ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ದಲಿತರನ್ನೇ ಸಿಎಂ ಮಾಡುತ್ತೇನೆ ಎಂಬ ಆತ್ಮವಂಚನೆಯ ಸಂಕೇತ'

By ಡಾ. ಹೆಚ್.ಸಿ.ಮಹದೇವಪ್ಪ
|
Google Oneindia Kannada News

'ಕಾಲ ಕೂಡಿ ಬಂದರೆ ಮುಂದಿನ ಬಾರಿ ದಲಿತರನ್ನೇ ಮುಖ್ಯಮಂತ್ರಿ ಮಾಡಲು ತಯಾರಿದ್ದೇವೆ' ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿರುವುದು ಆತ್ಮ ವಂಚನೆಯ ಸಂಕೇತವಾಗಿದೆ.
ಚುನಾವಣೆ ಬಂದಾಗ ಪರಿಶಿಷ್ಟ ಜಾತಿಯ ಸಮುದಾಯಗಳಲ್ಲಿ ಆಸೆ ಹುಟ್ಟಿಸಲು ಆಡುವ ಈ ಮಾತುಗಳು ಮತಗಳನ್ನು ಒಡೆಯುವ ತಂತ್ರವಷ್ಟೇ. ಪ್ರಸ್ತುತ ಇರುವ ಜೆಡಿಎಸ್ ಪಕ್ಷದಲ್ಲಿ ನಿಜಕ್ಕೂ ಇರಬೇಕಾದ ಸಾಮಾಜಿಕ ನ್ಯಾಯ ಪ್ರಜ್ಞೆ ಇಲ್ಲ ಎಂಬ ಸ್ಪಷ್ಟತೆಯನ್ನು ನಾವು ಹೊಂದಬೇಕು.

ಅದರಲ್ಲೂ ಕಾಲಕ್ಕೆ ತಕ್ಕಂತೆ ಸೆಕ್ಯುಲರ್ ಮತ್ತು ಕಮ್ಯೂನಲ್ ಆಗುವ ಶಕ್ತಿಯನ್ನು ಹೊಂದಿರುವ ಕುಮಾರಸ್ವಾಮಿ ಅವರ ಮಾತುಗಳ ಬಗ್ಗೆ ಆದಷ್ಟು ಎಚ್ಚರಿಕೆ ಇಂದಲೇ ಇರಬೇಕು. ಇಲ್ಲದೇ ಹೋದರೆ ಈ ಹಿಂದೆ ಹೇಳಿದಂತೆ ನಮಗೆ ಸೈದ್ಧಾಂತಿಕ ಭ್ರಮ ನಿರಸನ ಆಗುವುದಂತೂ ಖಂಡಿತ.

 'ಕೋಮು ಕ್ರಿಮಿ ಸೋಂಬೇರಿಗಳನ್ನು ಸರ್ಕಾರ ನಿಯಂತ್ರಿಸಲಿ' 'ಕೋಮು ಕ್ರಿಮಿ ಸೋಂಬೇರಿಗಳನ್ನು ಸರ್ಕಾರ ನಿಯಂತ್ರಿಸಲಿ'

ಅದೇನೋ ಕಾಣೆ ಇತ್ತೀಚೆಗೆ ಕುಮಾರಸ್ವಾಮಿ ಅವರು ಕೋಮು ಸಂಘರ್ಷಗಳು ಮತ್ತು ಹಿಂದುತ್ವ ಮೂಲಭೂತವಾದಿಗಳ ವಿರುದ್ಧ ಮಾತನಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಆಗಿದ್ದರೂ ಕೂಡಾ ಇಷ್ಟು ದಿನ ಇಲ್ಲದ ಆವೇಶ ಈಗೇಕೆ ಇವರಲ್ಲಿ ಬಂದಿದೆ ಎಂಬ ಗೊಂದಲವೂ ನನ್ನಲ್ಲಿ ಮನೆ ಮಾಡಿದೆ.

