• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಬಿಐ ಮಾಜಿ ನಿರ್ದೇಶಕ ಅಶ್ವನಿ ಕುಮಾರ್ ವ್ಯಕ್ತಿಚಿತ್ರ

|
Google Oneindia Kannada News

ನವದೆಹಲಿ, ಅಕ್ಟೋಬರ್ 07: ಸಿಬಿಐ ಮಾಜಿ ನಿರ್ದೇಶಕ ಹಾಗೂ ನಾಗಾಲ್ಯಾಂಡ್, ಮಣಿಪುರದ ಮಾಜಿ ಗವರ್ನರ್ ಅಶ್ವನಿ ಕುಮಾರ್ ವ್ಯಕ್ತಿ ಚಿತ್ರ ಇಲ್ಲಿದೆ.

ಅಶ್ವನಿ ಕುಮಾರ್ ಅವರು 1950 ನವೆಂಬರ್ 15 ರಂದು ಜನಿಸಿದರು.ನಿವೃತ್ತ ಐಪಿಎಸ್ ಅಧಿಕಾರಿಯಾಗಿರುವ ಅಶ್ವಿನ್ ಅವರಿಗೆ 69 ವರ್ಷ ವಯಸ್ಸಾಗಿತ್ತು. ತಮ್ಮ 37 ವರ್ಷದ ವೃತ್ತಿ ಜೀವನದ ಅವಧಿಯಲ್ಲಿ 2006ರಿಂದ

ಇವರ ಅಧಿಕಾರ ಅವಧಿಯಲ್ಲಿ ಹಲವು ಹೈಪ್ರೊಫೈಲ್ ಪ್ರಕರಣದ ತನಿಖೆಯನ್ನೂ ನಡೆಸಲಾಗಿತ್ತು. 2014ರಲ್ಲಿ ನಾಗಾಲ್ಯಾಂಡ್‌ನ ರಾಜ್ಯಪಾಲರಾಗಿಯೂ ನೇಮಕವಾಗಿದ್ದರು.

ಅದಕ್ಕೂ ಮೊದಲು 2013ರಲ್ಲಿ ಅತ್ಯಂತ ಕಡಿಮೆ ಅವಧಿಗೆ ಮಣಿಪುರದ ಗವರ್ನರ್ ಆಗಿದ್ದರು. 2008ರಲ್ಲಿ ಸಿಬಿಐ ನಿರ್ದೇಶಕರಾಗಿ ನೇಮಕಗೊಳ್ಳುವ ಮೊದಲು 2006 ರಿಂದ 2008ರವರೆಗೆ ಹಿಮಾಚಲಪ್ರದೇಶದ ಡಿಜಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ಗುಜರಾತ್‌ನಲ್ಲಿ 2005 ರಲ್ಲಿ ನಡೆದ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಅಂದಿನ ಗುಜರಾತ್ ಗೃಹ ಸಚಿವ ಅಮಿತ್ ಶಾ, ರಾಜಸ್ಥಾನದ ಗೃಹ ಸಚಿವ ಗುಲಾಬ್‌ ಚಂದ್ ಕಟಾರಿಯಾ , ಐಪಿಎಸ್ ಅಧಿಕಾರಿಗಳು ಸೇರಿದಂತೆ 38 ಮಂದಿಯ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಹಾಕಿತ್ತು.

ಅಷ್ಟೇ ಅಲ್ಲ 2010 ರ ಜುಲೈ 25 ರಂದು ಅಮಿತ್ ಶಾ ರನ್ನು ಜೈಲಿಗೆ ಕಳುಹಿಸಲಾಯಿತು. ಈ ಸಮಯದಲ್ಲಿ ಅಶ್ವನಿ ಕುಮಾರ್ ಅವರು ಸಿಬಿಐ ನಿರ್ದೇಶಕರಾಗಿದ್ದರು.2018 ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಅಮಿತ್ ಶಾ ಸೇರಿದಂತೆ ಎಲ್ಲರನ್ನೂ ಖುಲಾಸೆಗೊಳಿಸಿತು.

ಇನ್ನು ಅಶ್ವನಿ ಕುಮಾರ್ ಅವರು ರಾಜೀವ್ ಗಾಂಧಿ ವೈಯಕ್ತಿಕ ಭದ್ರತೆಯನ್ನು ನೋಡಿಕೊಳ್ಳುವ ಅಧಿಕಾರಿ ಕೂಡ ಆಗಿದ್ದರು. ಅವರು 2020ರ ಅಕ್ಟೋಬರ್ 07 ರಂದು ಶಿಮ್ಲಾದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳದಿಂದ ಡೆತ್‌ನೋಟ್ ವಶಕ್ಕೆ ಪಡೆಯಲಾಗಿದೆ.

English summary
Ashwani Kumar (15 November 1950 – 7 October 2020) was an IPS officer who served as Governor of the s Nagaland,and briefly as Governor of Manipur during 2013. He was the DGP of Himachal Pradesh from August 2006 to July 2008 and was the Director of CBI between 2 August 2008 and 30 November 2010.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X