ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗರಹೊಳೆಯಲ್ಲಿ ಹುಲಿಗಳ ಗಣತಿ ಕಾರ್ಯಕ್ಕೆ ಸಜ್ಜಾದ ಅರಣ್ಯ ಸಿಬ್ಬಂದಿ

|
Google Oneindia Kannada News

ಮೈಸೂರು, ಜನವರಿ 22: ಮೈಸೂರು ಮತ್ತು ಕೊಡಗು ಗಡಿಭಾಗಕ್ಕೆ ಹೊಂದಿಕೊಂಡಿರುವ ನಾಗರಹೊಳೆ ಹುಲಿ ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆಯಾ? ಬೃಹತ್ ಸಸ್ಯಾಹಾರಿ ಪ್ರಾಣಿಗಳೆಷ್ಟಿವೆ? ಮಾಂಸಹಾರಿ ಪಕ್ಷಿಗಳು ಮತ್ತು ಅವುಗಳ ಆಹಾರ ಯಾವುದು? ಹೀಗೆ ವಿವಿಧ ಆಯಾಮಗಳಲ್ಲಿ ಹುಲಿ ಗಣತಿ ಆರಂಭವಾಗಲಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿರ್ದೇಶನದಂತೆ ಐದನೇ ರಾಷ್ಟ್ರೀಯ ಹುಲಿ ಗಣತಿಯನ್ನು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಜ.23ರಿಂದ ಫೆ.7ರವರೆಗೆ ಎರಡು ಹಂತದಲ್ಲಿ ಹಮ್ಮಿಕೊಳ್ಳಲಾಗಿದೆ.

 ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಗಣತಿ

ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಗಣತಿ

ಈ ಗಣತಿ ಕಾರ್ಯವು ಹೇಗಿರಲಿದೆ ಎಂದರೆ ಹುಲಿ ಮತ್ತು ಮಾಂಸಾಹಾರಿ ಪಕ್ಷಿಗಳು ಹಾಗೂ ಬೃಹತ್ ಸಸ್ಯಹಾರಿ ಪ್ರಾಣಿಗಳ ಗಣತಿಯನ್ನು ಇದೇ ವೇಳೆ ಮಾಡಲಾಗುತ್ತಿದೆ. ನಾಲ್ಕು ವರ್ಷಕ್ಕೊಮ್ಮೆ ನಡೆಯುವ ನಡೆಯುವ ಗಣತಿ ಇದಾಗಿದ್ದು, ಈ ಬಾರಿ ನಡೆಯುತ್ತಿರುವುದು ಐದನೇ ರಾಷ್ಟ್ರೀಯ ಹುಲಿ ಗಣತಿಯಾಗಿದೆ. ಇದಕ್ಕೆ ಪೂರಕವಾಗಿ 2021ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿಯೇ ಕ್ಯಾಮೆರಾ ಟ್ರ್ಯಾಪಿಂಗ್ ಮೂಲಕ ಹುಲಿ ಗಣತಿ ನಡೆಸಿದ್ದನ್ನು ಸ್ಮರಿಸಬಹುದಾಗಿದೆ. ಇದೀಗ ನಡೆಯುತ್ತಿರುವ ಗಣತಿಯು ಹಿಂದಿನಂತೆ ಇರದೆ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅಂದರೆ ಟ್ರಾನ್ಸಾಕ್ಟ್ ಲೈನ್ ಆಧಾರಿತವಾಗಿ ನಡೆಯಲಿದೆ.

 ಸಮೀಕ್ಷೆಯಲ್ಲಿ ರಣಹದ್ದಿಗೆ ಒತ್ತು

ಸಮೀಕ್ಷೆಯಲ್ಲಿ ರಣಹದ್ದಿಗೆ ಒತ್ತು

ಸದ್ಯ ನಶಿಸುತ್ತಿರುವ ಪಕ್ಷಿ ಸಂತತಿಯಲ್ಲಿ ರಣಹದ್ದು ಸೇರಿರುವುದರಿಂದ ಹಾಗೂ 2019-20ರ ವನ್ಯಜೀವಿ ಸಪ್ತಾಹದ ಧ್ಯೆಯವಾಗಿದ್ದ ರಣಹದ್ದುಗಳ ಸಂರಕ್ಷಣೆ ಕುರಿತ ಯೋಜನೆಗೆ ಸಂಬಂಧಿಸಿದಂತೆ ಒತ್ತು ನೀಡಿ, ಈ ಬಾರಿಯ ಹುಲಿ ಗಣತಿಯಲ್ಲಿ ಸಸ್ಯಹಾರಿ ಪ್ರಾಣಿಗಳು ಹಾಗೂ ಸಸ್ಯ ಪ್ರಭೇದಗಳ ಸಮೀಕ್ಷೆಯಲ್ಲಿ ರಣಹದ್ದುಗಳು ಹಾಗೂ ಮಾಂಸಹಾರಿ ಪಕ್ಷಿ ಪ್ರಭೇದಗಳ ಮಾಹಿತಿಯನ್ನೂ ಕೂಡ ಸಂಗ್ರಹಿಸುತ್ತಿರುವುದಲ್ಲದೆ, ಮಾಂಸಹಾರಿ ಪ್ರಾಣಿ, ಪಕ್ಷಿಗಳ ಆಹಾರದ ಕುರಿತಾಗಿಯೂ ಗಣತಿಯನ್ನು ನಡೆಸಲಾಗುತ್ತದೆ.