 ಕುಮಾರಸ್ವಾಮಿ ಅವರು ಮತ ವಿಭಜನೆಗಾಗಿ ಹಾಗೆ ಮಾತನಾಡುತ್ತಿಲ್ಲ ಎಂದು ನಂಬುತ್ತೇನೆ

ಕುಮಾರಸ್ವಾಮಿ ಅವರು ಮತ ವಿಭಜನೆಗಾಗಿ ಹಾಗೆ ಮಾತನಾಡುತ್ತಿಲ್ಲ ಎಂದು ನಂಬುತ್ತೇನೆ

ಇವರೇನಾದರೂ ಬಿಜೆಪಿಯ ಮಾತು ಕೇಳಿಕೊಂಡು ಸಾಧ್ಯವಾದಷ್ಟು ಅಲ್ಪಸಂಖ್ಯಾತರ ಮತಗಳನ್ನು ಒಡೆಯುತ್ತೇನೆ ಎಂದು ಹೀಗೆ ಮಾತನಾಡುತ್ತಿದ್ದಾರೋ ಅಥವಾ ಸಮಾಜದ ಮೇಲಿನ ನಿಜವಾದ ಕಾಳಜಿಯಿಂದ ಮಾತನಾಡುತ್ತಿದ್ದಾರೋ ಎಂಬುದು ಅಸ್ಪಷ್ಟವಾಗಿದೆ. ಸದ್ಯ ಕುಮಾರಸ್ವಾಮಿ ಅವರು ಮತ ವಿಭಜನೆಗಾಗಿ ಹಾಗೆ ಮಾತನಾಡುತ್ತಿಲ್ಲ ಎಂದು ನಂಬುತ್ತೇನೆ. ಒಂದೆಡೆ ಬಿಜೆಪಿಯ ಧಾರ್ಮಿಕ ವಿಷದ ಬಗ್ಗೆ ಮಾತನಾಡುತ್ತಿರುವ ಕುಮಾರಸ್ವಾಮಿಯವರು ಇನ್ನೊಂದೆಡೆ ಬಸವರಾಜ ಹೊರಟ್ಟಿಯವರು ವಿಧಾನ ಪರಿಷತ್ ಸದಸ್ಯರಾಗಲು ಬಿಜೆಪಿಗೆ ಸೇರಿಕೊಳ್ಳಲು ಅನುಮತಿಸಿದ್ದಾರೆ ಎಂದು ಸ್ವತಃ ಹೊರಟ್ಟಿಯವರೇ ಹೇಳಿದ್ದಾರೆ.

 ದಲಿತ ಸಿಎಂ ಎಂಬ ಪದವು ಚುನಾವಣೆಯಲ್ಲಿ ಮತ ವಿಭಜನೆಗಾಗಿ ಬಳಕೆ ಮಾಡುವ ಪದ

ದಲಿತ ಸಿಎಂ ಎಂಬ ಪದವು ಚುನಾವಣೆಯಲ್ಲಿ ಮತ ವಿಭಜನೆಗಾಗಿ ಬಳಕೆ ಮಾಡುವ ಪದ

ಪರಿಸ್ಥಿತಿ ಹೀಗಿರುವಾಗ ಇವರ ಬಗ್ಗೆ ಆದಷ್ಟು ನಾವು ಎಚ್ಚರದಿಂದ ಇರುವುದೇ ಲೇಸು ಎನಿಸುತ್ತಿದೆ. ಇನ್ನು ಬಿಜೆಪಿ ಮತ್ತು ಜೆಡಿಎಸ್ ವಿಚಾರದಲ್ಲಿ ದಲಿತ ಸಿಎಂ ಎಂಬ ಪದವು ಚುನಾವಣೆಯಲ್ಲಿ ಮತ ವಿಭಜನೆಗಾಗಿ ಬಳಕೆ ಮಾಡುವ ಪದವಾಗಿದ್ದು ದಲಿತ ಸಿಎಂ ವಿಷಯದಲ್ಲಿ ಅವರು ನಂಬಿಕೆಗೆ ಅರ್ಹರಲ್ಲ ಎಂದು ಹೇಳಲು ಬಯಸುತ್ತೇನೆ.

 ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಸಂದರ್ಭ

ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಸಂದರ್ಭ

ಜೊತೆಗೆ, ಭಾರತದ ಸಾರ್ವಜನಿಕ ಬದುಕಿನ ಇತಿಹಾಸದಲ್ಲಿ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವು ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ SCP/STP ಕಾಯ್ದೆ, ಗುತ್ತಿಗೆ ಮೀಸಲಾತಿ, ಬಡ್ತಿ ಮೀಸಲಾತಿಯಂತಹ ಐತಿಹಾಸಿಕ ಕಾಯ್ದೆಗಳನ್ನು ರೂಪಿಸುವ ಮೂಲಕ ದಲಿತರ ಹಿತ ಕಾಯುವ ಕೆಲಸ ಮಾಡಿದ್ದು ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷವು ನಂಬಿಕೆಗೆ ಅರ್ಹವಾದ ಪಕ್ಷವೆಂದು ಅನ್ನಿಸಿದೆ.

 ಜೆಡಿಎಸ್ ಪಕ್ಷಕ್ಕೆ ಅರ್ಥವಾದರೆ ಉತ್ತಮ ಎಂದು ಆಶಿಸುತ್ತೇನೆ

ಜೆಡಿಎಸ್ ಪಕ್ಷಕ್ಕೆ ಅರ್ಥವಾದರೆ ಉತ್ತಮ ಎಂದು ಆಶಿಸುತ್ತೇನೆ

ದಲಿತ ಸಿಎಂ ಎಂಬುದು ದಲಿತರ ಘನತೆ, ಸ್ವಾಭಿಮಾನ ಮತ್ತು ಹಕ್ಕುದಾಯತ್ವದ ಸಂಗತಿಯೇ ಹೊರತು ಚುನಾವಣಾ ಸಂದರ್ಭದಲ್ಲಿ ಆಸೆ ಹುಟ್ಟಿಸಿ ಮತ ವಿಭಜನೆ ಮಾಡುವ ತಂತ್ರ ಮತ್ತು ಅಣಕದ ವಸ್ತುವಲ್ಲ. ಇದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ ಅರ್ಥವಾದರೆ ಉತ್ತಮ ಎಂದು ಆಶಿಸುತ್ತೇನೆ.

English summary
Former CM H D Kumaraswamy Statement On Dalit CM, Dr. H C Mahadevappa Write-Up. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X