಲೆಕ್ಟ್ರಾನಿಕ್ ಉಪಕರಣಗಳ ಜೊತೆಗೆ ಟಿ.ವಿ, ಫ್ರಿಡ್ಜ್ ಸೇರಿದಂತೆ ಇನ್ನಿತರೆ ಪಕರಣಗಳನ್ನ ಬಳಸಿ ಶೀಲಾ ದೀಕ್ಷಿತ್ ಒಟ್ಟು 16.81.119 ಲಕ್ಷ ರೂಪಾಯಿ ಬಿಲ್ ಮಾಡಿದ್ದಾರೆ ಎಂದು
ಆರ್ ಟಿಐ ಕಾರ್ಯಕರ್ತ ಸುಭಾಷ್ ಚಂದ್ರ ಅಗರವಾಲ್ ಆರೋಪಿಸಿದ್ದರು.

ಮಾಜಿ ಸಿಎಂ ಅಧಿಕೃತ ಮನೆಯಲ್ಲಿತ್ತು 31 ಎಸಿ ಮಾಜಿ ಸಿಎಂ ಅಧಿಕೃತ ಮನೆಯಲ್ಲಿತ್ತು 31 ಎಸಿ

English summary
The Longest serving CM of Delhi Chief Minister Sheila Dikshit profile is here. She passed away on July 20th 2019, at around 3:30pm following cardiac arrest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X