ಗಣತಿಯ ವಿಶೇಷತೆಗಳನ್ನು ನೋಡುವುದಾದರೆ, ಇದೇ ಮೊದಲ ಬಾರಿಗೆ ಪೆನ್-ಪೇಪರ್ ಬಳಸದೆ ಎಂ-ಸ್ಟ್ರೈಪ್ಸ್ ಎಕಾಲಾಜಿಕಲ್ ಆ್ಯಪ್ ಬಳಸಿ ಜ.23 ರಿಂದ 25ರವರೆಗೆ ಮೊದಲ ಹಂತದಲ್ಲಿ ನಾಗರಹೊಳೆ ಉದ್ಯಾನದ ಎಲ್ಲ 91 ಬೀಟ್‌ಗಳಲ್ಲೂ ಸಿಬ್ಬಂದಿ ದಿನಕ್ಕೆ 5 ಕಿ.ಮೀನಂತೆ ಮೂರು ದಿನಗಳ ಕಾಲ 15 ಕಿ.ಮೀ ಕಾಲ್ನಡಿಗೆಯಲ್ಲಿ ಸಂಚರಿಸಿ. ಅಲ್ಲಿರುವ ಮಾಂಸಹಾರಿ ಪ್ರಾಣಿಗಳು ಹಾಗೂ ಬೃಹತ್ ಸಸ್ಯಹಾರಿ ಪ್ರಾಣಿಗಳನ್ನು ವೀಕ್ಷಿಸಿ, ಅವುಗಳ ಹೆಜ್ಜೆ, ಮಲ-ಮೂತ್ರ, ಧ್ವನಿ, ಗಡಿ ಗುರುತಿಸುವಿಕೆ, ಮರಗಳನ್ನು ಪರಚಿರುವ ಗುರುತನ್ನು ಪತ್ತೆಹಚ್ಚಿ ಆ್ಯಪ್‌ನಲ್ಲಿ ದಾಖಲಿಸಲಾಗುತ್ತದೆ.

 ಎಂ-ಸ್ಟ್ರೈಪ್ಸ್ ಎಕೋಲಾಜಿಕಲ್ ಆ್ಯಪ್ ಬಳಕೆ

ಎಂ-ಸ್ಟ್ರೈಪ್ಸ್ ಎಕೋಲಾಜಿಕಲ್ ಆ್ಯಪ್ ಬಳಕೆ

ಆ ನಂತರ ಜ.27ರಿಂದ ಫೆ.7ರವರೆಗೆ ಎರಡು ಬ್ಲಾಕ್‌ಗಳಲ್ಲಿ ಲೈನ್ ಟ್ರಾನ್ಸಾಕ್ಟ್ ಮೂಲಕ ಗಣತಿ ನಡೆಯಲಿದ್ದು, ಒಟ್ಟು 105 ಬೀಟ್‌ಗಳಲ್ಲಿ 2 ಕಿ.ಮೀವರೆಗೆ ಸಂಚರಿಸಿ, ಚದರ ಕಿ.ಮೀ. ಪ್ರದೇಶದಲ್ಲಿ ಹುಲಿಯ ಆಹಾರವಾದ ಚುಕ್ಕಿಜಿಂಕೆ, ಕಾಡೆಮ್ಮೆ, ಕಾಡುಕುರಿ, ಕಡವೆ ಮತ್ತಿತರ ಸಸ್ಯಹಾರಿ ಪ್ರಾಣಿಗಳ ಗಣತಿ ಜೊತೆಗೆ ಸಸ್ಯ ಪ್ರಭೇದಗಳ ಸಾಂದ್ರತೆಯನ್ನು ಸಮೀಕ್ಷೆ ಮಾಡಿ, ಎಂ-ಸ್ಟ್ರೈಪ್ಸ್ ಎಕೋಲಾಜಿಕಲ್ ಆ್ಯಪ್ ಮೂಲಕ ಮಾಹಿತಿ ದಾಖಲಿಸಿಕೊಳ್ಳಲಾಗುತ್ತದೆ.

ಇದರೊಂದಿಗೆ ರಣಹದ್ದು ಹಾಗೂ ಪಕ್ಷಿಗಳ ಗುರುತಿಸುವಿಕೆಯೂ ನಡೆಯಲಿದೆ. ಸಸ್ಯ ಪ್ರಾಣಿಗಳ ಆಹಾರವಾದ ಹುಲ್ಲು ಹಾಗೂ ಇತರೆ ಆಹಾರ ಸಸ್ಯಗಳನ್ನು ಗುರುತಿಸುವುದು. ಐದು ಕಡೆ ಮಾಂಸಹಾರಿಗಳ ಹಿಕ್ಕೆಗಳ ಸಂಗ್ರಹವೂ ನಡೆಯಲಿದೆ.

 ಸ್ವಯಂ ಸೇವಕರ ಬದಲಿಗೆ ಸಿಬ್ಬಂದಿ ಬಳಕೆ

ಸ್ವಯಂ ಸೇವಕರ ಬದಲಿಗೆ ಸಿಬ್ಬಂದಿ ಬಳಕೆ

ಈ ಹಿಂದೆ ಹುಲಿಗಣತಿಗೆ ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಗುತ್ತಿತ್ತು. ಆದರೆ ಕೊರೊನಾ ಕಾರಣದಿಂದ ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಗುತ್ತಿಲ್ಲ. ಬದಲಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹುಣಸೂರು, ವೀರನಹೊಸಹಳ್ಳಿ, ಆನೆಚೌಕೂರು, ಮೇಟಿಕುಪ್ಪೆ, ನಾಗರಹೊಳೆ, ಕಲ್ಲಹಳ್ಳ, ಅಂತರಸಂತೆ, ಡಿ.ಬಿ. ಕುಪ್ಪೆ ವಲಯಗಳಲ್ಲಿ ಕಾರ್ಯ ನಿರ್ವಹಿಸುವ 300 ಮಂದಿ ಅರಣ್ಯ ಸಿಬ್ಬಂದಿಗಳನ್ನು ಬಳಸಿಕೊಂಡು ಗಣತಿ ಕಾರ್ಯವನ್ನು ನಡೆಸಲಾಗುತ್ತಿದೆ.

ಗಣತಿ ಕಾರ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಬ್ಬಂದಿಗೆ ಇಲಾಖೆಯ ನುರಿತ ಮಾಸ್ಟರ್ ಟ್ರೈನರ್‌ಗಳ ಮೂಲಕ ಉದ್ಯಾನದ ದಮ್ಮನಕಟ್ಟೆ, ನಾಗರಹೊಳೆ. ಮತ್ತಿಗೋಡಿನಲ್ಲಿ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ.

 ಹುಲಿ ಯೋಜನೆ ನಿರ್ದೇಶಕರು ಹೇಳಿದ್ದೇನು?

ಹುಲಿ ಯೋಜನೆ ನಿರ್ದೇಶಕರು ಹೇಳಿದ್ದೇನು?

ನಾಗರಹೊಳೆ ಉದ್ಯಾನ ಮತ್ತು ಹುಲಿಗಣತಿ ಕುರಿತಂತೆ ನಾಗರಹೊಳೆ ಹುಲಿ ಯೋಜನೆಯ ನಿರ್ದೇಶಕರಾದ ಡಿ. ಮಹೇಶ್ ಕುಮಾರ್ ಮಾಹಿತಿ ನೀಡಿದ್ದು, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾನದಂಡದಂತೆ 5ನೇ ಹುಲಿ ಗಣತಿ ಕಾರ್ಯ ನಡೆಯಲಿದೆ. ಈ ಬಾರಿ ಎಂ-ಸ್ಟ್ರೈಪ್ಸ್ ಎಕೋಲಾಜಿಕಲ್ ಆಫ್ ಮೂಲಕ ಮಾಹಿತಿ ದಾಖಲಿಸಲಾಗುತ್ತಿದೆ.

2018ರಲ್ಲಿ ನಡೆದ ಹುಲಿ ಗಣತಿಯಲ್ಲಿ ಕರ್ನಾಟಕದಲ್ಲಿ 524 ಹುಲಿಗಳಿದ್ದವು. ಹುಲಿ ಸಾಂದ್ರತೆಯಲ್ಲಿ ಪ್ರತಿ 100 ಚದರ ಕಿ.ಮೀಗೆ 12 ಹುಲಿಗಳಂತೆ 123 ಹುಲಿಗಳನ್ನು ಹೊಂದುವ ಮೂಲಕ ದೇಶದಲ್ಲಿ ನಾಗರಹೊಳೆ ಉದ್ಯಾನ ಮೂರನೇ ಸ್ಥಾನದಲ್ಲಿದೆ. ಇದೀಗ ಸಿಬ್ಬಂದಿಗಳ ಕಾರ್ಯಕ್ಷಮತೆಯಿಂದ ಹುಲಿಗಳ ಸಂಖ್ಯೆ ಹೆಚ್ಚಳವಾಗಿರುವ ಆಶಾ ಭಾವನೆಯಿರುವುದಾಗಿ ಅವರು ತಿಳಿಸಿದ್ದಾರೆ.

English summary
The national tiger census is being conducted in two phases from November 23 to February 7 in the Nagarahole Tiger Reserve.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X